
ಬೆಂಗಳೂರು (ಮಾ.5): ಮಾರ್ಚ್ 1ರ ಶುಕ್ರವಾರ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಸಂಬಂಧ ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ಮತ್ತು ಪೊಲೀಸ್ ಗೆ ಬಾಂಬ್ ಥ್ರೇಟ್ ಈ ಮೇಲ್ ಬಂದಿರುವ ಬಗ್ಗೆ ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ 2:48ಕ್ಕೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಈ ಮೇಲ್ ಬಂದಿದ್ದು, ಶಾಹಿದ್ ಖಾನ್ ಹೆಸರಿನಲ್ಲಿ ಸರ್ಕಾರಕ್ಕೇ ಬಾಂಬ್ ಬ್ಲ್ಯಾಸ್ಟ್ ಮೇಲ್ ಬಂದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಗೃಹ ಸಚಿವರಿಗೆ ಸ್ಫೋಟಿಸುವ ಬಗ್ಗೆ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ.
ಖುದ್ದು ಪೊಲೀಸರೇ ದಾಖಲಿಸಿರೋ ಎಫ್ಐಆರ್ ನಲ್ಲಿ ಸ್ಫೋಟಕ ಅಂಶಗಳು ಬಯಲಾಗಿದೆ. ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.
ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸಂಚು, ಆರೋಪಿ ಅಜರ್ ಬಂಧನ
ಬಸ್ಸು, ರೈಲು, ದೇವಸ್ಥಾನ, ಹೋಟೆಲ್ ಗಳಲ್ಲಿ ಬಾಂಬ್ ಇಡ್ತೀವಿ ಎಂದು ಬೆದರಿಕೆ ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಅಂಬಾರಿ ಉತ್ಸವ ಬಸ್ ಗಳಲ್ಲಿ ಬಾಂಬ್ ಇಡ್ತೀವಿ ಅಂತಾ ಬೆದರಿಕೆ ಹಾಕಲಾಗಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಗೆ ಕೂಡ ಬೆದರಿಕೆ ದುಷ್ಕರ್ಮಿಗಳು ಮೇಲ್ ಕಳುಹಿಸಿದ್ದಾರೆ. ಬಾಂಬ್ ಬ್ಲ್ಯಾಸ್ಟ್ ಮಾಡ್ತೀವಿ ಅಂತ ಮೇಲ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡ್ತಿರೋರು ಯಾರು? ಎಂಬ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಟೀಮ್ ನಿಂದ ತನಿಖೆ ನಡೆಯುತ್ತಿದೆ.
ಬಾಂಬ್ ಬ್ಲಾಸ್ಟ್ ಮಾಡಬಾರದು ಅಂದ್ರೆ 2.5 ಮಿಲಿಯನ್ ಡಾಲರ್ ಹಣ ನೀಡುವಂತೆ ಬೇಡಿಕೆ ಇಡಲಾಗಿದೆ. ಹೀಗಾಗಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಂತರ ನಗರ ಪೊಲೀಸರಿಗೆ ಮತ್ತೊಂದು ದೊಡ್ಡ ತಲೆನೋವು ಆರಂಭವಾಗಿದೆ.
Rameshwaram Cafe Blast ದೇಶದಾದ್ಯಂತ 17 ಕಡೆ ಎನ್‌ಐಎ ದಿಢೀರ್ ದಾಳಿ, ಐವರು ಅರೆಸ್ಟ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಾಂಬ್ ಕರೆ ಬಂದಿದ್ದು ನಿಜ. ಕಮಿಷನರ್ ಗೆ ಕೊಟ್ಟಿದ್ದೇನೆ. ಸಿಎಂಗೂ ಸಹ ಬಂದಿತ್ತು. ಅಲರ್ಟ್ 1 ಶಹೀರ್ ಖಾನ್ ಎಂಬುವರಿಂದ ಮೇಲ್ ಬಂದಿದೆ. ನಿಜನೋ ಸುಳ್ಳೋ ಫ್ರಾಡೋ ಗೊತ್ತಿಲ್ಲ ಅದನ್ನ ನಾವು ಪೊಲೀಸ್ ರ ಗಮನಕ್ಕೆ ತಂದಿದ್ದೇವೆ. ಒಂದು ಮೇಲ್ ನಲ್ಲಿ ಎರಡು ಅಲರ್ಟ್ ಮೆಸೇಜ್ ಬಂದಿದೆ. ಅಲರ್ಟ್ 1ರಲ್ಲಿ 2.5 ಮಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಡಲಾಗಿದೆ. ಅಲರ್ಟ್ 2ರಲ್ಲಿ ಅಂಬಾರಿ ಉತ್ಸವ ಬ್ಲಾಸ್ಟ್ ಮಾಡೋದಾಗಿ ಬೆದರಿಕೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ