ಕಸ್ತೂರ ಬಾ ವಸತಿ ಶಾಲೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ದಿಢೀರ್ ಭೇಟಿ; ಪೊರಕೆ ಹಿಡಿದು ಕಸಗೂಡಿಸಿದ ಸಲೀಂ ಅಹ್ಮದ್!

By Ravi Janekal  |  First Published Jul 8, 2023, 1:12 PM IST

ಜಿಲ್ಲೆಯ ಪಾವಗಡ ಪಟ್ಟಣದ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಲೀಂ ಅಹ್ಮದ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆ ಸ್ವಚ್ಛತೆಯಿಲ್ಲದಿರುವುದು ಕಂಡು ಗರಂ ಆದ ಘಟನೆ ನಡೆದಿದೆ.


ತುಮಕೂರು (ಜು.8) : ಜಿಲ್ಲೆಯ ಪಾವಗಡ ಪಟ್ಟಣದ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಲೀಂ ಅಹ್ಮದ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆ ಸ್ವಚ್ಛತೆಯಿಲ್ಲದಿರುವುದು ಕಂಡು ಗರಂ ಆದ ಘಟನೆ ನಡೆದಿದೆ.

ಇಂದು ಬೆಳಗ್ಗೆ ಸಿಬ್ಬಂದಿ ಜೊತೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಮ್ ಅಹಮದ್. ಆಸ್ಪತ್ರೆ ಭೇಟಿ ಬಳಿಕ ಸಮೀಪದಲ್ಲೇ ಇದ್ದ ಬಾಲಕಿಯರ ವಸತಿಶಾಲೆಗೂ ದಿಢೀರ್ ಭೇಟಿ ನೀಡಿದರು. ಈ ವೇಳೆ ಶಾಲೆಯಲ್ಲಿ ಸ್ವಚ್ಛತೆ ಇಲ್ಲದೇ ಇರೋದನ್ನ ಕಂಡು ವಸತಿ ಶಾಲೆ ಸಿಬ್ಬಂದಿ ಮೇಲೆ ಸಿಟ್ಟಾದ ಅಧಿಕಾರಿ ಸ್ವತಃ ಪೊರಕೆ ಕೈಯಲ್ಲಿ ಕಸಗೂಡಿಸಿದರು. ಧೂಳು ಹಿಡಿದಿದ್ದ ಟಿವಿ, ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆಯಿಂದ ಶುಚಿಗೊಳಿಸಿದರು.

Tap to resize

Latest Videos

ತಂದೆ ತಾಯಿ ಇಲ್ಲದ ಹಾಗೂ ವಲಸೆ ಹೋದಂತವರ ಮಕ್ಕಳು ಈ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸುಮಾರು 250 ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ವಸತಿ ಶಾಲೆ. ಆದ್ರೆ ಮಕ್ಕಳಿಗೆ ಉತ್ತಮ ಶೌಚಾಲಯ, ಮಲಗಲು ಸೂಕ್ತ ವ್ಯವಸ್ಥೆಯಂಥ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರೋ ಮಕ್ಕಳನ್ನು ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. 

300 ಹಾಸ್ಟೆಲ್‌ ಮಕ್ಕಳ ಫುಡ್‌, ಬೆಡ್‌ಗಾಗಿ ಶಾಸಕರ ಬಳಿ ಮನವಿಗೆ ಬಂದ ಪ್ರಿನ್ಸಿಪಾಲ್‌ ಸಸ್ಪೆಂಡ್‌! ಕಾರಣವೇನು?

click me!