Published : Jul 23, 2022, 10:12 AM ISTUpdated : Jul 23, 2022, 05:33 PM IST

Karnataka News Live Updates: 'ಪಕ್ಷ ಬಯಿಸಿದರೆ ಯಡಿಯೂರಪ್ಪ ಚುನಾವಣೆಯಲ್ಲಿ ನಿಲ್ತಾರೆ'

ಸಾರಾಂಶ

ಯಡಿಯೂರಪ್ಪ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದು ವೈಯಕ್ತಿಕವಾಗಿ ಹೇಳಿದ್ದಾರೆ. ಆದರೆ ಪಕ್ಷ ತೀರ್ಮಾನ ಮಾಡಿ ನಿಲ್ಲಿ ಎಂದರೆ ಎಂದು ಅವರೇ ನಿಲ್ಲಬೇಕಾಗುತ್ತದೆ. ಪಕ್ಷದ ತೀರ್ಮಾನವೇ ಅಂತಿಮ. ಅದಕ್ಕೆ ಬದ್ದರಾಗಿರಬೇಕಾಗುತ್ತದೆ. ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ ಮೇಲೆ ಕರ್ನಾಟಕ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಕುಟಂಬ ರಾಜಕಾರಣದ ಬಗ್ಗೆಯೂ ಮತ್ತೆ ಚರ್ಚೆಯಾಗುತ್ತದೆ. 

Karnataka News Live Updates: 'ಪಕ್ಷ ಬಯಿಸಿದರೆ ಯಡಿಯೂರಪ್ಪ ಚುನಾವಣೆಯಲ್ಲಿ ನಿಲ್ತಾರೆ'

05:33 PM (IST) Jul 23

ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ: ಜಮೀರ್

ಬೆಳಗಾವಿ: mfದ್ದರಾಮಯ್ಯ ಕುರಿತು ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು. ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ. ಅದೇ ರೀತಿ ಎಲ್ಲರನ್ನು ತಿಳಿದುಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಅವರ ತವರು ಕ್ಷೇತ್ರ ಭದ್ರಾವತಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. . ಸಿದ್ಧರಾಮಯ್ಯ ನಿಯಮ ಉಲ್ಲಂಘಿಸಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಟಿಕೆಟ್ ಕೊಡಿಸಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಹೇಳಿ ಸಿದ್ಧರಾಮಯ್ಯ ಟಿಕೆಟ್ ಕೊಡಿಸಿದ್ದರು. ಮೂರನೇ ಸ್ಥಾನಕ್ಕೆ ಕುಸಿದು ಸೋಲು ಕಂಡರು. ಸಿದ್ದರಾಮಯ್ಯಗೆ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಿ ಅಂತ ನಾನೇ ಒತ್ತಡ ಹಾಕುತ್ತಿದ್ದೇನೆ. ಅವರು ಎಂದಿಗೂ ಯಾರನ್ನೂ ಸ್ಪರ್ಧೆ ಮಾಡುವ ಬಗ್ಗೆ ಒತ್ತಡ ಹೇರಿಲ್ಲ. ಸಿದ್ಧರಾಮಯ್ಯ ಸ್ಪರ್ಧೆಗೆ ಎಲ್ಲ ಕಡೆಯಿಂದ ಒತ್ತಡ ಬರುತ್ತಿದೆ. ಹರಿಹರ,ಕೊಲಾರ, ಚಿಕ್ಕಪೇಟೆ ಸೇರಿ ರಾಜ್ಯದ ಎಲ್ಲ ಮೂಲೆಗಳಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮುಸ್ಲಿಂ ರ ಮತಗಳು ಬೇಡಾ ಅಂತಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಮೀರ್, ಹಗಲು ಹೊತ್ತಿನಲ್ಲಿ ಬೇಡ ಅಂತಾರೆ. ರಾತ್ರಿ ಮುಸ್ಲಿಂ ರ ಮತವನ್ನ ಕೇಳ್ತಾರೆ. ಈ ಬಗ್ಗೆ ನೀವೆ ಈಶ್ವರಪ್ಪ ಅವರನ್ನ ಕೇಳಿ ಎಂದ ಜಮೀರ್ ಅಹ್ಮದ್.

04:25 PM (IST) Jul 23

ಪಕ್ಷ ಬಯಸಿದರೆ ಯಡಿಯೂರಪ್ಪ ಚುನಾವಣೆಯಲ್ಲಿ ನಿಲ್ತಾರಾ?

ಪಕ್ಷ ಏನ್ ಹೇಳುತ್ತದೆಯೋ ಅದನ್ನು ನಾವು ಮಾಡಬೇಕಾಗುತ್ತದೆ. ನನಗೆ 30 ವರ್ಷಕ್ಕೆ ಸಾಕಾಗಿದೆ, ಅವರು ಹೇಳುವುದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ಜನನಾಯಕ. ಅವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗ್ತಿವಿ. ಅವರೇನು ಕ್ಯಾಂಪೇನ್‌ಗೆ ಬರೋದಿಲ್ಲ ಎಂದು ಹೇಳಿಲ್ಲ. ಯಡಿಯೂರಪ್ಪ ಅವರಿಗೆ ಬಹಳ ಕಡೆ ನಿಲ್ಲಿ ಎಂದು ಕರೆದಿದ್ದಾರೆ. ಶಿಕಾರಿಪುರದ ಜನರು ಕೂಡ ನೀವೇ ನಿಲ್ಲಿ, ಇಲ್ಲವೇ ವಿಜಯೇಂದ್ರ ಅವರನ್ನು ನಿಲ್ಲಿಸಿ ಎಂದು ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಹೊಡೆದಾಟ ವಿಚಾರವಾಗಿ ಕಾಂಗ್ರೆಸ್‌ನವರು ಸಿಎಂ ಆದ್ರೆ ತಾನೇ ಸಿಎಂ ಆಗೋಗೆ ಹೊಡೆದಾಟ ನಡೆಸೋದು? ಬಾಯಿ ಚಪಲದಿಂದ ಅವರು ಹೊಡೆದಾಟುತ್ತಾರೆ. ಸಿಎಂ ಸ್ಥಾನ ಖಾಲಿಯಾದ್ರೆ ತಾನೇ ಅವರು ಸಿಎಂ ಆಗೋದು‌. ಚುನಾವಣೆ ಗೆಲ್ಲಬೇಕು 112 ಸೀಟ್ ಬರಬೇಕು. ಆಗ ಸಿಎಂ ಬಗ್ಗೆ ಯೋಚನೆ ಮಾಡಲಿ. ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡ್ತಾ ಇದಾರೆ‌. ಅದಕ್ಕೂ ಪಾರ್ಟಿಗೂ ಸಂಬಂಧ ಇಲ್ಲ ಎಂದು ಅವರ ಕಡೆಯವರೇ ಎಂದಿದ್ದಾರೆ‌. ಅಹಿಂದ ಸಮಾವೇಶವಾದ ಸಂದರ್ಭದಲ್ಲಿ ನಮ್ಮ ಪಕ್ಷ ನಾಲ್ಕು ಭಾಗವಾಯಿತು. ಅದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ದಾವಣಗೆರೆ ಬಿಜೆಪಿ ಭದ್ರ ಕೋಟಿಯಾಗಿಯೇ ಇರುತ್ತದೆ, ಎಂದು ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. 

03:49 PM (IST) Jul 23

ನಾಲ್ಕು ವರ್ಷದ ಫೇಸ್‌ಬುಕ್ ಲವ್: ನೋಡಿದ್ರೆ ಅವಳು ಮಂಗಳಮುಖಿ

ಆಕೆ ಆತನ ಜೊತೆ ಬಾಳಿ ಬದುಕುವ ಕನಸು ಕಂಡಿದ್ದಳು. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಕಟ್ಟಿದ್ದ ಮಾತಿನ ಮಂಟಪಕ್ಕೆ ಅಕ್ಷರಶಃ ಮರುಳಾಗಿ ಹೋಗಿದ್ದಳು. ಪರಸ್ಪರ ಭೇಟಿಯೇ ಆಗದೇ ನಿರಂತರ ನಾಲ್ಕು ವರ್ಷ ಪ್ರೇಮದ ಗುಂಗಿನಲ್ಲಿದ್ದ ಅವಳು ತನ್ನ ಪ್ರಿಯಕರನ ನಿಜ ರೂಪ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

03:42 PM (IST) Jul 23

ತುಮಕೂರು: ಕಳೆದು ಹೋಗಿದ್ದ ಗಿಳಿ ಮರಳಿ ಗೂಡಿಗೆ

ನನ್ನ ಮುದ್ದಿನ ಗಿಳಿ ಕಾಣೆಯಾಗಿದೆ ನೀವು ಕಂಡಿರಾ.. ನೀವು ಕಂಡಿರಾ... ಎಂದು ಬೀದಿ ಬೀದಿ ಕೆರೆ-ಕುಂಟೆ, ಗಿಡ- ಗಂಟೆಗಳನ್ನು ಹುಡುಕುತಿದ್ದರು. ಸಾರ್ವಜನಿಕ ಸ್ಥಳಗಳೆಲ್ಲ ಗಿಳಿ ಹುಡುಕಿ ಕೊಡುವಂತೆ ಬ್ಯಾನರ್ ಹಾಕಿದ್ದರು. ಇದು ರಾಜ್ಯಾದ್ಯಂತ ವೈರಲ್ ಆಗಿತ್ತು. ಪ್ರೀತಿಯ ಗಿಳಿಗಾಗಿ ಇಷ್ಟೆಲ್ಲ ಮಾಡ್ತಾರಾ? ಎಂದು ಜನ ಹುಬ್ಬೇರಿಸಿದ್ದರು. ಕೆಲವರು ಇನ್ನೇನು ಆ ಗಿಳಿ ಮರಳಿ ಬರುವುದಿಲ್ಲ. ಬೆಕ್ಕಿಗೋ ಇನ್ಯಾವುದೋ ಪ್ರಾಣಿ ಬಾಯಿಗೆ ಸಿಕ್ಕಿರಬಹುದು ಎಂದರು. ಇನ್ನು ಕೆಲವರು ಇಂಥ ಮುದ್ದಾದ ಗಿಳಿ ಸಿಕ್ಕರೆ ಯಾರಾದರೂ ಮರಳಿ ಕೊಡುತ್ತಾರೆಯೇ ಮನೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ ಹೀಗೆ ಗಿಳಿ ಹುಡುಕುವ ಪ್ರಯತ್ನ ಸಫಲವಾಗಲಿಕ್ಕಿಲ್ಲ ಎಂದರು. ಆದರೆ ಆ ದಂಪತಿ ಗಿಳಿ ಹುಡುಕಿಕೊಟ್ಟವರಿ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿತು.

 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

03:41 PM (IST) Jul 23

ಕಾರ್ಮಿಕರ ಧನ ಸಹಾಯ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಧನ ಸಹಾಯದಲ್ಲಿ ಏರಿಕೆ ಮಾಡಿರುವುದರ ಜತೆಗೆ ನೋಂದಣಿ ವಂತಿಗೆ ರಿಯಾಯಿತಿ, ಜ್ಯೇಷ್ಠತೆ ಆಧಾರದಲ್ಲಿ ಟೂಲ್‌ ಕಿಟ್‌ ವಿತರಣೆ ಸೇರಿದಂತೆ ಹಲವು ಮಹತ್ವ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

02:02 PM (IST) Jul 23

ನಟ ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿದೇವಮ್ಮ ನಿಧನ

ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಾಯಿ ನಿಧನ. ವಯೋಸಹಜ ಖಾಯಿಲೆಯಿಂದ  ಅವರು ಬಳಲುತಿದ್ದರು. ಲಕ್ಷ್ಮೀದೇವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಹಿರಿಯ ನಟ  ಶಕ್ತಿ ಪ್ರಸಾದ್ ಅವರ ಪತ್ನಿ ಲಕ್ಷ್ಮೀ ದೇವಮ್ಮ.

 

01:29 PM (IST) Jul 23

ಕಾಂಗ್ರೆಸ್ಸನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು: ಎಂ.ಬಿ.ಪಾಟೀಲ್

ನಮ್ಮ ಮುಖ್ಯ ಗುರಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದು ನಮ್ಮ ಮುಖ್ಯ ಗುರಿ . ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರಬೇಕು. ನಾವು ಯಾರು ಬಯಸಿದ್ರು ಮುಖ್ಯಮಂತ್ರಿ ಆಗಲ್ಲ. ನಾನು ಸಿಎಂ, ನೀನು ಸಿಎಂ ಅಂತ ಹೇಳಿದ್ರೆ ಅದು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ ಅವರು ತೀರ್ಮಾನ ಮಾಡುತ್ತಾರೆ. ಪಂಜಾಬ್ ಮಾದರಿಯಲ್ಲಿ ಇಲ್ಲಿ ಪ್ರೊಜೆಕ್ಟ್ ಮಾಡೋದಿದ್ರೆ ಹೈಕಮಾಂಡ್ ಘೋಷಣೆ ಮಾಡ್ತಾರೆ. ಇಲ್ಲಿ ಸರ್ವೇ ಸಾಮಾನ್ಯ ಸ್ವಂತ ಬಲದ ಮೇಲೆ ಅಧಿಕಾರ ಬರಬೇಕು. ಆ ಮೇಲೆ ಶಾಸಕರ ಅಭಿಪ್ರಾಯ ಪಡೆದು ಅಂತಿಮ‌ವಾಗಿ ಸೋನಿಯಾ ಗಾಂಧಿ ಘೋಷಣೆ ಮಾಡ್ತಾರೆ. ಕೆಲವೊಮ್ಮೆ ಸ್ವಾಭಾವಿಕವಾಗಿ ಕೆಲ ಅಭಿಮಾನಿಗಳು ಸಿಎಂ ಆಗಬೇಕು ಅಂತ ಹೇಳಿರುತ್ತಾರೆ. ಇದು ಪಕ್ಷಕ್ಕೆ ಡ್ಯಾಮೇಜ್ ಅಗುವಂತದ್ದೇನಲ್ಲ. 

ಡಿಕೆ ಶಿವಕುಮಾರ್ ‌ಅವರ ಬಾಯಿ ಮುಚ್ಚಿಕೊಂಡು ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಡಿಕೆ ಶಿವಕುಮಾರ್ ಅವರು ಸರಿಯಾಗಿಯೇ ಹೇಳಿದ್ದಾರೆ. ನಮ್ಮ ಮುಂದಿನ ಗುರಿ ಇರುವುದು ಪಕ್ಷವನ್ನ ಅಧಿಕಾರ ತುರುವುದು. ಪಕ್ಷದ ಅಧ್ಯಕ್ಷರು ಹೇಳಿರುವುದು ಸರಿ, ಎಂದಿದ್ದಾರೆ. ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಾಟೀಲರು, ಯಡಿಯೂರಪ್ಪ ಹಿರಿಯ ನಾಯಕರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು. ಹಿಂದೆ ಅವರು ಸಿಎಂ ಆಗಿದ್ದಾಗ ಜೈಲಿಗೆ ಹೋಗುವ ಸಂದರ್ಭ ಬಂತು ರಾಜಿನಾಮೆ ಕೊಟ್ರು. ಆದರೆ ಈಗ ಯಡಿಯೂರಪ್ಪ ಅವರನ್ನ ಹೇಗೆ ನಡೆಸಿಕೊಂಡರು? ಅವರನ್ನ ಪೂರ್ಣಾವಧಿ ಅಧಿಕಾರ ಮಾಡಲು ಅವಕಾಶ ಕೊಡಲಿಲ್ಲ. ಅವರನ್ನ ಇನ್ನೂ ಒಂದೂವರೆ ವರ್ಷ ಮುಂದುವರೆಸಬಹುದಿತ್ತು. ಆಪರೇಷನ್ ಕಮಲ ಮಾಡಿಸಿ ಅಧಿಕಾರಕ್ಕೆ ಬಂದಾಗಲೂ ಪೂರ್ಣಾವಧಿ ಅಧಿಕಾರ ಮಾಡಲು ಬಿಡಲಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಸದೃಢ ಇದ್ದಾಗಲೂ ಅಧಿಕಾರದಿಂದ ಕೆಳಗಿಳಿಸಿದರು. ಇದರ ಅರ್ಥ ಯಡಿಯೂರಪ್ಪ ಅವರನ್ನ ಬಿಜೆಪಿ ಬಳಸಿಕೊಂಡಿದೆ ಅಷ್ಟೇ, ಎಂದಿದ್ದಾರೆ.

01:26 PM (IST) Jul 23

ಯಡಿಯೂರಪ್ಪ ಅವರೇ ನಮ್ಮ ಪಕ್ಷದ ನಾಯಕ: ಪ್ರಭು ಚೌಹಾಣ್

ಯಡಿಯೂರಪ್ಪ ಚುನಾವಣಾ ರಾಜಕಾರಣದ ನಿವೃತ್ತಿ ಘೋಷಣೆ ವಿಚಾರವಾಗಿ ಸಚಿವ ಪ್ರಭು ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಅವರೇ ಪಕ್ಷ ಕಟ್ಟಿದವರು. ಅವರೇ ನಮ್ಮ ನಾಯಕ. ಪಾರ್ಟಿ ಫೌಂಡರ್ ಅವರೇ, ಅವರೇ ಪಾರ್ಟಿ ನಮ್ಮ ನಾಯಕರೂ ಅವರೇ, ನಮ್ಮ ಜನನಾಯಕರು ಅವರೇ. ಶಿಕಾರಿಪುರ ಕ್ಷೇತ್ರವನ್ನು ಮಗನಿಗೇ ತ್ಯಾಗ ಮಾಡ್ತಿದ್ದಾರೆ ಅವರು ಪಕ್ಷದಲ್ಲಿಯೇ ಇರ್ತಾರೆ. ಮುಂದಿನ ಚುನಾವಣೆಗೆ ಓಡಾಡ್ತೀನಿ ಅಂತ ಹೇಳಿದ್ದಾರೆ. ಮತ್ತೆ 2023ಕ್ಕೆ ಬಿಜೆಪಿ ಅಧಿಕಾರಕ್ಕೆ ತರ್ತೀನಿ ಅಂತಾನೂ ಹೇಳಿದ್ದಾರೆ. 100% ಯಡಿಯೂರಪ್ಪ ನಮ್ಮ ನಾಯಕರು. ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಯಾವುದೇ ರೀತಿಯಲ್ಲೂ ಮೂಲೆಗುಂಪು ಮಾಡ್ತಿಲ್ಲ.

01:20 PM (IST) Jul 23

ವಿಜಯೇಂದ್ರರನ್ನ ಹೊಗಳಿದ ಈಶ್ವರಪ್ಪ

ಕುಂಬಾರ ಕುಲಾಲ ಪ್ರಜಾಪತಿ ಜಾಗೃತಿ ಸಮಾವೇಶದಲ್ಲಿ ವಿಜಯೇಂದ್ರರನ್ನ ಹೊಗಳಿದ ಮಾಜಿ ಸಚಿವ ಈಶ್ವರಪ್ಪ ವೇದಿಕೆಯಲ್ಲಿ ಸ್ವಾಗತ ಭಾಷಣ ಮಾಡುವ ಸಮಯದಲ್ಲಿ ವಿಜಯೇಂದ್ರರನ್ನ ಹೊಗಳಿ ಸ್ವಾಗತ ಮಾಡಿದ ಈಶ್ವರಪ್ಪ. ವಿಜಯೇಂದ್ರ ಬಂದಿದ್ದಾರೆ ಅಂದರೆ ಕೆಲಸ  ಆದ ಹಾಗೆ ಎಂದು ವಿಜಯೇಂದ್ರರನ್ನ ಸ್ವಾಗತಿಸಿದ ಈಶ್ವರಪ್ಪ. ಈಶ್ವರಪ್ಪ ಆ ಮಾತು ಹೇಳುತ್ತಿದ್ದಂತೆ ನೆರದಿದ್ದವರೆಲ್ಲ ಜೋರಾಗಿ ಚಪ್ಪಾಳೆ ಹಾಕಿದ್ರು.

12:51 PM (IST) Jul 23

ರಾಜಕುಮಾರ ಟಾಕಳೆಗೆ ನಾನು ಸೆಕ್ಸ್‌ಮೇಟ್ ತರಹ ಬೇಕು: ನವ್ಯಾಶ್ರೀ

ನಾನು ಮಧ್ಯಾಹ್ನ ಹೋಗಿ ಎಪಿಎಂಸಿ ಠಾಣೆಗೆ ಪೊಲೀಸರಿಗೆ ದೂರು ನೀಡ್ತೇನೆ. ಹನಿಟ್ರ್ಯಾಪ್ ದೂರು ನೀಡಲು ರಾಜಕುಮಾರ ಟಾಕಳೆಗೆ ಸಹಕಾರ ಕೊಟ್ಟಿದ್ದೇನೆ. ಸೆಕ್ಸ್‌ಮೇಟ್ ತರಹ ಬೇಕು ಅನ್ನೋದು ಅವನ ಉದ್ದೇಶ. ನನ್ನ ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ಇರಿಸಿರುತ್ತಾನೆ. ಅಲ್ಲಿ ಯಾರೂ ಗಂಡಸರು ಬರಲ್ಲ ಅಂತಾನೂ ಹೇಳಿದ್ದ. ಆ ಆಡಿಯೋ ಕ್ಲಿಪ್‌ನಲ್ಲಿ‌ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದು. ತಿಲಕರಾಜ್ 13 ವರ್ಷದ ನನ್ನ ಕುಟುಂಬ ಸ್ನೇಹಿತ. ರಾಜಕುಮಾರ ಟಾಕಳೆ ಗ್ರೂಪ್ ಬಿ ನೌಕರ. ನನ್ನ ರಾಜಕೀಯವಾಗಿ ಮುಗಿಸಲು ಆ ಮಹಾನಾಯಕ ಸಾಥ್ ಕೊಟ್ಟಿದ್ದಾನೆ. ಸಹಕಾರ ಕೊಟ್ಟ ಮಹಾನ್ ನಾಯಕ ಯಾರು ಅಂತಾನೂ ಹೇಳ್ತೇನೆ. ಆ ಮಹಾನಾಯಕ್‌ನ ಜೊತೆ ಒಬ್ಬ‌ ಪತ್ರಿಕಾ ಸಂಪಾದಕ ಇದ್ದಾನೆ. ಆ ಪತ್ರಿಕಾ ಸಂಪಾದಕನ ವಿರುದ್ಧವೂ ದೂರು‌ ನೀಡ್ತೇನೆ. ರಾಜಕುಮಾರ ಟಾಕಳೆ ದೊಡ್ಡ ಹೆಣ್ಣು ಬಾಕ: ನವ್ಯಾಶ್ರೀ.

12:37 PM (IST) Jul 23

ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ನಾನು ಹೋಗಿದ್ದೆ: ನವ್ಯಾಶ್ರಿ

ಬೆಳಗಾವಿ: ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ಅಲ್ಲಿಗೆ ತೆರಳಿದ್ದೆ. ಬೆಳಗಾವಿಯಲ್ಲಿ ನವ್ಯಾಶ್ರೀ ಆರ್ ರಾವ್ ಹೊಸ ಬಾಂಬ್. ಮುಂಬೈಗೆ ಹೋಗಲು ಸಿಕ್ರೇಟ್ ಟಾಸ್ಕ್ ನೀಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಟಾಸ್ಕ್ ನೀಡಿರುತ್ತಾರೆ. ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸಿಕ್ರೇಟ್ ಟಾಸ್ಕ್ ಆಗಿತ್ತು ಅದು. ಬೇರೆ ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿರುತ್ತೇವೆ. ನನ್ನ ಜೊತೆ ಮೂವರು ಮಹಿಳೆಯರೂ ಬಂದಿದ್ದರು. ನಾಯಕರುಗಳಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ  ಕೊಡ್ತಿದ್ದೆ. ಆ ಸಿಕ್ರೇಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅತೃಪ್ತ ಶಾಸಕರ‌ ಹನಿಟ್ರ್ಯಾಪ್ ಮಾಡಲು ಚರ್ಚೆ ವಿಚಾರ, ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿ ಮಾಹಿತಿ‌ ಕೊಡ್ತಿದ್ದೆ ಅಷ್ಟೇ. ಮುಂಬೈನ ಸುಫಿ ಯೋಟೆಲ್ ಹೋಟೆಲ್‌ಗೆ ಹೋಗಿದ್ದೆ, ಎಂದಿದ್ದಾರೆ ನವ್ಯಾಶ್ರೀ.

 

10:15 AM (IST) Jul 23

ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿರ್ತಾರೆ: ಹರತಾಳು ಹಾಲಪ್ಪ

ಶಿಕಾರಿಪುರ ಕ್ಷೇತ್ರ ಬಿಎಸ್‌ವೈ ಬಿಟ್ಟು ಕೊಟ್ಟ ವಿಚಾರ. ಬಿಎಸ್‌ವೈ ಚುನಾವಣಾ ರಾಜಕಾರಣ ಮಾಡೊಲ್ಲ ಅಂದಿದ್ದಾರೆ. ಬಿಎಸ್‌ವೈ ಸಕ್ರಿಯ ರಾಜಕಾರಣದಲ್ಲಿ ಇರ್ತಾರೆ. ಬಿಎಸ್‌ವೈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಅಷ್ಟೇ. ತಮ್ಮ ಪುತ್ರ ವಿಜಯೇಂದ್ರನನ್ನು ಶಿಕಾರಿಪುರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಲ್ಲಿಸುತ್ತಾರೆ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತಾರೆ. 2023 ಮತ್ತು 2024 ರ ಚುನಾವಣೆ ಅಷ್ಟೇ ಅಲ್ಲದೆ 2028 ಹಾಗೂ 2029 ರ ಚುನಾವಣೆಯಲ್ಲಿ ಕೂಡ ಬಿಎಸ್‌ವೈ ಸಕ್ರಿಯ ರಾಜಕಾರಣ ಮಾಡ್ತಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ಶಿಕಾರಿಪುರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಯೋಗ ಬಂದಿತ್ತು. ಸ್ಪರ್ಧೆ ಮಾಡಲು ಒತ್ತಡ ಹಾಕಿದ್ದರು ಸ್ಪರ್ಧಿಸಲು ನಿರಾಕರಿಸಿದರು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಅವರ ನಿರ್ಧಾರದಿಂದ ಹಿನ್ನಡೆ ಆಗೊಲ್ಲ ಮುನ್ನಡೆ ಆಗುತ್ತೆ. ಅವರಿಗೆ ಸಾಕಷ್ಟು ಸಮಯ ಸಿಗುತ್ತೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ, ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರ.ೆ 

10:15 AM (IST) Jul 23

ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿರ್ತಾರೆ: ಹರತಾಳು ಹಾಲಪ್ಪ

ಶಿಕಾರಿಪುರ ಕ್ಷೇತ್ರ ಬಿಎಸ್‌ವೈ ಬಿಟ್ಟು ಕೊಟ್ಟ ವಿಚಾರ. ಬಿಎಸ್‌ವೈ ಚುನಾವಣಾ ರಾಜಕಾರಣ ಮಾಡೊಲ್ಲ ಅಂದಿದ್ದಾರೆ. ಬಿಎಸ್‌ವೈ ಸಕ್ರಿಯ ರಾಜಕಾರಣದಲ್ಲಿ ಇರ್ತಾರೆ. ಬಿಎಸ್‌ವೈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಅಷ್ಟೇ. ತಮ್ಮ ಪುತ್ರ ವಿಜಯೇಂದ್ರನನ್ನು ಶಿಕಾರಿಪುರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಲ್ಲಿಸುತ್ತಾರೆ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತಾರೆ. 2023 ಮತ್ತು 2024 ರ ಚುನಾವಣೆ ಅಷ್ಟೇ ಅಲ್ಲದೆ 2028 ಹಾಗೂ 2029 ರ ಚುನಾವಣೆಯಲ್ಲಿ ಕೂಡ ಬಿಎಸ್‌ವೈ ಸಕ್ರಿಯ ರಾಜಕಾರಣ ಮಾಡ್ತಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ಶಿಕಾರಿಪುರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಯೋಗ ಬಂದಿತ್ತು. ಸ್ಪರ್ಧೆ ಮಾಡಲು ಒತ್ತಡ ಹಾಕಿದ್ದರು ಸ್ಪರ್ಧಿಸಲು ನಿರಾಕರಿಸಿದರು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಅವರ ನಿರ್ಧಾರದಿಂದ ಹಿನ್ನಡೆ ಆಗೊಲ್ಲ ಮುನ್ನಡೆ ಆಗುತ್ತೆ. ಅವರಿಗೆ ಸಾಕಷ್ಟು ಸಮಯ ಸಿಗುತ್ತೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ, ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರ.ೆ 


More Trending News