ದೇಶದ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ಸಾಲ: ಮೋದಿ ಸರ್ಕಾರದ ವಿರುದ್ಧ ಶಿವಲಿಂಗೇಗೌಡಗೌಡ ಕಿಡಿ!

Published : Mar 19, 2025, 06:37 AM ISTUpdated : Mar 19, 2025, 06:39 AM IST
ದೇಶದ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ಸಾಲ: ಮೋದಿ ಸರ್ಕಾರದ ವಿರುದ್ಧ  ಶಿವಲಿಂಗೇಗೌಡಗೌಡ ಕಿಡಿ!

ಸಾರಾಂಶ

ಕೇಂದ್ರ ಸರ್ಕಾರ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ರೂ. ಸಾಲ ಮಾಡಿದೆ ಎಂದು ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ. ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗಿದ್ದರಿಂದ ಖೋತಾ ಬಜೆಟ್ ಮಂಡಿಸುವಂತಾಗಿದೆ ಎಂದು ಟೀಕಿಸಿದರು.

ವಿಧಾನಸಭೆ (ಮಾ.19): ಕೇಂದ್ರ ಸರ್ಕಾರ ದೇಶದ ಜನಸಂಖ್ಯೆಯ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ರು. ಸಾಲ ಮಾಡಿದೆ. ಮುಂದೆ ಹುಟ್ಟುವ ಮಗುವಿನ ಮೇಲೆಯೂ ಸಾಲ ಮಾಡಿದೆ. ಇವರಿಗೆ ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಾಂಗ್ರೆಸ್‌ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೇ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಜಿಡಿಪಿಯ ಶೇ.53 ರಷ್ಟು ಸಾಲ ಮಾಡಿದೆ. ರಾಜ್ಯ ಸರ್ಕಾರ ವಿತ್ತೀಯ ಹೊಣೆಗಾರಿಕೆ ನೀತಿಯಡಿ ಶೇ.25ಕ್ಕಿಂತ ಕಡಿಮೆ ಸಾಲ ಮಾಡಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಸಾಲ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರಿಗೆ ನೈತಿಕತೆ ಬೇಡವೇ? ರಾಜ್ಯ ದಿವಾಳಿ ಎದ್ದು ಹೋಗಿದೆ ಎನ್ನುವ ಬಿಜೆಪಿಯವರು ಅದಕ್ಕೆ ತಾವೇ ಹೊಣೆ ಎಂಬುದನ್ನು ಮರೆಯಬಾರದು ಎಂದರು.

ರಾಜ್ಯದಿಂದ ಕೇಂದ್ರವು 4.5 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುತ್ತದೆ. ಆದರೆ ರಾಜ್ಯಕ್ಕೆ ಕೇವಲ 51 ಸಾವಿರ ಕೋಟಿ ರು. ತೆರಿಗೆ ಪಾಲು ನೀಡುತ್ತದೆ. ಅನುದಾನಗಳ ಮಾರ್ಗದಲ್ಲಿ 16 ಸಾವಿರ ಕೋಟಿ ರು. ನೀಡುತ್ತದೆ. ರಾಜ್ಯದ ಪಾಲು ಶೇ. 4.72 ಇದ್ದದ್ದು, 3.62 ಕ್ಕೆ ಇಳಿಸಲಾಗಿದೆ. ರಾಜ್ಯಕ್ಕೆ ಪಾಲು ನೀಡುವುದನ್ನು ತಪ್ಪಿಸಲು ಸೆಸ್‌ ಹಾಗೂ ಸರ್‌ಚಾರ್ಜ್‌ ಹೆಚ್ಚಳ ಮಾಡಲಾಗಿದೆ. ಕೇಂದ್ರದ ಈ ಅನ್ಯಾಯಗಳಿಂದಲೇ ರಾಜ್ಯದಲ್ಲಿ ಖೋತಾ ಬಜೆಟ್‌ ಮಂಡಿಸುವಂತಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಸಿಎಂ 16ನೇ ಬಜೆಟ್, ಜನರ ಮೇಲೆ ಸಾಲ ಹೊರಿಸಿದ್ದೇ ಸಾಧನೆ, ಎಳೆಎಳೆಯಾಗಿ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ, ಇಲ್ಲಿದೆ ಸಂಪೂರ್ಣ ವಿವರ!

ಸಿಎಂ ಯಾಕೆ ಜಿಎಸ್‌ಟಿ ಕೌನ್ಸಿಲ್‌ಗೆ ಹೋಗಲ್ಲ?: ಬಿಜೆಪಿ ಸದಸ್ಯ ಕಿಡಿ

ಜಿಎಸ್‌ಟಿ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎನ್ನುತ್ತೀರಿ. ಮುಖ್ಯಮಂತ್ರಿಗಳು ಯಾಕೆ ಜಿಎಸ್‌ಟಿ ಕೌನ್ಸಿಲ್‌ಗೆ ಹೋಗಲ್ಲ? ಅವರ ಬದಲಿಗೆ ಕೃಷ್ಣಬೈರೇಗೌಡ ಅವರನ್ನು ಕಳುಹಿಸುತ್ತಾರೆ. ಜಿಎಸ್‌ಟಿ ಕೌನ್ಸಿಲ್‌ಗೆ ಹೋಗುವುದಿಲ್ಲ ಎಂದಾದರೆ ಹಣಕಾಸು ಖಾತೆ ಬಿಟ್ಟುಕೊಡಲಿ ಎಂದು ಬಿಜೆಪಿ ಸದಸ್ಯ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾನುವಾರದ ಮಳೆಗೆ ನಲುಗಿದ ಕರುನಾಡು: ಸಿಡಿಲಿಗೆ ಇಬ್ಬರು ರೈತರು, ಮೂರು ಹಸು ಬಲಿ; ಜಿಲ್ಲಾವಾರು ಹಾನಿ ವಿವರ ನೋಡಿ!
ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಉತ್ತೇಜನ, 1600ಕೋಟಿ ಗೂ ಮೀರಿ ವಿನಿಯೋಗ, ಈ ಜಿಲ್ಲೆಗಳಿಗೆ ಜಾಕ್‌ಪಾಟ್!