ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಕ್ರಮ ಹಗರಣದ ಮುಖ್ಯ ರೂವಾರಿ ರುದ್ರಗೌಡ ಪಾಟೀಲ್ (ಆರ್.ಡಿ.ಪಾಟೀಲ್)ಗೆ ಜೈಲೇ ಗತಿ ಆಗಿದೆ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಸೋಮವಾರ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. 26 ಪ್ರಕರಣಗಳು ದಾಖಲಾಗಿದ್ದರೂ 20 ಪ್ರಕರಣಗಳ ಬಗ್ಗೆ ಅಷ್ಟೇ ಮಾಹಿತಿ ನೀಡಿದ್ದ. ಅಲ್ಲದೇ ಕಳೆದ ಭಾರಿ ಬೇಲ್ ನೀಡಿದಾಗ ಮತ್ತೊಂದು ಹಗರಣದಲ್ಲಿ ಭಾಗಿಯಾಗಿದ್ದ ಎಂದು ಸರ್ಕಾರ ವಾದ ಮಂಡಿಸಿತು. ಬಳಿಕ ಆರ್.ಡಿ.ಪಾಟೀಲ್ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.
ಸರ್ಕಾರದ ಪರ ಎ.ಎಸ್.ಜಿ ನಿಶಾಂತ್ ವಾದ ಮಂಡಿಸಿದರು. ಇದೇ ವರ್ಷದ ಮಾರ್ಚ್‌ನಲ್ಲಿ ಆರ್.ಡಿ.ಪಾಟೀಲ್ ರಾಜ್ಯ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಈತನ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾ ಮಾಡಿತ್ತು.
07:38 AM (IST) Oct 06
ಹಿರಿಯೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಾಣಿವಿಲಾಸ, ಗಾಯತ್ರಿ ಜಲಾಶಯಗಳಿಂದ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಉಪ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವ ಎಚ್ಚರಿಕೆ!
07:27 AM (IST) Oct 06
ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಕೈದಿಯನ್ನು ಬಿಡುಗಡೆ ಮಾಡಿಸಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮಾಜಿ ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಲಾಗಿದೆ. ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಈ ನಕಲಿ ಜಾಮೀನು ಸೃಷ್ಟಿಸಿರುವುದು ತನಿಖೆಯಿಂದ ಬಯಲಾಗಿದೆ.
07:19 AM (IST) Oct 06
07:01 AM (IST) Oct 06
ನೈಸ್ ರಸ್ತೆ ಯೋಜನೆಗಾಗಿ ಕೆಐಎಡಿಬಿ ನಡೆಸಿದ್ದ ಭೂಸ್ವಾಧೀನ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ನಿರ್ಧಾರವನ್ನು ಸ್ವಾಗತಿಸಿರುವ ಎಚ್.ಡಿ.ಕುಮಾರಸ್ವಾಮಿ, ರೈತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
06:59 AM (IST) Oct 06
KMF milk price hike Karnataka ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್ ಹಾಲಿನ ದರ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಇದರ ಜೊತೆಗೆ ಬೆಂಗಳೂರಿನಲ್ಲಿ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಸ್ಥಾಪನೆ, ಸೋಲಾರ್ ಅಳವಡಿಕೆಗೆ ಶೇ.50 ಸಬ್ಸಿಡಿ ನೀಡುವ ಕುರಿತು ಚರ್ಚೆ.
06:52 AM (IST) Oct 06
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ನೀರಿನಿಂದ ಕಡೂರು ತಾಲೂಕಿನ ಕುಕ್ಕಸಮುದ್ರ ಕೆರೆ ಕೋಡಿಬಿದ್ದಿದೆ. ಬರಗಾಲದಿಂದ ಕಂಗೆಟ್ಟಿದ್ದ ಬಯಲುಸೀಮೆ ರೈತರಿಗೆ ಇದು ಪುನರ್ಜನ್ಮ ನೀಡಿದ್ದು, ಸಂತಸಗೊಂಡ ರೈತರು ಕೆರೆಗೆ ಬಾಗಿನ ಅರ್ಪಿಸುತ್ತಿದ್ದಾರೆ.