ಬೆಂಗಳೂರು: ಭಾನುವಾರದ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಕಾಳಗದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿದೆ. ಇದರ ನಡುವೆ ದುಬೈನಲ್ಲಿ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯಮಾಡಿಕೊಂಡಿದ್ದು ಭಾರತದ ಆತಂಕಕ್ಕೆ ಕಾರಣವಾಗಿದೆ.. ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತಾರಕಕ್ಕೇರಿರುವ ಮಧ್ಯೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಕುರಿತೇ ಇದೀಗ ಅನುಮಾನ ವ್ಯಕ್ತವಾಗಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದ್ದು, ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಮಾತ್ರ ನಡೆಸಬಹುದು ಎಂದು ಮೂಲಗಳು ತಿಳಿಸಿವೆ. ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ರಾಜಣ್ಣ ಅವರಿಗೆ ಖರ್ಗೆ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಗ್ರೇಟರ್ ಬೆಂಗಳೂರು ರಚನೆಗೆ ಪ್ರತಿಪಕ್ಷ ಬಿಜೆಪಿ ಬಲವಾಗಿ ವಿರೋಧಿಸಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರು ಒಡೆಯಲು ಅವಕಾಶ ನೀಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಲೋಕಾಯುಕ್ತ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ. ಈ ದಿನದ ರಾಜ್ಯ ಮತ್ತು ರಾಜಕೀಯ ಸುದ್ದಿಗಳ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

07:45 PM (IST) Feb 22
ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈವೋಲ್ಟೇಜ್ ಕದನಕ್ಕೂ ಮುನ್ನ ಟೀಮ್ ಇಂಡಿಯಾದ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೊಣಕಾಲು ಗಾಯ ಮಾಡಿಕೊಂಡಿದ್ದಾರೆ.
07:41 PM (IST) Feb 22
ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗ ಈ ಲಿಸ್ಟ್‌ಗೆ ಬಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಶಿಷ್ಠ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದರು.
06:37 PM (IST) Feb 22
ಮಾನವ-ವನ್ಯಜೀವಿ ಸಂಘರ್ಷದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಮೃತರ ಸಂಬಂಧಿಕರಿಂದ ಬಂದ ಮನವಿಗಳ ಆಧಾರದ ಮೇಲೆ ಅವರು ಈ ಪತ್ರ ಬರೆದಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ, ಕೇರಳದಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಿಯಾಂಕಾ ಗಾಂಧಿ ಆಗ್ರಹ
06:13 PM (IST) Feb 22
ಮುಂಬೈನ ಎಸ್‌ಆರ್‌ಎ ಯೋಜನೆಗಳಲ್ಲಿ ಮುಸ್ಲಿಂ ಬಿಲ್ಡರ್‌ಗಳು ಹಿಂದೂ ಅರ್ಜಿದಾರರನ್ನು ತಿರಸ್ಕರಿಸುತ್ತಿದ್ದಾರೆ ಎಂದು ಸಂಜಯ್ ನಿರುಪಮ್ ಆರೋಪಿಸಿದ್ದಾರೆ. ಇದು ಹೌಸಿಂಗ್ ಜಿಹಾದ್ ಎಂದು ಅವರು ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ಭಾರೀ ಪ್ರಮಾಣದಲ್ಲಿ 'ಹೌಸಿಂಗ್ ಜಿಹಾದ್' ಮಹಾ ಸರ್ಕಾರಕ್ಕೆ ಪತ್ರ ಬರೆದ ಶಿವಸೇನೆ ನಾಯಕ!
03:07 PM (IST) Feb 22
ಮೈಸೂರಿನ ಪತ್ರಕರ್ತರ ಭವನದಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಿಂದ ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕದಲ್ಲಿ ಲವ್ ಜಿಹಾದ್ ಸಹಾಯವಾಣಿ ಸಂಖ್ಯೆ ಉಲ್ಲೇಖ ಮಾಡಲಾಗಿದೆ. ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲು ಪುಸ್ತಕ ಬಿಡುಗಡೆ ಮಾಡಲಾಗಿದೆ. ಪುಸ್ತಕ ಬಿಡುಗಡೆ ವೇಳೆ ಹಿಂದುಪರ ಸಂಘಟನೆ ಮುಖಂಡರು ಹಾಜರಿದ್ದರು.
02:35 PM (IST) Feb 22
02:10 PM (IST) Feb 22
ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ಸರ್ಕಾರ ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣದಲ್ಲಿ ಸರ್ಕಾರದ ಕುಮ್ಮಕ್ಕಿದೆ ಎಂದು ಅವರು ಹೇಳಿದ್ದಾರೆ.
01:28 PM (IST) Feb 22
ತಮಿಳಿನಾಡಿನ ಹೊಸೂರಿನಲ್ಲಿ ಶಂಕಿತ ನಕ್ಸಲ್ ಎನ್ನಲಾದ ಓರ್ವನನ್ನು ಕೇರಳದ ಎಟಿಎಸ್ ತಂಡ ಬಂಧಿಸಿದೆ. ಬಂಧಿತನನ್ನು ಸಂತೋಷ್ ( ಪೊಲ್ಲಾಚಿ) ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ನಕ್ಸಲರು ಶರಣಾಗಿದ್ದಾರೆ. ಕೇರಳದಿಂದ ಮತ್ತಷ್ಟು ನಕ್ಸಲರು ರಾಜ್ಯದ ಕಡೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಎಟಿಎಸ್ ತಂಡ ಕಾರ್ಯಾಚರಣೆ ಚುರುಕುಗೊಳಿಸಿದೆ
01:16 PM (IST) Feb 22
12:55 PM (IST) Feb 22
SSLC ಪರೀಕ್ಷೆಯಲ್ಲಿ ಈ ಮೊದಲು 2020ರದಲ್ಲಿದ್ದ ನಿಯಮಗಳನ್ನೇ ಪಾಲಿಸಲಾಗುವುದು. ಹಿಜಾಬ್ ಗಲಾಟೆ ಸಂದರ್ಭದಲ್ಲಿ ಪರೀಕ್ಷೆಗಳನ್ನು ನೀಡುವಂತೆ ಒತ್ತಾಯದ ವಿಚಾರ ಕೋರ್ಟ್ ನಲ್ಲಿದೆ. ಇದರ ಬಗ್ಗೆ ನಾನು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
12:28 PM (IST) Feb 22
ಮುಸ್ಲಿಮರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂಬ ದೂರಿನ ಹಿನ್ನಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಎಫ್‌ಐಆರ್ ದಾಖಲಾಗಿದೆ. ಯುಥ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರರ್ ಎಂಬುವವರು ನೀಡಿದ ದೂರಿನ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
12:19 PM (IST) Feb 22
ಕೊಪ್ಪಳ ಜಿಲ್ಲೆಯ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ತೀವ್ರ ಕೊರತೆ ಉಂಟಾಗಿದೆ. ₹ 1.10 ಲಕ್ಷ ಸಂಬಳ ನೀಡಲು ಸಿದ್ಧವಿದ್ದರೂ, ವೈದ್ಯರು ಸೇವೆಗೆ ಬರುತ್ತಿಲ್ಲ, ಇದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
11:30 AM (IST) Feb 22
ಪ್ರತಾಪ್ ಸಿಂಹ ಲಜ್ಜೆಗೆಟ್ಟ ಮಾಜಿ ಸಂಸದ. ಪ್ರತಾಪ್ ಸಿಂಹ ಅವರೇ ಪೊಲೀಸರ ಮೇಲೆ ಜೀಪ್ ನುಗ್ಗಿಸೋಕೆ ಆಗುತ್ತಾ? ಪಾಸ್ ಕೊಡೋಕೆ ನಿಮ್ಮಂತ ಆಯೋಗ್ಯನೇ? ಸಚಿವ ಪರಮೇಶ್ವರ್ ಬಗ್ಗೆ ಮಾತನಾಡುವಾಗ ಮಿತಿ ಇರಲಿ.ನಮ್ಮ ಸಿಎಂ ಬಗ್ಗೆ ಲಜ್ಜೆಗೆಟ್ಟವನು ಅಂತೀರಾ? ಪರಮೇಶ್ವರ್ ಬಗ್ಗೆ ಧಮ್ ತಾಕತ್ ಇದ್ಯಾ ಅಂತೀರ? ನಿಮ್ಮನ್ನ ಯಾಕೆ ಒದ್ದು ಒಳಗೆ ಹಾಕಿಲ್ಲ. ನಮ್ಮ ಸಾಹೇಬ್ರು ಯಾಕೆ ಸುಮ್ಮನೆ ಬಿಟ್ಟಿದ್ದಾರೆ ಪರಮೇಶ್ವರ್ ಸಾಹೇಬ್ರು ಸೈಲೆಂಟ್ ಇದ್ದಾರೆ. ನಮ್ಮ ಧರ್ಮವನ್ನ ಪ್ರೀತಿಸಬೇಕು. ಅನ್ಯ ಧರ್ಮಗಳನ್ನೂ ಗೌರವಿಸಬೇಕು. ನಿಮ್ಮಲ್ಲೇ ದೊಡ್ಡ ಕಂದಕ ಶುರುವಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
10:48 AM (IST) Feb 22
ವಿವೇಕನಗರದಲ್ಲಿ ಅಂಬೇಡ್ಕರ್ ಪುತ್ಥಳಿ ಹಾಗೂ ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ವಿರುದ್ಧ ವಿವೇಕನಗರ ಅಂಬೇಡ್ಕರ್ ಸೇನಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಸ್ಥಳೀಯ ಶಾಸಕ ಎನ್‌ಎ ಹ್ಯಾರಿಸ್ ಹಾಗೂ ಪುತ್ರ ನಲಪಾಡ್ ರಾಜಕೀಯ ದುರುದ್ದೇಶದಿಂದ ಅಂಬೇಡ್ಕರ್ ಪುತ್ಥಳಿ ಹಾಗೂ ಕಚೇರಿ ಧ್ವಂಸ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ವಿವೇಕನಗರದಲ್ಲಿ ಅಂಬೇಡ್ಕರ್ ಸೇನಾ ಸಮಿತಿಯಿಂದ ಪ್ರತಿಭಟನೆ ನಡೆಸಿದೆ. ದಲಿತ ವಿರೋಧಿ ಶಾಸಕ ಹ್ಯಾರಿಸ್ ಎಂದು ದಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
10:20 AM (IST) Feb 22
ಹೆಬ್ಬರೂ ಗ್ರಾಮ ಪಂಚಾಯತಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ 30 ವರ್ಷದ ಶಂಕರ್ ಎಂಬವರು ಉಸಿರಾಟದ ಸಮಸ್ಯೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೇ ಶಂಕರ್ ಮೃತರಾಗಿದ್ದು, ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ ಎಂಬ ಆರೋಪ ಕೇಳಿ ಬಂದಿದೆ. ಉಸಿರಾಟದ ಸಮಸ್ಯೆ ಇದ್ರು ಆಕ್ಸಿಜನ್ ಹಾಕದೇ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
09:53 AM (IST) Feb 22
ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಂದ ಇಡೀ ರಾತ್ರಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಬೆಳಗಿನ ಜಾವ ಹೆಚ್ಚಿನ ಪ್ರಮಾಣದ ಇಬ್ಬನಿ ಸುರಿದ ಪರಿಣಾಮ ಬೆಂಕಿ ತಹಬದಿಗೆ ಬಂದಿದೆ. ಮಧ್ಯಾಹ್ನದ ವೇಳೆ ಮತ್ತೆ ಬೆಂಕಿ ಹೊತ್ತಿಕೊಳ್ಳುವ ಆತಂಕವಿರೋದರಿಂದ ಹೊತ್ತಿ ಉರಿದಿದ್ದ ಸ್ಥಳದಲ್ಲೇ ಎರಡು ಅಗ್ನಿಶಾಮಕ ವಾಹನಗಳ ಜೊತೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.
09:39 AM (IST) Feb 22
ಇಂದಿನಿಂದ ಮೂರು ದಿನ ರನ್ನ ಉತ್ಸವ ನಡೆಯಲಿದೆ. ರನ್ನ ವೈಭವ ಶೀರ್ಷಿಕೆಯಡಿ ಉತ್ಸವ ನಡೆಯಲಿದ್ದು, ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸಂಜೆ ಆರು ಗಂಟೆಗೆ ರನ್ನ ಉತ್ಸವ ಕಾರ್ಯಕ್ರಮವನ್ನು ಸಚಿವ ಆರ್.ಬಿ ತಿಮ್ಮಾಪುರ ಉದ್ಘಾಟನೆ ಮಾಡಲಿದ್ದಾರೆ.
09:30 AM (IST) Feb 22
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಕಲು ಮಾಡಿದ್ದಾರೆ. ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ. ಬಿಜೆಪಿ ಹಾಗೂ ಮೋದಿ ಘೋಷಿಸಿದರೆ ನಡೆಯುತ್ತದೆ. ಕಾಂಗ್ರೆಸ್‌ನ ಯೋಜನೆ ಏಕೆ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.
08:33 AM (IST) Feb 22
ನನಗೆ ನಿಮ್ಮ ಭಾಷೆ ಬರೋದಿಲ್ಲ ಕನ್ನಡದಲ್ಲಿ ಮಾತನಾಡಿ’ ಎಂದಿದ್ದಕ್ಕೆ ಹಿರಿಯ ಬಸ್ ನಿರ್ವಾಹಕರೊಬ್ಬರ ಮೇಲೆ ಮರಾಠಿ ಪುಂಡರ ಗುಂಪು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದ್ದು, ಕನ್ನಡಿಗರನ್ನು ಕೆರಳಿಸಿದೆ. ಗೂಂಡಾ ವರ್ತನೆ ತೋರಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
07:53 AM (IST) Feb 22
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಲೋಕಾಯುಕ್ತ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ.
07:28 AM (IST) Feb 22
ಬಿಜೆಪಿ ವರಿಷ್ಠರು ರಾಜ್ಯ ಘಟಕದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಹಮತದೊಂದಿಗೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದ್ದು, ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಮಾತ್ರ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.