
ಬೆಂಗಳೂರು (ಆ.04) ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ತಿಕ್ಕಾಟ ತೀವ್ರಗೊಳ್ಳುತ್ತಿದೆ. ಬಾಕಿ ಉಳಿಸಿಕೊಂಡಿರುವ 38 ತಿಂಗಳ ವೇತನ ನೀಡುವಂತೆ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದಾರೆ. ಮುಷ್ಕರ ಘೋಷಣೆಯಿಂದ ಕಂಗಾಲಾದ ರಾಜ್ಯ ಸರ್ಕಾರ ಇಂದು ಸಾರಿಗೆ ನೌಕರರ ಜೊತೆ ಸಂಧಾನ ಸಭೆ ನಡೆಸಿತ್ತು. ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡ ಬೆನ್ನಲ್ಲೇ ನಾಳೆಯಿಂದ ಮುಷ್ಕರ ಘೋಷಿಸಲಾಗಿತ್ತು. ಇದರ ನಡುವೆ ಹೈಕೋರ್ಟ್ ನಾಳೆವರೆಗೆ ಮುಷ್ಕರ ಮಾಡದಂತೆ ಆದೇಶ ನೀಡಿದೆ. ಆದರೆ ಆಗಸ್ಟ್6 ರಿಂದ ಸಾರಿಗೆ ನೌಕರರು ಮುಷ್ಕರ ಮಾಡುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಸರ್ಕಾರ ಇದೀಗ ಮುಷ್ಕರ ಆರಂಭಗೊಂಡರೆ ಸಮಸ್ಯೆ ಎದುರಿಸಲು ಪರ್ಯಾಯ ಮಾರ್ಗ ಹುಡುಕುತ್ತಿದೆ. ಖಾಸಗಿ ಬಸ್ ರಸ್ತೆಗಿಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಷ್ಟೇ ಅಲ್ಲ ಐಟಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಲು ಮನವಿ ಮಾಡಲಾಗುತ್ತಿದೆ.
ಸಾರಿಗೆ ನೌಕರರ ಮುಷ್ಕರದಿಂದ ಪ್ರತಿ ದಿನ ಕೆಲಸಕ್ಕಾಗಿ ಕಚೇರಿಗೆ ಹಾಜರಾಗುವ ಉದ್ಯೋಗಿಗಳಿಗೂ ಸಮಸ್ಯೆಯಾಗಲಿದೆ. ಈ ಸಮಸ್ಯೆ ಪ್ರಮಾಣ ತಗ್ಗಿಸಲು ಇದೀಗ ಐಟಿ ಕ್ಷೇತ್ರಗಳ ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಲು ಮನವಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರಿಗೆ ನೌಕರರು ಅನಿರ್ದಿಷ್ಟಾವದಿ ಮುಷ್ಕರ ಕೈಗೊಂಡಿರುವ ಕಾರಣ ವರ್ಕ್ ಫ್ರಮ್ ಹೋಮ್ ಸಾಧ್ಯವಿರುವ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿಗಳಿಗೆ ಮನವಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾರಿಗೆ ನೌಕರರ ಜೊತೆ ನಾಳೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮಾತುಕತೆ ವಿಫಲಗೊಂಡು ಮುಷ್ಕರ ಆರಂಭಗೊಂಡರೆ 4,000 ಖಾಸಗಿ ಬಸ್ ರಸ್ತೆಗಳಿಸಲು ಸರ್ಕಾರ ಸಜ್ಜಾಗಿದೆ. ಟಿಕೆಟ್ ಬೆಲೆ, ಮಾರ್ಗ ಸೇರಿದಂತೆ ಎಲ್ಲಾ ವಿವರಗಳ ಕುರಿತು ಚರ್ಚೆ ನಡೆಸಲಾಗಿದೆ. ಖಾಸಗಿ ಬಸ್ ಮೂಲಕ ಸೇವೆ ನೀಡಲು ಸರ್ಕಾರ ಪರ್ಯಾಯವಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಸಮಸ್ಯೆಗಳಿಗೆ ಪರ್ಯಾ ಮಾರ್ಗ ಹುಡುಕಲು ಹಾಗೂ ಇರವ ಮಾರ್ಗಗಳ ಬಳಕೆ ಮಾಡಲು ಸಾರಿಗಗೆ ಇಲಾಖೆ ಮುಖ್ಯ ಕಾರ್ಯದರ್ಶಿ, ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಯಾರಿಗೆಲ್ಲಾ ಪತ್ರ ಬರೆಯಲಾಗಿದೆ.
1.ಮಾಹಿತಿ ತಂತ್ರಜ್ಞಾನ ಇಲಾಖೆ (Department of Information Technology) ರಾಜ್ಯದಲ್ಲಿನ ಅದರಲ್ಲೂ ಬೆಂಗಳೂರಿನ ಎಲ್ಲಾ ಖಾಸಗಿ ಕಂಪನಿಗಳಿಗೆ ಮುಷ್ಕರದ ಸಮಯದಲ್ಲಿ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಲು(work from home) ಅನುಮತಿ ನೀಡುವಂತೆ ಪತ್ರ.
2. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ- ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ,
* ಅವರ ಅಧೀನದ ಖಾಸಗಿ ಶಾಲಾ ವಾಹನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಸಹ ಕೊಡೊಯ್ಯಲು ಅನುವಾಗುವಂತೆ ಕ್ರಮ ವಹಿಸುವಂತೆ ಪತ್ರ
3. ಹಾಲಿ ಸಂಚರಿಸುತ್ತಿರುವ ರೈಲುಗಳ ಸಂಚಾರವನ್ನು ಹೆಚ್ಚಿಸುವಂತೆ ಬಿಎಂಆರ್ಸಿಎಲ್ ಎಂಡಿಗೆ ಪತ್ರ.
4. ಭಾರತೀಯ ರೈಲ್ವೇ [ಕರ್ನಾಟಕ ವಿಭಾಗ)- ರೈಲು ಸಂಚಾರ ಮತ್ತು ಒಳ ಜಿಲ್ಲೆ ರೈಲು ಸಂಚಾರವನ್ನು ಹೆಚ್ಚಿಸುವಂತೆ ಪತ್ರ.
5. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳು- ಮುಷ್ಕರದ ಸಮಯದಲ್ಲಿ ಆಯಾ ಜಿಲ್ಲೆಯ ಸುಗಮ ಸಂಚಾರಕ್ಕೆ ಕ್ರಮ ವಹಿಸುವಂತೆ ಪತ್ರ.
ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬಿಎಂಟಿಸಿ ಪ್ಲಾನ್ ಬಿ ರೆಡಿ ಮಾಡಿದೆ. ಬೆಂಗಳೂರು ನಗರದಲ್ಲಿ ಸಾರಿಗೆ ವ್ಯವಸ್ಥೆಗೆ ಸಮಸ್ಯೆ ಎದುರಾದರೆ ನಗರದ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ಹೀಗಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಲೆಕ್ಟ್ರಿಕ್ ಬಸ್ ರಸ್ತೆಗಳಿಸಲು ಬಿಎಂಟಿಸಿ ಸಿದ್ದತೆ ಮಾಡಿಕೊಂಡಿದೆ. ಬಿಎಂಟಿಸಿಯಲ್ಲಿ 1500 ಎಲೆಕ್ಟ್ರಿಕ್ ಬಸ್‌ಗಳಿವೆ. ಈ ಬಸ್‌ಗಳಿಗೆ ಖಾಸಗಿ ಚಾಲಕರನ್ನು ನೇಮಕ ಮಾಡಲಾಗಿದೆ. ಇನ್ನು ಕಂಡಕ್ಟರ್ ಬಿಎಂಟಿಸಿ ನೌಕರರು. ಒಂದು ವೇಳೆ ಕಂಡಕ್ಟರ್ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಟ್ರೈನಿ ಕಂಡಕ್ಟರ್‌ಗೆ ಬುಲಾವ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 2,000 ಟ್ರೈನಿ ಕಂಡಕ್ಟರ್ ಮೂಲಕ ಸೇವೆ ನೀಡಲು ಬಿಎಂಟಿಸಿ ತಯಾರಿ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ