ಲಾಕ್‌ಡೌನ್ 5.0: ಬಸ್‌ ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ

By Suvarna NewsFirst Published Jun 1, 2020, 7:45 PM IST
Highlights

ಈಗಾಗಲೇ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್ ಸಂಚಾರ ಆರಂಭಿಸಲಾಗಿದ್ದು, ಇದೀಗ ಕೊಂಚ ಸಮಯದಲ್ಲೂ ಬದಲಾವಣೆ ಆಗಿದೆ.

ಬೆಂಗಳೂರು, (ಜೂನ್.01): ಕೇಂದ್ರ ಸರ್ಕಾರ ಜೂನ್ 30 ರ ವರೆಗೂ ದೇಶಾದ್ಯಂತ ಲಾಕ್‌ಡೌನ್ 5.0 ಘೋಷಿಸಿದ್ದು, ಹಲವು ವಿನಾಯಿತಿಗಳನ್ನು ಸಹ ನೀಡಿದೆ.

5ನೇ ಹಂತದ ಲಾಕ್‌ಡೌನ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರ್ಫ್ಯೂ ಅವಧಿಯನ್ನು ಕಡಿತಗೊಳಿಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಸಂಚಾರದ ವೇಳಾಪಟ್ಟಿಯಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.

ಸರ್ಪ್ರೈಸ್ ನೀಡಿದ ರಚಿತಾ, ರಾಜ್ಯದಲ್ಲಿ ಎಣ್ಣೆಗೆ ಬೇಡಿಕೆ ಕುಸಿತ ; ಜೂ.01ರ ಟಾಪ್ 10 ಸುದ್ದಿ!

 ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ಕಾರ್ಯಾಚರಣೆಯಲ್ಲಿರುತ್ತವೆ. ರಾಜ್ಯದಲ್ಲಿ ಕೆಎಸ್‌ಆರ್ಟಿಸಿ ಮತ್ತು ಉಳಿದ ಸಾರಿಗೆ ಬಸ್ ಗಳು ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆದ್ಯ ಗಮನಕ್ಕೆ :

ಇಂದು ಕೆ ಎಸ್ ಆರ್ ಟಿ ಸಿ ವ್ಯಾಪ್ತಿಯಲ್ಲಿ ರಾತ್ರಿ 9 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ಇರುತ್ತದೆ.

ನಾಳೆಯಿಂದ ಕೆ‌ ಎಸ್ ಆರ್ ಟಿ‌ಸಿ ವ್ಯಾಪ್ತಿಯಲ್ಲಿ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ಬಸ್ಸುಗಳ‌ ಕಾರ್ಯಾಚರಣೆ ಇರುತ್ತದೆ.

— KSRTC (@KSRTC_Journeys)

ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಸಮಯ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಕೂಡ ತನ್ನ ಸಂಚಾರದಲ್ಲೂ ಬದಲಾವಣೆ ಮಾಡಿದೆ. ಈ ಹಿಂದೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್ ಸಂಚಾರ ಮಾಡುತ್ತಿದ್ದವು. 

click me!