Karnataka News Live Updates: ಬಿಸಿಯೂಟ ಸೇವಿಸಿ ನೂರಕ್ಕೂ ಅಧಿಕ ಮಕ್ಕಳು ಅಸ್ವಸ್ಥ, ಚಿಕಿತ್ಸೆ

ಪ್ರವೀಣ್ ಹತ್ಯೆಯಿಂದ ಸೃಷ್ಟಿಯಾದ ಪರಿಸ್ಥಿತಿ ತಣ್ಣಗೆ ಆಗುವ ಮೊದಲೇ ಮಂಗಳೂರಿನ ಸುರತ್ಕಲ್‌ನಲ್ಲಿ ಮತ್ತೊಂದು ಹತ್ಯೆಯಾಗಿದೆ. ಇದಕ್ಕೆ ಕಾರಣವೇನಿದ್ದರೂ, ಕೋಮು ರೂಪ ತಾಳುತ್ತಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಮಂಗಳೂರಿನ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮತ್ತೊಂದೆಡೆ ಮೃತ ಫಾಝೀಲ್ ಪಾರ್ಥಿವ ಶರೀರದ ಅಂತಿಮ ದರ್ಶನ ಮುಕ್ತಾಯವಾಗಿದೆ. ಮನೆಯಲ್ಲಿ ಮಹಿಳೆಯರು ಮತ್ತು ಕುಟುಂಬಸ್ಥರು ಮೃತ ದೇಹ ದರ್ಶನ ಮಾಡಿದ್ದಾರೆ. ಮನೆಯಿಂದ ಮಂಗಳ ಪೇಟೆ ಮಸೀದಿಗೆ ಮೃತದೇಹದ ಅಂತಿಮ ಯಾತ್ರೆ ಆಗಮಿಸಿದರೆ. ಸದ್ಯ ಮಸೀದಿಯಲ್ಲಿ ಅಂತಿಮ ಕ್ರಿಯೆಗಳು ನಡೆಯುತ್ತಿವೆ.  ರಾಜ್ಯದ ವಿವಿಧೆಡೆ ನಡೆಯುತ್ತಿರುವ ವಿದ್ಯಾಮಾನಗಳಿಗಾಗಿ ಸುವರ್ಣನ್ಯೂಸ್.ಕಾಮ್ ಲೈವ್ ಬ್ಲಾಗ್‌ಗೆ ಲಾಗಿನ್ ಆಗಿರಿ. ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳಿ. 

6:02 PM

ಬಿಸಿಯೂಟ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಆಸ್ಪತ್ರೆಯಲ್ಲಿ ಚಿಕಿತ್ಸೆ

ಚಾಮರಾಜನಗರ ಜಿಲ್ಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥರಾಗಿದ್ದಾರೆ. ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಸುಮಾರು 100 ರಿಂದ 120 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕರೆತಂದ ಶಿಕ್ಷಕರು ಹಾಗೂ ಪೋಷಕರು. ಊಟ ಮಾಡಿದ ಬಳಿಕ ಚೆನ್ನಾಗಿಯೇ ಇದ್ದ ಮಕ್ಕಳಲ್ಲಿ ಸಂಜೆ 4ರ ವೇಳೆಗೆ ಅನಾರೋಗ್ಯ ಕಾಣಿಸಿಕೊಂಡಿದೆ. ವಾಂತಿ ಭೇದಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು. ಕೆಲ ತಿಂಗಳ ಹಿಂದೆ ಇದೇ ಶಾಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಒಮ್ಮೆ ಆದ ಅಚಾತುರ್ಯವನ್ನು ತಿದ್ದಿಕೊಂಡಿಲ್ಲ. ಇದರಿಂದ ಮಕ್ಕಳ ಜೀವಕ್ಕೇ ಕುತ್ತಾಗುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ.

3:45 PM

ಕಾಂಗ್ರೆಸ್‌ ಆಳ್ವಿಕೆಯಲ್ಲಿ ಕೋಮು ಕೊಲೆಗಳು ಕಡಿಮೆ, ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ: ಮಾಜಿ ಸಚಿವ

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕೈಲಾಗದೇ ಇದ್ದವರ ಕೊನೆ ಅಸ್ತ್ರ ಏನಂದ್ರೆ ಅಪಪ್ರಚಾರ ಮಾಡೋದು ಎಂದಿದ್ದಾರೆ. 2013 ರಿಂದ 2018 ತನಕ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಜೆಪಿ ಅವರು 23 ಹಿಂದೂ ಯುವಕರ ಹತ್ಯೆ ಆಯ್ತು ಅಂತ ಹೇಳಿಕೊಂಡು ತಿರುಗಾಡ್ತಿದ್ದರು. ಎಲ್ಲಾದ್ರೂ ಹೆಣ ಬಿದ್ದರೆ ರಣ ಹದ್ದುಗಳ ತರ ಹೋಗ್ತಿದ್ದರು. 23 ಕೊಲೆಗಳಲ್ಲಿ ನಾಲ್ಕೈದು ಮಾತ್ರ ಕೋಮುದ್ವೇಷಕ್ಕೆ ಆಗಿತ್ತು. ಇನ್ನುಳಿದ ಕೊಲೆಗಳು ಬೇರೆ ಬೇರೆ ಕಾರಣಕ್ಕೆ ನಡದಿದೆ. ಸುಮಾರು 20 ಕ್ಕೂ ಹೆಚ್ಚು ಕೊಲೆಗಳು PFI, SDPI ಅವರದ್ದು ಆಗಿತ್ತು. ಎರಡೂ ಕಡೆಗಳಲ್ಲೂ ಹತ್ಯೆಗಳು ನಡೆದಿವೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿರುವ ಕೊಲೆಗಳೇ. ನಾನು ಗೃಹ ಮಂತ್ರಿ ಆಗಿದ್ದಾಗ ರಿವ್ಯೂ ಮೀಟಿಂಗ್ ಮಾಡಿದ್ದಾಗ. ಕೊಲೆ ಮಾಡಿದವರ ಹೆಸರುಗಳು ಮಾತ್ರ ಎಫ್ ಐರ್, ಚಾರ್ಜ್ ಶೀಟ್ ಇರ್ತಿತ್ತು. ಕಳೆದ ನಾಲ್ಕು ವರ್ಷದಿಂದ ಇವರದ್ದೇ ಸರ್ಕಾರ ಇದೆ ಏನ್ಮಾಡ್ತಿದಿರಾ..? ಪ್ರವೀಣ್ ಹತ್ಯೆ NIA ಗೆ ವಹಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, NIA ತನಿಖೆ ಆದ್ರೂ ಮಾಡಲಿ ಬೇರೆ ಯಾವುದಾದರೂ ತನಿಖೆ ಮಾಡಿಸಲಿ. ರುದ್ರೇಶ್ ಹತ್ಯೆ, ಪರೇಶ್ ಮೇಸ್ತಾ ಕೇಸ್ NIA ಗೆ ವಹಿಸಿದ್ರು. NIA ತನಿಖೆ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ.

3:16 PM

ಪ್ರವೀಣ್‌ ಹೆಂಡತಿಗೆ ಸರ್ಕಾರಿ ನೌಕರಿ, ಒಂದು ಕೋಟಿ ಹಣ ನೀಡಿ: ರೇವಣ್ಣ ಆಗ್ರಹ

ಹಾಸನದಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ. ಆ ಕುಟುಂಬದ ಹೆಣ್ಣುಮಗಳಿಗೆ ಉದ್ಯೋಗ ಕೊಡಬೇಕು. ನಿನ್ನೆಯೇ ಸಿಎಂ ಅವರು ಉದ್ಯೋಗ ನೀಡುವ ಬಗ್ಗೆ ಅನೌನ್ಸ್ ಮಾಡಬೇಕಿತ್ತು. ದುಡ್ಡು ಇಂಪಾರ್ಡೆಂಟ್ ಅಲ್ಲ. ಆ ಮನುಷ್ಯ ಯಾರೇ ಇರಲಿ. ಬಿಜೆಪಿ ಕಾರ್ಯಕರ್ತ ಇರಲಿ, ಬೇರೆ ಯಾರೇ ಇರಲಿ. ಆ ಹೆಣ್ಣು ಮಗಳ ಕಣ್ಣೀರು ಹಾಕುತ್ತಿರುವುದನ್ನು ಮಾಧ್ಯಮದಲ್ಲಿ ನೋಡಿದೆ. ಬಹಳ ನೋವಾಯಿತು, ದುಡ್ಡು ಕೊಟ್ರೆ ಗಂಡ ಸಿಕ್ತಾನಾ, 25 ಲಕ್ಷ ಅಲ್ಲ, 50 ಲಕ್ಷ ಕೊಟ್ಟರು ಗಂಡ ಸಿಗಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಕಾಣಿಸ್ತಿದೆ. ಈ ವಿಚಾರವನ್ನು  ನಾನು ರಾಜಕೀಯಕ್ಕೆ ಬಳಸಲ್ಲ. ಬಿಜೆಪಿ ಇರಲಿ, ಯಾವುದೇ ಪಾರ್ಟಿ ಇರಲಿ. ಗಂಡನ ಕಳೆದುಕೊಂಡಿರುವ ಆ ಹುಡುಗಿಗೆ ನಾವೆಲ್ಲಾ ಧೈರ್ಯ ತುಂಬಬೇಕಿದೆ. ಆ ಕುಟುಂಬಕ್ಕೆ ಸರ್ಕಾರ ನೌಕರಿ  ಕೊಡಲಿ, ಸರ್ಕಾರ ಘೋಷಿಸಿರುವ 25 ಲಕ್ಷ ಬದಲು, ಒಂದು ಕೋಟಿ ಹಣ ಕೊಡಲಿ. ಒಳ್ಳೆಯ  ಮನೆಯನ್ನು ಕಟ್ಟಿಕೊಡಲಿ. ಸರ್ಕಾರಕ್ಕೆ ಹೆಚ್ ಡಿ ರೇವಣ್ಣ ಒತ್ತಾಯ.

2:35 PM

ಪ್ರವೀಣ್‌ ಹತ್ಯೆ ಪ್ರಕರಣವನ್ನು ಎನ್‌ಐಎಗೆ ಕೊಡಲು ನಿರ್ಧರಿಸಿದ ರಾಜ್ಯ ಸರ್ಕಾರ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಜತೆಗೆ ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ, ಹೆಚ್ಚು ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. 

1:23 PM

ಬಿಜೆಪಿ ಮತ್ತು ಕಾಂಗ್ರೆಸ್‌ ಇದ್ದಾಗಲೇ ಕೋಮು ಗಲಭೆಯಾಗತ್ತೆ; ಮಾಜಿ ಸಿಎಂ ಎಚ್‌ಡಿಕೆ

ಮಂಗಳೂರಿನಲ್ಲಿ ನಡೆದಿರುವ ಎರಡು ಕೊಲೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಸರಿಪಡಿಸಿಕೊಂಡರೇ ಉಳಿಯುತ್ತಾರೆ ಇಲ್ಲದಿದ್ದರೆ ಸರ್ವನಾಶವಾಗುತ್ತಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳನ್ನ ಕಿತ್ತು ಹೊರಹಾಕಿದರೇ ಇದನ್ನ ನಿಲ್ಲಿಸಬಹದು. ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ಕೋಮುಗಲಭೆಯಾಗಿಲ್ಲ. ಇವತ್ತು ಯಾಕೆ ಆಗುತ್ತಿದೆ, ಸಿದ್ದರಾಮಯ್ಯ ಇದ್ದಾಗ ಯಾಕೆ ಆಯ್ತು. ಯಾವ ಕಾರಣಕ್ಕೆ ಇವತ್ತು ಇದು ನಡೆಯುತ್ತಿದೆ. ಹುಬ್ಬಳಿಯಲ್ಲಿ ಇದ್ಗಾ ಮೈದಾನದ ಗಲಾಟೆಯಿಂದ ಪ್ರತಿವರ್ಷ ಎರಡ್ಮೂರು ಕೊಲೆಯಾಗುತ್ತಿದ್ದವು. ನಾವಿದ್ದ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇವತ್ತು 30 ವರ್ಷ ಆದರೂ ಒಂದು ಕೊಲೆಯಾಗಿಲ್ಲ. ಇವತ್ತು ಬೆಂಗಳೂರಲ್ಲೂ ಪುಡಿ ರೌಡಿಗಳು ಹುಟ್ಟಿಕೊಂಡಿವೆ. ಇವತ್ತು ಪೊಲೀಸ್ ಇಲಾಖೆಯಲ್ಲಿ ಯಾವುದೇ ರೀತಿ ಕಂಟ್ರೋಲ್ ಇಲ್ಲ. ಗೃಹ ಸಚಿವರು ಪೊಲೀಸರಿಗೆ ನಾಯಿಗಳು ಎಂದಿದ್ದರು, ಇವರು ಯಾವ ರೀತಿ ಸರ್ಕಾರ ನಡೆಸುತ್ತಾರೆ. ನಮಗೆ ಬೇಕಾಗಿರೋದು ಶಾಂತಿ, ಸರ್ವಜನಾಂಗದ ಶಾಂತಿಯ ತೋಟ ಕರುನಾಡಲ್ಲಿ. ಎರಡು ಸಮಾಜದ ಸಂಘಟನೆಗಳು ತಮ್ಮ ತೇವಲು ತೀರಿಸಿಕೊಳ್ಳಲು ಅಮಾಯಕರನ್ನ ಬಲಿ ಕೊಡಬೇಡಿ ಎಂದು ಕುಮಾರಸ್ವಾಮಿ ಬೀದರ್‌ನಲ್ಲಿ ಹೇಳಿದ್ದಾರೆ.

12:59 PM

ಪ್ರವೀಣ್‌ ನಿಟ್ಟಾರು ಹತ್ಯೆ; ಇಬ್ಬರು ಪೊಲೀಸ್‌ ಅಧಿಕಾರಿಗಳ ತಲೆದಂಡ

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್ ಹಿನ್ನೆಲೆ. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳ ವರ್ಗಾವಣೆ. ದ.ಕ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳ ವರ್ಗಾವಣೆ. ವರ್ಗಾವಣೆ ಆದೇಶ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ. ಬೆಳ್ಳಾರೆಗೆ ನೂತನ ಪಿಎಸೈ ಆಗಿ ಸುಹಾಸ್ ಹಾಗೂ ಸುಬ್ರಹ್ಮಣ್ಯಕ್ಕೆ ಮಂಜುನಾಥ್ ನೇಮಕ. ಕುಂದಾಪುರ ಎಸೈ ಆಗಿದ್ದ ಸುಹಾಸ್ ಬೆಳ್ಳಾರೆ ಠಾಣೆಗೆ. ವಿಟ್ಲ ಠಾಣಾ ಎಸೈ ಆಗಿದ್ದ ಮಂಜುನಾಥ ಟಿ. ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೇಮಕ. ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಲು ಸೂಚನೆ. ಪ್ರವೀಣ್ ಮೃತದೇಹದ ಮೆರವಣಿಗೆ ವೇಳೆ ನಡೆದಿದ್ದ ಲಾಠಿ ಚಾರ್ಜ್. ಕಾಸರಗೋಡಿನ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ರಮೇಶ್ ಮೇಲೂ ಲಾಠಿ ಬೀಸಿದ್ದ ಪೊಲೀಸರು. ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ನಿನ್ನೆ ಸಿಎಂ ಬೊಮ್ಮಾಯಿಗೂ ಧಿಕ್ಕಾರ ಕೂಗಿದ್ದ ಕಾರ್ಯಕರ್ತರು.

12:56 PM

ಮಂಗಳೂರು ಪ್ರವೇಶ ನಿಷೇಧ, ಬಿಜೆಪಿಗರು ನೀಚರು ಎಂದ ಮುತಾಲಿಕ್‌

ಪ್ರವೀಣ್ ನೆಟ್ಟಾರು ಮನೆಗೆ ನಾನು ಹೊರಟಿದ್ದೆ. ಹೆಜಮಾಡಿಯಲ್ಲಿ ನನ್ನನ್ನ ಪೊಲೀಸರು ತಡೆದಿದ್ದಾರೆ. ದಕ್ಷಿಣ ಕನ್ನಡ ಡಿಸಿ ಕೊಟ್ಟ ನಿಷೇದಾಜ್ಞೆ ಪತ್ರವನ್ನು ಕೈ ಕೊಟ್ಟಿದ್ದಾರೆ. ನೀವು ಮುತಾಲಿಕನ ಬ್ಯಾನ್ ಮಾಡುತ್ತಿಲ್ಲ ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದು ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದಾರೆ ಒಪ್ಪಬಹುದಿತ್ತು. ಬಿಜೆಪಿಯವರು ಹಿಂದೂ ವಿರೋಧಿ ಗಳಿದ್ದಾರೆ ನೀಚ ನಿರ್ಲಜ್ಜರಿದ್ದಾರೆ. ನೂರಾರು ಜನ ರಾಜೀನಾಮೆ ಕೊಟ್ಟು ನಿಮ್ಮ ಮುಖಕ್ಕೆ ಉಗಿದಿದ್ದಾರೆ. ನಾನು ಯಾವುದೇ ಸಮಾವೇಶ ಸಭೆಗೆ ಹೋಗುತ್ತಿಲ್ಲ ಸಾಂತ್ವನ ಹೇಳಲು ಹೋಗುತ್ತಿದ್ದೇನೆ. ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ. ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ. ಹಿಂದೂ ರಾಷ್ಟ್ರಕ್ಕಾಗಿ ಹಿಂದುತ್ವಕ್ಕಾಗಿ ಎಂದು ಕಾರ್ಯಕರ್ತರು ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಧಿಕ್ಕರಿಸುತ್ತಾರೆ ನೋಡುತ್ತಿರಿ. ಹಿಂದುತ್ವ ವಿಚಾರದಲ್ಲಿ ನಾನು ಒಂದಿಂಚು ಕಾಂಪ್ರಮೈಸ್ ಮಾಡುವನಲ್ಲ. ಬೆಳ್ಳಾರೆಗೆ ಹೋಗಲು ಎಲ್ಲರಿಗೂ ಅವಕಾಶವಿದೆ ನನಗೆ ಯಾಕಿಲ್ಲ. ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

12:48 PM

ಸಿಎಂ ಮಂಗಳೂರಲ್ಲಿ ಇದ್ದಾಗಲೇ ಕೊಲೆಯಾಗಿದೆ ಎಂದರೆ ಎಷ್ಟು ಅಸಮರ್ಥ ಎಂಬುದು ತಿಳಿಯುತ್ತದೆ; ಸಿದ್ದರಾಮಯ್ಯ

ಫಾಝಿಲ್ ಕೊಲೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮುಖ್ಯಮಂತ್ರಿ, ಗೃಹ ಸಚಿವರ ವೈಫಲ್ಯ‌. ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ. ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಅಲ್ಲೇ ಇದ್ದಾಗ ಕೊಲೆ ಆಗಿದೆ. ಅಂದರೆ ಇಂಟಲಿಜೆನ್ಸ್ ವೈಫಲ್ಯ ಅಲ್ವ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವ? ಜನ ಮನೆಯಿಂದ ಆಚೆ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ. ಎಸ್‌ಡಿಪಿಐ, ಪಿಎಫ್‌ಐ ಮೇಲೆ ನಿಮಗೆ ಅನುಮಾನ ಇದಿಯಾ? ಹಾಗಿದ್ದರೆ ಬ್ಯಾನ್ ಮಾಡಿ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ. ಮೈಸೂರಿನಲ್ಲಿ ಗಲಭೆ ಆಗಿತ್ತು. 
ಅದರಲ್ಲಿ ವಿದ್ಯಾರ್ಥಿಗಳೂ ಇದ್ದರು.ಕೇಸ್ ವಾಪಸ್ ಪಡೆಯುವಂತೆ ಎಲ್ಲ ಪಕ್ಷದವರೂ ಕೇಳಿದ್ದರು. ಅದಕ್ಕೆ ಕೇಸ್ ವಾಪಸ್ ಪಡೆದುಕೊಂಡಿದ್ದೆ. ಅದೆಲ್ಲ ಆಗಿ ಎಷ್ಟು ವರ್ಷ ಆಯ್ತು. ಅದಕ್ಕೂ ಈಗಿನ ಕೊಲೆಗೂ ಏನು ಸಂಬಂಧ. ನಿಮಗೆ ನಿಜವಾಗಲೂ ಎಸ್‌ಡಿಪಿಐ, ಪಿಎಫ್‌ಐ ಮೇಲೆ ಅನುಮಾನ ಇದಿಯಾ ಬ್ಯಾನ್ ಮಾಡಿ. ಅದನ್ನು ಬಿಟ್ಟು ಹಿಂದಿನ ಸರ್ಕಾರದ ಮೇಲೆ ಹೇಳಿದರೆ ಏನು ಪ್ರಯೋಜನ. ಅಧಿಕಾರ ಇರೋದು ನಿಮ್ಮ ಕೈಯಲ್ಲಿ ಅಲ್ವ? ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ.

12:41 PM

ಯುಪಿಗಿಂತ ಐದು ಹೆಜ್ಜೆ ಮುಂದೆ ಹೋಗುತ್ತೇವೆ; ಸಚಿವ ಅಶ್ವಥ್‌ ನಾರಾಯಣ್‌

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ರಾಮನಗರದಲ್ಲಿ ಹೇಳಿಕೆ. ಮಂಗಳೂರು ಜಿಲ್ಲೆಯಲ್ಲಿ ಸರಣಿ ಹತ್ಯೆ ವಿಚಾರ. ಜನರ ತಾಳ್ಮೆಯನ್ನ ಕೆಲವು ಪ್ರಚೋದರು ಪರೀಕ್ಷೆ ಮಾಡುತ್ತಿದ್ದಾರೆ. ಸಿಎಂ ಅವರು ಈಗಾಗಲೇ ಸ್ವಷ್ಟ ಸಂದೇಶ ಕೊಟ್ಟಿದ್ದಾರೆ. ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗುತ್ತದೆ. ಎನ್ ಕೌಂಟರ್ ಮಾಡುವುದಕ್ಕು ನಾವು ಸಿದ್ದರಿದ್ದವೇ ಎಂದು ಸಿಎಂ ಅವರು ಈಗಾಗಲೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡುಕ ಹುಟ್ಟಿಸುವ, ಎನ್ ಕೌಂಟರ್ ಅಗುವ ಕಾಲ ಬಂದಿದೆ.. ತೀವ್ರ ಕ್ರಮ ವಹಿಸಲಾಗುತ್ತದೆ. ಪ್ರವೀಣ್ ಹತ್ಯೆ ತರಾ ಬೇರೆ ಎಲ್ಲೂ ಆಗಬಾರದು. ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ, ವಿಚಾರ. ನೊಂದವರಿಗೆ ತುಂಬ ನೋವಾಗಿದೆ. ಆಕ್ರೋಶಕ್ಕೆ ಒಳಗಾಗಿದ್ದಾರೆ. ನಮ್ಮ ಸರ್ಕಾರ ಸಮರ್ಥವಾಗಿದೆ. ಹತ್ಯೆಗಳು ಆದಾಗ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಪ್ರವೀಣ್ ಹತ್ಯೆ ಕೇಸ್ ನಲ್ಲೂ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂಬ ಅಪೇಕ್ಷೆ ಕಾರ್ಯಕರ್ತರದ್ದು, ಯುಪಿಗಿಂತಲೂ ಐದು ಹೆಜ್ಜೆ ಮುಂದೆ ಹೋಗುತ್ತೇವೆ. ಯುಪಿ ಗಿಂತ ಒಳ್ಳೇ ಮಾಡಲ್ ಕೊಡುತ್ತೇವೆ. ಕರ್ನಾಟಕ ಇತರರಿಗೆ ಮಾದರಿಯಾಗಿರುತ್ತದೆ. ಜನರು ಭಾವನೆ ವ್ಯಕ್ತಪಡಿಸಲೇಬೇಕು. ತಾಳ್ಮೆಗೂ ಇತಿಮಿತಿ ಇದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದೇವೆ. ಮುಂದೆ ಸಹಿಸಿಕೊಳ್ಳುವುದಿಲ್ಲ. ಮುಂದೆ ನಮ್ಮ ಆಕ್ಷನ್ ಏನು ಎಂದು ತೋರಿಸುತ್ತೇವೆ. ನಡುಕ ಹುಟ್ಟಿಹಾಕಲು ನಾವು ತಯಾರು ಇದ್ದೇವೆ. ಆ್ಯಕ್ಷನ್ ಕೊಡಲು ಕಷ್ಟ ಇಲ್ಲ. ನಮ್ಮ ಆ್ಯಕ್ಷನ್ ಯಾವ ರೀತಿ ಇರುತ್ತೆ ನೋಡಿ. ಪಿಎಫ್ ಐ, ಎಸ್ ಡಿಪಿಐ ಬ್ಯಾನ್ ಮಾಡುವ ಕಾಂಗ್ರೆಸ್ ನಾಯಕರ ಒತ್ತಾಯ ವಿಚಾರ. ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ನೈತಿಕತೆ ಇಲ್ಲದ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ಪಿಎಫ್ ಐ ವಿರುದ್ಧ ಇದ್ದ ಕೇಸ್ ಅನ್ನ ವಿತ್ ಡ್ರಾ ಮಾಡಿದ್ರು. ಅವರಿಗೆ ಯಾವ ನೈತಿಕತೆ ಇದೆ ಮಾತನಾಡಲು ಅವರಿಗೂ ಬೇರೆ ಬೇರೆ ಸಮಾಜ ದ್ರೋಹಿಗಳಿಗೆ ವ್ಯತ್ಯಾಸವಿಲ್ಲ. ಆ ರೀತಿ ಕೆಟಗರಿಗೆ ಸೇರಿದವರು. ಸಮಾಜಕ್ಕೆ ಈ ಪರಿಸ್ಥಿತಿ ಬರಲು ಕಾಂಗ್ರೆಸ್ ನವರೇ ಕಾರಣಕರ್ತರು. ತುಷ್ಠಿಕರಣದ ರಾಜಕಾರಣ ಮಾಡಿದವರು ಕಾಂಗ್ರೆಸ್ ನವರು. ಅವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ಕರ್ನಾಟಕ ಏನು ಎಂಬುದನ್ನ ತೋರಿಸುತ್ತೇವೆ. ಕರ್ನಾಟಕ ಮಾಡಲ್ ಅನ್ನ ಬೇರೆಯವರಿಗೆ ಕೊಡುತ್ತೇವೆ. ಬೇರೆಯವರ ಮಾಡಲ್ ಅನ್ನ ತೆಗೆದುಕೊಳ್ಳುವವರಲ್ಲ. ನನ್ನ ಖೆಡ್ಡಾಗೆ ಕೆಡವಲು ರೆಡಿಯಾಗಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರ. ಯಾರನ್ನು ಕೆಡವುದು ಅವಶ್ಯಕತೆ ಇಲ್ಲ. ಅವರನ್ನೆ ಅವರು ಕೆಡವಿಕೊಂಡಿದ್ದಾರೆ. ಅವರ ನಡುವಳಿಕೆ ಅವರ ಭವಿಷ್ಯ ನಿರ್ಧಾರ ಮಾಡುತ್ತದೆ. ನಾವು ಏನು ಕರ್ಮ ಮಾಡಿದ್ದೇವೆ ಅನುಭವಿಸುತ್ತೇವೆ ಅಷ್ಟೇ. ಡಿಕೆಶಿಗೆ ಶತ್ರು ಅವರೇ, ಅವರನ್ನು ಅವರೇ ನಾಶ ಮಾಡಿಕೊಳ್ಳಲಿ. ನಮ್ಮ ನಡುವಳಿಕೆ ನಮ್ಮ ಶತ್ರು. ಆತ್ಮಶಕ್ತಿಯನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಡಿಕೆ ಸಹೋದರರದ್ದು ಭ್ರಷ್ಟಾಚಾರದ ಸಂಸ್ಕೃತಿ. ಕಾಂಗ್ರೆಸ್ ಬೆಳೆಸಿರುವ ಸಂಸ್ಕೃತಿ ಭ್ರಷ್ಟಾಚಾರ. ಅದನ್ನ ಕಿತ್ತುಎಸೆಯಲು ಬಿಜೆಪಿ ಬದ್ದವಾಗಿದೆ. 75 ವರ್ಷವಾಗಿದ್ದರು ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 75  ಆದರೂ ಇನ್ನು ನಿವೃತ್ತಿ ಪಡೆದಿಲ್ಲ. ಮೊದಲು ಅವರಿಗೆ ನಿವೃತ್ತಿ ಕೊಡಲಿ. ಇಂತಹ ಭ್ರಷ್ಟಾಚಾರಿಗಳು ತೊಲಗಲಿ. ರೇಟ್ ಫಿಕ್ಸ್ ಮಾಡುವುದು ಡಿಕೆಶಿ, ಸಿದ್ದರಾಮಯ್ಯ, ಕಾಂಗ್ರೆಸ್ ಸಂಸ್ಕೃತಿ ಎಂದು ಸಚಿವ ಅಶ್ವಥ್‌ ನಾರಾಯಣ್‌ ಹೇಳಿದ್ದಾರೆ.

12:09 PM

ಬಿಜೆಪಿ ಇರುವುದರಿಂದಲೇ ಕೋಮುವಾದಿ ಶಕ್ತಿ ಹಿಡಿತದಲ್ಲಿದೆ; ಆರ್‌ ಅಶೋಕ್‌

ವಿಪಕ್ಷಗಳು ಅವರ ಕಾಲದಲ್ಲಿ ಏನಾಯ್ತು ಅಂತ ಮುಚ್ಚಿಟ್ಟು ಈಗ ಏನಾಯ್ತು ಅಂತ ಕಾಮೆಂಟ್ ಮಾಡೋಕು ಮುನ್ನ ಯೋಚನೆ ಮಾಡಬೇಕು ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಶಿವಾಜಿನಗರ ದಲ್ಲಿ ಹಾಡುಹಗಲೇ ಕೊಲೆ ಆಯ್ತು ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ಏನು ಮಾಡ್ತಾ ಇದ್ರು ಸಿದ್ಧರಾಮಯ್ಯ. ಫಾಪುಲರ್ ಫ್ರಂಟ್ ಆಫ್ ಇಂಡಿಯಾ ಸೇರಿ ಹಲವು ಸಂಘಟನೆ ಮೇಲೆ ನಾವು ಕೇಸ್ ಹಾಕಿದ್ರೆ, ಇವರೆಲ್ಲಾ ಕೇಸ್ ವಾಪಸ್ ತೆಗೆದುಕೊಂಡ್ರು. ಇವರಿಗೆ ಬಿರಿಯಾನಿ ತಿನ್ನೋಕೆ ಬಿಟ್ಟು ಕೇಸ್ ವಾಪಸ್ ತೆಗೆದುಕೊಂಡ್ರು. ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತನಾಡೋದಿಕ್ಕೆ. ನಾವು ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದೇವೆ. ನಿಮ್ಮ ಕಾಲದಲ್ಲಿ ತಿಂಗಳು ಆದ್ರೂ ಆರೋಪಗಳನ್ನು ಹಿಡಿಯುತ್ತಿರಲಿಲ್ಲ. ಕಠಿಣ ಶಿಕ್ಷೆ ಏನಿದೆ ಅದನ್ನು ಮಾಡ್ತಾ ಇದ್ದೀವಿ. ಗೂಂಡಾಗಳನ್ನು ಮಟ್ಟ ಹಾಕುಲು ಏನು ಬೇಕೋ ಅದನ್ನು ಮಾಡ್ತಾ ಇದ್ದೀವಿ. ಈ ಕುರಿತು ಹಿಂದೆ ಮುಂದೆ ಏನೂ ನೋಡಲ್ಲ. ಯಾವುದೇ ಕನಿಕರ,ವಯಾವುದೇ ಕರ್ಟಸಿ ಯಾರ ಮೇಲೂ ತೋರಿಸಲ್ಲ. ಕೊಲೆ ಹಿಂದು ಆಗಿರಬಹುದು ಮುಸ್ಲಿಂ ಆಗಿರಬಹುದು. ಸರ್ಕಾರ ನಡೆಸುವವರು ಕಠಿಣ ಕ್ರಮ ತೆಗೆದುಕೊಳ್ತಾರೆ. ಖರ್ಗೆಯವರು ಇದ್ದಾಗ ದಲಿತರನ್ನು ಸುಟ್ಟು ಹಾಕಿದ್ರು. ಆಗ ಯಾಕೆ ಮಾತಾಡಲಿಲ್ಲ ಅವರು. ನಿಮ್ಮ ಕಾಲದಲ್ಲಿ ಕಠಿಣ ಕ್ರಮದ ಕೆಲಸ ಆಗಿರಲಿಲ್ಲ. ಬಿಜೆಪಿ ಕೆಲವು ಸಂಘಟನೆಗಳಿಗೆ ಫಂಡ್ ಮಾಡುತ್ತೆ ಅನ್ನೋದನ್ನು ಅಲ್ಲಗಳೆಯುತ್ತೇನೆ. ನಮ್ಮ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಸರಿ ಮಾಡಿದ್ದೇವೆ. ಕೋಮು ಗಲಭೆಗೆ ಎಂದೂ ನಾವು ಅವಕಾಶ ಕೊಡಲ್ಲ. ಬಟ್ಕಳ, ಕರಾವಳಿ ಪ್ರದೇಶದಲ್ಲಿ ಹಿಂದೆಯಿಂದೆಯೂ ಈ ರೀತಿ ನಡೀತಾ ಇದೆ. ನಮ್ಮ ಸರ್ಕಾರ ಬಂದ ಮೇಲೆ ಒಂದಿಷ್ಟು ಕಂಟ್ರೋಲ್ ಆಗಿದೆ. ಉದ್ವೇಗದಲ್ಲಿ ಯಾರು ಬೇಕಾದ್ರೂ ಎನ್ ಕೌಂಟರ್ ವಿಚಾರ ಹೇಳಬಹುದು. ಸಿಎಂ, ಹೋಂ ಇದ್ದಾಗಲೇ ಹೀಗೆ ಆಗಿರೋದು ನೋವಿನ ಸಂಗತಿ. ಅನೇಕರು ಅನೇಕ ವಿಚಾರ ಹೇಳ್ತಾ ಇದ್ದಾರೆ. ಎಲ್ಲವೂ ಪೊಲೀಸ್ ತನಿಖೆಯಿಂದಲೇ ಹೊರ ಬರಬೇಕು. ನಾನು ಕೂಡ ನಿರಂತರ ಸಂಪರ್ಕದಲ್ಲಿ ಇದ್ದೇನೆ. ನಾವು ಕಠಿಣ ಕ್ರಮ ತೆಗದುಕೊಳ್ತೀನಿ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ತರ ಅಲ್ಲ. ನೋವಾದಾಗ ನೇರವಾಗಿ ಹೇಳೋದು ನಮ್ಮ ಕಾರ್ಯಕರ್ತರು. ಬಿಜೆಪಿ ಇರೋದಿಕ್ಕಾಗಿ ಕೋಮುವಾದಿ ಶಕ್ತಿ ಕಂಟ್ರೋಲ್ ಆಗಿದೆ. ಇನ್ನಷ್ಟು ಕಂಟ್ರೋಲ್ ಆಗಬೇಕು ಆಗುತ್ತದೆ ಎಂದು ಆರ್‌ ಅಶೋಕ್‌ ಹೇಳಿದ್ದಾರೆ.

11:34 AM

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ಗೆ ಮಂಗಳೂರು ಪ್ರವೇಶ ನಿಷೇಧ

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ನಿಷೇಧ ಹೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳು ಮತ್ತು ಹಾಗೂ ಪ್ರಮೋದ್ ಮುತಾಲಿಕ್ ಹಿಂದಿನ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿರುವುದನ್ನು ಪರಿಗಣಿಸಿ ನಿಷೇಧ. ಮುತಾಲಿಕ್ ಜಿಲ್ಲೆ ಪ್ರವೇಶ ನಿಷೇಧಿಸಬೇಕು ಎಂದು ಜಿಲ್ಲೆಯ ಪೊಲೀಸ್ ಅಧೀಕ್ಷಕರು ಮನವಿ. ಮನವಿ ಪುರಸ್ಕರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಈ ಆದೇಶ ಮಾಡಿದ್ದಾರೆ.

10:40 AM

ಸೂರತ್ಕಲ್‌ ಕೊಲೆಗೆ ಪ್ರತಿಕ್ರಿಯೆ ಬೇಡ, ರಾಜಕೀಯೇತರ ಧಾರ್ಮಿಕ ಮುಖಂಡರು ಪರಿಹಾರ ಹುಡುಕಬೇಕು; ಮುತಾಲಿಕ್‌

ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ ಹತ್ಯೆ ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಮನೆಗೆ ಬಂದು ೨೫ ಲಕ್ಚ ಕೊಟ್ಟಿರುವುದು ಒಪ್ಪಲಾರದು. ಮೊದಲೇ ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ ಕೊಲೆಯಾಗುತ್ತಿರಲಿಲ್ಲ. ಸ್ವಂತ ಹಣದಲ್ಲಿ ದುಡಿದು ಮನೆಯವರನ್ನ ನೋಡಿಕೊಳ್ಳುತ್ತಿರುವ ಪ್ರವೀಣ್ ಬಿಜೆಪಿಯ ಶ್ರದ್ಧಾವಂತ ಕಾರ್ಯಕರ್ತ. ಬಿಜೆಪಿಯ ಶ್ರದ್ದಾವಂತ ಕಾರ್ಯಕರ್ತ ಪ್ರವೀಣನಿಗೆ ಸ್ವಂತ ಮನೆಯಿಲ್ಲ. ಪ್ರವೀಣನ ಕಷ್ಟ ಸುಖಕ್ಕೆ ಮುಖ್ಯಮಂತ್ರಿಗಳು ಮೊದಲೇ ಸ್ಪಂದಿಸುತ್ತಿದ್ದರೆ ಆತನಿಗೆ ಆಶ್ರಯ ಸಿಗುತ್ತಿತ್ತು. ಮನೆ ಮೇಲೆ ಮನೆ ಕಟ್ಟಿ ಮೂರು ಪೀಳಿಗೆಯಷ್ಡು ಆಸ್ತಿ ಮಾಡಿರುವ ಬಿಜೆಪಿ ನಾಯಕರಿಗೆ ಧಿಕ್ಕಾರ. ಆ ಆಕ್ರೋಶ ಪ್ರವೀಣ್ ಶವಯಾತ್ರೆಯಲ್ಲಿ ಹೊರಬಿದ್ದಿದೆ. ರಾಜಿನಾಮೆ ನೀಡಿರುವ ಯುವಮೋರ್ಚಾ ಸದಸ್ಯರಿಗೆ ಅಭಿನಂದನೆ. ರಾಜೀನಾಮೆ ನೀಡಿರುವ ನೀವೆಲ್ಲ ನಿಜವಾದ ಹಿಂದುವಾದಿಗಳು. ಇಂತಹ ಘಟನೆ ಇನ್ನುಮುಂದೆ ನಡೆಯದಿರಲಿ. ಸುರತ್ಕಲ್ ನಲ್ಲಿ‌ ನಡೆದಿರುವ ಕೊಲೆ ಕ್ರಿಯೆಗೆ ಪ್ರತಿಕ್ರಿಯೆ ಆಗದಿರಲಿ. ರಾಜಕೀಯೇತರ ಹಿಂದೂ ಹಾಗೂ ಮುಸ್ಲೀಂ ಧಾರ್ಮಿಕ ಮುಖಂಡರು ಇದನ್ನ ಪರಿಹಾರ ಮಾಡಬೇಕು. ಉಡುಪಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ‌‌ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ.

10:37 AM

ಬಿಜೆಪಿ ಅದೇನ್‌ ಮಹಾ ಕಡಿದು ಕಟ್ಟೆ ಹಾಕಿದೆ?: ಶರಣಪ್ರಕಾಶ ಪಾಟೀಲ್‌

ರಾಜ್ಯದಲ್ಲಿ ಜನೋತ್ಸವ ಮಾಡಲು ಬಿಜೆಪಿ ಸರ್ಕಾರ ಅದೇನ್‌ ಕಡೆದು ಗುಡ್ಡೆ ಹಾಕಿದೆ? ಸರ್ಕಾರ ತನ್ನ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರದ 3 ವರ್ಷ, ಬೊಮ್ಮಾಯಿ ಆಡಳಿತದ 1 ವರ್ಷ ಶೂನ್ಯ ಸಾಧನೆ. ಅದಕ್ಕೇ ಮಧ್ಯರಾತ್ರಿ ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದು ಜನೋತ್ಸವ ರದ್ದು ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಮಂತ್ರಿ ಡಾ. ಶರಣಪ್ರಕಾಶ ಪಾಟೀಲ್‌ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಪಿ ಸರ್ಕಾರದ ಅವಧಿಯಲ್ಲಿ ಜನರ ಸಂಕಟಗಲು ಹೆಚ್ಚಿವೆಯೇ ಹೊರತು ಕಮ್ಮಿಯಾಗಿಲ್ಲ. ಲಕ್ಷಾಂತರ ರುಪಾಯಿಗೆ ಪಿಎಸ್‌ಐ ಸೇರಿದಂತೆ ಹಲವು ಹುದ್ದೆಗಳು ಮಾರಾಟಕ್ಕಿವೆ. ವಿಧಾನಸೌಧದ 3ನೇ ಮಹಡಿಯಲ್ಲಿದ್ದು ಪಿಎಸ್‌ಐ ಹಗರಣ ಮಾಡುತ್ತಿದ್ದಾರೆ. ಇಂತಹವರಿಗೆ ಮಾನ ಮರ್ಯಾದೆ ಇದೆಯೆ? ಎಂದು ಪ್ರಶ್ನಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:21 AM

ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ನೇತೃತ್ವದಲ್ಲಿ ಗಣಹೋಮ

ಇಂದು ಕಾಂಗ್ರೆಸ್ ಭವನದಲ್ಲಿ ಹೋಮ-ಹವನ. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ನೇತೃತ್ವದಲ್ಲಿ ಗಣಹೋಮ. ಸ್ಮೃತಿ ಇರಾನಿಯವರು ಸಂಸತ್ತಿನಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರೊಂದಿಗೆ  ನಡೆದುಕೊಂಡ ರೀತಿ ನಿಜಕ್ಕೂ ಆಘಾತಕಾರಿಯಾಗಿದ್ದು.  ಅವರ ಅಸಂಸದೀಯ ನಡವಳಿಕೆಯ ಬಗ್ಗೆ ಪ್ರತಿಭಟನೆಯ ಬದಲಾಗಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ದೇವರು ಅವರಿಗೆ ಸೌಜನ್ಯ, ಶಾಂತಿ ಮತ್ತು  ಸಾಮಾನ್ಯ ಜ್ಞಾನ ಕರುಣಿಸಲೆಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೋಮ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿ.

10:20 AM

ಭಟ್ಕಳದ ಮಾರಿಜಾತ್ರೆ ಸಂಪನ್ನ

ಇಲ್ಲಿನ ಸುಪ್ರಸಿದ್ಧ ಮಾರಿಜಾತ್ರೆಯು ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರ ಬೃಹತ್‌ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿ ಜಾತ್ರೆಯನ್ನು ಮಾರಿ ಉತ್ಸವ ಮೂರ್ತಿಯನ್ನು ಬುಧವಾರ ಬೆಳಗ್ಗಿನಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭಿಸಲಾಗಿತ್ತು. ನಂತರ ಎರಡು ದಿನಗಳ ಕಾಲ ಊರ-ಪರವೂರ ಭಕ್ತರು ಮಾರಿಗುಡಿಗೆ ಬಂದು ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟಾ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:19 AM

ಕಲಬುರಗಿ: ಕೋಳಿ ಎಸೆದು ಮರಗಮ್ಮ ದೇವಿಗೆ ಹರಕೆ ತೀರಿಸಿದ ಭಕ್ತರು, ಜಾತ್ರೆಗೆ ಹರಿದುಬಂದ ಜನಸಾಗರ

ಸಾವಿರಾರು ಜನಸಾಗರ ಮದ್ಯೆ ಪಟ್ಟಣದ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಎಲ್ಲ ಜಾತಿ ಜನಾಂಗದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಮುಟ್ಟಿಸುವುದು ಇಲ್ಲಿನ ವಿಶಿಷ್ಟ. ಸಂಜೆ 6ಕ್ಕೆ ಮರಗಮ್ಮ ದೇವಿಯ ಗೊಂಬೆಗಳ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ತಮ್ಮ ಮನದಾಳದ ಬೇಡಿಕೆಗಳನ್ನು ಇಡೇರಿಕೆಗಾಗಿ ಇಲ್ಲಿಯ ಭಕ್ತರು ಕೋಳಿ ಕೊಡುವ ಹರಕೆ ಮಾಡಿಕೊಳ್ಳುತ್ತಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:27 AM

ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ

ಹಿಂದೂ ಕಾರ್ಯಕರ್ತ ಒಬ್ಬ ಸತ್ತರೇ ಸಾವಿರಾರು ಹಿಂದೂಗಳು ಮರು ಜನ್ಮಪಡೆದುಕೊಳ್ಳುತ್ತಾರೆ. ಹಿಂದೂಗಳ ಸಮಾಧಿಯ ಮೇಲೆ ಕೀಳು ರಾಜಕೀಯ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ತಮಗೆ ಎಚ್ಚರಿಕೆಯ ಘಂಟೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ಗುಡುಗಿದೆ.
 
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:26 AM

ಸುರತ್ಕಲ್ ಫಾಝಿಲ್ ಹತ್ಯೆ: ಮಂಗಳಪೇಟೆಯಲ್ಲಿ ಬಿಗಿ ಭದ್ರತೆ

ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ಪ್ರಕರಣ. ಮಂಗಳ ಪೇಟೆಯಲ್ಲಿರುವ ಫಾಝಿಲ್ ನಿವಾಸದಲ್ಲಿ ಅಂತಿಮ ದರ್ಶನ ಮುಕ್ತಾಯವಾಗಿದ್ದು,, ಮನೆಯಲ್ಲಿ ಮಹಿಳೆಯರು ಮತ್ತು ಕುಟುಂಬಸ್ಥರಿಂದ ಮೃತದೇಹದ ದರ್ಶನ ಪಡೆಯಲಾಗಿದೆ. ಮನೆಯಿಂದ ಮಂಗಳ ಪೇಟೆ ಮಸೀದಿಗೆ ಆಗಮಿಸಿದ ಮೃತದೇಹದ ಅಂತಿಮ ಯಾತ್ರೆ. ಮಸೀದಿಯಲ್ಲಿ ನಡೆಯುತ್ತಿವೆ ಅಂತಿಮ ಕ್ರಿಯೆಗಳು. ಮಂಗಲ ಪೇಟೆ ಮಸೀದಿಯಲ್ಲಿ ಬಿಗಿ ಭದ್ರತೆ. ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ಭದ್ರತೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ. ಮಂಗಲ ಪೇಟೆ ಮಸೀದಿಯಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆ. ಪ್ರಾರ್ಥನೆ ನೆರವೇರಿಸಿ ಮೃತದೇಹ ಮಸೀದಿಗೆ.

6:02 PM IST:

ಚಾಮರಾಜನಗರ ಜಿಲ್ಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥರಾಗಿದ್ದಾರೆ. ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಸುಮಾರು 100 ರಿಂದ 120 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕರೆತಂದ ಶಿಕ್ಷಕರು ಹಾಗೂ ಪೋಷಕರು. ಊಟ ಮಾಡಿದ ಬಳಿಕ ಚೆನ್ನಾಗಿಯೇ ಇದ್ದ ಮಕ್ಕಳಲ್ಲಿ ಸಂಜೆ 4ರ ವೇಳೆಗೆ ಅನಾರೋಗ್ಯ ಕಾಣಿಸಿಕೊಂಡಿದೆ. ವಾಂತಿ ಭೇದಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು. ಕೆಲ ತಿಂಗಳ ಹಿಂದೆ ಇದೇ ಶಾಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಒಮ್ಮೆ ಆದ ಅಚಾತುರ್ಯವನ್ನು ತಿದ್ದಿಕೊಂಡಿಲ್ಲ. ಇದರಿಂದ ಮಕ್ಕಳ ಜೀವಕ್ಕೇ ಕುತ್ತಾಗುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ.

3:45 PM IST:

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕೈಲಾಗದೇ ಇದ್ದವರ ಕೊನೆ ಅಸ್ತ್ರ ಏನಂದ್ರೆ ಅಪಪ್ರಚಾರ ಮಾಡೋದು ಎಂದಿದ್ದಾರೆ. 2013 ರಿಂದ 2018 ತನಕ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಜೆಪಿ ಅವರು 23 ಹಿಂದೂ ಯುವಕರ ಹತ್ಯೆ ಆಯ್ತು ಅಂತ ಹೇಳಿಕೊಂಡು ತಿರುಗಾಡ್ತಿದ್ದರು. ಎಲ್ಲಾದ್ರೂ ಹೆಣ ಬಿದ್ದರೆ ರಣ ಹದ್ದುಗಳ ತರ ಹೋಗ್ತಿದ್ದರು. 23 ಕೊಲೆಗಳಲ್ಲಿ ನಾಲ್ಕೈದು ಮಾತ್ರ ಕೋಮುದ್ವೇಷಕ್ಕೆ ಆಗಿತ್ತು. ಇನ್ನುಳಿದ ಕೊಲೆಗಳು ಬೇರೆ ಬೇರೆ ಕಾರಣಕ್ಕೆ ನಡದಿದೆ. ಸುಮಾರು 20 ಕ್ಕೂ ಹೆಚ್ಚು ಕೊಲೆಗಳು PFI, SDPI ಅವರದ್ದು ಆಗಿತ್ತು. ಎರಡೂ ಕಡೆಗಳಲ್ಲೂ ಹತ್ಯೆಗಳು ನಡೆದಿವೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿರುವ ಕೊಲೆಗಳೇ. ನಾನು ಗೃಹ ಮಂತ್ರಿ ಆಗಿದ್ದಾಗ ರಿವ್ಯೂ ಮೀಟಿಂಗ್ ಮಾಡಿದ್ದಾಗ. ಕೊಲೆ ಮಾಡಿದವರ ಹೆಸರುಗಳು ಮಾತ್ರ ಎಫ್ ಐರ್, ಚಾರ್ಜ್ ಶೀಟ್ ಇರ್ತಿತ್ತು. ಕಳೆದ ನಾಲ್ಕು ವರ್ಷದಿಂದ ಇವರದ್ದೇ ಸರ್ಕಾರ ಇದೆ ಏನ್ಮಾಡ್ತಿದಿರಾ..? ಪ್ರವೀಣ್ ಹತ್ಯೆ NIA ಗೆ ವಹಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, NIA ತನಿಖೆ ಆದ್ರೂ ಮಾಡಲಿ ಬೇರೆ ಯಾವುದಾದರೂ ತನಿಖೆ ಮಾಡಿಸಲಿ. ರುದ್ರೇಶ್ ಹತ್ಯೆ, ಪರೇಶ್ ಮೇಸ್ತಾ ಕೇಸ್ NIA ಗೆ ವಹಿಸಿದ್ರು. NIA ತನಿಖೆ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ.

3:16 PM IST:

ಹಾಸನದಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ. ಆ ಕುಟುಂಬದ ಹೆಣ್ಣುಮಗಳಿಗೆ ಉದ್ಯೋಗ ಕೊಡಬೇಕು. ನಿನ್ನೆಯೇ ಸಿಎಂ ಅವರು ಉದ್ಯೋಗ ನೀಡುವ ಬಗ್ಗೆ ಅನೌನ್ಸ್ ಮಾಡಬೇಕಿತ್ತು. ದುಡ್ಡು ಇಂಪಾರ್ಡೆಂಟ್ ಅಲ್ಲ. ಆ ಮನುಷ್ಯ ಯಾರೇ ಇರಲಿ. ಬಿಜೆಪಿ ಕಾರ್ಯಕರ್ತ ಇರಲಿ, ಬೇರೆ ಯಾರೇ ಇರಲಿ. ಆ ಹೆಣ್ಣು ಮಗಳ ಕಣ್ಣೀರು ಹಾಕುತ್ತಿರುವುದನ್ನು ಮಾಧ್ಯಮದಲ್ಲಿ ನೋಡಿದೆ. ಬಹಳ ನೋವಾಯಿತು, ದುಡ್ಡು ಕೊಟ್ರೆ ಗಂಡ ಸಿಕ್ತಾನಾ, 25 ಲಕ್ಷ ಅಲ್ಲ, 50 ಲಕ್ಷ ಕೊಟ್ಟರು ಗಂಡ ಸಿಗಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಕಾಣಿಸ್ತಿದೆ. ಈ ವಿಚಾರವನ್ನು  ನಾನು ರಾಜಕೀಯಕ್ಕೆ ಬಳಸಲ್ಲ. ಬಿಜೆಪಿ ಇರಲಿ, ಯಾವುದೇ ಪಾರ್ಟಿ ಇರಲಿ. ಗಂಡನ ಕಳೆದುಕೊಂಡಿರುವ ಆ ಹುಡುಗಿಗೆ ನಾವೆಲ್ಲಾ ಧೈರ್ಯ ತುಂಬಬೇಕಿದೆ. ಆ ಕುಟುಂಬಕ್ಕೆ ಸರ್ಕಾರ ನೌಕರಿ  ಕೊಡಲಿ, ಸರ್ಕಾರ ಘೋಷಿಸಿರುವ 25 ಲಕ್ಷ ಬದಲು, ಒಂದು ಕೋಟಿ ಹಣ ಕೊಡಲಿ. ಒಳ್ಳೆಯ  ಮನೆಯನ್ನು ಕಟ್ಟಿಕೊಡಲಿ. ಸರ್ಕಾರಕ್ಕೆ ಹೆಚ್ ಡಿ ರೇವಣ್ಣ ಒತ್ತಾಯ.

2:35 PM IST:

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಜತೆಗೆ ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ, ಹೆಚ್ಚು ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. 

1:23 PM IST:

ಮಂಗಳೂರಿನಲ್ಲಿ ನಡೆದಿರುವ ಎರಡು ಕೊಲೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಸರಿಪಡಿಸಿಕೊಂಡರೇ ಉಳಿಯುತ್ತಾರೆ ಇಲ್ಲದಿದ್ದರೆ ಸರ್ವನಾಶವಾಗುತ್ತಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳನ್ನ ಕಿತ್ತು ಹೊರಹಾಕಿದರೇ ಇದನ್ನ ನಿಲ್ಲಿಸಬಹದು. ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ಕೋಮುಗಲಭೆಯಾಗಿಲ್ಲ. ಇವತ್ತು ಯಾಕೆ ಆಗುತ್ತಿದೆ, ಸಿದ್ದರಾಮಯ್ಯ ಇದ್ದಾಗ ಯಾಕೆ ಆಯ್ತು. ಯಾವ ಕಾರಣಕ್ಕೆ ಇವತ್ತು ಇದು ನಡೆಯುತ್ತಿದೆ. ಹುಬ್ಬಳಿಯಲ್ಲಿ ಇದ್ಗಾ ಮೈದಾನದ ಗಲಾಟೆಯಿಂದ ಪ್ರತಿವರ್ಷ ಎರಡ್ಮೂರು ಕೊಲೆಯಾಗುತ್ತಿದ್ದವು. ನಾವಿದ್ದ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇವತ್ತು 30 ವರ್ಷ ಆದರೂ ಒಂದು ಕೊಲೆಯಾಗಿಲ್ಲ. ಇವತ್ತು ಬೆಂಗಳೂರಲ್ಲೂ ಪುಡಿ ರೌಡಿಗಳು ಹುಟ್ಟಿಕೊಂಡಿವೆ. ಇವತ್ತು ಪೊಲೀಸ್ ಇಲಾಖೆಯಲ್ಲಿ ಯಾವುದೇ ರೀತಿ ಕಂಟ್ರೋಲ್ ಇಲ್ಲ. ಗೃಹ ಸಚಿವರು ಪೊಲೀಸರಿಗೆ ನಾಯಿಗಳು ಎಂದಿದ್ದರು, ಇವರು ಯಾವ ರೀತಿ ಸರ್ಕಾರ ನಡೆಸುತ್ತಾರೆ. ನಮಗೆ ಬೇಕಾಗಿರೋದು ಶಾಂತಿ, ಸರ್ವಜನಾಂಗದ ಶಾಂತಿಯ ತೋಟ ಕರುನಾಡಲ್ಲಿ. ಎರಡು ಸಮಾಜದ ಸಂಘಟನೆಗಳು ತಮ್ಮ ತೇವಲು ತೀರಿಸಿಕೊಳ್ಳಲು ಅಮಾಯಕರನ್ನ ಬಲಿ ಕೊಡಬೇಡಿ ಎಂದು ಕುಮಾರಸ್ವಾಮಿ ಬೀದರ್‌ನಲ್ಲಿ ಹೇಳಿದ್ದಾರೆ.

12:59 PM IST:

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್ ಹಿನ್ನೆಲೆ. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳ ವರ್ಗಾವಣೆ. ದ.ಕ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳ ವರ್ಗಾವಣೆ. ವರ್ಗಾವಣೆ ಆದೇಶ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ. ಬೆಳ್ಳಾರೆಗೆ ನೂತನ ಪಿಎಸೈ ಆಗಿ ಸುಹಾಸ್ ಹಾಗೂ ಸುಬ್ರಹ್ಮಣ್ಯಕ್ಕೆ ಮಂಜುನಾಥ್ ನೇಮಕ. ಕುಂದಾಪುರ ಎಸೈ ಆಗಿದ್ದ ಸುಹಾಸ್ ಬೆಳ್ಳಾರೆ ಠಾಣೆಗೆ. ವಿಟ್ಲ ಠಾಣಾ ಎಸೈ ಆಗಿದ್ದ ಮಂಜುನಾಥ ಟಿ. ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೇಮಕ. ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಲು ಸೂಚನೆ. ಪ್ರವೀಣ್ ಮೃತದೇಹದ ಮೆರವಣಿಗೆ ವೇಳೆ ನಡೆದಿದ್ದ ಲಾಠಿ ಚಾರ್ಜ್. ಕಾಸರಗೋಡಿನ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ರಮೇಶ್ ಮೇಲೂ ಲಾಠಿ ಬೀಸಿದ್ದ ಪೊಲೀಸರು. ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ನಿನ್ನೆ ಸಿಎಂ ಬೊಮ್ಮಾಯಿಗೂ ಧಿಕ್ಕಾರ ಕೂಗಿದ್ದ ಕಾರ್ಯಕರ್ತರು.

12:56 PM IST:

ಪ್ರವೀಣ್ ನೆಟ್ಟಾರು ಮನೆಗೆ ನಾನು ಹೊರಟಿದ್ದೆ. ಹೆಜಮಾಡಿಯಲ್ಲಿ ನನ್ನನ್ನ ಪೊಲೀಸರು ತಡೆದಿದ್ದಾರೆ. ದಕ್ಷಿಣ ಕನ್ನಡ ಡಿಸಿ ಕೊಟ್ಟ ನಿಷೇದಾಜ್ಞೆ ಪತ್ರವನ್ನು ಕೈ ಕೊಟ್ಟಿದ್ದಾರೆ. ನೀವು ಮುತಾಲಿಕನ ಬ್ಯಾನ್ ಮಾಡುತ್ತಿಲ್ಲ ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದು ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದಾರೆ ಒಪ್ಪಬಹುದಿತ್ತು. ಬಿಜೆಪಿಯವರು ಹಿಂದೂ ವಿರೋಧಿ ಗಳಿದ್ದಾರೆ ನೀಚ ನಿರ್ಲಜ್ಜರಿದ್ದಾರೆ. ನೂರಾರು ಜನ ರಾಜೀನಾಮೆ ಕೊಟ್ಟು ನಿಮ್ಮ ಮುಖಕ್ಕೆ ಉಗಿದಿದ್ದಾರೆ. ನಾನು ಯಾವುದೇ ಸಮಾವೇಶ ಸಭೆಗೆ ಹೋಗುತ್ತಿಲ್ಲ ಸಾಂತ್ವನ ಹೇಳಲು ಹೋಗುತ್ತಿದ್ದೇನೆ. ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ. ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ. ಹಿಂದೂ ರಾಷ್ಟ್ರಕ್ಕಾಗಿ ಹಿಂದುತ್ವಕ್ಕಾಗಿ ಎಂದು ಕಾರ್ಯಕರ್ತರು ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಧಿಕ್ಕರಿಸುತ್ತಾರೆ ನೋಡುತ್ತಿರಿ. ಹಿಂದುತ್ವ ವಿಚಾರದಲ್ಲಿ ನಾನು ಒಂದಿಂಚು ಕಾಂಪ್ರಮೈಸ್ ಮಾಡುವನಲ್ಲ. ಬೆಳ್ಳಾರೆಗೆ ಹೋಗಲು ಎಲ್ಲರಿಗೂ ಅವಕಾಶವಿದೆ ನನಗೆ ಯಾಕಿಲ್ಲ. ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

12:48 PM IST:

ಫಾಝಿಲ್ ಕೊಲೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮುಖ್ಯಮಂತ್ರಿ, ಗೃಹ ಸಚಿವರ ವೈಫಲ್ಯ‌. ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ. ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಅಲ್ಲೇ ಇದ್ದಾಗ ಕೊಲೆ ಆಗಿದೆ. ಅಂದರೆ ಇಂಟಲಿಜೆನ್ಸ್ ವೈಫಲ್ಯ ಅಲ್ವ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವ? ಜನ ಮನೆಯಿಂದ ಆಚೆ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ. ಎಸ್‌ಡಿಪಿಐ, ಪಿಎಫ್‌ಐ ಮೇಲೆ ನಿಮಗೆ ಅನುಮಾನ ಇದಿಯಾ? ಹಾಗಿದ್ದರೆ ಬ್ಯಾನ್ ಮಾಡಿ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ. ಮೈಸೂರಿನಲ್ಲಿ ಗಲಭೆ ಆಗಿತ್ತು. 
ಅದರಲ್ಲಿ ವಿದ್ಯಾರ್ಥಿಗಳೂ ಇದ್ದರು.ಕೇಸ್ ವಾಪಸ್ ಪಡೆಯುವಂತೆ ಎಲ್ಲ ಪಕ್ಷದವರೂ ಕೇಳಿದ್ದರು. ಅದಕ್ಕೆ ಕೇಸ್ ವಾಪಸ್ ಪಡೆದುಕೊಂಡಿದ್ದೆ. ಅದೆಲ್ಲ ಆಗಿ ಎಷ್ಟು ವರ್ಷ ಆಯ್ತು. ಅದಕ್ಕೂ ಈಗಿನ ಕೊಲೆಗೂ ಏನು ಸಂಬಂಧ. ನಿಮಗೆ ನಿಜವಾಗಲೂ ಎಸ್‌ಡಿಪಿಐ, ಪಿಎಫ್‌ಐ ಮೇಲೆ ಅನುಮಾನ ಇದಿಯಾ ಬ್ಯಾನ್ ಮಾಡಿ. ಅದನ್ನು ಬಿಟ್ಟು ಹಿಂದಿನ ಸರ್ಕಾರದ ಮೇಲೆ ಹೇಳಿದರೆ ಏನು ಪ್ರಯೋಜನ. ಅಧಿಕಾರ ಇರೋದು ನಿಮ್ಮ ಕೈಯಲ್ಲಿ ಅಲ್ವ? ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ.

12:41 PM IST:

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ರಾಮನಗರದಲ್ಲಿ ಹೇಳಿಕೆ. ಮಂಗಳೂರು ಜಿಲ್ಲೆಯಲ್ಲಿ ಸರಣಿ ಹತ್ಯೆ ವಿಚಾರ. ಜನರ ತಾಳ್ಮೆಯನ್ನ ಕೆಲವು ಪ್ರಚೋದರು ಪರೀಕ್ಷೆ ಮಾಡುತ್ತಿದ್ದಾರೆ. ಸಿಎಂ ಅವರು ಈಗಾಗಲೇ ಸ್ವಷ್ಟ ಸಂದೇಶ ಕೊಟ್ಟಿದ್ದಾರೆ. ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗುತ್ತದೆ. ಎನ್ ಕೌಂಟರ್ ಮಾಡುವುದಕ್ಕು ನಾವು ಸಿದ್ದರಿದ್ದವೇ ಎಂದು ಸಿಎಂ ಅವರು ಈಗಾಗಲೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡುಕ ಹುಟ್ಟಿಸುವ, ಎನ್ ಕೌಂಟರ್ ಅಗುವ ಕಾಲ ಬಂದಿದೆ.. ತೀವ್ರ ಕ್ರಮ ವಹಿಸಲಾಗುತ್ತದೆ. ಪ್ರವೀಣ್ ಹತ್ಯೆ ತರಾ ಬೇರೆ ಎಲ್ಲೂ ಆಗಬಾರದು. ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ, ವಿಚಾರ. ನೊಂದವರಿಗೆ ತುಂಬ ನೋವಾಗಿದೆ. ಆಕ್ರೋಶಕ್ಕೆ ಒಳಗಾಗಿದ್ದಾರೆ. ನಮ್ಮ ಸರ್ಕಾರ ಸಮರ್ಥವಾಗಿದೆ. ಹತ್ಯೆಗಳು ಆದಾಗ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಪ್ರವೀಣ್ ಹತ್ಯೆ ಕೇಸ್ ನಲ್ಲೂ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂಬ ಅಪೇಕ್ಷೆ ಕಾರ್ಯಕರ್ತರದ್ದು, ಯುಪಿಗಿಂತಲೂ ಐದು ಹೆಜ್ಜೆ ಮುಂದೆ ಹೋಗುತ್ತೇವೆ. ಯುಪಿ ಗಿಂತ ಒಳ್ಳೇ ಮಾಡಲ್ ಕೊಡುತ್ತೇವೆ. ಕರ್ನಾಟಕ ಇತರರಿಗೆ ಮಾದರಿಯಾಗಿರುತ್ತದೆ. ಜನರು ಭಾವನೆ ವ್ಯಕ್ತಪಡಿಸಲೇಬೇಕು. ತಾಳ್ಮೆಗೂ ಇತಿಮಿತಿ ಇದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದೇವೆ. ಮುಂದೆ ಸಹಿಸಿಕೊಳ್ಳುವುದಿಲ್ಲ. ಮುಂದೆ ನಮ್ಮ ಆಕ್ಷನ್ ಏನು ಎಂದು ತೋರಿಸುತ್ತೇವೆ. ನಡುಕ ಹುಟ್ಟಿಹಾಕಲು ನಾವು ತಯಾರು ಇದ್ದೇವೆ. ಆ್ಯಕ್ಷನ್ ಕೊಡಲು ಕಷ್ಟ ಇಲ್ಲ. ನಮ್ಮ ಆ್ಯಕ್ಷನ್ ಯಾವ ರೀತಿ ಇರುತ್ತೆ ನೋಡಿ. ಪಿಎಫ್ ಐ, ಎಸ್ ಡಿಪಿಐ ಬ್ಯಾನ್ ಮಾಡುವ ಕಾಂಗ್ರೆಸ್ ನಾಯಕರ ಒತ್ತಾಯ ವಿಚಾರ. ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ನೈತಿಕತೆ ಇಲ್ಲದ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ಪಿಎಫ್ ಐ ವಿರುದ್ಧ ಇದ್ದ ಕೇಸ್ ಅನ್ನ ವಿತ್ ಡ್ರಾ ಮಾಡಿದ್ರು. ಅವರಿಗೆ ಯಾವ ನೈತಿಕತೆ ಇದೆ ಮಾತನಾಡಲು ಅವರಿಗೂ ಬೇರೆ ಬೇರೆ ಸಮಾಜ ದ್ರೋಹಿಗಳಿಗೆ ವ್ಯತ್ಯಾಸವಿಲ್ಲ. ಆ ರೀತಿ ಕೆಟಗರಿಗೆ ಸೇರಿದವರು. ಸಮಾಜಕ್ಕೆ ಈ ಪರಿಸ್ಥಿತಿ ಬರಲು ಕಾಂಗ್ರೆಸ್ ನವರೇ ಕಾರಣಕರ್ತರು. ತುಷ್ಠಿಕರಣದ ರಾಜಕಾರಣ ಮಾಡಿದವರು ಕಾಂಗ್ರೆಸ್ ನವರು. ಅವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ಕರ್ನಾಟಕ ಏನು ಎಂಬುದನ್ನ ತೋರಿಸುತ್ತೇವೆ. ಕರ್ನಾಟಕ ಮಾಡಲ್ ಅನ್ನ ಬೇರೆಯವರಿಗೆ ಕೊಡುತ್ತೇವೆ. ಬೇರೆಯವರ ಮಾಡಲ್ ಅನ್ನ ತೆಗೆದುಕೊಳ್ಳುವವರಲ್ಲ. ನನ್ನ ಖೆಡ್ಡಾಗೆ ಕೆಡವಲು ರೆಡಿಯಾಗಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರ. ಯಾರನ್ನು ಕೆಡವುದು ಅವಶ್ಯಕತೆ ಇಲ್ಲ. ಅವರನ್ನೆ ಅವರು ಕೆಡವಿಕೊಂಡಿದ್ದಾರೆ. ಅವರ ನಡುವಳಿಕೆ ಅವರ ಭವಿಷ್ಯ ನಿರ್ಧಾರ ಮಾಡುತ್ತದೆ. ನಾವು ಏನು ಕರ್ಮ ಮಾಡಿದ್ದೇವೆ ಅನುಭವಿಸುತ್ತೇವೆ ಅಷ್ಟೇ. ಡಿಕೆಶಿಗೆ ಶತ್ರು ಅವರೇ, ಅವರನ್ನು ಅವರೇ ನಾಶ ಮಾಡಿಕೊಳ್ಳಲಿ. ನಮ್ಮ ನಡುವಳಿಕೆ ನಮ್ಮ ಶತ್ರು. ಆತ್ಮಶಕ್ತಿಯನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಡಿಕೆ ಸಹೋದರರದ್ದು ಭ್ರಷ್ಟಾಚಾರದ ಸಂಸ್ಕೃತಿ. ಕಾಂಗ್ರೆಸ್ ಬೆಳೆಸಿರುವ ಸಂಸ್ಕೃತಿ ಭ್ರಷ್ಟಾಚಾರ. ಅದನ್ನ ಕಿತ್ತುಎಸೆಯಲು ಬಿಜೆಪಿ ಬದ್ದವಾಗಿದೆ. 75 ವರ್ಷವಾಗಿದ್ದರು ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 75  ಆದರೂ ಇನ್ನು ನಿವೃತ್ತಿ ಪಡೆದಿಲ್ಲ. ಮೊದಲು ಅವರಿಗೆ ನಿವೃತ್ತಿ ಕೊಡಲಿ. ಇಂತಹ ಭ್ರಷ್ಟಾಚಾರಿಗಳು ತೊಲಗಲಿ. ರೇಟ್ ಫಿಕ್ಸ್ ಮಾಡುವುದು ಡಿಕೆಶಿ, ಸಿದ್ದರಾಮಯ್ಯ, ಕಾಂಗ್ರೆಸ್ ಸಂಸ್ಕೃತಿ ಎಂದು ಸಚಿವ ಅಶ್ವಥ್‌ ನಾರಾಯಣ್‌ ಹೇಳಿದ್ದಾರೆ.

12:09 PM IST:

ವಿಪಕ್ಷಗಳು ಅವರ ಕಾಲದಲ್ಲಿ ಏನಾಯ್ತು ಅಂತ ಮುಚ್ಚಿಟ್ಟು ಈಗ ಏನಾಯ್ತು ಅಂತ ಕಾಮೆಂಟ್ ಮಾಡೋಕು ಮುನ್ನ ಯೋಚನೆ ಮಾಡಬೇಕು ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಶಿವಾಜಿನಗರ ದಲ್ಲಿ ಹಾಡುಹಗಲೇ ಕೊಲೆ ಆಯ್ತು ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ಏನು ಮಾಡ್ತಾ ಇದ್ರು ಸಿದ್ಧರಾಮಯ್ಯ. ಫಾಪುಲರ್ ಫ್ರಂಟ್ ಆಫ್ ಇಂಡಿಯಾ ಸೇರಿ ಹಲವು ಸಂಘಟನೆ ಮೇಲೆ ನಾವು ಕೇಸ್ ಹಾಕಿದ್ರೆ, ಇವರೆಲ್ಲಾ ಕೇಸ್ ವಾಪಸ್ ತೆಗೆದುಕೊಂಡ್ರು. ಇವರಿಗೆ ಬಿರಿಯಾನಿ ತಿನ್ನೋಕೆ ಬಿಟ್ಟು ಕೇಸ್ ವಾಪಸ್ ತೆಗೆದುಕೊಂಡ್ರು. ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತನಾಡೋದಿಕ್ಕೆ. ನಾವು ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದೇವೆ. ನಿಮ್ಮ ಕಾಲದಲ್ಲಿ ತಿಂಗಳು ಆದ್ರೂ ಆರೋಪಗಳನ್ನು ಹಿಡಿಯುತ್ತಿರಲಿಲ್ಲ. ಕಠಿಣ ಶಿಕ್ಷೆ ಏನಿದೆ ಅದನ್ನು ಮಾಡ್ತಾ ಇದ್ದೀವಿ. ಗೂಂಡಾಗಳನ್ನು ಮಟ್ಟ ಹಾಕುಲು ಏನು ಬೇಕೋ ಅದನ್ನು ಮಾಡ್ತಾ ಇದ್ದೀವಿ. ಈ ಕುರಿತು ಹಿಂದೆ ಮುಂದೆ ಏನೂ ನೋಡಲ್ಲ. ಯಾವುದೇ ಕನಿಕರ,ವಯಾವುದೇ ಕರ್ಟಸಿ ಯಾರ ಮೇಲೂ ತೋರಿಸಲ್ಲ. ಕೊಲೆ ಹಿಂದು ಆಗಿರಬಹುದು ಮುಸ್ಲಿಂ ಆಗಿರಬಹುದು. ಸರ್ಕಾರ ನಡೆಸುವವರು ಕಠಿಣ ಕ್ರಮ ತೆಗೆದುಕೊಳ್ತಾರೆ. ಖರ್ಗೆಯವರು ಇದ್ದಾಗ ದಲಿತರನ್ನು ಸುಟ್ಟು ಹಾಕಿದ್ರು. ಆಗ ಯಾಕೆ ಮಾತಾಡಲಿಲ್ಲ ಅವರು. ನಿಮ್ಮ ಕಾಲದಲ್ಲಿ ಕಠಿಣ ಕ್ರಮದ ಕೆಲಸ ಆಗಿರಲಿಲ್ಲ. ಬಿಜೆಪಿ ಕೆಲವು ಸಂಘಟನೆಗಳಿಗೆ ಫಂಡ್ ಮಾಡುತ್ತೆ ಅನ್ನೋದನ್ನು ಅಲ್ಲಗಳೆಯುತ್ತೇನೆ. ನಮ್ಮ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಸರಿ ಮಾಡಿದ್ದೇವೆ. ಕೋಮು ಗಲಭೆಗೆ ಎಂದೂ ನಾವು ಅವಕಾಶ ಕೊಡಲ್ಲ. ಬಟ್ಕಳ, ಕರಾವಳಿ ಪ್ರದೇಶದಲ್ಲಿ ಹಿಂದೆಯಿಂದೆಯೂ ಈ ರೀತಿ ನಡೀತಾ ಇದೆ. ನಮ್ಮ ಸರ್ಕಾರ ಬಂದ ಮೇಲೆ ಒಂದಿಷ್ಟು ಕಂಟ್ರೋಲ್ ಆಗಿದೆ. ಉದ್ವೇಗದಲ್ಲಿ ಯಾರು ಬೇಕಾದ್ರೂ ಎನ್ ಕೌಂಟರ್ ವಿಚಾರ ಹೇಳಬಹುದು. ಸಿಎಂ, ಹೋಂ ಇದ್ದಾಗಲೇ ಹೀಗೆ ಆಗಿರೋದು ನೋವಿನ ಸಂಗತಿ. ಅನೇಕರು ಅನೇಕ ವಿಚಾರ ಹೇಳ್ತಾ ಇದ್ದಾರೆ. ಎಲ್ಲವೂ ಪೊಲೀಸ್ ತನಿಖೆಯಿಂದಲೇ ಹೊರ ಬರಬೇಕು. ನಾನು ಕೂಡ ನಿರಂತರ ಸಂಪರ್ಕದಲ್ಲಿ ಇದ್ದೇನೆ. ನಾವು ಕಠಿಣ ಕ್ರಮ ತೆಗದುಕೊಳ್ತೀನಿ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ತರ ಅಲ್ಲ. ನೋವಾದಾಗ ನೇರವಾಗಿ ಹೇಳೋದು ನಮ್ಮ ಕಾರ್ಯಕರ್ತರು. ಬಿಜೆಪಿ ಇರೋದಿಕ್ಕಾಗಿ ಕೋಮುವಾದಿ ಶಕ್ತಿ ಕಂಟ್ರೋಲ್ ಆಗಿದೆ. ಇನ್ನಷ್ಟು ಕಂಟ್ರೋಲ್ ಆಗಬೇಕು ಆಗುತ್ತದೆ ಎಂದು ಆರ್‌ ಅಶೋಕ್‌ ಹೇಳಿದ್ದಾರೆ.

11:34 AM IST:

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ನಿಷೇಧ ಹೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳು ಮತ್ತು ಹಾಗೂ ಪ್ರಮೋದ್ ಮುತಾಲಿಕ್ ಹಿಂದಿನ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿರುವುದನ್ನು ಪರಿಗಣಿಸಿ ನಿಷೇಧ. ಮುತಾಲಿಕ್ ಜಿಲ್ಲೆ ಪ್ರವೇಶ ನಿಷೇಧಿಸಬೇಕು ಎಂದು ಜಿಲ್ಲೆಯ ಪೊಲೀಸ್ ಅಧೀಕ್ಷಕರು ಮನವಿ. ಮನವಿ ಪುರಸ್ಕರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಈ ಆದೇಶ ಮಾಡಿದ್ದಾರೆ.

10:40 AM IST:

ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ ಹತ್ಯೆ ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಮನೆಗೆ ಬಂದು ೨೫ ಲಕ್ಚ ಕೊಟ್ಟಿರುವುದು ಒಪ್ಪಲಾರದು. ಮೊದಲೇ ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ ಕೊಲೆಯಾಗುತ್ತಿರಲಿಲ್ಲ. ಸ್ವಂತ ಹಣದಲ್ಲಿ ದುಡಿದು ಮನೆಯವರನ್ನ ನೋಡಿಕೊಳ್ಳುತ್ತಿರುವ ಪ್ರವೀಣ್ ಬಿಜೆಪಿಯ ಶ್ರದ್ಧಾವಂತ ಕಾರ್ಯಕರ್ತ. ಬಿಜೆಪಿಯ ಶ್ರದ್ದಾವಂತ ಕಾರ್ಯಕರ್ತ ಪ್ರವೀಣನಿಗೆ ಸ್ವಂತ ಮನೆಯಿಲ್ಲ. ಪ್ರವೀಣನ ಕಷ್ಟ ಸುಖಕ್ಕೆ ಮುಖ್ಯಮಂತ್ರಿಗಳು ಮೊದಲೇ ಸ್ಪಂದಿಸುತ್ತಿದ್ದರೆ ಆತನಿಗೆ ಆಶ್ರಯ ಸಿಗುತ್ತಿತ್ತು. ಮನೆ ಮೇಲೆ ಮನೆ ಕಟ್ಟಿ ಮೂರು ಪೀಳಿಗೆಯಷ್ಡು ಆಸ್ತಿ ಮಾಡಿರುವ ಬಿಜೆಪಿ ನಾಯಕರಿಗೆ ಧಿಕ್ಕಾರ. ಆ ಆಕ್ರೋಶ ಪ್ರವೀಣ್ ಶವಯಾತ್ರೆಯಲ್ಲಿ ಹೊರಬಿದ್ದಿದೆ. ರಾಜಿನಾಮೆ ನೀಡಿರುವ ಯುವಮೋರ್ಚಾ ಸದಸ್ಯರಿಗೆ ಅಭಿನಂದನೆ. ರಾಜೀನಾಮೆ ನೀಡಿರುವ ನೀವೆಲ್ಲ ನಿಜವಾದ ಹಿಂದುವಾದಿಗಳು. ಇಂತಹ ಘಟನೆ ಇನ್ನುಮುಂದೆ ನಡೆಯದಿರಲಿ. ಸುರತ್ಕಲ್ ನಲ್ಲಿ‌ ನಡೆದಿರುವ ಕೊಲೆ ಕ್ರಿಯೆಗೆ ಪ್ರತಿಕ್ರಿಯೆ ಆಗದಿರಲಿ. ರಾಜಕೀಯೇತರ ಹಿಂದೂ ಹಾಗೂ ಮುಸ್ಲೀಂ ಧಾರ್ಮಿಕ ಮುಖಂಡರು ಇದನ್ನ ಪರಿಹಾರ ಮಾಡಬೇಕು. ಉಡುಪಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ‌‌ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ.

10:37 AM IST:

ರಾಜ್ಯದಲ್ಲಿ ಜನೋತ್ಸವ ಮಾಡಲು ಬಿಜೆಪಿ ಸರ್ಕಾರ ಅದೇನ್‌ ಕಡೆದು ಗುಡ್ಡೆ ಹಾಕಿದೆ? ಸರ್ಕಾರ ತನ್ನ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರದ 3 ವರ್ಷ, ಬೊಮ್ಮಾಯಿ ಆಡಳಿತದ 1 ವರ್ಷ ಶೂನ್ಯ ಸಾಧನೆ. ಅದಕ್ಕೇ ಮಧ್ಯರಾತ್ರಿ ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದು ಜನೋತ್ಸವ ರದ್ದು ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಮಂತ್ರಿ ಡಾ. ಶರಣಪ್ರಕಾಶ ಪಾಟೀಲ್‌ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಪಿ ಸರ್ಕಾರದ ಅವಧಿಯಲ್ಲಿ ಜನರ ಸಂಕಟಗಲು ಹೆಚ್ಚಿವೆಯೇ ಹೊರತು ಕಮ್ಮಿಯಾಗಿಲ್ಲ. ಲಕ್ಷಾಂತರ ರುಪಾಯಿಗೆ ಪಿಎಸ್‌ಐ ಸೇರಿದಂತೆ ಹಲವು ಹುದ್ದೆಗಳು ಮಾರಾಟಕ್ಕಿವೆ. ವಿಧಾನಸೌಧದ 3ನೇ ಮಹಡಿಯಲ್ಲಿದ್ದು ಪಿಎಸ್‌ಐ ಹಗರಣ ಮಾಡುತ್ತಿದ್ದಾರೆ. ಇಂತಹವರಿಗೆ ಮಾನ ಮರ್ಯಾದೆ ಇದೆಯೆ? ಎಂದು ಪ್ರಶ್ನಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:21 AM IST:

ಇಂದು ಕಾಂಗ್ರೆಸ್ ಭವನದಲ್ಲಿ ಹೋಮ-ಹವನ. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ನೇತೃತ್ವದಲ್ಲಿ ಗಣಹೋಮ. ಸ್ಮೃತಿ ಇರಾನಿಯವರು ಸಂಸತ್ತಿನಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರೊಂದಿಗೆ  ನಡೆದುಕೊಂಡ ರೀತಿ ನಿಜಕ್ಕೂ ಆಘಾತಕಾರಿಯಾಗಿದ್ದು.  ಅವರ ಅಸಂಸದೀಯ ನಡವಳಿಕೆಯ ಬಗ್ಗೆ ಪ್ರತಿಭಟನೆಯ ಬದಲಾಗಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ದೇವರು ಅವರಿಗೆ ಸೌಜನ್ಯ, ಶಾಂತಿ ಮತ್ತು  ಸಾಮಾನ್ಯ ಜ್ಞಾನ ಕರುಣಿಸಲೆಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೋಮ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿ.

10:20 AM IST:

ಇಲ್ಲಿನ ಸುಪ್ರಸಿದ್ಧ ಮಾರಿಜಾತ್ರೆಯು ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರ ಬೃಹತ್‌ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿ ಜಾತ್ರೆಯನ್ನು ಮಾರಿ ಉತ್ಸವ ಮೂರ್ತಿಯನ್ನು ಬುಧವಾರ ಬೆಳಗ್ಗಿನಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭಿಸಲಾಗಿತ್ತು. ನಂತರ ಎರಡು ದಿನಗಳ ಕಾಲ ಊರ-ಪರವೂರ ಭಕ್ತರು ಮಾರಿಗುಡಿಗೆ ಬಂದು ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟಾ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:19 AM IST:

ಸಾವಿರಾರು ಜನಸಾಗರ ಮದ್ಯೆ ಪಟ್ಟಣದ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಎಲ್ಲ ಜಾತಿ ಜನಾಂಗದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಮುಟ್ಟಿಸುವುದು ಇಲ್ಲಿನ ವಿಶಿಷ್ಟ. ಸಂಜೆ 6ಕ್ಕೆ ಮರಗಮ್ಮ ದೇವಿಯ ಗೊಂಬೆಗಳ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ತಮ್ಮ ಮನದಾಳದ ಬೇಡಿಕೆಗಳನ್ನು ಇಡೇರಿಕೆಗಾಗಿ ಇಲ್ಲಿಯ ಭಕ್ತರು ಕೋಳಿ ಕೊಡುವ ಹರಕೆ ಮಾಡಿಕೊಳ್ಳುತ್ತಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:27 AM IST:

ಹಿಂದೂ ಕಾರ್ಯಕರ್ತ ಒಬ್ಬ ಸತ್ತರೇ ಸಾವಿರಾರು ಹಿಂದೂಗಳು ಮರು ಜನ್ಮಪಡೆದುಕೊಳ್ಳುತ್ತಾರೆ. ಹಿಂದೂಗಳ ಸಮಾಧಿಯ ಮೇಲೆ ಕೀಳು ರಾಜಕೀಯ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ತಮಗೆ ಎಚ್ಚರಿಕೆಯ ಘಂಟೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ಗುಡುಗಿದೆ.
 
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:26 AM IST: