ರಾಜ್ಯ ಪುರುಷ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಮಗುವಿನ ಆರೈಕೆಗೆ ಗರಿಷ್ಠ 6 ತಿಂಗಳು ರಜೆ ಸೌಲಭ್ಯ!

By Suvarna News  |  First Published Jun 9, 2023, 6:17 PM IST

ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಹಿಳೆಯರಿಗೆ ಇರುವಂತೆ ಇದೀಗ ಪುರುಷರಿಗೂ ಮಗುವಿನ ಪಾಲನೆಗೆ ಗರಿಷ್ಠ 6 ತಿಂಗಳ ರಜೆ ಸೌಲಭ್ಯವನ್ನು ನೀಡಲಾಗಿದೆ. 

ಬೆಂಗಳೂರು(ಜೂ.09): ಮಗುವಿನ ಪಾಲನೆಗೆ ಮಹಿಳೆಯರಿಗೆ ಶಿಶುಪಾಲನೆ ರಜೆ ನೀಡಲಾಗುತ್ತದೆ. ಇದು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲೂ ಈ ಅವಕಾಶವಿದೆ. ಇದೀಗ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಮಗುವಿನ ಪಾಲನೆಗೆ ಗರಿಷ್ಠ 6 ತಿಂಗ ಕಾಲ ಶಿಶುಪಾಲನ ರಜೆ ಸೌಲಭ್ಯ ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರಿ ನೌಕರನೋರ್ವನ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ರಜೆಗೆ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ನೌಕರರೂ 180 ದಿನಗಳ ರಜೆಯನ್ನು ಕಲ್ಪಿಸಲಾಗಿದೆ. ಇದೀಗ ಪುರುಷರಿಗೂ ಇದೇ ರೀತಿ ರಜೆ ಸೌಲಭ್ಯ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರಿ ಪುರುಷ ನೌಕರರು ಶಿಶುಪಾಲನಾ ರಜೆ ಪಡೆಯಲು ಕೆಲ ಮಾನದಂಡಗಳಿವೆ. ಒಂಟಿ ಪೋಷಕರು, ವಿವಾಹಿತ-ವಿಚ್ಚೇದಿತ, ವಿಧುರ, ಅವಿವಾಹಿತ ಪುರುಷರ ರಾಜ್ಯ ಸರ್ಕಾರಿ ನೌಕರರು ತಮ್ಮ ಮಗುವಿನ ಪಾಲನೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ತಮ್ಮ ಸೇವಾವಧಿಯಲ್ಲಿ ಗರಿಷ್ಠ 180 ದಿನ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಅವಕಾಶವಿದೆ. ಇಷ್ಟೇ ಅಲ್ಲ ಶಿಶುಪಾಲನ ರಜೆ ಪಡೆದ ಅವಧಿಯಲ್ಲಿ ಪುರುಷ ನೌಕರರು ವಿವಾಹವಾದರೆ ರಜೆ ರದ್ದಾಗಲಿದೆ. 

Latest Videos

undefined

ಈ ರಾಜ್ಯದ ಸರ್ಕಾರಿ ನೌಕರರಿಗೆ ಮುಂಗಡ ವೇತನ ಸೌಲಭ್ಯ; ಜೂ.1ರಿಂದಲೇ ಜಾರಿ

ಮಕ್ಕಳ ಆರೈಕೆಗೆ ಪುರುಷ ನೌಕರರಿಗೆ ರಜೆ ಅವಶ್ಯಕತೆಯನ್ನು ಮನಗಂಡ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ. ಶಿಶುಪಾಲನ ರಜೆ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ಈ ಸೌಲಭ್ಯವಿತ್ತು. ಇದೀಗ ಈ ಸೌಲಭ್ಯವನ್ನು ಪುರುಷ ನೌಕಕರಿಗೂ ವಿಸ್ತರಿಸಲಾಗುತ್ತಿದೆ. ಕೆಲ ಷರತ್ತುಗಳೊಂದಿಗೆ ಈ ಸೌಲಭ್ಯವನ್ನು ಪುರುಷ ನೌಕರರಿಗೆ ನೀಡಾಲಾಗುತ್ತಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ಸರ್ಕಾರವು ಒಂಟಿ ಪೋಷಕರಾಗಿರುವ, ಅವಿವಾಹಿತ, ವಿವಾಹಿತ-ವಿಚ್ಚೇದಿತ, ವಿಧುರ ರಾಜ್ಯ ಪುರುಷ ಸರ್ಕಾರಿ ನೌಕರರಿಗೆ ಅವರ ಇಡೀ ಸೇವಾವಧಿಯ ಗರಿಷ್ಠ 6 ತಿಂಗಳ ಅವಧಿಗೆ ಶಿಶುಪಾಲನ ರಜೆ ಪಡೆಯಬಹುದು. ಅಂದರೆ ಗರಿಷ್ಠ 180 ದಿನಗಳ ಕಾಲ ಶಿಪಾಲನ ರಜೆ ಪಡೆಯಬಹುುದು. ಒಮ್ಮೆ ಈ ರಜೆ ಪಡೆದರೆ ಮತ್ತೆ ಶಿಶುಪಾಲನಾ ರಜೆ ಪಡೆಯಲು ಸಾಧ್ಯವಿಲ್ಲ.

ಇತ್ತೀಚೆಗೆ ರಾಜ್ಯ ಸರ್ಕಾರಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿತ್ತು.  ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 4ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.. ಇದರಿಂದ ತುಟ್ಟಿಭತ್ಯೆ (ಡಿಎ) ಮೂಲ ವೇತನದ ಶೇ. 31ರಿಂದ 35ಕ್ಕೆ ಹೆಚ್ಚಳವಾಗಿದೆ. ನೂತನ ಆದೇಶ ಜನವರಿ 1ರಿಂದಲೇ ಅನ್ವಯವಾಗಲಿದೆ ಎಂದಿತ್ತು.

ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ: ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭ

7ನೇ ವೇತನ ಆಯೋಗದ ಶಿಫಾರಸಿನಂತೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರಿ ನೌಕರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಈ ಆದೇಶವು ನಿವೃತ್ತ ವೇತನ ಮತ್ತು ಕುಟುಂಬ ನಿವೃತ್ತ ವೇತನ ಪಡೆಯುತ್ತಿರುವ ನಿವೃತ್ತ ಸರ್ಕಾರಿ ನೌಕರರಿಗೂ ಅನ್ವಯವಾಗಲಿದೆ. ನೂತನ ಆದೇಶದಿಂದ 5.20 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ಮಂಡಳಿ ಮತ್ತು ಅನುದಾನಿತ ಸಂಸ್ಥೆಗಳ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು, ನಿವೃತ್ತ ನೌಕರರು ಹೆಚ್ಚುವರಿ ತುಟ್ಟಿಭತ್ಯೆ ಪಡೆಯಲಿದ್ದಾರೆ.

click me!