ಪತನವಾಗುತ್ತಾ ಸರ್ಕಾರ : ಅಧಿಕಾರಕ್ಕೇರುತ್ತಾ ಬಿಜೆಪಿ?

By Web DeskFirst Published Feb 8, 2019, 8:14 AM IST
Highlights

 ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಪ್ರಸಕ್ತ ಬಜೆಟ್ ಅಧಿವೇಶನ ಮುಗಿದರೂ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ತಪ್ಪಿದ್ದಲ್ಲ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಪಾದಿಸಿದೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಪ್ರಸಕ್ತ ಬಜೆಟ್ ಅಧಿವೇಶನ ಮುಗಿದರೂ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ತಪ್ಪಿದ್ದಲ್ಲ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಪಾದಿಸಿದೆ. 

1 ಹಲವು ಕಾಂಗ್ರೆಸ್ ಶಾಸಕರು ಗೈರು ಹಾಜರಾ ಗಿರುವುದರಿಂದ ಈಗಾಗಲೇ ನೈತಿಕವಾಗಿ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 106 ಕ್ಕಿಂತ ಕಡಮೆಯಾಗಿದೆ. ಇದೇ ವೇಳೆ ಬಿಜೆಪಿಯ ಸದ್ಯದ ಸಂಖ್ಯಾಬಲ 106 ಇದೆ. ಆದರೆ, ಹಲವು ಅತೃಪ್ತ ಶಾಸಕರು ಕಳೆದ ಹಲವು ದಿನಗಳಿಂದ ದೂರ ಉಳಿದಿರುವುದರಿಂದ ತಾಂತ್ರಿಕವಾಗಿ ಅಲ್ಲದಿದ್ದರೂ ನೈತಿಕವಾಗಿ ಸರ್ಕಾರಕ್ಕೆ ಬಹುಮತ ಇಲ್ಲದಂತಾಗಿದೆ. 

2 ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ಸಿನ ಕೆಲವು ಸಚಿವರೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಾಸಕರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂಬುದಾಗಿ ಒಪ್ಪಿಕೊಂಡಿಲ್ಲ. ಈ ಪೈಕಿ ಹಲವರು ಬಹಿರಂಗವಾಗಿಯೇ ಹೇಳಿಕೆ ನೀಡಿರುವು ದರಿಂದ ಕುಮಾರಸ್ವಾಮಿ ಅವರು ಆ ಸ್ಥಾನದಲ್ಲಿ ಮುಂದುವರೆಯುವ ಅಧಿಕಾರ ಕಳೆದುಕೊಂಡಿದ್ದಾರೆ. 

3 ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುವ ಮೊದಲೇ ಸರ್ಕಾರ ಪತನಗೊಳ್ಳದೇ ಇರಬಹುದು. ಆದರೆ, ಅಧಿವೇಶನ ಮುಕ್ತಾಯದ ನಂತ ರವೂ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

4 ಅಧಿವೇಶನದ ವೇಳೆ ಅತೃಪ್ತ ಶಾಸಕರ ಪೈಕಿ ಕೆಲವು ಶಾಸಕರು ರಾಜಿನಾಮೆ ನೀಡಿ ಹೊರ ಬರಬಹುದು. ಇನ್ನುಳಿದವರು ಅಧಿವೇಶನದ ನಂತರ , ವಿಪ್ ಉಲ್ಲಂಘನೆಯ ಜಂಜಾಟ ಮುಗಿದ ನಂತರ ರಾಜಿನಾಮೆ ನೀಡಿ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ ಹೆಚ್ಚಾಗಿದೆ.

5 ಶಾಸಕರನ್ನು ಸಸ್ಪೆಂಡ್ ಮಾಡುವ ಮೂಲಕ ಬಿಜೆಪಿಯ ಸಂಖ್ಯಾಬಲ ವನ್ನು 106 ಕ್ಕಿಂತ ಕಡಿಮೆ ಮಾಡಲು ಕುತಂತ್ರ ಮಾಡಲಾಗಿದೆ. ಇದರಿಂದ ದೋಸ್ತಿಗಳ ಬಲ 106 ಕ್ಕಿಂತ ಕಡಿಮೆ ಇದೆ ಎಂಬುದು ಸಾಬೀತಾಗುತ್ತದೆ ಎಂದು ಬಿಜೆಪಿ ವಾದ ಮಂಡಿಸಿದೆ.

click me!