
ಧಾರವಾಡ (ಅ.28) ಸರ್ಕಾರಿ ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಎಲ್ಲಾ ಖಾಸಗಿ ಸಂಘಟನೆಗಳ ಕಾರ್ಯ ಚಟುವಿಕೆಗಳ ನಿಷೇಧಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಆದೇಶವಾಗಿ ಜಾರಿಯಾಗಿತ್ತು. ಪ್ರಮುಖವಾಗಿ ಆರ್‌ಎಸ್ಎಸ್ ಚಟುವಟಿಕೆ ನಿರ್ಬಂಧಿಸಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಬರೆದ ಪತ್ರದ ಆಧಾರದಲ್ಲಿ ರಾದ್ಯ ಸರ್ಕಾರ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಚುಟವಟಿಕೆ ನಿರ್ಬಂಧಿಸಲು ಆದೇಶಿಸಿತ್ತು. ಈ ಆದೇಶದ ವಿರುದ್ದ ಹೈಕೋರ್ಟ ಮೆಟ್ಟೇಲಿರಿದ್ದ ಪುನಶ್ಚೇತನ ಸೇರಿದಂತೆ ವಿವಿಧ ಸೇವಾ ಸಂಸ್ಥೆಗೆ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಧಾರವಾಡ ಪೀಠ, ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು. ಈ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅರ್ಜಿದಾರ ಪರ ವಕೀಲ ನ್ಯಾಯವಾದಿ ಮಲ್ಲಿಕಾರ್ಜುನ ಹಿರೇಮಠ, ಆರ್ಟಿಕಲ್ 19 ಹಾಗೂ 14ರ ಉಲ್ಲಂಘನೆಯಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಸೇರಿದರೆ ಅದು ಕಾನೂನು ಬಾಹಿರ ಎಂದು ಆದದೇಶ ಹೇಳುತ್ತಿದೆ. ಒಂದು ಸರ್ಕಾರ ಆರ್ಟಿಕಲ್ ಉಲ್ಲಂಘಿಸಿ ಸರ್ಕಾರ ಕಾನೂನು ರೂಪಿಸಿದೆ. ಆದೇಶದ ಪ್ರಕಾರ ನಾವು 10 ಜನ ರಸ್ತೆ ಮೇಲೆ ನಿಂತಿದ್ದೇವೆ ಎಂದು ಅದು ಕಾನೂನು ಬಾಹಿರ ಆಗುತ್ತದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಪಾರ್ಕ್, ಮೈದಾನಗಳು ಸಾರ್ವಜನಿಕ ಸ್ಥಳಗಳು ಎಂದು ಮಲ್ಲಿಕಾರ್ಜುನ ಹೀರೇಮಠ ಹೇಳಿದ್ದಾರೆ.
ಸರಕಾರದ ಆದೇಶದಿಂದ ನಿರ್ಬಂಧನೆ ಹಾಕಿದಂತಾಗಿತ್ತು. ಹೀಗಾಗಿ ಸರಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಈ ಆದೇಶದಿಂದ ಆರ್ಟಿಕಲ್ 19 ಮತ್ತು 14 ಉಲ್ಲಂಘನೆಯಾಗಲಿದೆ. ವಿಭಾಗೀಯ ಪೀಠ ಕೂಡ ಮೇಲ್ನೋಟಕ್ಕೆ ಇಲ್ಲಿ ಆರ್ಟಿಕಲ್ ಉಲ್ಲಂಘನೆಯಾಗುತ್ತೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ನ. 17 ಕ್ಕೆ ವಿಚಾರಣೆ ಮುಂದೂಡಿದೆ. ಇತ್ತ ಈ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ ಹಾಕಬಹುದು ಅಂತಾ ಸರಕಾರಕ್ಕೆ ಹೇಳಿದೆ. ಆದೇಶದಲ್ಲಿರುವ ಹಲವು ಆರ್ಟಿಕಲ್ ಉಲ್ಲಂಘನೆ ಕುರಿತು ವಾದ ಮಾಡಿದ್ದೇವೆ. ಹೀಗಾಗಿ ಕೋರ್ಟ್ ಮಧ್ಯಮಂತರ ತಡೆಯಾಜ್ಞೆ ನೀಡಿದೆ ಎಂದು ಮಲ್ಲಿಕಾರ್ಜುನ್ ಹೀರೇಮಠ ಹೇಳಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಪುನಶ್ಚೇತನ ಸೇವಾ ಸಂಸ್ಥೆ, ವಿ.ಕೆ. ಫೌಂಡೇಶನ್, ರಾಜೀವ್ ಮಲ್ಹಾರ ಕುಲಕರ್ಣಿ, ಬೌದ್ಧ ಪ್ರಚಾರಕ ಉಮಾ ಚವ್ಹಾಣರು ಧಾರವಾಡ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ