
ಉತ್ತರಕನ್ನಡ(ಡಿ.24): ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಳೆದ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸರಕಾರದ ಪ್ರಮುಖ ಉತ್ಸವಗಳಲ್ಲಿ ಒಂದಾದ ಕರಾವಳಿ ಉತ್ಸವ ಈ ವರ್ಷ ಸಂಭ್ರಮದಿಂದ ಏಳು ದಿನಗಳ ಕಾಲ ನಡೆಸಲಾಗುತ್ತಿದ್ದು, ಈ ಪ್ರಯುಕ್ತ ಹೆಲಿಕಾಪ್ಟರ್ ಹಾರಾಟ ಕೂಡಾ ನಡೆಸಲಾಗುತ್ತಿದೆ.
ಇಂದು ಮೊದಲ ದಿನ ಕಾರವಾರದ ವಿಶೇಷ ಚೇತನ ಮಕ್ಕಳು ಮತ್ತು ಪೌರಕಾರ್ಮಿಕ ಮಹಿಳೆಯರಿಗೆ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿಸಲಾಯಿತು. ಕಾರವಾರದ ಶಾಸಕ ಸತೀಶ್ ಸೈಲ್ ಜಾಲಿ ರೈಡ್‌ಗೆ ಅವಕಾಶ ಮಾಡಿಕೊಟ್ಟಿದ್ದು, ಸತೀಶ್ ಸೈಲ್ ಮಗಳು ಸಾಚಿ ಇದರ ಮೊತ್ತವನ್ನು ತನ್ನ ಖಾತೆಯಿಂದ ಭರಿಸಿದ್ದಾಳೆ.
ತಂದೆಯ ಹುಟ್ಟುಹಬ್ಬದ ನಿಮಿತ್ತ ವಿಶೇಷ ಚೇತನ ಮಕ್ಕಳಿಗೆ ಸ್ವಂತ ಹಣ ಖರ್ಚು ಮಾಡಿಸಿ ಉಚಿತವಾಗಿ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿಸಿದ್ದು, ಕಿವಿ ಮತ್ತು ಬಾಯಿ ಬಾರದ ವಿಶೇಷ ಚೇತನ ಮಕ್ಕಳು ಹಾಗೂ ಪೌರ ಕಾರ್ಮಿಕ ಮಹಿಳೆಯರು ಇದರಿಂದ ಖುಷಿ ಪಟ್ಟಿದ್ದಾರೆ. ತಮ್ಮಿಂದ ಹಣಕೊಟ್ಟು ಹೆಲಿಕಾಪ್ಟರ್ ಹತ್ತಲು ಕೂಡಾ ಸಾಧ್ಯವಾಗುತ್ತಿರಲಿಲ್ಲ. ಆದ್ರೆ, ಶಾಸಕ ಸತೀಶ್ ಸೈಲ್ ಮತ್ತು ಮಗಳಿಂದಾಗಿ ಹೆಲಿಕಾಪ್ಟರ್ ನಲ್ಲಿ ಉಚಿತವಾಗಿ ಹಾರಾಟ ಮಾಡುವ ಅವಕಾಶ ಒದಗಿಬಂತು ಎಂದು ಪೌರ ಕಾರ್ಮಿಕ ಮಹಿಳೆಯರು ಖುಷಿಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ