27 ವರ್ಷಗಳ ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಕನ್ನಡಿಗ ಸಿಜೆ..!

By Kannadaprabha NewsFirst Published Feb 1, 2024, 4:31 AM IST
Highlights

ಪಿ.ಎಸ್. ದಿನೇಶ್ ಕುಮಾರ್ ಅವರ ಪದೋನ್ನತಿಯಿಂದ 27 ವರ್ಷಗಳ ನಂತರ ರಾಜ್ಯದ ಹೈಕೋರ್ಟ್‌ಗೆ ಸಿಜೆಯಾಗಿ ನೇಮಕಗೊಳ್ಳುವ ಮೂಲಕ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.

ಬೆಂಗಳೂರು(ಫೆ.01): ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್.ದಿನೇಶ್ ಕುಮಾರ್ ಪದೋನ್ನತಿ ಪಡೆದಿರುವುದರಿಂದ ರಾಜ್ಯ ನ್ಯಾಯಾಂಗದ ಇತಿಹಾಸದಲ್ಲಿ ಹೊಸದೊಂದು ದಾಖಲೆ ನಿರ್ಮಾಣಗೊಂಡಿದೆ. ಬರೋಬ್ಬರಿ 27 ವರ್ಷಗಳ ನಂತರ ಕರ್ನಾಟಕದಲ್ಲಿ ಕಾನೂನು ಪದವಿ ಪಡೆದು ವಕೀಲರಾಗಿ ಸೇವೆ ಸಲ್ಲಿಸಿ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯ ಮೂರ್ತಿಯಾಗಿ ನೇಮಕವಾದ ಬಳಿಕ ಸಿಜೆಯಾಗಿ ಪದೋ ನ್ನತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿಗೆ ಪಿ.ಎಸ್. ದಿನೇಶ್ ಕುಮಾರ್ ಒಳಗಾಗಿದ್ದಾರೆ.

ಕನ್ನಡಿಗರಾದ ನ್ಯಾ|ಎಸ್‌.ಎ.ಹಕೀಮ್ ಅವರು 1996ರ ಮೇ3ರಿಂದ 9ರವರೆಗೆ ಕೇವಲ 6 ದಿನಗಳ ಕಾಲ ಹೈಕೋರ್ಟ್ ಸಿಜೆಯಾಗಿದ್ದರು. ಅವರ ನಂತರ ಕನ್ನಡಿಗರೊಬ್ಬರು ಹೈಕೋರ್ಟ್ ಸಿಜೆಯಾದ ಉದಾಹರಣೆ ಇರಲಿಲ್ಲ. ಇದೀಗ ಪಿ.ಎಸ್. ದಿನೇಶ್ ಕುಮಾರ್ ಅವರ ಪದೋನ್ನತಿಯಿಂದ 27 ವರ್ಷಗಳ ನಂತರ ರಾಜ್ಯದ ಹೈಕೋರ್ಟ್‌ಗೆ ಸಿಜೆಯಾಗಿ ನೇಮಕಗೊಳ್ಳುವ ಮೂಲಕ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.

Latest Videos

ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ಪತ್ರ ಕಡ್ಡಾಯ: ಹೈಕೋರ್ಟ್‌ ಸ್ಪಷ್ಟನೆ

ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಹಾಲಿ ಸುಪ್ರಿಂಕೋರ್ಟ್ ನ್ಯಾಯಮೂರ್ತಿ) ಪ್ರಸನ್ನ ವರಾಳೆ ಅವರು ಮೂಲತಃ ಬೆಳಗಾ ವಿಯನಿಪ್ಪಾಣಿಯವರಾದವರೂಮುಂಬೈನಲ್ಲಿ ಕಾನೂನು ಪದವಿ ಪಡೆದವರು. ಅಲ್ಲಿನ ನ್ಯಾಯಮೂರ್ತಿಯಾಗಿ, 2022ರ ಅ.15ರಂದು ಕರ್ನಾ ಟಕ ಹೈಕೋರ್ಟ್ ಸಿಜೆಯಾಗಿ ನೇಮಕಗೊಂಡಿದ್ದರು. ಸುಮಾರು 16 ತಿಂಗಳ ಕಾಲ ಇಲ್ಲಿದ್ದರು. 1984ಕ್ಕೂ ಮುನ್ನ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ಸಿಜೆಯಾಗಿ ನೇಮಿಸುವ ಸಂಪ್ರದಾಯವಿತ್ತು.

ವಕೀಲರಾಗಿ, ಬಳಿಕ ಜಡ್ಜ್ ಆದ ದಿನೇಶ್: ದಿನೇಶ್ ಕುಮಾರ್‌ಅವರು 1990ರಲ್ಲಿ ಕಾನೂನು ಪದವಿ ಪಡೆದು ವಕೀಲಿಕೆ ಆರಂಭಿಸಿದ್ದರು. 1998ರಲ್ಲಿ ಕೇಂದ್ರ ಸರ್ಕಾರಿ ವಕೀಲರಾಗಿದ್ದರು. 2003ರಲ್ಲಿ ಕೇಂದ್ರ ಸರ್ಕಾರದ ಹಿರಿಯ ವಕೀಲರಾದರು. ಇದೇ ಫೆ.24ರಂದು ನಿವೃತ್ತಿ ಹೊಂದಲಿದ್ದಾರೆ. ಅವರ ತಂದೆ ಸಹ ನ್ಯಾಯಾಧೀಶರಾಗಿದ್ದರು.

click me!