ಕೊಡಗು: ಸಮಸ್ಯೆ ಕೇಳಲು ಬಂದ ಉಸ್ತುವಾರಿ ಸಚಿವರ ಚಳಿ ಬಿಡಿಸಿದ ಜನರು!

By Ravi JanekalFirst Published Jul 21, 2024, 12:16 PM IST
Highlights

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಎನ್‌ಎಸ್ ಬೋಸರಾಜು. ಈ ವೇಳೆ 2018ರ ಸಂತ್ರಸ್ಥರ ಪುನರ್ವಸತಿ ಬಡಾವಣೆಗೆ ಬಂದಿದ್ದ ಸಚಿವರು. ಜನರ ಸಮಸ್ಯೆ ಕೇಳುವಂತೆ ಸಚಿವರನ್ನು ಕರೆ ತಂದಿದ್ದ ಶಾಸಕ ಮಂತರ್ ಗೌಡ. ಪುನರ್ವಸತಿ ಬಡಾವಣೆ ಜನರು ತರಾಟೆಗೆ ತೆಗೆದುಕೊಂಡರು.

ಕೊಡಗು (ಜು.21): ಸಮಸ್ಯೆ ಆಲಿಸಲು ಬಂದ ಉಸ್ತುವಾರಿ ಸಚಿವರಿಗೆ ಜನರೇ ಚಳಿ ಬಿಡಿಸಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ನಡೆದಿದೆ. 

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಎನ್‌ಎಸ್ ಬೋಸರಾಜು. ಈ ವೇಳೆ 2018ರ ಸಂತ್ರಸ್ಥರ ಪುನರ್ವಸತಿ ಬಡಾವಣೆಗೆ ಬಂದಿದ್ದ ಸಚಿವರು. ಜನರ ಸಮಸ್ಯೆ ಕೇಳುವಂತೆ ಸಚಿವರನ್ನು ಕರೆ ತಂದಿದ್ದ ಶಾಸಕ ಮಂತರ್ ಗೌಡ. ಪುನರ್ವಸತಿ ಬಡಾವಣೆ ಜನಗಳಿಗೆ ಕುಡಿಯಲು ನೀರಿಲ್ಲ. ಯುಜಿಡಿ ಬ್ಲಾಕ್ ಆಗಿ ತಿಂಗಳುಗಳಾಗಿವೆ. ವಿದ್ಯುತ್ ಸರಿಯಾಗಿ ಪೂರೈಕೆ ಆಗ್ತಿಲ್ಲ. ಚರಂಡಿ ವ್ಯವಸ್ಥೆಗಳಂತೂ ಕೇಳೋದೇ ಬೇಡ. ಎಂಎಲ್‌ಎ, ಜಿಲ್ಲಾಧಿಕಾರಿ ಯಾರಿಗೇ ಹೇಳಿದ್ರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಯಾರೂ ಬಗೆಹರಿಸುತ್ತಿಲ್ಲ ಎಂದು ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು. ಜನರು ಕೂಗಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಸಚಿವರು, ಶಾಸಕರು. ಐಗೂರಿಗೆ ಹೋಗಬೇಕೆಂದು ಅಲ್ಲಿಂದ ಹೊರಟ ಸಚಿವರು.

Latest Videos

ಪ್ರಾಕೃತಿಕ ವಿಕೋಪ ತಡೆಗೆ ಅಗತ್ಯ ಕ್ರಮಕ್ಕೆ ಸಚಿವ ಎನ್‌ಎಸ್ ಬೋಸರಾಜ್ ಸೂಚನೆ

ಗೊತ್ತು ಗುರಿಯಿಲ್ಲದ ಸಚಿವರ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಟ್ಟಿಹೊಳೆಯಲ್ಲಿ ಪತ್ರಕರ್ತರು ಸಚಿವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಗೊತ್ತು ಗುರಿಯಿಲ್ಲದ ಸಚಿವರ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಟ್ಟಿಹೊಳೆಯಲ್ಲಿ ಪತ್ರಕರ್ತರು ಸಚಿವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕಳೆದ 17 ವರ್ಷಗಳಿಂದ ವಾರ್ತಾ ಇಲಾಖೆಗೆ ವಾಹನ ಇಲ್ಲ. ಹಲವು ವರ್ಷಗಳಿಂದ ಪತ್ರಕರ್ತರು ವಾಹನಕ್ಕೆ ಬೇಡಿಕೆ ಇಟ್ಟಿದ್ದರೂ ವಾಹನ ಕೊಡಿಸಿಲ್ಲ. ಈಗಿರೋ ಡಕೋಟಾ ವಾಹನದಲ್ಲಿ ಸಂಚಾರ ಅದೆಷ್ಟು ಕಷ್ಟ ಎಂದು ಮನವರಿಕೆ ಮಾಡಿಕೊಡಲು ಸಚಿವರನ್ನ ಡಕೋಟಾ ವಾಹನದಲ್ಲಿ ಹತ್ತಿಸಿದ ಪತ್ರಕರ್ತರು. ವಾರ್ತಾ ಇಲಾಖೆ ವಾಹನದಲ್ಲೇ ಡಿಸಿ, ಶಾಸಕರ ಜೊತೆ ಸಚಿವರು ಪ್ರಯಾಣ ಮಾಡಿದರು. ಸಚಿವರ ವಾಹನ ಹಿಂಬಾಲಿಸಲು ಸಾಧ್ಯವಾಗದ ಸ್ಥಿತಿ ಬಂದಿತು. 

click me!