ನನ್ನ ಹೆಗಲ ಮೇಲೆ ಕೈ ಹಾಕೊಂಡು ಬರ್ತಿದ್ದ ಅದಕ್ಕೆ ಎರಡೇಟು ಹೊಡೆದಿದ್ದೇನೆ: ಡಿಕೆಶಿ

By Suvarna NewsFirst Published Jul 11, 2021, 3:36 PM IST
Highlights

* ಕೆಆರ್‌ಎಸ್ ಡ್ಯಾಂ ಈ ರಾಜ್ಯ ಹಾಗೂ ದೇಶದ ಆಸ್ತಿ
* ಜವಾಬ್ದಾರಿ ಸ್ಥಾನದಲ್ಲಿದ್ದವರು ಸರಿಯಾಗಿ ಹೇಳಿಕೆ ನೀಡಬೇಕು
* ಚೀಪ್ ಪಾಪ್ಯೂಲಾರಿಟಿ ತೆಗೆದುಕೊಳ್ಳಲು ನನಗೆ ಇಷ್ಟ ಇಲ್ಲ 
 

ಬೆಂಗಳೂರು(ಜು.11): ನನ್ನ ಹೆಗಲ ಮೇಲೆ ಕೈ ಹಾಕೊಂಡು ಬರ್ತಾ ಇದ್ದ, ನೋಡಿದವರು ಏನಂತಾರೆ? ಎಲ್ಲಾ ಟಿವಿ ಅವರೆಲ್ಲ ಏನಂತಾರೆ? ಅದಕ್ಕೆ ಎರಡೇಟು ಜೋರಾಗಿ ಹೊಡೆದಿದ್ದೇನೆ. ಅವನು ಸಂಬಂಧಿಕ, ನಮ್ ಹುಡುಗನೇ ಬಿಡಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಮಂಡ್ಯ ಜಿಲ್ಲೆಯ ಮದ್ದೂರಿನ ಕೆ.ಎಂ ದೊಡ್ಡಿಯಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವನು ನನ್ನ ಸಂಬಂಧಿಕನಾಗಿದ್ದಾನೆ. ಹೆಗಲ ಮೇಲೆ ಕೈ ಹಾಕಿಲ್ಲ ಅಂತಾನೆ ಇಟ್ಕೋಳಿ, ಹೊಡೆದೆ ಅವನದ್ದು, ನಂದು ಗಲಾಟೆ ಇದು. ಅವನನ್ನೂ ಲೀಡರ್ ಮಾಡಿ ನೀವು ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. 

ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದುಳಿದ ನಾಯಕರು ನನ್ನ ಭೇಟಿ ಮಾಡಿದ್ದಾರೆ. ಜಾತಿ ಗಣತಿಗೆ ಸರ್ಕಾರ 170 ಕೋಟಿ ರೂ. ವೆಚ್ಚ ಮಾಡಿದೆ. ಹೀಗಾಗಿ ಜಾತಿ ಗಣತಿ ಬಿಡುಗಡೆ ಮಾಡಲಿ ಅಂತಿದ್ದಾರೆ. ಇದರಲ್ಲಿ ತಪ್ಪಿಲ್ಲ. ಕಾಂತರಾಜು ಏನು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಒಂದ ಸಾರಿ ನಾನೇ ಕಾಂತರಾಜುಗೆ ಕೇಳದೆ ಏನಪ್ಪ ಅಂತಾ? ನಮ್ ಟೈಮ್ ಮುಗಿದುಹೋಗಿತ್ತು. ನಮ್ ಹತ್ತಿರ ಇರೋ ಪೇಪರ್ ಎಲ್ಲಾ ಕೊಟ್ ಬಿಟ್ಟೆ ಅಂದರು. ಈ ವಿಚಾರದಲ್ಲಿ ನಾನೊಬ್ಬನೇ ಹೇಳಲು ಸಾಧ್ಯವಿಲ್ಲ. ನಾನು ಪಾರ್ಟಿ ಅಧ್ಯಕ್ಷನಾಗಿದ್ದೇನೆ. ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇನೆ. ಬಿಜೆಪಿಯವರು ಏನು ಚರ್ಚೆ ಮಾಡುತ್ತಾರೋ ನೋಡೋಣ ಅಂತ ಹೇಳಿದ್ದಾರೆ. 

ಮಂಡ್ಯ: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಬೆಂಬಲಿಗನಿಗೆ ಡಿಕೆಶಿ ಏಟು

ಮಂಡ್ಯ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಒಂದಿಷ್ಟು ದಿನ ಜಿಲ್ಲಾ ಮಂತ್ರಿ ಇದ್ದೆ, ನೀರಾವರಿ ಮಂತ್ರಿನೂ ಆಗಿದ್ದೆ, ಯಾರು ಬಂದು ಗಣಿಗಾರಿಕೆ ಸುದ್ದಿನೂ ಮಾತಾಡಿಲ್ಲ. ಎಲ್ಲೋ ಒಂದು ಹತ್ತು ಕಿಮಿ 15 ಕಿಮಿಗೂ ಜಲ್ಲಿಕಲ್ಲಿಂದ ಏನು ವ್ಯತ್ಯಾಸ ಆಗೋದಿಲ್ಲ. ಅದಕ್ಕೆಲ್ಲ ಬೌಂಡರಿ ಇದೆ. ಯಾರ್ಡ್ ಸ್ಟಿಕ್ ಇದೆ. ಲೆಕ್ಕಾಚಾರ ಇದೆ. ಗಣಿ ಇಲಾಖೆ ಇದೆ. ನೂರಾರು ಇಂಜಿನಿಯರ್ ಇದ್ದಾರೆ ಅವರೆಲ್ಲ ನೋಡ್ಕೊಳ್ತಾರೆ ಎಂದು ಹೇಳಿದ್ದಾರೆ. 

ನಾವು ನಿಮ್ ಹತ್ತಿರ ಮಾತಾಡಿ ಜನರಿಗೆ ಆತಂಕ ಮೂಡಿಸಿ, ಕಾವೇರಿ ತನಕ ಎಲ್ಲಾ ಜನರಿಗೆ ಬಿರುಕು ಬಿಟ್ಟಿದೆ ಅಂತಾ ಚೀಪ್ ಪಾಪ್ಯೂಲಾರಿಟಿ ತೆಗೆದುಕೊಳ್ಳಲು ನನಗೆ ಇಷ್ಟ ಇಲ್ಲ. ಇದು ಅತ್ಯಂತ ಸೂಕ್ಷ ವಿಚಾರವಾಗಿದೆ. ಕೆಆರ್‌ಎಸ್ ಡ್ಯಾಂ ಈ ರಾಜ್ಯ ಹಾಗೂ ದೇಶದ ಆಸ್ತಿಯಾಗಿದೆ. ಈ ಆಸ್ತಿ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿದ್ದು ಸರಿಯಾಗಿ ಹೇಳಬೇಕು. ನಮ್ ಮನೆಯಲ್ಲಿ ಹೇಳ್ತಾ ಇದ್ರು ಎಲ್ಲಾ ಗಾಬರಿ ಆಗಬಿಟ್ಟಿದ್ದಾರಂತೆ. ನಮಗೆಲ್ಲ ಗೊತ್ತಿದೆ ಅದರ ಎಫೆಕ್ಟ್ ಏನು ಅಂತಾ. ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಧಕ್ಕೆ ವಿಚಾರ ಆ ಸುದ್ದಿನೇ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

click me!