ಕಿತ್ತೂರು ಉತ್ಸವ: ಬೆಳಗಾವಿಯಲ್ಲಿ ನಾಳೆ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ

By Suvarna News  |  First Published Oct 21, 2024, 4:14 PM IST

ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಹಿನ್ನೆಲೆಯಲ್ಲಿ ಇದೇ ಪ್ರಥಮ‌ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳಲಾಗಿದೆ.


ಬೆಳಗಾವಿ (ಅ.21): ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಹಿನ್ನೆಲೆಯಲ್ಲಿ ಇದೇ ಪ್ರಥಮ‌ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಖ್ಯಾತಿಯ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಕಿತ್ತೂರು ಉತ್ಸವದ ಹಿಂದಿನ ದಿನವಾದ ಅ.22 ರಂದು ಸಂಜೆ 4 ಗಂಟೆಗೆ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ.

Tap to resize

Latest Videos

ಅದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದ, ಸಂಗೀತ ನಿರ್ದೇಶಕ ಸಾಧು ಕೋಕಿಲ್ ಅವರು ಮತ್ತು ಜೀ ಕನ್ನಡ ಸರಿಗಮಪ ತಂಡದವರು ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ಬೆಳಗಾವಿ: ಉದ್ಯಮಿ ಸಂತೋಷ ಕೊಲೆ ಕೇಸ್‌, ಮೂವರಿಗೆ 14 ದಿನ ನ್ಯಾಯಾಂಗ ಬಂಧನ

ಆಕ್ಸಿಜೆನ್ ಡ್ಯಾನ್ಸ್ ಗ್ರುಪ್ ವತಿಯಿಂದ ನೃತ್ಯ; ರೇಖಾ ಹೆಗಡೆ ಮತ್ತು ತಂಡದವರಿಂದ ನೃತ್ಯ ರೂಪಕ; ಪ್ರಕಾಶ್ ಚಂದನ್ನವರ ತಂಡದಿಂದ ಜೋಗತಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೇ ಫೈರ್ ಶೋ ಹಾಗೂ ಶಾಡೋ ಆ‌್ಯಕ್ಟ್ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಯುವಕ/ಯುವತಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮನವಿ ಮಾಡಿಕೊಂಡಿದ್ದಾರೆ.

click me!