ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ

By Suvarna News  |  First Published Jun 14, 2021, 10:11 PM IST

* ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಇಳಿಕೆ
* ಸದ್ಯ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇಕಡ 4.56
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ 


ಬೆಂಗಳೂರು, (ಜೂನ್.14): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದು, ಇಂದು (ಸೋಮವಾರ) ರಾಜ್ಯದಲ್ಲಿ 6835 ಜನರಿಗೆ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. 

ರಾಜ್ಯದಲ್ಲಿ ಇವತ್ತು 120 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 33,033 ಜನ ಸಾವನ್ನಪ್ಪಿದ್ದಾರೆ. ಇನ್ನು ಒಟ್ಟು ಸೋಂಕಿತರ ಸಂಖ್ಯೆ 27,71,969 ಕ್ಕೆ ಏರಿಕೆಯಾಗಿದೆ.

Tap to resize

Latest Videos

"

ಕಳೆದ 24 ಗಂಟೆಗಳಲ್ಲಿ 15, 409 ಕೊರೋನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 25,66,774 ಜನ ಗುಣಮುಖರಾಗಿದ್ದಾರೆ. 1,72,141 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 4.56 ರಷ್ಟಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 1470 ಜನರಿಗೆ ಸೋಂಕು ತಗುಲಿದ್ದು, 12 ಸೋಂಕಿತರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

click me!