ತರ​ಕಾರಿ ಹೊತ್ತ ರಾಜ್ಯದ ಮೊದಲ ರೈಲು ದೆಹಲಿಗೆ ಪ್ರಯಾಣ

By Kannadaprabha NewsFirst Published Sep 20, 2020, 8:16 AM IST
Highlights

ರಾಜ್ಯದ ಮೊದಲ ಕಿಸಾನ್ ರೈಲು ಕಾರ್ಯಾರಂಭ ಮಾಡಿದೆ. ಇಲ್ಲಿನ ಸರಕುಗಳನ್ನು ಹೊತ್ತು ದಿಲ್ಲಿಗೆ ಪ್ರಯಾಣ ಬೆಳೆಸಿದೆ.

 ಬೆಂಗಳೂರು (ಸೆ.20):  ಕರ್ನಾಟಕದ ಮೊದಲ ‘ಕಿಸಾನ್‌ ರೈಲು’ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್‌)ದಿಂದ ದೆಹಲಿಯ ನಿಜಾಮುದ್ದೀನ್‌ಗೆ ಶನಿವಾರ ಸಂಜೆ ಪ್ರಯಾಣ ಬೆಳೆಸಿತು. 

ಶನಿವಾರ ಸಂಜೆ 4.45ಕ್ಕೆ ಬೆಂಗಳೂರಿನಿಂದ ಹೊರಟಿರುವ ಈ ರೈಲು ಸೋಮವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್‌ ತಲುಪಲಿದೆ. ಈ ರೈಲಿಗೆ ಕೆಎಸ್‌ಆರ್‌ ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ಹಸಿರು ನಿಶಾನೆ ತೋರಿದ್ದಾರೆ. ಕಿಸಾನ್‌ ರೈಲಿನಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್‌, ಕ್ಯಾಪ್ಸಿಕಂ, ಮೆಣಸಿನಕಾಯಿ, ಹಾಲು, ಮಾಂಸ, ಮೀನು ಸೇರಿದಂತೆ ಬೇಗನೆ ಕೆಡಬಲ್ಲ ಪದಾರ್ಥಗಳನ್ನು ಸಾಗಿಸಬಹುದಾಗಿದೆ.

ಡ್ರೋನ್‌ ಮೂಲಕ ಪಾಕ್‌ನಿಂದ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ! .

 ಅದಕ್ಕಾಗಿ ಕೋಲ್ಡ್‌ ಸ್ಟೋರೇಜ್‌ ಬೋಗಿಗಳನ್ನು ಅಳವಡಿಸಲಾಗಿದೆ. ಇದು ಬಹು ವಿಧದ ರೈಲಾಗಿದ್ದು, ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸರಕುಗಳನ್ನು ಮಾತ್ರ ರೈಲಿನಲ್ಲಿ ತೆಗೆದುಕೊಂಡು ಹೋಗುವುದಿಲ್ಲ. ರೈತರು ಬೆಳೆದ ಯಾವುದೇ ತರಕಾರಿಗಳನ್ನು ಸಾಗಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!