ಬೆಂಗಳೂರು: ಶನಿವಾರ ವಿಶ್ವಾದ್ಯಂತ ಮಹಿಳಾ ದಿನಾಚರಣೆ. ‘ಮಹಿಳೆಗೆ ಸಮಾಜದಲ್ಲಿ ಸಮಾನ ಹಕ್ಕು ಇದೆ. ಆಕೆ ಅಬಲೆಯಲ್ಲ, ಸಬಲೆ’ ಎಂದು ಸಂದೇಶ ಸಾರುವ ದಿನವಿದು. ಯುರೋಪ್‌ನಲ್ಲಿ ಕಾರ್ಮಿಕ ಚಳವಳಿ ವೇಳೆ ಹುಟ್ಟಿಕೊಂಡ ಈ ದಿನ ಇಂದು ವಿಶ್ವಾದ್ಯಂತ ಆಚರಿಸಲ್ಪಡುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ನಿರ್ವಹಿಸಲಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‌ನಲ್ಲಿ ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಮಹಿಳೆಯರ ಸುರಕ್ಷತೆಗೆ ವಸತಿ ನಿಲಯ ನಿರ್ಮಾಣ ಘೋಷಣೆ, ಅಂಗನವಾಡಿ ಕಾರ್ಯಕರ್ತೆಯ ಗೌರವ ಧನ ಏರಿಕೆ, ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್ ಪ್ರತಿಷ್ಠಿತ ವಿವಿಯಲ್ಲಿ ಶಿಕ್ಷಣಕ್ಕೆ ಅವಕಾಶ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

08:02 PM (IST) Mar 08
ಹಂಪಿಗೆ ಭೇಟಿ ನೀಡಿದ್ದ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೂರ್ತಿ ಓದಿ05:56 PM (IST) Mar 08
ಗುಜರಾತ್‌ನಲ್ಲಿ ರೋಡ್ ಶೋ ವೇಳೆ ಅಭಿಮಾನಿಯೊಬ್ಬರು ತಂದಿದ್ದ ಪೇಂಟಿಂಗ್‌ಗೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ತಾಯಿ ಹೀರಾಬೆನ್ ಮೋದಿ ಇರುವ ಚಿತ್ರಕ್ಕೆ ಸಹಿ ಹಾಕಿದ್ದನ್ನು ಕಂಡು ಅಭಿಮಾನಿ ಭಾವುಕರಾದರು.
ಪೂರ್ತಿ ಓದಿ05:09 PM (IST) Mar 08
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಗೂ ಮುನ್ನ ಸಣ್ಣಗಿದ್ದ ಹೆಂಡತಿ ದಪ್ಪಗಾಗಿದ್ದಾಳೆಂದು ಗಂಡ ಜಗಳ ತೆಗೆದು, ಖಾರದ ಪುಡಿ ಎರಚಿ ಹಲ್ಲೆ ಮಾಡಲು ಯತ್ನಿಸಿದ್ದಾನೆ.
ಪೂರ್ತಿ ಓದಿ04:33 PM (IST) Mar 08
ಅಮೆರಿಕದ F-35 ಯುದ್ಧ ವಿಮಾನ ಖರೀದಿಗೆ ಭಾರತ ಆಸಕ್ತಿ ತೋರಿದೆ. ಏರ್‌ಫೋರ್ಸ್ ಮುಖ್ಯಸ್ಥರು ವಿಶ್ಲೇಷಣೆ ನಡೆಸಿ, ಬೆಲೆ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪೂರ್ತಿ ಓದಿ11:07 AM (IST) Mar 08
ಸುಪ್ರೀಂ ಕೋರ್ಟ್‌ನಲ್ಲಿ 241 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಪದವೀಧರರು ನಿಮಿಷಕ್ಕೆ 35 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯದೊಂದಿಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ08:35 AM (IST) Mar 08
Karnataka budget 2025:ಕರ್ನಾಟಕ ಬಜೆಟ್ 2025 ಪ್ರವಾಸೋದ್ಯಮಕ್ಕೆ ಹೊಸ ನೀತಿ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿದೆ. ಆಯ್ದ ಪ್ರವಾಸಿ ತಾಣಗಳ ಅಭಿವೃದ್ಧಿ, ಸಹಾಯವಾಣಿ ಸ್ಥಾಪನೆ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣದ ಯೋಜನೆಗಳಿವೆ.
ಪೂರ್ತಿ ಓದಿ07:53 AM (IST) Mar 08
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2025ರ ಕರ್ನಾಟಕ ಬಜೆಟ್‌ನಲ್ಲಿ ರಸ್ತೆ ಅಭಿವೃದ್ಧಿ, ಕೃಷಿ, ಶಿಕ್ಷಣ, ಆರೋಗ್ಯ, ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿಶೇಷ ಅನುದಾನಗಳನ್ನು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ದೇವಾಲಯಗಳ ಸಂರಕ್ಷಣೆ, ಶ್ರವಣದೋಷ ನಿವಾರಣೆ, ಮತ್ತು ಕೌಶಲ್ಯ ತರಬೇತಿಗಳಿಗೆ ಒತ್ತು ನೀಡಲಾಗಿದೆ.
ಪೂರ್ತಿ ಓದಿ