ಇನ್ನುಮುಂದೆ ಆನ್‌ಲೈನಲ್ಲೇ ಜಮೀನು ಸ್ಕೆಚ್‌, ನಕ್ಷೆ ಲಭ್ಯ!

By Suvarna NewsFirst Published Apr 18, 2022, 5:44 AM IST
Highlights

* ನಕ್ಷೆಗಳ ಪ್ರಿಂಟೌಟ್‌ಗೆ ಇನ್ನು ಕಚೇರಿಗೆ ಹೋಗಬೇಕಿಲ್ಲ

* ಇನ್ನು ಮುಂದೆ ಆನ್‌ಲೈನಲ್ಲೇ ಜಮೀನು ಸ್ಕೆಚ್‌, ನಕ್ಷೆ ಲಭ್ಯ

ಬೆಂಗಳೂರು(ಏ.18) ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರ ನಕ್ಷೆಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು ಎಂದು ಸರ್ವೇ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರಿಕರು hಠಿಠಿp://103.138.196.154/sಛ್ಟಿvಜ್ಚಿಛಿ19/್ಕಛಿpಟ್ಟಠಿ/ಅpp್ಝಜ್ಚಿaಠಿಜಿಟ್ಞಈಛಿಠಿaಜ್ಝಿs ವೆಬ್‌ಸೈಟ್‌ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೇ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್‌ಸೈಟ್‌ನಲ್ಲಿ ಆ ನಕ್ಷೆಗಳನ್ನು ಸಾರ್ವಜನಿಕರು ಮುದ್ರಣ ಪ್ರತಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವಾಗ ನಾಗರಿಕರು ಹಣ ಪಾವತಿಸಿರುವ ಕಾರಣ ನಕ್ಷೆ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಣ ಪ್ರತಿ ಪಡೆಯಲು ಯಾವುದೇ ಹೆಚ್ಚುವರಿ ಹಣ ಕೊಡಬೇಕಾಗಿರುವುದಿಲ್ಲ. ಇದರಿಂದ ತಮ್ಮ ನಕ್ಷೆಗಳ ಪ್ರಿಂಟ್‌ ಔಟ್‌ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Latest Videos

ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಾಗರಿಕರು ಯಾವ ನಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೋ ಆ ಅರ್ಜಿ ಸಂಖ್ಯೆ, ಮೊಬೈಲ್‌ ಸಂಖ್ಯೆ, ಸರ್ವೆ ನಂಬರ್‌, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್‌ ಹೀಗೆ ವಿವಿಧ ಮಾಹಿತಿಗಳನ್ನು ದಾಖಲಿಸಿ ತಮ್ಮ ನಕ್ಷೆ ಪಡೆದುಕೊಳ್ಳಬಹುದಾಗಿದೆ.

click me!