
ಬೆಂಗಳೂರು, (ಜೂನ್.27): ಕೊರೋನಾ ವೈರಸ್ ನಿಯಂತ್ರಕ್ಕೆ ಸೂಕ್ತ ಕ್ರಮಗಳ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಶನಿವಾರ) ಮಹತ್ವದ ಸಭೆ ನಡೆಯಿತು.
ಪ್ರತಿ ಭಾನುವಾರ ಕರ್ನಾಟಕ ಕಂಪ್ಲೀಟ್ ಬಂದ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ.!
ಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅಂತಿಮವಾಗಿ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಕೈಗೊಂಡ ಮಹತ್ವದದ ನಿರ್ಧಾರಗಳು ಈ ಕೆಳಗಿನಂತಿವೆ.
* ಜುಲೈ 5 ರಿಂದ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್ ಡೌನ್.ಆದರೆ ಸರಕು ಸಾಗಾಣಿಕೆಗೆ ಯಾವುದೇ ತೊಂದರೆಯಿಲ್ಲ.
* ಪ್ರತಿ ಶನಿವಾರವೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ.
* ಪ್ರತಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಕರ್ಪ್ಯೂ ಜಾರಿ.
* ಬೆಂಗಳೂರಿನಲ್ಲಿ ಹೆಚ್ಚಿನ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ತೆರೆಯಲು ತಿರ್ಮಾನ.
* ಕೋವಿಡ್ ರೋಗಿಗಳ ಶೀಘ್ರ ಸ್ಥಳಾಂತರಕ್ಕೆ ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್ ಜಾರಿ.
* ಬೆಂಗಳೂರಿನಲ್ಲಿ 250 ಅಂಬ್ಯುಲೆನ್ಸ್
* ಕೋವಿಡ್ ನಿಂತ ಮೃತರಾದ ಮೃತದೇಹ ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್.
* ಅಂಬ್ಯುಲೆನ್ಸ್ ಚಲನವಲನ ಗುರುತಿಸಲು ಪೊಲೀಸ್ ಕಂಟ್ರೋಲ್ ರೂಮ್ ವೈರ್ ಲೆಸ್ ಬಳಕೆ.
* ಕೋವಿಡ್ 19 ನೋಡಲ್ ಅಧಿಕಾರಿಗಳ ವಿವರ ಜಾಹಿರಾತುಗಳ ಮೂಲಕ ಜನರಿಗೆ ಪ್ರಚಾರ.
* ಬಿಬಿಎಂಪಿ ಆಯುಕ್ತರ ಕೆಲಸದ ಹೊರೆ ಕಡಿಮೆ ಮಾಡಲು ತಿರ್ಮಾನ.
* ಬಿಬಿಎಂಪಿ ಜಂಟಿ ಆಯುಕ್ತರ ಜವಾಬ್ದಾರಿ ನಿಭಾಯಿಸಲು ಕೆಎಎಸ್ ಅಧಿಕಾರಿಗಳ ನಿಯೋಜನೆ.
* ಡಾಕ್ಟರ್ ಕೊರತೆ ನಿಗಿಸಲು 180 ಕಾರ್ಮಿಕ ಇಲಾಖೆಯ ಡಾಕ್ಟರ್ ಗಳ ಬಳಕೆ.
* ಟ್ರೇನಿ ತಹಶೀಲ್ದಾರಗಳಿಗೆ ಕೋವಿಡ್ ಆಸ್ಪತ್ರೆಗಳ ನೋಡೆಲ್ ಅಧಿಕಾರಿಗಳಾಗಿ ನೇಮಕ.
* ಕಲ್ಯಾಣ ಮಂಟಪಗಳು, ಹಾಸ್ಟೇಲ್ ಗಳು ಕೋವಿಡ್ ಆಸ್ಪತ್ರೆಗಳಿಗೆ ಮೀಸಲು.
* ರೈಲ್ವೆ ಇಲಾಖೆಯಿಂದ ಬೆಡ್ ಗಳ ಕೋಚ್ ಪಡೆಯಲು ತಿರ್ಮಾನ.
* ಕೋವಿಡ್ ನಿಂದ ಮೃತರಾದ ದೇಹಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ತಂಡ ರಚನೆ.
* ಅಂತ್ಯಕ್ರಿಯೆಗೆ ಬೆಂಗಳೂರಿನಲ್ಲಿ ಹೆಚ್ಚಿನ ಜಾಗ ಗುರುತಿಸಲು ಬೆಂಗಳೂರು ಡಿಸಿಗೆ ಸೂಚನೆ.
* ಮೆಡಿಕಲ್ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ಬೆಡ್ ಗಳು ಮೀಸಲು.
* ಆಸ್ಪತ್ರೆಗಳ ಬೆಡ್ ಪೂರ್ತಿಯಾದ ನಂತರ ಹೊಟೇಲ್ ಗಳ ಕೊಠಡಿಗಳ ಬಳಕೆಗೆ ಸೂಚನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ