ರಾಜ್ಯದಲ್ಲಿ ಗಾಳಿಯೂ ಇಲ್ಲ, ಮಳೆಯೂ ಇಲ್ಲ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ ಎಂದು ಲೋಡ್‌ಶೆಡ್ಡಿಂಗ್ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು (ಆ.15): ರಾಜ್ಯದಲ್ಲಿ ಮುಂಗಾರು ಆರಂಭದ ವೇಳೆ ಮಳೆ ಸ್ವಲ್ಪ ಕಡಿಮೆಯಾಗಿದೆ. ಇನ್ನು ಮಳೆಗಾಲದಲ್ಲಿ ಥರ್ಮಲ್ ಪ್ಲ್ಯಾಂಟ್‌ಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಲಾಗುತ್ತದೆ. ಜೊತೆಗೆ, ಕಳೆದ ನಾಲ್ಕೈದು ದಿನಗಳಿಂದ ಗಾಳಿ ಯೂ ಕೂಡ ಇರಲಿಲ್ಲ ಎಂದು ಹೇಳುವ ಮೂಲಕ ಲೋಡ್ ಶೆಡ್ಡಿಂಗ್ ಮಾಡುವ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಕುರಿತು ಇಂಧನ ಸಚಿವ ಜಾರ್ಜ್ ಪ್ರತಿಕ್ರಿಯೆ ನೀಡಿದರು. ನಮಗೆ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಆಯ್ತು. ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಗಳು ಸರ್ವೀಸ್ ಮಾಡ್ತಾರೆ. ಆದರೆ, ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಪವರ್ ಜನರೇಟ್ ಮಾಡೋದು ಕಡಿಮೆ ಆಗಿದೆ. ಈಗ ಥರ್ಮಲ್ ಪ್ಲಾಂಟ್ ಜಾಸ್ತಿ ಮಾಡಲು ಆದೇಶ ಮಾಡಿದ್ದೇವೆ. ಇನ್ನು 10 ದಿನದಲ್ಲಿ ಸರ್ವೀಸ್ ಮಾಡೋದನ್ನ ಅವರು ನಿಲ್ಲಿಸುತ್ತಾರೆ.
undefined
ಲೋಡ್ ಶೆಡ್ಡಿಂಗ್ ಆರಂಭ, ಕತ್ತಲೆಯಲ್ಲಿ ಮುಳುಗಲಿದೆ ಕರ್ನಾಟಕ: ಗೃಹ ಸಚಿವ ಪರಮೇಶ್ವರ್
ಕರ್ನಾಟಕ ಕಲ್ಲಿದ್ದಲು ಗುಣಮಟ್ಟದ್ದಾಗಿಲ್ಲ: ನಮ್ಮ ಕಲ್ಲಿದ್ದಲು ಕ್ವಾಲಿಟಿ ಅಷ್ಟು ಸಾಕಾಗಲ್ಲ. ಆದ್ದರಿಂದ ಆಮದು ಮಾಡಿಕೊಂಡ ಕೋಲ್ ಜೊತೆ ಮಿಕ್ಸ್ ಮಾಡಬೇಕು. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರೈಲಿನಲ್ಲಿ ಬರುವಾಗ ಕೋಲ್ ವೆಟ್ ಆಗಿದೆ. ಆದ್ದರಿಂದ ಥರ್ಮಲ್ ಪ್ಲ್ಯಾಂಟ್‌ನಲ್ಲಿ ವಿದ್ಯುತ್ ಉತ್ಪಾನೆಯೂ ಸ್ವಲ್ಪ ಕುಂಠಿತವಾಗಿದೆ. ಆದರೆ, ನಾವು ಒಂದು ವಿಚಾರದಲ್ಲಿ ಅದೃಷ್ಟವಂತರಾಗಿದ್ದೇವೆ. ಅದೇನೆಂದರೆ, ಕರ್ನಾಟಕದಲ್ಲಿ ಸೋಲಾರ್ ಹೆಚ್ಚು ಬಳಸುತ್ತಾರೆ. ಇನ್ನು ರಾಜ್ಯದಲ್ಲಿ ಸೋಲಾರ್ ಸಬ್ ಸ್ಟೇಷನ್ ನಲ್ಲಿ ಸೋಲಾರ್ ಉತ್ಪಾದನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ನಾಲ್ಕೈದು ದಿನಗಳಿಂದ ಗಾಳಿಯೂ ಬೀಸುತ್ತಿಲ್ಲ: ಇನ್ನು ಕಳೆದ ನಾಲ್ಕೈದು ದಿನಗಳಿಮದ ಇಡೀ ದಕ್ಷಿಣ ಭಾರತದಾದ್ಯಂತ ಗಾಳಿ ಬರಲಿಲ್ಲ. ಹೆಚ್ಚಿನ ಗಾಳಿ ಬಾರದೇ ಇರುವುದರಿಂದ ಪವನ ವಿದ್ಯುತ್ ಉತ್ಪಾದನೆಯ ಪ್ರಮಾಣಕ್ಕೂ ಹೊಡೆತ ಬಿದ್ದಿತ್ತು. ಗಾಳಿಯಿಂದ ವಿದ್ಯುತ್ ಉತ್ಪಾದನೆ ಪ್ರಮಾಣ ನಾಲ್ಕೈದು ದಿನ ಮಾತ್ರ ಕಡಿಮೆಯಾಗಿದ್ದು, ಕಳೆದೆರಡು ದಿನಗಳಿಂದ ಪಿಕ್‌ಅಪ್ ಆಗುತ್ತಿದ್ದು, ಸಹಜ ಸ್ಥಿತಿಗೆ ಮರಳುತ್ತಿದೆ. ಇನ್ನು ರಾಜ್ಯದಲ್ಲಿ ಸೋಲಾರ್ ಸಬ್ ಸ್ಟೇಷನ್ ನಲ್ಲಿ ಸೋಲಾರ್ ಉತ್ಪಾದನೆ ಮಾಡುತ್ತೇವೆ. ರೈತರು ಹಾಗೂ ಸರ್ಕಾರಿ ಜಾಗ ಲಭ್ಯವಿರುವಂತೆ 10, 20 ಅಥವಾ 30 ಎಕರೆ ಪ್ರದೇಶದಲ್ಲಿ ಸೋಲಾರ್ ಉತ್ಪಾದನೆಗೆ ಆದ್ಯತೆ ಕೊಡಲಾಗುವುದು. ರಾಜ್ಯಾದ್ಯಂತ ಸೋಲಾರ್ ಉತ್ಪಾದನೆಯನ್ನ ಸಬ್ ಸ್ಟೇಷನ್‌ಗೆ ಕೊಡುತ್ತವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯ ದಿನಾಚರಣೆ ಭಾಷಣದ ಹೈಲೆಟ್ಸ್..! ಮೆಟ್ರೋ ವಿಸ್ತರಣೆ, ನೈತಿಕ ಪೊಲೀಸ್‌ಗಿರಿ ಕಡಿವಾಣ
ಲೋಡ್ ಶೆಡ್ಡಿಂಗ್ ಮೂಲಕ ಮ್ಯಾನೇಜ್: ತುಮಕೂರು (ಆ.15): ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯ ಸೇರಿದಂತೆ ವಿವಿಧೆಡೆ ಜಲವಿದ್ಯುತ್ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ವಿದ್ಯುತ್ ಪೂರೈಕೆಯನ್ನು ಮ್ಯಾನೇಜ್ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ, ಮಾಧ್ಯಮಗಳೊಂದಿಗೆ ನಡೆಸಿದ ಸುದ್ದೊಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಕೆಲವು ಕಡೆ ಲೋಡ್ ಶೆಡ್ಡಿಂಗ್ ಮಾಡಿ ಮ್ಯಾನೇಜ್ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. ಮುಂದುವರೆದು, ರಾಜ್ಯದ 5 ರಿಂದ 11 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ಶೇ.35 ಬಿತ್ತನೆಯಾಗಿದೆ. ಅಂಕಿ ಅಂಶ ತರಿಸಿಕೊಂಡು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುತ್ತೇವೆ ಎಂದು ಸುಳಿವು ನೀಡಿದರು.