ಮಹಾರಾಷ್ಟ್ರ ಕಡಲ ತೀರದಲ್ಲಿ ಮಲ್ಪೆ ಮೀನುಗಾರರ ಬೋಟ್ ಅವಶೇಷ ಪತ್ತೆ

By Web Desk  |  First Published Feb 7, 2019, 11:30 AM IST

ಮಲ್ಪೆ ಕರಾವಳಿ ತೀರದಿಂದ ನಾಪತ್ತೆಯಾದ  ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಮಹಾರಾಷ್ಟ್ರ ಕರಾವಳಿ ತೀರದ ಬಳಿ ಪತ್ತೆಯಾಗಿದೆ. 


ಕಾರವಾರ : ಮಲ್ಪೆಯಿಂದ ನಾಪತ್ತೆಯಾಗಿದ್ದ ಮೀನುಗಾರರ ಬೋಟಿನ ಅವಶೇಷ  ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಪತ್ತೆಯಾಗಿದೆ. 

ಮಹಾರಾಷ್ಟ್ರದ ರತ್ನಗಿರಿ ಬಳಿಯಲ್ಲಿ ಬೋಟಿನ ಅವಶೇಷಗಳು ಕಂಡು ಬಂದಿದ್ದು, ಮಲ್ಪೆಯಿಂದ ಕಾಣೆಯಾದ ಸುವರ್ಣ ತ್ರಿಭುಜ ಬೋಟಿನದ್ದೇ ಎನ್ನಲಾಗುತ್ತಿದೆ.  

Tap to resize

Latest Videos

undefined

ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರಿಗೆ ಈ ಬೋಟಿನ ಅವಶೇಷಗಳು ಕಂಡು ಬಂದಿದೆ. ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಬೋಟಿನ ಭಾಗಗಳನ್ನು ಮೀನುಗಾರರು ಗಮನಿಸಿದ್ದು, ಕರಾವಳಿ ಕಾವಲು ಪಡೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಮೀನುಗಾರನಿಂದ ಸಂಪೂರ್ಣ ಮಾಹಿತಿ ಪಡೆದಿರುವ ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು, ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಿದ್ದಾರೆ.  

ಡಿಸೆಂಬರ್ 13 ರಂದು ಮಲ್ಪೆಯಿಂದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿತ್ತು. ಬೋಟಿನಲ್ಲಿದ್ದ ರಾಜ್ಯದ 7 ಮೀನುಗಾರರು ಈ ವೇಳೆ ನಾಪತ್ತೆಯಾಗಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಕೂಡ ಮೀನುಗಾರರಾಗಲಿ ಬೋಟ್ ಆಗಲಿ ಪತ್ತೆಯಾಗಿರಲಿಲ್ಲ.

click me!