ಬಿಪಿಎಲ್ ಕಾರ್ಡ್ : ಮತ್ತೊಂದು ಹೊಸ ನಿಯಮ ಗಮನಿಸಿ

By Kannadaprabha News  |  First Published Mar 23, 2021, 9:53 AM IST

ಬಿಪಿಎಲ್ ಕಾರ್ಡ್ ಬಗ್ಗೆ ಇದೀಗ ಸರ್ಕಾರ ಮತ್ತೊಂದು ಹೊಸ ನೀತಿಯನ್ನು ಜಾರಿಗೆ ತರುವ ಚಿಂತನೆ ನಡೆಸಿದೆ.  ಯಾವ ನಿಯಮ..?


ಬೆಂಗಳೂರು (ಮಾ.23):  ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ಒಂದು ವಾಣಿಜ್ಯ ವಾಹನ ಹೊಂದಿರುವ ಕುಟುಂಬಗಳಿಗೂ ಬಿಪಿಎಲ್‌ ಪಡಿತರ ಚೀಟಿ ವಿತರಿಸುವಂತೆ ಸುತ್ತೋಲೆ ಹೊರಡಿಸುವುದಾಗಿ ಸರ್ಕಾರ ತಿಳಿಸಿದೆ. 

ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶಾಂತಾರಾಮ ಸಿದ್ದಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಣಿಜ್ಯ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್‌ ಚೀಟಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tap to resize

Latest Videos

ಬಿಪಿಎಲ್‌ ಕಾರ್ಡ್‌ಗೆ ಈಗ ಜಾರಿಯಲ್ಲಿರುವ ಮಾನದಂಡಗಳೇ ಮುಂದುವರಿಯುತ್ತೆ: ಕತ್ತಿ ಸ್ಪಷ್ಟನೆ ..

ಇದರಿಂದ ಈ ಕುಟುಂಬಗಳು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ ಎಂದು ಸದನದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸ್ವಂತ ಬಳಕೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್‌ ಪಡಿತರ ಚೀಟಿ ವಿತರಣೆ ಮಾಡುವಂತಿಲ್ಲ ಎಂಬ ನಿಯಮವಿದೆ. 

ಆದರೆ, ಕುಟುಂಬ ಪೋಷಣೆಗಾಗಿ ಒಂದು ವಾಣಿಜ್ಯ ವಾಹನ (ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ) ಹೊಂದಿರುವವರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು ಎಂದು ತಿಳಿಸಲಾಗಿದೆ. ವಾಣಿಜ್ಯ ವಾಹನ ಹೊಂದಿರುವವರಿಗೆ ಬಿಪಿಎಲ್‌ ಪಡಿತರ ಚೀಟಿ ವಿತರಿಸುವಂತೆ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸುವುದಾಗಿ ಅವರು ಭರವಸೆ ನೀಡಿದರು.

click me!