ಪಾಕ್ ಪರ ಘೋಷಣೆ ಕೂಗಿದವರಿಗಿಂತ ಅವರನ್ನು ಸಮರ್ಥನೆ ಮಾಡಿಕೊಂಡ ಸರ್ಕಾರದ ನಡೆಯೇ ಆತಂಕಕ್ಕೆ ಕಾರಣವಾಗಿದೆ: ಬೊಮ್ಮಾಯಿ

By Ravi JanekalFirst Published Mar 5, 2024, 9:19 AM IST
Highlights

ಮಾಧ್ಯಮಗಳಲ್ಲಿ ಪಾಕ್ ಪರ ಘೋಷಣೆ ಸ್ಪಷ್ಟವಾಗಿತ್ತು. ಆದ್ರೂ ಆ ಸಂದರ್ಭದಲ್ಲಿ ಸಚಿವರು ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದ್ರು. ಜವಾಬ್ದಾರಿ ಮರೆತು ಕೆಲ ಸಚಿವರು ದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ. ದೇಶದ್ರೋಹಿಗಳಿಗಿಂತ ಇವರ ನಡೆಯೇ ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ (ಮಾ.5): ಮಾಧ್ಯಮಗಳಲ್ಲಿ ಪಾಕ್ ಪರ ಘೋಷಣೆ ಸ್ಪಷ್ಟವಾಗಿತ್ತು. ಆದ್ರೂ ಆ ಸಂದರ್ಭದಲ್ಲಿ ಸಚಿವರು ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದ್ರು. ಜವಾಬ್ದಾರಿ ಮರೆತು ಕೆಲ ಸಚಿವರು ದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ. ದೇಶದ್ರೋಹಿಗಳಿಗಿಂತ ಇವರ ನಡೆಯೇ ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ಸಂಬಂಧ ಎಫ್‌ಎಸ್‌ಎಲ್ ರಿಪೋರ್ಟ್ ಬಂದು ನಾಲ್ಕು ದಿನ ಕಳೆದಿದೆ. ಎರಡು ದಿನಗಳ ಹಿಂದೆ NIA ಎಫ್ಐಆರ್ ಮಾಡಿಕೊಂಡಿದಕ್ಕೆ ಮೂವರ ಬಂಧನವಾಗಿದೆ. ಆದರೆ ಸರ್ಕಾರ ಮಾತ್ರ ಈಗಲೂ ಹೊಣೆಗೇಡಿತನದ ಹೇಳಿಕೆ ನೀಡುತ್ತಿದೆ. ಮಾಧ್ಯಮಗಳೇ ಇದನ್ನು ಪ್ರಚೋದಿಸುತ್ತೇವೆ ಎಂದು ದೂರಿದೆ. ಪತ್ರಕರ್ತರನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಈಗ ಎಫ್‌ಎಸ್‌ಎಲ್ ರಿಪೋರ್ಟ್ ಪಾಕ್ ಪರ ಘೋಷಣೆ ಕೂಗಿರುವುದು ತಿಳಿಸಿದೆ. ಪಾಕ್ ಪರ ಘೋಷಣೆ ಕೂಗಿದವರ  ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. 

ಪಾಕ್‌ ಪರ ಘೋಷಣೆಯ ಲ್ಯಾಬ್‌ ವರದಿ ಬಹಿರಂಗ ಪಡಿಸಿ: ಬಿಜೆಪಿ ನಿಯೋಗದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಅಮ್ಮಾಜೇಶ್ವರಿ ಏತನೀರಾವರಿ ಯೋಜನೆಗೆ ಎರಡನೇ ಬಾರಿಗೆ ಶಂಕುಸ್ಥಾಪನೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬೊಮ್ಮಾಯಿ ಅವರು , ಸರ್ಕಾರ ಬಂದು 9 ತಿಂಗಳು ಕಳೆದರೂ ಯಾವುದೇ ಹೊಸ ಯೋಜನೆ ರೂಪಿಸಿಲ್ಲ. ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡಿದೆ. ಹಳೆಯ ಯೋಜನೆ ಮತ್ತೆ ಚಾಲನೆ ನೀಡುತ್ತಿದ್ದಾರೆ. ಅಧಿಕಾರಿಗಳು ಮಿಸ್ ಗೈಡ್ ಮಾಡುತ್ತಿದ್ದು ಸಿಎಂ ಇದನ್ನು ಪರಿಶೀಲನೆ ಕ್ರಮ ವಹಿಸಬೇಕು ಎಂದರು. 

ಬೆಳಗಾವಿಗೆ ಇಂದು ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ ನಡ್ಡಾ ಆಗಮನ ಹಿನ್ನೆಲೆ ಬೆಳಗಾವಿಯಲ್ಲೇ ಬಿಜೆಪಿ- ಜೆಡಿಎಸ್ ಮೈತ್ರಿಯ ಸಿಟು ಹಂಚಿಕೆ ಬಗ್ಗೆ ‌ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಬೆಳಗಾವಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗೊಲ್ಲ. ದೆಹಲಿಯಲ್ಲಿ ಆಗಲಿದೆ ಎಂದರು. ಇದೇ ವೇಳೆ ಹಾವೇರಿಯಿಂದ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ನಾನು ಈಗಾಗಲೇ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು.

ಪಾಕಿಸ್ತಾನ ಪರ ಘೋಷಣೆ ನಿಜ: ಖಾಸಗಿ ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ? ಇಲ್ಲಿದೆ ಮಾಹಿತಿ!

click me!