ಮೇಲುಕೋಟೆ: ಹೋರಾಟ ಮಾಡಿ ಸರ್ಕಾರಿ ಶಾಲೆ ಜಮೀನು ಉಳಿಸಿದ ಶಿಕ್ಷಕ ಅಶ್ವಥ್..!

Kannadaprabha News, Ravi Janekal |   | Kannada Prabha
Published : Nov 13, 2025, 12:52 AM IST
Melukote Teacher's fight for school property

ಸಾರಾಂಶ

ಮೇಲುಕೋಟೆಯ ಅಂದಾನಿಗೌಡನಕೊಪ್ಪಲು ಗ್ರಾಮದಲ್ಲಿ, ಶಿಕ್ಷಕ ಅಶ್ವಥ್ ಅವರು ಪ್ರಭಾವಿಗಳ ಒತ್ತುವರಿಯಿಂದ ಲಕ್ಷಾಂತರ ರೂ. ಮೌಲ್ಯದ ಶಾಲಾ ಜಮೀನನ್ನು ಉಳಿಸಿದರು.  ಹಲವು ವರ್ಷಗಳ ಹೋರಾಟದ ನಂತರ, ಜಮೀನು ಶಿಕ್ಷಣ ಇಲಾಖೆಗೆ ಸೇರಿದ್ದು, ಗ್ರಾಮಸ್ಥರು ಶಿಕ್ಷಕರನ್ನು ಸನ್ಮಾನಿಸಿ, ಆಸ್ತಿ ರಕ್ಷಣೆಗೆ ನಾಮಫಲಕ ಅಳವಡಿಕೆ.

ಮೇಲುಕೋಟೆ (ನ.13): ಲಕ್ಷಾಂತರ ರು. ಮೌಲ್ಯದ ಮರಗಳಿರುವ ಜಮೀನನ್ನು ಸರ್ಕಾರಿ ಶಾಲೆಗೆ ಹೋರಾಟ ಮಾಡಿ ಕೊಡಿಸಿದ್ದ ಶಿಕ್ಷಕ ಅಶ್ವಥ್ ರನ್ನು ಅಂದಾನಿಗೌಡನಕೊಪ್ಪಲು ಗ್ರಾಮಸ್ಥರು ಅಭಿನಂದಿಸಿ ಜಮೀನಿನ ಮುಂಭಾಗ ನಾಮಫಲಕ ಅನಾವರಣ ಮಾಡಿ ಸೇವೆಯನ್ನು ಶ್ಲಾಘಿಸಿದರು.

ಸರ್ಕಾರಿ ಶಾಲೆ ಜಮೀನು ಕಬಳಿಸಲು ಯತ್ನ:

2002ರಲ್ಲಿ ಹೋಬಳಿಯ ಅಂದಾನಿಗೌಡನ ಕೊಪ್ಪಲಿನ ಶಾಲೆಗೆ ಸೇರಿದ್ದ ಬೆಲೆಬಾಳುವ ಮರಗಳನ್ನೊಳಗೊಂಡ 31ಗುಂಟೆ ಜಮೀನನ್ನು ಕನಗೋನಹಳ್ಳಿಯ ಕೆಲಮಂದಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಲಪಟಾಯಿಸಲು ಪ್ರಯತ್ನಿಸಿದ್ದರು.

ಈ ವೇಳೆ ದಾಖಲೆ ಸಂಗ್ರಹಿಸಿ ಜಮೀನಿನ ರಕ್ಷಣೆಗೆ ಇಳಿದ ಶಿಕ್ಷಕ ಅಶ್ವಥ್‌ಗೆ ಹಲವು ಸಂಕಷ್ಟ ಎದರಿಸಿದರು. ಶಿಕ್ಷಕರ ಬೆಂಬಲಕ್ಕೆ ಯಾವ ಶಿಕ್ಷಕರೂ ಬರಲಿಲ್ಲ. ಮೇಲುಕೋಟೆ ಪೊಲೀಸ್ ಠಾಣೆಗೆ ಸುಳ್ಳುದೂರು ನೀಡಿ ಪ್ರಭಾವ ಬಳಸಿ ಎಫ್.ಐ.ಆರ್ ದಾಖಲಿಸುವ ಪ್ರಯತ್ನವೂ ನಡೆಯಿತು ಎಂದರು.

ಸರ್ಕಾರಿ ಶಾಲೆ ಜಮೀನು ಉಳಿಸಲು ಶಿಕ್ಷಕ ಹೋರಾಟ:

ಈ ವೇಳೆ ಮೇಲುಕೋಟೆ ಶಿಕ್ಷಕ ಸಂತಾನರಾಮನ್ ಅಶ್ವಥ್‌ಗೆ ಜಮೀನು ಉಳಿಸುವ ಕಾರ್ಯದಲ್ಲಿ ನೆರವಾದರು. ಅಂದಿನ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸುವರ್ಣಾ ದೇವಿ, ಉಪವಿಭಾಗಾಧಿಕಾರಿಗಳಾಗಿದ್ದ ಚಿಕ್ಕತಿಮ್ಮಯ್ಯ ಸ್ಥಳ ಪರಿಶೀಲನಾವರದಿ ತರಿಸಿಕೊಂಡು ಜಮೀನು ಸರ್ಕಾರಿ ಶಾಲೆಗೆ ಸೇರಬೇಕು ಎಂದು ವರದಿ ನೀಡಿದ ಪರಿಣಾಮ ಕಂದಾಯ ಇಲಾಖೆ ಕಾರ್ಯದರ್ಶಿಯವರು ವಿಶೇಷ ಆದೇಶ ಹೊರಡಿಸಿ ಜಮೀನು ಶಾಲಾ ಆಸ್ತಿ ಎಂದು ಆದೇಶಿಸಿ ಶಿಕ್ಷಣ ಇಲಾಖೆ ಹೆಸರಿಗೆ ಖಾತೆ ಮಾಡಿಸಿದ್ದಾರೆ ಎಂದರು.

ಈ ಪರಿಣಾಮ ಜಮೀನು ಮಕ್ಕಳ ಕೊರತೆಯಿಂದಾಗಿ ಎಜಿಕೊಪ್ಪಲಿನ ಶಾಲೆ ಮುಚ್ಚಿಹೋಗಿದೆ. ಶಿಕ್ಷಕ ಪಗಡೆಕಲ್ಲಹಳ್ಳಿ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದು ಹೋರಾಟ ಮಾಡಿದ್ದ ಶಿಕ್ಷಕರನ್ನು ನೆನಪಿಸಿಕೊಂಡು ಕನ್ನಡ ರಾಜ್ಯೋತ್ಸವ ತಿಂಗಳ ವೇಳೆ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ಶಾಲಾಕಟ್ಟಡ ಮತ್ತು ಬೆಲೆಬಾಳುವ ಮರಗಳಿರುವ ಜಮೀನಿನ ಮೇಲೆ ಮತ್ತೆ ಕಣ್ಣುಬೀಳಬಾರದು ಎಂಬ ಕಾರಣಕ್ಕೆ ಕ್ರಮವಹಿಸಿದ ಗ್ರಾಮಸ್ಥರು ಜಮೀನಿನ ಮುಂಭಾಗ ಶಾಲಾ ಮತ್ತು ಶಿಕ್ಷಣ ಇಲಾಖೆ ಆಸ್ತಿ ಎಂಬ ನಾಮಫಲಕ ಅಳವಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಜಮೀನಿಗೆ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!