Tipu syllabus ಟಿಪ್ಪು ಕುರಿತ ಪಠ್ಯಕ್ಕೆ ಕತ್ತರಿ, ಪ್ರಸಕ್ತ ಸಾಲಿನಿಂದಲೇ ಜಾರಿ ಎಂದ ಸಚಿವ ನಾಗೇಶ್!

By Kannadaprabha News  |  First Published Apr 20, 2022, 4:17 AM IST

- ಸಾಕ್ಷ್ಯವಿಲ್ಲದ ಅಂಶಗಳು ಪಠ್ಯದಿಂದ ಕಡಿತ: ಸಚಿವ ನಾಗೇಶ್‌
- ಮೈಸೂರು ಹುಲಿ ಎಂಬ ಬಿರುದು ಕೈಬಿಟ್ಟಿಲ್ಲ
- ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ ಬಗ್ಗೆ ಪಾಠ
 


ಬೆಂಗಳೂರು(ಏ.20): ಟಿಪ್ಪು ಸುಲ್ತಾನ್‌ ಬಗ್ಗೆ ಪಠ್ಯ ಪುಸ್ತಕದಲ್ಲಿದ್ದ ವಿಚಾರಗಳಲ್ಲಿ ಸಾಕ್ಷ್ಯಾಧಾರಗಳಿಲ್ಲದ ಅಂಶಗಳನ್ನು ಕಡಿತಗೊಳಿಸಲಾಗಿದೆ. ಆದರೆ, ಟಿಪ್ಪುಗೆ ಇದ್ದ ಮೈಸೂರು ಹುಲಿ ಎಂಬ ಬಿರುದು ಕೈಬಿಟ್ಟಿಲ್ಲ. ಪರಿಷ್ಕೃತ ಪಠ್ಯಕ್ರಮ ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪಠ್ಯ ಪರಿಷ್ಕರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದಿನ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್‌ ಕುರಿತು ನೀಡಲಾಗಿದ್ದ ವಿಚಾರಗಳಲ್ಲಿ ಸಾಕಷ್ಟುಅಂಶಗಳಿಗೆ ನಮ್ಮ ಬಳಿ ಸಾಕ್ಷ್ಯಾಧಾರ ಇರಲಿಲ್ಲ. ಅವುಗಳನ್ನು ಕೈಬಿಡಲಾಗಿದೆ. ಆದರೆ, ಹೆಚ್ಚೇನೂ ಕಡಿತಗೊಳಿಸಲಾಗಿಲ್ಲ. ಜತೆಗೆ ಇದೇ ರೀತಿ ಸಾಕ್ಷ್ಯಾಧಾರಗಳು ಇಲ್ಲದ ಹಾಗೂ ಅನಗತ್ಯವಾಗಿ ವೈಭವೀಕರಿಸಿರುವ ಹಲವು ವಿಚಾರಗಳನ್ನು ಕಡಿತಗೊಳಿಸಲಾಗಿದೆ. ಇವುಗಳ ಬಗ್ಗೆ ಕೆಲ ದಿನಗಳಲ್ಲಿ ಪೂರ್ಣ ವಿವರ ನೀಡಲಾಗುವುದು ಎಂದರು.

Tap to resize

Latest Videos

ಹಿಜಾಬ್....ವ್ಯಾಪಾರ ಧರ್ಮ ಆಯ್ತು... ಈಗ ಮತ್ತೆ ಟಿಪ್ಪು ಸರದಿ

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ಅವರು ಟಿಪ್ಪು ಪಾಠ ವಿಚಾರದಲ್ಲಿ ಎರಡು ಬೇಡಿಕೆ ಇಟ್ಟಿದ್ದರು. ಒಂದು ಟಿಪ್ಪುವನ್ನು ಪಠ್ಯದಿಂದ ಕೈಬಿಡಬೇಕು ಎಂಬುದು. ಕೈಬಿಡುವುದಿಲ್ಲ ಎನ್ನುವುದಾದರೆ ಟಿಪ್ಪುವಿನ ಮತ್ತೊಂದು ಮುಖವನ್ನೂ ಪರಿಚಯಿಸಬೇಕು ಎಂಬುದು. ಏಕೆಂದರೆ ಕನ್ನಡಕ್ಕೆ ಟಿಪ್ಪು ಅಧಿಕಾರದಲ್ಲಿ ಆದಷ್ಟುಅನ್ಯಾಯ ಇನ್ಯಾವ ಕಾಲದಲ್ಲೂ ಆಗಿಲ್ಲ. ತಮ್ಮ ಆಡಳಿತದಲ್ಲಿ ಅವರು ಪರ್ಷಿಯನ್‌ ಭಾಷೆ ಅಳವಡಿಕೆ ಮಾಡಿದರು. ಕೂಗ್‌ರ್‍ನಲ್ಲಿ ಟಿಪ್ಪುವಿನಿಂದ ಕನ್ನಡಿಗರ ಮೇಲೆ ಸಾಕಷ್ಟುದೌರ್ಜನ್ಯಗಳಾಗಿವೆ. ಬ್ರಿಟಿಷರ ಜೊತೆ ಪತ್ರ ವ್ಯವಹಾರವನ್ನೂ ಇಟ್ಟುಕೊಂಡಿದ್ದರು ಎಂದು ಆರೋಪಿಸಿರುವ ಅವರು ಅದಕ್ಕೆ ಸಾಕ್ಷ್ಯಾಧಾರಗಳನ್ನೂ ಒದಗಿಸಿದ್ದಾರೆ. ಅದರಂತೆ ಪಠ್ಯ ಪರಿಷ್ಕರಿಸಲಾಗಿದೆ. ಆದರೆ, ಹೆಚ್ಚೇನೂ ಕಡಿತ ಮಾಡಿಲ್ಲ. ಯಾವ್ಯಾವ ಅಂಶಗಳನ್ನು ಕೈಬಿಡಲಾಗಿದೆ ಎಂದು ಮುಂದಿನ ದಿನಗಳಲ್ಲಿ ಪೂರ್ಣ ಮಾಹಿತಿ ನೀಡುತ್ತೇನೆ ಎಂದರು.

ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ ಬಗ್ಗೆ ಪಾಠ
ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ನೈತಿಕ ಶಿಕ್ಷಣ ಬೋಧನೆ ಆರಂಭಿಸುತ್ತೇವೆ. ಭಗವದ್ಗೀತೆ, ಮಹಾಭಾರತ, ರಾಮಾಯಣದ ನೈತಿಕ ಮೌಲ್ಯಗಳ ಪಠ್ಯ ಅಳವಡಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಟಿಪ್ಪು ಎಕ್ಸ್​ಪ್ರೆಸ್ ರೈಲಿಗೆ ಒಡೆಯರ್ ಹೆರಿಡುವಂತೆ ಪ್ರತಾಪ್ ಸಿಂಹ ಆಗ್ರಹ

ಮದರಸಾಗಳಲ್ಲಿ ‘ಸರ್ಕಾರಿ ಪಠ್ಯಕ್ಕೆ’ ಪೋಷಕರಿಂದ ಬೇಡಿಕೆ
ಮದರಸಾಗಳಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮ ಅಳವಡಿಕೆಗೆ ಪೋಷಕರಿಂದ ಬೇಡಿಕೆ ಬರುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಸಚಿವ ನಾಗೇಶ್‌ ಹೇಳಿದ್ದಾರೆ.ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದಿಂದ ನಮ್ಮ ಮಕ್ಕಳು ಇವತ್ತಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಆಗುತ್ತಿಲ್ಲ. ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಷ್ಟಆಗುತ್ತಿದೆ. ಹಾಗಾಗಿ ಇತರೆ ಮಕ್ಕಳಿಗೆ ಇರುವಂತೆ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನೇ ಮದರಸಾಗಳಲ್ಲೂ ಜಾರಿಗೆ ತರುವಂತೆ ಹಲವು ಪೋಷಕರು ರಾಜ್ಯದ ವಿವಿಧೆಡೆ ಪ್ರವಾಸ ಮಾಡಿದಾಗ ಮನವಿ ಮಾಡಿದ್ದಾರೆ. ಆದರೆ, ಮದರಸಾಗಳ ಕಡೆಯಿಂದ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ಯಾವುದೇ ಮನವಿ ಬಂದಿಲ್ಲ. ಅವುಗಳಿಂದಲೂ ಮನವಿ ಬಂದರೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಟಿಪ್ಪು ಸುಲ್ತಾನ ರಿಕ್ಷಾ ನಿಲ್ದಾಣ ತೆರವಿಗೆ ಸೂಚನೆ
ಸ್ಮಾರ್ಚ್‌ಸಿಟಿ ಯೋಜನೆಯಡಿ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ನಿಲ್ದಾಣದ ಪಕ್ಕದಲ್ಲಿರುವ ಟಿಪ್ಪು ಸುಲ್ತಾನ ಆಟೋ ರಿಕ್ಷಾ ನಿಲ್ದಾಣವನ್ನು ಎರಡು ದಿನದಲ್ಲಿ ತೆರವುಗೊಳಿಸಬೇಕು ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಆದಷ್ಟುಬೇಗನೆ ಈ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುವುದು. ಆದರೆ, ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ಆಟೋ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ದಂಡು ಮಂಡಳಿ ಅಧಿಕಾರಿಗಳು ಟಿಪ್ಪು ಸುಲ್ತಾನ ಆಟೋ ರಿಕ್ಷಾ ತೆರವುಗೊಳಿಸುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

click me!