
ಯುಎಇಯಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಖ್ಯಾತ ಬರಹಗಾರ ಹಾಗೂ ರಂಗ ನಿರ್ದೇಶಕ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಇತ್ತೀಚೆಗೆ ನಿಧನರಾದರು. ಅವರ ಸ್ಮರಣಾರ್ಥವಾಗಿ ಧ್ವನಿ ಪ್ರತಿಷ್ಠಾನವು ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 17-10-2025 ರಂದು ಸಂಜೆ ದುಬೈಯ ಅಬುಹೇಲ್‌ನಲ್ಲಿ ಆಯೋಜಿಸಿತು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಪಯ್ಯಾರರ ಸಾಹಿತ್ಯ ಮಿತ್ರರು, ರಂಗಭೂಮಿ ಕಲಾವಿದರು, ಧ್ವನಿ ಪ್ರತಿಷ್ಠಾನದ ಸದಸ್ಯರು, ಅಭಿಮಾನಿಗಳು ಹಾಗೂ ಆತ್ಮೀಯ ಮಿತ್ರವೃಂದದವರು ಭಾಗವಹಿಸಿದರು.
ಸಭೆಯ ಆರಂಭದಲ್ಲಿ ದೀಪ ಬೆಳಗುವ ಮೂಲಕ ಪಯ್ಯಾರರ ಆತ್ಮಕ್ಕೆ ಶಾಂತಿ ಪ್ರಾರ್ಥಿಸಲಾಯಿತು. ನಂತರ ಹಲವಾರು ಮಂದಿ ಅವರ ಸಾಹಿತ್ಯ ಸಾಧನೆ, ರಂಗ ನಿರ್ದೇಶನ ಕೌಶಲ್ಯ ಮತ್ತು ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ತಮ್ಮ ಭಾವಪೂರ್ಣ ಸ್ಮರಣಗಳನ್ನು ಹಂಚಿಕೊಂಡರು.
ಪಯ್ಯಾರರ ನಿಧನವು ಯುಎಇಯ ಕನ್ನಡ ಸಾಹಿತ್ಯ ಮತ್ತು ನಾಟಕ ಲೋಕಕ್ಕೆ ಭಾರೀ ನಷ್ಟವೆಂದು ಎಲ್ಲರೂ ಅಭಿಪ್ರಾಯಪಟ್ಟರು. ಅವರ ಸ್ಮರಣೆ ಸದಾ ಪ್ರೇರಣೆಯಾಗಿ ಉಳಿಯಲಿದೆ.
ಧ್ವನಿ ಪ್ರತಿಷ್ಠಾನವು ಮುಂದಿನ ದಿನಗಳಲ್ಲಿ ಅವರ ಅಪೂರ್ಣವಾಗುಳಿದ ಮಹತ್ತರದ ಕನಸಾದ ಧ್ವನಿ ಪ್ರತಿಷ್ಠಾನದ 40ರ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನೂ ಪ್ರಕಟಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ