Priyank kharge DCM: ಪ್ರಿಯಾಂಕ್‌ ಖರ್ಗೆ ಡಿಸಿಎಂ ಏಕೆ ಆಗಬೇಕು ಗೊತ್ತಾ?

Kannadaprabha News   | Kannada Prabha
Published : May 31, 2026, 08:44 AM IST
Do you know why Priyank Kharge should become DCM

ಸಾರಾಂಶ

ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆಯವರು ತಮ್ಮ ಖಡಕ್ ನಾಯಕತ್ವ, ದಕ್ಷ ಆಡಳಿತ ಹಾಗೂ ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆದ ಹೋರಾಟದಿಂದ ಗುರುತಿಸಿಕೊಂಡಿದ್ದಾರೆ. ಸಚಿವರಾಗಿ ಹಲವು ಜನಪರ ಯೋಜನೆ, ಅವರ ಸಾಮರ್ಥ್ಯ, ಪಕ್ಷ ನಿಷ್ಠೆಗಾಗಿ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಕೂಗು ಬಲವಾಗಿ ಕೇಳಿಬರುತ್ತಿದೆ.

ಮುಡಿಗುಂಡಂ ಕೇಶವಮೂರ್ತಿ, ಪತ್ರಕರ್ತ

ಪ್ರಿಯಾಂಕ್‌(Priyank kharge) ಅದೆಷ್ಟು ಖಡಕ್ ನಾಯಕ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಅಂದರೆ ಆರ್‌ಎಸ್ಎಸ್(RSS) ನಾಯಕ ಮೋಹನ್ ಭಾಗವತ್(Mohan Bhagwat) ಸ್ವತಃ ಬೆಂಗಳೂರಿಗೆ ಬಂದು ಇವರ ಪ್ರಶ್ನೆಗಳಿಗೆ ಉತ್ತರಿಸಿದ್ದು. ಆರ್‌ಎಸ್ಎಸ್ ನೋಂದಣಿ, ದೇಣಿಗೆ ಮತ್ತು ಅದರ ಸೈದ್ಧಾಂತಿಕ ವಿಚಾರಗಳ ಕುರಿತು ಪ್ರಿಯಾಂಕ್ ವಾಕ್ಸಮರ ನಡೆಸಿದ್ದರು. 11 ಖಡಕ್ ಪ್ರಶ್ನೆಗಳನ್ನು ಕೇಳಿದ್ದರು. ಇಡೀ ದೇಶದಲ್ಲಿ ರಾಹುಲ್ ಗಾಂಧಿ ಹೊರತು ಪಡಿಸಿದರೆ ಮತ್ಯಾರಿಗೂ ಉತ್ತರ ಕೊಡದ ಮೋಹನ್ ಭಾಗವತ್ ಸಚಿವ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗಳಿಗೆ ಉತ್ತರಿಸಿದ್ದರು.

ದೂರದೃಷ್ಟಿಯ ಸಮರ್ಥ ನಾಯಕ, ಬಡವರು ಹಾಗೂ ದೀನ ದಲಿತರ ಪರ ಚಿಂತಕ, ಸಾಮಾಜಿಕ ನ್ಯಾಯದ ಪ್ರತಿಪಾದಕ ಪ್ರಿಯಾಂಕ್ ಖರ್ಗೆ. ಚಿತ್ತಾಪುರ ಮೀಸಲು ಕ್ಷೇತ್ರದ ಶಾಸಕರಾಗಿರುವ ಅವರು ಆಡುವ ಪ್ರತಿಯೊಂದು ಮಾತು ಶುದ್ಧ. ಆಡಿದ ಮಾತಿಗೆ ಯಾವಾಗಲೂ ಬದ್ಧ. ಇದರಿಂದಲೇ ಅವರು ಹೆಸರಿಗೆ ತಕ್ಕಂತೆ ಎಲ್ಲರಿಗೂ ಪ್ರಿಯವಾಗಿರುವುದು. ಇಂತಹ ದಕ್ಷ-ಪ್ರಾಮಾಣಿಕ ಪ್ರಿಯಾಂಕ್ ಖರ್ಗೆ ಅವರಿಗೆ ಈಗ ಮತ್ತೊಂದು ದೊಡ್ಡ ಹೊಣೆ ಅರಸಿ ಬರಲಿದೆ. ಅದು ಉಪಮುಖ್ಯಮಂತ್ರಿಯ ಪಟ್ಟ!

ಪ್ರಿಯಾಂಕ್ ಖರ್ಗೆ ಅವರಿಗೆ ಮನೆಯೇ ರಾಜಕೀಯ ಗರಡಿ ಮನೆ. ತಂದೆ ಕಾಂಗ್ರೆಸ್ ಕಟ್ಟಾಳು ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜಕಾರಣದ ಪಟ್ಟುಗಳನ್ನು ಕಲಿತರು. ಅದನ್ನು ವಿರೋಧಿಗಳ ಮೇಲೆ ಸರಿಯಾದ ಸಮಯ, ಸಂದರ್ಭ ನೋಡಿ ಪ್ರಯೋಗಿಸುತ್ತಾ ಬಂದರು. ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಮಾಡುವ ಆರೋಪಗಳಿಗೆ ಸರಿಯಾದ ಉತ್ತರ ನೀಡುತ್ತಾ ವಿಪಕ್ಷ ನಾಯಕರನ್ನು ಕಟ್ಟಿ ಹಾಕುತ್ತಾ ಬೆಳೆದರು. ಇದನ್ನು ನಾವು ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನೋಡಿದ್ದಾಗಿದೆ. ಸರ್ಕಾರ ಹಾಗೂ ಆಡಳಿತದ ವೈಫಲ್ಯಗಳು ಮತ್ತು ಹಗರಣಗಳನ್ನು ಬಗೆದು ಹೊರತೆಗೆದು ರಾಜ್ಯದ ಜನರ ಮುಂದಿಟ್ಟರು. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳ ಸಹಭಾಗಿತ್ವವಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರವನ್ನು ಬಿಡದೇ ಕಾಡಿದ್ದರು. ಇದರ ಜೊತೆ ಹೆಚ್ಚು ಸದ್ದು ಮಾಡಿದ್ದು ಅಂದರೆ ಪಿಎಸ್ ಐ ಹಗರಣ. ಇದರ ವಿರುದ್ಧ ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ವ್ಯಾಪಕ ಹೋರಾಟ ಮಾಡಿ ಸರ್ಕಾರಕ್ಕೆ ಬೆವರಿಳಿಸಿದ್ದರು. 40% ಕಮಿಷನ್ ಹಗರಣ, ಕೋವಿಡ್ ಕಾಲದಲ್ಲಿ ನಡೆಯಿತೆನ್ನಲಾದ ಅವ್ಯವಹಾರಗಳು ಹಾಗೂ ಗಂಗಾಕಲ್ಯಾಣ ಯೋಜನೆಯಲ್ಲಿ ಕೇಳಿ ಬಂದ ಭ್ರಷ್ಟಾಚಾರದ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಹೋರಾಟ ನಡೆಸಿ ರೈತರ ಪರ ನಿಂತಿದ್ದರು.

ಪ್ರಿಯಾಂಕ್ ಸಮರ್ಥ, ದಕ್ಷ ಆಡಳಿತಗಾರ

ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಕಿರಿಯ ಸಚಿವರಾಗಿದ್ದರು. ಆದರೆ ಮಾಡಿದ ಕೆಲಸಗಳು ಸಣ್ಣದಲ್ಲ. ಈಗ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಇದು ನ್ಯಾಯ ಕೂಡ. ಏಕೆಂದರೆ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸಿ ದಕ್ಷ ಆಡಳಿತ ನೀಡಿದ್ದಾರೆ. ತಮ್ಮ ಕನಸಿನ ಯೋಜನೆಯಾದ ಎಲಿವೇಟ್ ಮೂಲಕ ಕರ್ನಾಟಕವನ್ನು ಸ್ಟಾರ್ಟ್ ಅಪ್ ಕ್ಯಾಪಿಟಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು, ಅಧಿಕಾರ ವಿಕೇಂದ್ರಿಕರಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಕಷ್ಟು ಮಹತ್ವದ ಕ್ರಮಗಳನ್ನು ಕೈಗೊಂಡರು. ಪರಿಣಾಮ ಪ್ರಿಯಾಂಕ್ ಅವರ ಆಡಳಿತಾವಧಿಯಲ್ಲಿ ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರಿಕರಣಗೊಳಿಸುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನ ಪಡೆಯಿತು. ಅಷ್ಟೇ ಅಲ್ಲ ಅರಿವು ಕೇಂದ್ರ, ⁠ಪ್ರಗತಿ ಪಥ,⁠ ಕಲ್ಯಾಣ ಪಥ. ⁠ಪಿಡಿಒಗಳ ಕೌನ್ಸೆಲಿಂಗ್, ಕೂಸಿನಮನೆ, ಗ್ರಾಮೀಣ ಜನರಿಗೆ ಇ-ಸ್ವತ್ತು ಯೋಜನೆಯನ್ನು ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ದೂರದೃಷ್ಟಿಯ ನೇತಾರ

ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ. ಇದಕ್ಕೆ ಸಾಕ್ಷಿ ಪ್ರವಾಸೋದ್ಯಮ ಇಲಾಖೆಯಲ್ಲಿ ಅಡ್ವೆಂಚರ್ ಮತ್ತು ವನ್ಯಜೀವಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದು. ಜಂಗಲ್ ಲಾಡ್ಜ್ ಮುಖ್ಯ ಭೂಮಿಕೆ ಜೊತೆಗೆ ನೂತನ ಪ್ರವಾಸೋದ್ಯಮ ನೀತಿಗಳನ್ನು ಜಾರಿಗೊಳಿಸಿದ್ದು. ಇನ್ನು ಸಮಾಜ ಕಲ್ಯಾಣ ಇಲಾಖೆಗೆ ಬರುವುದಾದರೆ ಸಮೃದ್ಧಿ, ಐರಾವತ, ಪ್ರಬುದ್ಧ ಹಾಗೂ ಉನ್ನತಿ ಯೋಜನೆಗಳನ್ನು ಜಾರಿಗೆ ತಂದರು. ⁠ಹಾಸ್ಟೆಲ್ ವಾರ್ಡನ್ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಿದರು. ಐಟಿ- ಬಿಟಿ ಹೊಣೆ ಹೊತ್ತ ಮೇಲೆ ಅನೇಕ ಸುಧಾರಣೆಗೆ ಕಾರಣರಾದರು. ನೂತನ ನವೋದ್ಯಮ ನೀತಿ ಯೋಜನೆ, ⁠ಬೆಂಗಳೂರು ಟೆಕ್ ಸಮ್ಮಿಟ್ ಉತ್ತುಂಗದ ಹರಿಕಾರ ಅನ್ನಿಸಿಕೊಂಡರು. ರಾಜಧಾನಿಯ ಆಚೆಗೂ ಉದ್ಯಮಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಬಿಯಾಂಡ್ ಬೆಂಗಳೂರು ಯೋಜನೆ ರೂಪಿಸಿ ದೂರದೃಷ್ಟಿಯ ನೇತಾರ ಅನ್ನುವ ಕೀರ್ತಿಗಳಿಸಿದರು.

ಪಕ್ಷ ನಿಷ್ಠೆಯಲ್ಲಿ ತಂದೆಯಂತೆಯೇ ಮಗ

ಪ್ರಿಯಾಂಕ್ ಖರ್ಗೆ ಪಕ್ಷ ನಿಷ್ಠೆಯ ವಿಷಯದಲ್ಲಿ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಂತೆಯೇ ಇದ್ದಾರೆ. ವಿರೋಧ ಪಕ್ಷಗಳ ನಾಯಕರು ಮಾಡುವ ಸುಳ್ಳು ಆರೋಪಗಳಿಗೆ ಖಡಕ್ ಉತ್ತರ ಕೊಟ್ಟು ಪಕ್ಷವನ್ನು ಸಮರ್ಥನೆ ಮಾಡಿಕೊಂಡು ಅವರ ಬಾಯಿಗೆ ಬೀಗ ಹಾಕುವುದರಲ್ಲಿ ಚಾಣಾಕ್ಷರು. ಅವರು ಅದೆಷ್ಟು ಖಡಕ್ ನಾಯಕ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಅಂದರೆ ಆರ್‌ಎಸ್ಎಸ್ ನಾಯಕ ಮೋಹನ್ ಭಾಗವತ್ ಸ್ವತಃ ಬೆಂಗಳೂರಿಗೆ ಬಂದು ಇವರ ಪ್ರಶ್ನೆಗಳಿಗೆ ಉತ್ತರಿಸಿದ್ದು. ಆರ್‌ಎಸ್ಎಸ್ ನೋಂದಣಿ, ದೇಣಿಗೆ ಮತ್ತು ಅದರ ಸೈದ್ಧಾಂತಿಕ ವಿಚಾರಗಳ ಕುರಿತು ಪ್ರಿಯಾಂಕ್ ವಾಕ್ಸಮರ ನಡೆಸಿದ್ದರು. 11 ಖಡಕ್ ಪ್ರಶ್ನೆಗಳನ್ನು ಕೇಳಿದ್ದರು. ಇಡೀ ದೇಶದಲ್ಲಿ ರಾಹುಲ್ ಗಾಂಧಿ ಹೊರತು ಪಡಿಸಿದರೆ ಮತ್ಯಾರಿಗೂ ಉತ್ತರ ಕೊಡದ ಮೋಹನ್ ಭಾಗವತ್ ಸಚಿವ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇಷ್ಟು ಮಾತ್ರವಲ್ಲದೇ ಮುಡಾ ಹಗರಣದ ಆರೋಪ, ಡಿ.ಕೆ. ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಕುರಿತು ವಿರೋಧಿಗಳ ಪ್ರಶ್ನೆಗಳಿಗೆ, ಅವರ ಆರೋಪಗಳಿಗೆ ಸರಿಯಾಗಿ ಚಾಟಿ ಬೀಸಿದ್ದರು. ವಾಲ್ಮೀಕಿ ನಿಗಮದ ಆರೋಪ, ಅಬಕಾರಿ ಆರೋಪದ ವೇಳೆ ಸದೃಢವಾಗಿ ಪಕ್ಷವನ್ನು ಇಕ್ಕಟ್ಟು-ಬಿಕ್ಕಟ್ಟಿನಿಂದ ಕಾಪಾಡಿದರು. ಇನ್ನು ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ಮೇಲಿನ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದವರಿಗೂ ತಮ್ಮ ಮಾತಿನ ಮೂಲಕವೇ ಪಾಠ ಕಲಿಸಿದರು.

ಶಾಸಕರಾಗಿ, ಸಚಿವರಾಗಿ, ಪಕ್ಷ ವಹಿಸಿದ್ದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಪ್ರಿಯಾಂಕ್ ಖರ್ಗೆ. ಪ್ರತಿಯೊಂದು ಇಲಾಖೆಯಲ್ಲೂ ದೂರದೃಷ್ಟಿ ಯೋಜನೆ ರೂಪಿಸಿ ನಾಡಿನ ಜನರಿಗೆ ಸ್ವಾಭಿಮಾನದ ಭವಿಷ್ಯ ರೂಪಿಸಲು ಶ್ರಮಿಸಿದ್ದಾರೆ. ಇದರಿಂದಲೇ ಸಣ್ಣ ವಯಸ್ಸಿನಲ್ಲೇ ಉಪಮುಖ್ಯಮಂತ್ರಿ ಸ್ಥಾನದ ಅರ್ಹತೆ ಸರಿಗಟ್ಟಿರುವ ನಾಯಕರಾಗಿದ್ದಾರೆ. ಈಗಾಗಲೇ ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಆಗಬೇಕು ಅನ್ನುವ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ. ಇದರಲ್ಲಿ ವಿಶೇಷವೆಂದರೆ ಅನ್ಯ ಸಮುದಾಯವರೇ ಹೆಚ್ಚಾಗಿ ಈ ಆಗ್ರಹ ಮಾಡುತ್ತಿದ್ದಾರೆ. ಇದರ ನಡುವೆ ಕೆಲವರು ಪ್ರಿಯಾಂಕ್ ಸಣ್ಣ ವಯಸ್ಸಿನವರು, ಈಗಲೇ ಡಿಸಿಎಂ ಹುದ್ದೆ ಬೇಡ ಅನ್ನುವ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಯಸ್ಸಿನಲ್ಲಿ ಸಣ್ಣವರಾದರೇನು? ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್ ಬಗ್ಗುಬಡಿಯುವಾಗ, ಬಿಜೆಪಿ ಸರ್ಕಾರದ ಹಗರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಬಂದಾಗ, ಅಬಕಾರಿ ಹಗರಣದ ಹೆಸರಲ್ಲಿ ಬಿಜೆಪಿ ಇಡೀ ಸದನವನ್ನೇ ಹಿಡಿತಕ್ಕೆ ತೆಗೆದುಕೊಂಡಾಗ, ಒಬ್ಬರೇ ಎದ್ದು ನಿಂತು ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಂಡಾಗ ಬಾರದ ಕಿರಿಯ ಎಂಬ ಹಣೆಪಟ್ಟಿ, ಆಡಳಿತದಲ್ಲಿ ದಕ್ಷತೆ, ಕ್ಷಮತೆ, ಸಾಮರ್ಥ್ಯವಿರುವಾಗ, ಅಧಿಕಾರದ ಮೇಲ್ಪಂಕ್ತಿಗೆ ಏರಿಸುವಾಗ ನಿರ್ಣಾಯಕವಾಗಬೇಕೇ? ಆ ಹುದ್ದೆಗೆ ಎಲ್ಲಾ ಅರ್ಹತೆಗಳೂ ಪ್ರಿಯಾಂಕ್ ಖರ್ಗೆಯವರಿಗೆ ಇವೆ. ಇನ್ನೇನು ಬೇಕು? ಜನಪರ ಕಾಳಜಿ, ಹೊಂದಿರುವ ರಾಜ್ಯದ ಪ್ರಗತಿಗಾಗಿ ಶ್ರಮಿಸುವ ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಆಗಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ! ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಶಾಕ್
Karnataka News Live: Priyank kharge DCM - ಪ್ರಿಯಾಂಕ್‌ ಖರ್ಗೆ ಡಿಸಿಎಂ ಏಕೆ ಆಗಬೇಕು ಗೊತ್ತಾ?