ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

Published : May 08, 2020, 11:57 AM ISTUpdated : May 08, 2020, 11:58 AM IST
ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ಸಾರಾಂಶ

40 ದಿನಗಳ ಲಾಕ್‌ಡೌನ್‌ನಲ್ಲಿ ಅತ್ಯಂತ ಹೆಚ್ಚು ಪೇಚಾಡಿದ್ದು 10 ಕೋಟಿಗೂ ಜಾಸ್ತಿ ಇರುವ ವಲಸೆ ಕಾರ್ಮಿಕರು. ಅವರ ಬಗ್ಗೆ ಯೋಚಿಸದೆ ​ದಿಢೀರನೆ ನೋಟು ರದ್ದತಿಯ ತರಹ ಲಾಕ್‌ಡೌನ್‌ ಘೋಷಿಸಿದ ಕೇಂದ್ರ ಸರ್ಕಾರಕ್ಕೆ, ಸಾವಿರಾರು ಕಾರ್ಮಿಕರು ನಡೆದುಕೊಂಡು ಊರಿಗೆ ಹೊರಟಾಗಲೇ ಸಮಸ್ಯೆಯ ಅರಿವಾಗಿದ್ದು. 

40 ದಿನಗಳ ಲಾಕ್‌ಡೌನ್‌ನಲ್ಲಿ ಅತ್ಯಂತ ಹೆಚ್ಚು ಪೇಚಾಡಿದ್ದು 10 ಕೋಟಿಗೂ ಜಾಸ್ತಿ ಇರುವ ವಲಸೆ ಕಾರ್ಮಿಕರು. ಅವರ ಬಗ್ಗೆ ಯೋಚಿಸದೆ ​ದಿಢೀರನೆ ನೋಟು ರದ್ದತಿಯ ತರಹ ಲಾಕ್‌ಡೌನ್‌ ಘೋಷಿಸಿದ ಕೇಂದ್ರ ಸರ್ಕಾರಕ್ಕೆ, ಸಾವಿರಾರು ಕಾರ್ಮಿಕರು ನಡೆದುಕೊಂಡು ಊರಿಗೆ ಹೊರಟಾಗಲೇ ಸಮಸ್ಯೆಯ ಅರಿವಾಗಿದ್ದು.

ಮೊದಲ ಮೂರು ನಾಲ್ಕು ದಿನದಲ್ಲೇ ವಲಸೆ ಕಾರ್ಮಿಕರಿಗೆ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಬಹುದಿದ್ದ ಸರ್ಕಾರ, ಈಗ ಒಂದು ಕಡೆ ಆರ್ಥಿಕತೆ ತೆರೆಯುತ್ತ, ಇನ್ನೊಂದು ಕಡೆ ಅವರನ್ನು ಮನೆಗೆ ಕಳುಹಿಸುತ್ತಿದೆ. ಮಾಚ್‌ರ್‍ 24ಕ್ಕೆ ದೇಶದಲ್ಲಿ ವೈರಸ್‌ ಸೋಂಕಿತರ ಸಂಖ್ಯೆ 550 ಇದ್ದರೆ, ಇವತ್ತು 52 ಸಾವಿರ ತಲುಪಿದೆ. ಹೀಗಿರುವಾಗ ಕಾರ್ಮಿಕರ ಪ್ರಯಾಣ ಹೇಗೆ ಸುರಕ್ಷಿತ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕು. 10 ಕೋಟಿ ವಲಸೆ ಕಾರ್ಮಿಕರಲ್ಲಿ ಕೆಲವರು ತಮ್ಮ ಹಳ್ಳಿಯ ಹತ್ತಿರದ ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರಾದರೆ, ವರ್ಷಕ್ಕೆ 8ರಿಂದ 10 ತಿಂಗಳು ಮಾತ್ರ ಸೀಸನ್‌ನಲ್ಲಿ ಕೆಲಸ ಮಾಡುವವರು ಬೇರೆ ರಾಜ್ಯಗಳಿಂದ ಬಂದವರು. ಈಗ ಊರಿಗೆ ಮರಳಿರುವ ಇವರೆಲ್ಲ ಜೂನ್‌ನಲ್ಲಿ ಹೊಲದಲ್ಲಿ ಬೀಜ ಬಿತ್ತನೆ ಮಾಡಿ ವಾಪಾಸ್‌ ಬರುವುದು ಅಕ್ಟೋಬರ್‌ ಆಗಬಹುದೇನೋ. ಕಾರ್ಮಿಕರ ವಲಸೆಯಿಂದ ಅತಿ ಹೆಚ್ಚು ಪರಿಣಾಮ ಬೀರುವುದು ಮಹಾನಗರಗಳ ಕಟ್ಟಡ ನಿರ್ಮಾಣದ ಮೇಲೆ.

ಮದ್ಯ ಮಾರಾಟ ಬೇಡವೇ ಬೇಡ ಅಂತ ಕೂತಿದ್ರು ಅಮಿತ್ ಶಾ..!

ನಿಶ್ಚಿತವಾಗಿ ಕಾರ್ಮಿಕರ ಕೊರತೆಯಿಂದ ದಿನಗೂಲಿ ಏರಲಿದೆ. ಕೊರೋನಾ ಶಾಂತವಾದ ಬಳಿಕ ಇವರನ್ನೆಲ್ಲಾ ಕರೆತರಲು ರಿಯಲ್‌ ಎಸ್ಟೇಟ್‌ನವರು ಬೋನಸ್‌, ಹೆಚ್ಚು ಕೂಲಿ ಕೊಡಬೇಕಾಗಿ ಬರಬಹುದು. ಇನ್ನು ಕಾರ್ಮಿಕರಿಲ್ಲದೆ ಸಂಕಷ್ಟದಲ್ಲಿದ್ದ ಕೃಷಿ ಕ್ಷೇತ್ರಕ್ಕೆ ಹೆಚ್ಚು ದಿನಗೂಲಿಗಳು ಈ ವರ್ಷ ದೊರೆಯಬಹುದೇನೋ. ಯಾರೇ ಇರಲಿ ಸಂಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ಇರಬೇಕೆಂದು ಅನ್ನಿಸುವುದು ಸಹಜ ಅಲ್ಲವೇ?

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ