ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ

By Suvarna NewsFirst Published Aug 11, 2021, 9:08 PM IST
Highlights

* ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆ
* 4 ಕೋಟಿ ಕೊರೋನಾ ಪರೀಕ್ಷೆಗಳನ್ನು ಪೂರೈಸಿದ ಕರ್ನಾಟಕ
* ದೇಶದಲ್ಲೇ ಅತೀ ಹೆಚ್ಚು ಪರೀಕ್ಷೆಗಳು ನಡೆಸಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

ಬೆಂಗಳೂರು, (ಆ.11): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮ ಕೈಗೊಂಡಿರುವ ಸರ್ಕಾರ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಹೌದು..ಕರ್ನಾಟಕ 4 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದು ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶದಲ್ಲೇ ಅತೀ ಹೆಚ್ಚು ಪರೀಕ್ಷೆಗಳು ನಡೆಸಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಸೋಂಕು, ಸಾವಲ್ಲಿ ಬೆಂಗ್ಳೂರು ಮೀರಿಸಿದ ದಕ್ಷಿಣ ಕನ್ನಡ ಜಿಲ್ಲೆ

4 ಕೋಟಿ ಕೊರೋನಾ ಪರೀಕ್ಷೆಗಳನ್ನು ಪೂರೈಸಿದ್ದು, ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ತರ ಮೈಲುಗಲ್ಲು ಸಾಧಿಸಿದೆ. ರಾಜ್ಯದ ಒಟ್ಟು ಪರೀಕ್ಷೆಗಳ 80 ಕ್ಕಿಂತ ಹೆಚ್ಚು RTPCR ಆಗಿದ್ದು, ಕರ್ನಾಟಕ ದೇಶದಲ್ಲಿಯೇ ಅತಿಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ.

Karnataka crossed 4 Crore Covid-19 tests marking yet another milestone in the battle against pandemic.

More than 80% of the tests conducted in state are RT-PCR tests and Karnataka has tested the third highest number of samples in the entire country. pic.twitter.com/prNykwn7ND

— Dr Sudhakar K (@mla_sudhakar)

3338 ಗಂಟಲು ದ್ರವ ಸಂಗ್ರಹ ಕೇಂದ್ರಗಳು, 252 ಕೋವಿಡ್ 19 ಪ್ರಯೋಗಾಲಯಗಳು, ಶೇಕಡ 81.45 ರಷ್ಟು RTPCR ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

click me!