ಭಯ ಹುಟ್ಟಿಸುತ್ತಿದೆ ಪೊಲೀಸ್ ಕಸ್ಟಡಿಯಲ್ಲಿ ಗಣೇಶ, ಕಾಂಗ್ರೆಸ್ ಸರ್ಕಾರ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ!

By Chethan KumarFirst Published Sep 13, 2024, 11:39 PM IST
Highlights

ಹಿಂದೂಗಳ ನಂಬಿಕೆ, ದೇವರ ಮೇಲೆ ಕಾಂಗ್ರೆಸ್ ಸರ್ಕಾರ ಯಾಕೆ ಈ ರೀತಿ ಅವಮಾನ ಮಾಡುತ್ತಿದೆ? ಈ ಸರ್ಕಾರದಿಂದ ಪೊಲೀಸ್ ಕಸ್ಟಡಿಯಲ್ಲಿ ಗಣೇಶನ ಮೂರ್ತಿ ನೋಡುವುದು ಮತ್ತಷ್ಟು ಭಯಾನಕವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.
 

ಬೆಂಗಳೂರು(ಸೆ.13) ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೇಲೆ ನಡೆದಿ ಕೋಮುದಾಳಿ ವಿರೋಧಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭಗೊಂಡಿದೆ. ಈ ಪೈಕಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ನಡೆದ ಪ್ರತಿಭಟೆಯ ದೃಶ್ಯವೊಂದು ಹಿಂದೂಗಳ ಆಕ್ರೋಶದ ಜೊತೆಗೆ ನೋವಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಸರ್ಕಾರ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯುವ ಜೊತೆಗೆ ಗಣೇಶ ಮೂರ್ತಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಫೋಟೋ ಪೋಸ್ಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಸಿದ್ದರಾಮಯ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಗಣೇಶನ ಮೂರ್ತಿಯನ್ನು ಈ ರೀತಿ ಪೊಲೀಸ್ ವಾಹನದಲ್ಲಿ ನೋಡಬೇಕಾದ ದಯನೀಯ ಸ್ಥಿತಿ ಕರ್ನಾಟಕಕ್ಕೆ ಬಂದಿರುವುದು ದುರಂತ ಎಂದಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೇಲಿನ ದಾಳಿ ಖಂಡಿಸಿ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು, ಬಿಜೆಪಿ ಪ್ರತಿಭಟನೆ ಆರಂಭಿಸಿದೆ. ಇಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಆದರೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಗಣೇಶನ ಮೂರ್ತಿಯನ್ನೂ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಈ ಘಟನೆ ವಿರುದ್ದ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos

Mandya: 40 ವರ್ಷಗಳ ಬಳಿಕ ನಾಗಮಂಗಲದಲ್ಲಿ ಹಿಂದು-ಮುಸ್ಲಿಂ ಗಲಾಟೆ, ಸಿಕ್ಕ-ಸಿಕ್ಕ ಅಂಗಡಿಗಳಿಗೆ ಬೆಂಕಿ!

ಪೊಲೀಸ್ ವಾಹನದಲ್ಲಿ ಗಣೇಶ ಮೂರ್ತಿ ದೃಶ್ಯ ಭಯಾನಕವಾಗಿದೆ. ಈ ಕಾಂಗ್ರೆಸ್ ಸರ್ಕಾರ ಕೋಟ್ಯಾಂತರ ಹಿಂದೂಗಳ ನಂಬಿಕೆ ಶ್ರದ್ಧೆ, ದೇವರು, ಆಚರಣೆಗಳನ್ನು ಯಾಕೆ ಈ ರೀತಿ ಅಪಮಾನ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಈ ಘಟನೆ ಹಾಗೂ ದೃಶ್ಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಮೇಲೆ ದೇಶದ ಹಲವು ರಾಜ್ಯಗಳಲ್ಲಿ ಈ ರೀತಿ ದಾಳಿಗಳಾಗುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

 

 

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಂಡ್ಯದ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆ ಜಗಳ ಶುರುವಾಗಿದೆ. ಈ ದಾರಿಯಲ್ಲಿ ಮೆರಣಿಗೆ ಸಾಗಲು ಅವಕಾಶವಿಲ್ಲ ಎಂದು ಅನ್ಯಕೋಮಿನ ಉದ್ರಿಕ್ತರ ಗುಂಪು ಜಗಳ ಮಾಡಿದೆ. ಕೆಲವೇ ಹೊತ್ತಲ್ಲಿ ಮಸೀದಿ ಮೇಲಿನಿಂದ ಸೇರಿದಂತೆ ಕೆಲವೆಡೆಯಿಂದ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ತೂರಿ ಬಂದಿದೆ. ಹಿಂದೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ. ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಇದರಿಂದ ಭಾರಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಈ ಘಟನೆಯನ್ನು ಕರ್ನಾಟಕದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಆಕಸ್ಮಿಕ ಘಟನೆ ಎಂದಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್ ಬಾಂಬ್ ತಯಾರಿಸಿ ದಾಳಿ ಮಾಡಿರುವುದು ಆಕಸ್ಮಿಕ ಘಟನೆಯೇ ಎಂದು ಪ್ರಶ್ನಿಸಿದ್ದಾರೆ. 

ಆಕಸ್ಮಿಕ ಗೃಹ ಸಚಿವ ಮಾತಿಗೆ ಪರಂ ಗರಂ, 'ಹೌದು ನಾನು ಆಕಸ್ಮಿಕ ಏನೀಗ?' ಎಂದು ಪ್ರಶ್ನೆ!
 

click me!