ಕೊರೋನಾ ಪರೀಕ್ಷಾ ದರದಲ್ಲಿ ಭಾರಿ ಇಳಿಕೆ : ಸರ್ಕಾರದ ಆದೇಶ

By Suvarna NewsFirst Published Aug 15, 2020, 10:16 AM IST
Highlights

ಕರ್ನಾಟ ಸರ್ಕಾರ ಕೊರೋನಾ ಪರೀಕ್ಷಾ ದರವನ್ನು ನಿಗದಿ ಮಾಡಿದ್ದು, ದರವನ್ನು ಇಳಿಕೆ ಮಾಡಿ ಆದೇಶ ನೀಡಿದೆ. 

ಬೆಂಗಳೂರು (ಆ.15) :  ಕೊರೋನಾ ಪರೀಕ್ಷಾ ದರವನ್ನು ರಾಜ್ಯ ಸರ್ಕಾರ ಮತ್ತಷ್ಟುಕಡಿತಗೊಳಿಸಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ವಿಧಾನಸೌಧದಲ್ಲಿ ಶುಕ್ರವಾರ ನಡೆದ ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಈ ತೀರ್ಮಾನ ಆಗಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಾಲಯಗಳಿಗೆ ರೆಫರ್‌ ಮಾಡುವ ಸೋಂಕಿತರ ಆರ್‌ಟಿಪಿಸಿಆರ್‌ (ಗಂಟಲ ದ್ರವ ಪರೀಕ್ಷೆ) ದರವನ್ನು 2 ಸಾವಿರ ರು.ನಿಂದ 1,500 ರು. ಇಳಿಕೆ ಮಾಡಲಾಗಿದೆ. ಅಂತೆಯೇ, ನೇರವಾಗಿ ಖಾಸಗಿ ಪ್ರಯೋಗಾಲಯಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ 3 ಸಾವಿರ ರು. ವಿಧಿಸಲಾಗುತ್ತಿತ್ತು. ಈ ದರವನ್ನು 2,500 ರು.ಗೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು.

ಕೊರೋನಾ ಅಟ್ಟಹಾಸ: ಸಾಯುವ ಮುನ್ನ ಪತ್ರಕರ್ತ ಕಣ್ಣೀರು, ವಿಡಿಯೋ ವೈರಲ್‌ .

ದರ ಕಡಿತವು ಎಲ್ಲಾ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ, ಹೊಸದಾಗಿ 20 ಲಕ್ಷ ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ ಮತ್ತು 18 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆ ಕಿಟ್‌ಗಳನ್ನು ಖರೀದಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಬಗ್ಗೆ ಈಗಾಗಲೇ ಐಸಿಎಂಆರ್‌ ಎಚ್ಚರಿಕೆ ನೀಡಿದೆ. ಹೀಗಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 115 ಐಸಿಯು ಹಾಸಿಗೆ ಆರಂಭಿಸಲು 12 ಕೋಟಿ ರು. ಮೊತ್ತದ ಉಪಕರಣ ಖರೀದಿ ಮಾಡಲು ಸಹ ನಿರ್ಧರಿಸಲಾಯಿತು ಎಂದು ತಿಳಿಸಿದರು.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..! ...

ರಾಜ್ಯದಲ್ಲಿ ಸ್ಟಿರೋಲಜಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪ್ರಸ್ತುತ 18 ಸಾವಿರ ಜನಕ್ಕೆ ಸ್ಟಿರೋಲಜಿ ಪರೀಕ್ಷೆ ಮಾಡಲಾಗುವುದು. ಇದಕ್ಕಾಗಿ 1.90 ಕೋಟಿ ರು. ವೆಚ್ಚವಾಗಲಿದೆ. 18 ಸಾವಿರ ಆಂಟಿಬಾಡಿ ಪರೀಕ್ಷೆ ಸಹ ಮಾಡಲಾಗುತ್ತಿದೆ. ಇಮ್ಯುನಾಲಜಿ ವಿಷಯದಲ್ಲಿ ಸಂಶೋಧನೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಪರೀಕ್ಷೆಗಳನ್ನು ಮಾಡಲು ಸಮಸ್ಯೆಯಾದರೆ ಖಾಸಗಿ ಪ್ರಯೋಗಾಲಯಗಳನ್ನು ಮಾಡಲಾಗುವುದು. ಈ ಪರೀಕ್ಷೆ ಮಾಡುವುದರಿಂದ ರೋಗದ ಹಂತ ತಿಳಿದು ಚಿಕಿತ್ಸೆ ನೀಡಿ ಮರಣ ಪ್ರಮಾಣ ಕಡಿಮೆ ಮಾಡಬುದು. ಇದರತೆ ಪ್ಲಾಸ್ಮ ಥೆರಪಿ ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಈ ಥೆರಪಿ ಕೊಡಲು ಎಲ್ಲಾ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

click me!