ಲೆಕ್ಕ ಕೇಳುವ ಅಧಿಕಾರ ಎಚ್‌ಡಿಕೆಗಿಲ್ಲ: ಈಶ್ವರಪ್ಪ ಕಿಡಿ

By Kannadaprabha NewsFirst Published Oct 18, 2021, 9:10 AM IST
Highlights
  •  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಲೆಕ್ಕ ಕೇಳುವ ಅಧಿಕಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗಿಲ್ಲ
  • ಯಾರು ರಾಮಮಂದಿರ ನಿರ್ಮಾಣಕ್ಕೆ ದುಡ್ಡು ಕೊಟ್ಟಿದ್ದಾರೋ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ

  ಶಿವಮೊಗ್ಗ (ಅ.18):  ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ರಾಮಮಂದಿರದ (Ram mandir) ಲೆಕ್ಕ ಕೇಳುವ ಅಧಿಕಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗಿಲ್ಲ (HD kumaraswamy). ಯಾರು ರಾಮಮಂದಿರ ನಿರ್ಮಾಣಕ್ಕೆ ದುಡ್ಡು ಕೊಟ್ಟಿದ್ದಾರೋ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ (KD Eshwarappa) ತಿರುಗೇಟು ನೀಡಿದ್ದಾರೆ.

ರಾಮಮಂದಿರ (Ram mandir) ನಿರ್ಮಾಣ ಬಗ್ಗೆ ಪಾರದರ್ಶಕತೆ ಇದ್ದರೆ ಬಿಜೆಪಿಯವರಿಗೆ (BjP) ಲೆಕ್ಕ ಕೊಡಲು ಏನು ತೊಂದರೆ? ಮಂದಿರ ನಿರ್ಮಾಣದ ಇಟ್ಟಿಗೆಗೆ ಸಂಗ್ರಹಿಸಿದ್ದ ಹಣ ಎಲ್ಲಿಗೆ ಹೋಯಿತು ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿದ ಈಶ್ವರಪ್ಪ, ಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನೂ ಕೊಡದೆ ಈಗ ಲೆಕ್ಕ ಕೊಡಿ ಎಂದರೆ ಹೇಗೆ? ಕುಮಾರಸ್ವಾಮಿಗೇನು ಅಧಿಕಾರ ಇದೆ ಅಂತ ಲೆಕ್ಕ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಮುಸ್ಲಿಂರನ್ನು ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದೆ: ಈಶ್ವರಪ್ಪ

ಎಚ್‌.ಡಿ.ಕುಮಾರಸ್ವಾಮಿ ಅವರೇನಾದರೂ ದುಡ್ಡು ಕೊಟ್ಟಿದ್ದರೆ ಲೆಕ್ಕ ಕೇಳಲಿ. ಆಗ ಸಂತೋಷ ಆಗುತ್ತೆ. ಅದನ್ನು ಬಿಟ್ಟು 1 ರುಪಾಯಿ ದುಡ್ಡು ಕೊಡದೆ ಪುಕ್ಸಟ್ಟೆರಾಮಮಂದಿರದ ಲೆಕ್ಕ ಕೊಡಿ ಎಂದರೆ ಇವರ್ಯಾರು ಲೆಕ್ಕ ಕೇಳೋಕೆ? ರಾಮ ಮಂದಿರದ ಬಗ್ಗೆ ಶ್ರದ್ಧೆ ಇದ್ದರೆ ಒಂದು ರುಪಾಯಿ ಹಣ ನೀಡಿದ್ದರೆ ಲೆಕ್ಕ ಕೇಳುವ ಅಧಿಕಾರ ಇದೆ. ಇಲ್ಲ ಅಂದ್ರೆ ಇವರಿಗೆ ಲೆಕ್ಕ ಕೇಳೋ ಅಧಿಕಾರವೂ ಇಲ್ಲ, ಅವಶ್ಯಕತೆಯೂ ಇಲ್ಲ ಎಂದರು.

ಪ್ರಚಾರ ಸಿಗುವುದಿಲ್ಲ

 

 ರಾಜ್ಯದ ಜನ ಇಂದು ಜೆಡಿಎಸ್‌(JDS) ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೆಸ್ಸೆಸ್‌ ಟೀಕಿಸಿದರೆ ಪ್ರಚಾರ ಸಿಗುತ್ತದೆ ಎನ್ನುವ ಹುಚ್ಚು ಕಲ್ಪನೆಯಲ್ಲಿ ಜೆಡಿಎಸ್‌ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರಿದ್ದಾರೆ ಎಂದು ಗ್ರಾಮಿಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwararappa) ಲೇವಡಿ ಮಾಡಿದ್ದಾರೆ. 

ಶನಿವಾರ ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಮುಸ್ಲಿಂರನ್ನು(Muslim) ತೃಪ್ತಿಪಡಿಸಿದರೆ ಸಾಕು. ಸೂರ್ಯನಿಗೆ ಬೈದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರೆಸ್ಸೆಸ್‌(RSS) ಎಲ್ಲಿ? ಕಾಶ್ಮೀರ(Kashmir) ಪಂಡಿತರ ಸಾವಿಗೆ ಆರೆಸ್ಸೆಸ್‌ ಕಾರಣ ಎನ್ನುವ ಮೂಲಕ ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ(Politics) ಕುಮಾರಸ್ವಾಮಿ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಅವರಿಗೆ ಭಗವಂತ ಬುದ್ಧಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. ದೇವೇಗೌಡರ(HD Devegowda) ಮೂಲಕ ಆರ್‌ಎಸ್‌ಎಸ್‌ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಎಂದರು.

click me!