
ಬಾಗಲಕೋಟೆ (ಏ.7): ಭ್ರಷ್ಟಾಚಾರದ ಕೂಪವಾಗಿರೋ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬಾಗಲಕೋಟೆ ಕಾಂಗ್ರೆಸ್ ಲೋಕಸಭಾ ಸಮಾವೇಶದಲ್ಲಿ ಮಾತನಾಡಿದ ತಿಮ್ಮಾಪುರ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರು. ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸುತ್ತೇನೆ ಅಂದ್ರು. ಮಹಾನ್ ಸುಳ್ಳುಗಾರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಇದನ್ನು ಕಿತ್ತೆಸೆಯದಿದ್ರೆ ದೇಶಕ್ಕೆ ಉಳಿಗಾಲವಿಲ್ಲ. ಚೀನಾ ನಮ್ಮದೇಶದೊಳಗೆ ಬಂದ್ರೂ ಮೋದಿ ನಿದ್ದೆ ಮಾಡ್ತೀದಿರಾ ಮೋದಿ ವೀಕೆಸ್ಟ್ ಪಿಎಂ ಎಂದು ಟೀಕಿಸಿದರು.
'ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಹೋಗಿದ್ದಕ್ಕೆ ಯುವಕನಿಗೆ ಚಾಕು ಇರಿತ; ಬಿಜೆಪಿಗರಿಂದಲೇ ಹಲ್ಲೆ ಆರೋಪ
ನರೇಂದ್ರ ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ವೈಜ್ಞಾನಿಕವಾಗಿ ನಡೆಯುತ್ತಿದೆ. ವಿಶ್ವದ ದೊಡ್ಡ ಹಗರಣ ಚುನಾವಣಾ ಬಾಂಡ್ ಹಗರಣ ಇದನ್ನು ಹೇಳಿದ್ದು ವಿತ್ತ ಸಚಿವೆ ಪತಿ. ದೊಡ್ಡ ದೊಡ್ಡ ಕಂಪನಿಗಳ ಸಾಲ ಮನ್ನಾ ಮಾಡಿದ್ರಿ. ರೈತರ ಸಾಲಮನ್ನ ಯಾಕೆ ಮಾಡಲಿಲ್ಲ. ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಈ ಸರ್ಕಾರ ದೇಶಕ್ಕೆ ಮಾರಕ. ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸ ಆಗ್ತಿದೆ. ಆದ್ರೆ ಕಾಂಗ್ರೆಸ್ ದೇಶದ ಅಭಿಮಾನ ಬಂದಾಗ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಈಗಿನ ಸರ್ಕಾರ ಸೈನಿಕರು, ರಾಮನನ್ನು ಉಪಯೋಗ ಮಾಡಿಕೊಳ್ತಿದಾರೆ. ಅಧಿಕಾರಕ್ಕಾಗಿ ರಾಮ ಬೇಕು ಇವರಿಗೆ ಹಿಂದುತ್ವದ ಅಭಿಮಾನಿಗಳಾಗಿದ್ರೆ ಮಂದಿರ ಸಂಪೂರ್ಣವಾಗಿ ಕಟ್ಟಿ ಉದ್ಘಾಟನೆ ಮಾಡ್ತಿದ್ರಿ. ಜನರನ್ನು ತಪ್ಪು ದಾರಿಗೆ ಮೋದಿ ಎಳೆಯುತ್ತಿದ್ದಾರೆ. ಇಂತವ್ರು ನಮ್ಮ ದೇಶಕ್ಕೆ ಬೇಕಾ ಪ್ರಜಾಪ್ರಭುತ್ವ ಉಳಿಬೇಕಾದರೆ, ಸಾಮಾನ್ಯ ಜನ ಬದುಕಬೇಕಾದ್ರೆ, ರೈತರ ಸಾಲಮನ್ನಾ ಮಾಡದ ಈ ಪ್ರಧಾನಿ ದೇಶಕ್ಕೆ ಬೇಕಾ? ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ