
ಮಂಡ್ಯ (ಜ.29): ರಾಜ್ಯದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಕಿರುಕುಳದ ಹಾವಳಿಗೆ ಇದೀಗ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ರೂ. ಸಾಲ ಮಾಡಿದ್ದ ಮಹಿಳೆ ಸಾಲ ವಾಪಸ್ ನೀಡುವಂತೆ ಸಿಬ್ಬಂದಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ವಿಷದ ಮಾತ್ರೆ ಸೇವನೆ ಮಾಡಿದ್ದರು. ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೈಕ್ರೊಫೈನಾನ್ಸ್ ಕಿರುಕುಳ ಹಿನ್ನೆಲೆಯನ್ನು ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು. ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೇಮಾ (59) ಮೃತ ಮಹಿಳೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿ ಕೊನ್ನಾಪುರ ಗ್ರಾಮದ ಮಹಿಳೆ ಆಗಿದ್ದಾರೆ. ನಿನ್ನೆ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮಂಡ್ಯದ ಜಿಲ್ಲಾಸ್ಪತ್ರೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಪ್ರೇಮ ಮೃತಪಟ್ಟಿದ್ದಾರೆ. ಇವರು ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ಸಾಲ ಪಡೆದಿದ್ದರು. ಈಗಾಗಲೇ ಮಹಿಳೆ 6 ಲಕ್ಷ ರೂ. ಸಾಲವನ್ನು ವಾಪಸ್ ಕಟ್ಟಿದ್ದಾರೆ.
ಆದರೆ, ಬ್ಯಾಂಕ್ ಸಿಬ್ಬಂದಿ 6 ಲಕ್ಷ ರೂ. ಸಾಲಕ್ಕೆ ದುಬಾರಿ ಬಡ್ಡಿ ಹಾಗೂ ಚಕ್ರಬಡ್ಡಿ ಹಾಕಿ ಇನ್ನೂ 6 ಲಕ್ಷ ರೂ. ಹಣ ಕಟ್ಟಬೇಕು ಎಂದು ಉಜ್ಜೀವನ್ ಬ್ಯಾಂಕ್ ಸಿಬ್ಬಂದಿ ಪೀಡಿಸಿದ್ದಾರೆ. ನೀವು ಕೊಟ್ಟ ಹಣ ನಾನು ತೀರಿಸಿದ್ದೇನೆ ಎಂದು ಹೇಳಿದರೂ ಕೇಳದ ಬ್ಯಾಂಕ್ ಸಿಬ್ಬಂದಿ ಪ್ರೇಮ ಅವರ ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನನೊಂದ ಮಹಿಳೆ ವಿಷದ ಮಾತ್ರೆ ಸೇವಿಸಿದ್ದರು. ಇದೀಗ ಆಸ್ಪತ್ರೆಯಲ್ಲಿ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮಹಿಳೆ ಸಾವು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಮಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಮಹಿಳೆಯಿಂದ ಆತ್ಮಹತ್ಯೆ ಯತ್ನ
ಮೈಕ್ರೋ ಫೈನಾನ್ಸ್ ಹಾವಳಿಯ ಬಗ್ಗೆ ಮೃತ ಮಹಿಳೆ ಪ್ರೇಮಾ ಅವರ ಪುತ್ರಿ ಸುಷ್ಮಾ ಮಾತನಾಡಿ, 2018ರಲ್ಲಿ ಮಗಳ ಮದುವೆಗೆಂದು ಮನೆ ಮೇಲೆ ಸಾಲ ಪಡೆದಿದ್ದರು. 6 ವರ್ಷ ನಿರಂತರ ಸಾಲದ ಕಂತು ಪಾವತಿಸಿದ್ದರು. ಈಗಾಗಲೇ ಸಾಲ ತೀರಿದೆ. ಆದರೂ, ಇನ್ನೂ 6 ಲಕ್ಷ ಬಾಕಿ ಕಟ್ಟಬೇಕು ಅಂದಿದ್ದರು. ಪತಿ, ಮಗನ ಅನಾರೋಗ್ಯ ಸಮಸ್ಯೆಯಿಂದ 3 ತಿಂಗಳು ಪೆಂಡಿಂಗ್ ಇತ್ತು. ಕಳೆದ ಮಂಗಳವಾರ ಏಕಾಏಕಿ ಬಂದು ಮನೆಗೆ ಬೀಗ ಹಾಕಿದ್ದಾರೆ. ಮನೆಯವರನ್ನೆಲ್ಲ ಹೊರ ಹಾಕಿದ ಕಾರಣ ಬೇರೆಯವರ ಮನೆ ಆಶ್ರಯದಲ್ಲಿದ್ದರು. ಅಂಗನವಾಡಿ ಅಡುಗೆ ಸಹಾಯಕಿಯಾಗಿದ್ದ ಪ್ರೇಮಾ ಅವರ ಪತಿ ಅಸ್ತಮಾ ಪೇಷಂಟ್ ಆಗಿದ್ದರು. ಇನ್ನು ಮಗನಿಗೆ ಗ್ಯಾಂಗ್ರಿನ್ ಆಗಿತ್ತು. ನಿನ್ನೆ ಕೆಲಸಕ್ಕೆ ಹೋಗುವ ವೇಳೆ ವಿಷದ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ