SSLC, ಪಿಯುಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಜನಗಣತಿ ಇದ್ದರೂ ಮುಂದೂಡಿಕೆ ಇಲ್ಲ!

Sathish Kumar KH   | Kannada Prabha
Published : Oct 30, 2026, 07:50 AM IST
sslc exam

ಸಾರಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿಯ ಇತಿಹಾಸ ಪರೀಕ್ಷೆಯ ದಿನಾಂಕದಲ್ಲಿ ಮಾತ್ರ ಸಣ್ಣ ಬದಲಾವಣೆ ಮಾಡಲಾಗಿದ್ದು, ಉಳಿದಂತೆ ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಂತಿಮಗೊಳಿಸಲಾಗಿದೆ.

ಬೆಂಗಳೂರು (ಅ.30): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ 2027ರ ಮಾರ್ಚ್‌ 22ರಿಂದ ಏಪ್ರಿಲ್ 5 ರವರೆಗೆ, ದ್ವಿತೀಯ ಪಿಯುಸಿ ಪರೀಕ್ಷೆ ಫೆ.27ರಿಂದ ಮಾರ್ಚ್‌ 17ರವರೆಗೆ ನಡೆಯಲಿದೆ.

ದ್ವಿತೀಯ ಪಿಯುಸಿಯ ಇತಿಹಾಸ ಪರೀಕ್ಷೆಯ ದಿನಾಂಕವನ್ನು ಹೊರತುಪಡಿಸಿ ಉಳಿದಂತೆ ಎರಡೂ ಪರೀಕ್ಷೆಗಳಿಗೆ ಬಹುತೇಕ ಅ.8ರಂದು ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗಳನ್ನೇ ಅಂತಿಮಗೊಳಿಸಲಾಗಿದೆ. ಮಾರ್ಚ್‌ 16ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಇತಿಹಾಸ ಪರೀಕ್ಷೆಯನ್ನು ಮಾತ್ರ ಮಾ.18ಕ್ಕೆ ನಿಗದಿಪಡಿಸಲಾಗಿದೆ. ಉಳಿದ ಎಲ್ಲ ವಿಷಯಗಳ ಪರೀಕ್ಷೆಗಳನ್ನು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ನಿಗದಿಯಾಗಿದ್ದಂತೆಯೇ ಮಂಡಳಿ ಅಂತಿಮಗೊಳಿಸಿದೆ.

ಜನವರಿ/ಫೆಬ್ರವರಿಯಲ್ಲಿ ರಾಜ್ಯದಲ್ಲಿ ಎರಡನೇ ಹಂತದ ಜನಗಣತಿ ನಡೆಯುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೊಂಚ ಮುಂದೂಡಲು ‘ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ’ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಇದಕ್ಕೆ ರಾಜ್ಯ ಸರ್ಕಾರ ಒಪ್ಪದ ಕಾರಣ ಮಂಡಳಿಯು ಯಥಾವತ್ತಾಗಿ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ದ್ವಿತೀಯ ಪಿಯು ಅಂತಿಮ ವೇಳಾಪಟ್ಟಿ

ಫೆ. 27- ಕನ್ನಡ, ಅರೇಬಿಕ್‌

ಮಾ.1 - ಇಂಗ್ಲಿಷ್‌

ಮಾ. 2- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

ಮಾ. 3- ಭೂಗೋಳಶಾಸ್ತ್ರ, ಮನಃಶಾಸ್ತ್ರ

ಮಾ. 4 - ಸಮಾಜಶಾಸ್ತ್ರ, ಭೌತಶಾಸ್ತ್ರ

ಮಾ. 5- ಲೆಕ್ಕಶಾಸ್ತ್ರ

ಮಾ. 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

ಮಾ. 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ

ಮಾ. 11- ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪು ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್ , ಹೆಲ್ತ್‌ಕೇರ್ , ಬ್ಯೂಟಿ ಅಂಡ್ ವೆಲ್‌ನೆಸ್‌

ಮಾ.12 - ವ್ಯವಹಾರ ಅಧ್ಯಯನ, ಗಣಿತ

ಮಾ.13- ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ

ಮಾ.15- ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ

ಮಾ.16- ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ

ಮಾ. 17- ಹಿಂದಿ

ಮಾ. 18- ಇತಿಹಾಸ

ಎಸ್‌ಎಸ್‌ಎಲ್‌ಸಿ ಅಂತಿಮ ವೇಳಾಪಟ್ಟಿ

ಮಾ.22 - ಪ್ರಥಮ ಭಾಷೆ(ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ)

ಮಾ.25- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ

ಮಾ. 27- ದ್ವಿತೀಯ ಭಾಷೆ (ಇಂಗ್ಲಿಷ್‌, ಕನ್ನಡ)

ಮಾ. 30- ಗಣಿತ, ಸಮಾಜಶಾಸ್ತ್ರ

ಏ. 2 - ತೃತೀಯ ಭಾಷೆ(ಹಿಂದಿ, ಹಿಂದಿ(ಎನ್‌ಸಿಇಆರ್‌ಟಿ), ಕನ್ನಡ(ಪುನರಾವರ್ತಿತರಿಗೆ ಮಾತ್ರ), ಉರ್ದು, ತುಳು, ಇಂಗ್ಲಿಷ್, ಸಂಸ್ಕೃತ, ಕೊಂಕಣಿ, ತೆಲುಗು, ತಮಿಳು, ಮರಾಠಿ) ಹಾಗೂ ಎನ್‌ಎಸ್‌ಕ್ಯೂಎಫ್‌ ವಿಷಯಗಳು,

ಏ. 3- ಜೆಟಿಎಸ್‌ ವಿಷಯಗಳು

ಏ.5- ಸಮಾಜ ವಿಜ್ಞಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬೆಂಗಳೂರು-ಕರಾವಳಿ ವಂದೇ ಭಾರತ್ ರೈಲು ಬಗ್ಗೆ ಬಿಗ್ ಅಪ್‌ಡೇಟ್! ನವೆಂಬರ್ ನಲ್ಲಿ ಸಂಚಾರ ಆರಂಭದ ಸೂಚನೆ
One Ward One Drive campaign: ಉತ್ತರ ಪಾಲಿಕೆಯ ಈ 18 ಜಂಕ್ಷನ್‌ ಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ!