
ಬೆಂಗಳೂರು(ಮೇ.18): ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಿಗಮದಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ 63 ವರ್ಷ ಮೀರದ ನಿವೃತ್ತ ಚಾಲಕರನ್ನು(Retired Drivers) 3 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಸೇವೆಗೆ ಪಡೆದುಕೊಳ್ಳಲು ಕೆಎಸ್‌ಆರ್‌ಟಿಸಿ(KSRTC) ಮುಂದಾಗಿದೆ.
ಆಸಕ್ತರು, ವೈದ್ಯರು ನೀಡಿರುವ ದೃಷ್ಟಿಸಾಮರ್ಥ್ಯ ಪತ್ರ, ಭಾರಿ ವಾಹನ ಚಾಲನಾ ಪರವಾನಿಗೆಯೊಂದಿಗೆ ಪುತ್ತೂರು, ರಾಮನಗರ, ಚಾಮರಾಜನಗರ ಮತ್ತು ಮಂಗಳೂರು ವಿಭಾಗಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದಾಗಿದೆ. ಈ ಸಿಬ್ಬಂದಿಗೆ ಪ್ರತಿದಿನ (8 ತಾಸಿಗೆ) 1000 ರು.ಗಳ ಗೌರವ ಧನ, ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಪ್ರತಿ ತಾಸಿಗೆ 125 ರು.ಗಳನ್ನು ಭತ್ಯೆ(Allowance) ನೀಡಲಾಗುವುದು. ಅಲ್ಲದೆ, ಸಾರಿಗೆ ಆದಾಯದ ಮೇಲೆ ಶೇ.1 ರಷ್ಟು ಪ್ರೋತ್ಸಾಹ ಧನ ಪಡೆದುಕೊಳ್ಳಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Ramanagara Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಡಿಕ್ಕಿ: ಉಡುಪಿಯ ಮೂವರು ಸಾವು
ಚಾಲಕರಿಗೆ ಅನ್ಬುಕುಮಾರ್ ಕಿವಿಮಾತು:
ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸ್ ಅಪಘಾತ ನಿಯಂತ್ರಿಸುವ ಸಂಬಂಧ ಚಾಲನಾ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೆಶಕ ಅನ್ಬುಕುಮಾರ್,
ಚಾಲಕರು ಅತಿವೇಗದ ಚಾಲನೆ ಮಾಡದೇ, ದ್ವಿಚಕ್ರ ಮತ್ತು ಪಾದಚಾರಿಗಳನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ನಿಗಮದ ಚಾಲಕರಿಗೆ ಕಿವಿ ಮಾತು ಹೇಳಿದರು. ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಜಾಗೃತ ಸೇವೆ ವಿಭಾಗದ ನಿರ್ದೇಶಕ ಡಾ. ವೈ.ನವೀನ್ ಭಟ್, ಮುಖ್ಯ ಸಂಚಾರಿ ವ್ಯವಸ್ಥಾಪಕ ಆಂತೋಣಿ ಜಾಜ್‌ರ್, ರಸ್ತೆ ಅಪಘಾತಗಳಲ್ಲಿ ಭಾಗಿಯಾಗಿದ್ದ 35ಕ್ಕೂ ಹೆಚ್ಚು ಮಂದಿ ಕೆಎಸ್‌ಆರ್‌ಟಿಸಿ ಚಾಲಕರು ಭಾಗವಹಿಸಿದ್ದರು.
2022ರ ಜನವರಿಯಿಂದ ಏಪ್ರಿಲ್ ಅಂತ್ಯದವರೆಗಿನ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಆಗುತ್ತಿರುವ ಅಪಘಾತಗಳಲ್ಲಿ(Accidents) 40 ರಿಂದ 50 ವರ್ಷದ ವಯೋಮಾನದ ಚಾಲಕರಿಂದ ಶೇ.39 ರಷ್ಟು ಉಂಟಾಗುತ್ತಿದೆ. 36 ರಿಂದ 40 ವರ್ಷದ ವಯಸ್ಸಿನ ಚಾಲಕರಿಂದ ಶೇ.23 ರಷ್ಟು ಅಪಘಾತಗಳು ನಡೆಯುತ್ತಿವೆ. ಸಾವು-ನೋವುಗಳ ಪ್ರಮಾಣ ಅವಲೋಕಿಸಿದಾಗ ಶೇ.44 ಅಪಘಾತಗಳು ದ್ವಿಚಕ್ರ ವಾಹನಗಳಿಂದ ಮತ್ತು ಶೇ.19 ಪಾದಚಾರಿಗಳಿಂದ ನಡೆಯುತ್ತದೆ. ಶೇ.27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ ನಡೆಯುತ್ತಿದೆ ಎಂದರು. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಮೊಬೈಲ್‌ನಲ್ಲಿ ಮಾತನಾಡುವುದು, ಯಾವುದೇ ಸೂಚನೆಯನ್ನು ನೀಡದೆ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವುದು, ಬಹುತೇಕ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಚಾಲಕರು ಸಭೆಯಲ್ಲಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ