
ಬೆಂಗಳೂರು (ನ. 16): 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಜೆಡಿಎಸ್ ಪ್ರಕಟಿಸಿದ್ದು, 40 ಮಂದಿ ಪೈಕಿ ಎಂಟು ಮಂದಿ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಸೇರಿದವರಿದ್ದಾರೆ.
ದೇವೇಗೌಡರು ಸೇರಿದಂತೆ ಅವರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ಡಾ.ಸೂರಜ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ
ಕಳೆದ ಹಲವು ದಿನಗಳಿಂದ ಪಕ್ಷದೊಂದಿಗೆ ಅಂತರ ಕಾಪಾಡಿಕೊಂಡು ದೂರ ಉಳಿದಿರುವ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.
ಇನ್ನುಳಿದಂತೆ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮುಖಂಡರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಕುಪೇಂದ್ರ ರೆಡ್ಡಿ, ಎನ್.ಎಚ್. ಕೋನರೆಡ್ಡಿ, ಎಂ. ಕೃಷ್ಣಾರೆಡ್ಡಿ, ಡಾ.ಕೆ. ಅನ್ನದಾನಿ, ಬಿ.ಎಂ. ಫಾರೂಕ್, ಕಾಂತರಾಜು, ಟಿ.ಎ. ಶರವಣ, ಮರಿತಿಬ್ಬೇಗೌಡ, ಬಿ.ಬಿ. ನಿಂಗಯ್ಯ, ವೈ.ಎಸ್.ವಿ. ದತ್ತ, ರಮೇಶ್ ಬಾಬು, ಮೊಹಮದ್ ಜಫ್ರುಲ್ಲಾ ಖಾನ್, ಕೆ.ಎಂ. ತಿಮ್ಮರಾಯಪ್ಪ, ಎಚ್.ಸಿ. ನೀರಾವರಿ, ಎಂ.ಟಿ. ಕೃಷ್ಣಪ್ಪ, ಕೆ.ವಿ. ಅಮರನಾಥ್, ಪಿ.ಆರ್.ಸುಧಾಕರ್ ಲಾಲ್, ಸೈಯದ್ ಶಫಿವುಲ್ಲಾ ಸಾಹೇಬ್, ಆರ್. ಪ್ರಕಾಶ್, ಆನಂದ್ ಅಸ್ನೋಟಿಕರ್, ಬಸವರಾಜ ಹೊರಟ್ಟಿ, ಚೌಡರೆಡ್ಡಿ ತೂಪಲ್ಲಿ, ಲೀಲಾದೇವಿ ಪ್ರಸಾದ್, ರುತ್ ಮನೋರಮಾ, ವಿಲ್ಸನ್ ರೆಡ್ಡಿ ಮತ್ತು ಕೆ.ಎ.ಆನಂದ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ