Karnataka New Live Updates: ಪ್ರವೀಣ್‌ ಕುಟುಂಬಕ್ಕೆ 50 ಲಕ್ಷ ಪರಿಹಾರ; ಸಂಘಟನೆಗಳಿಂದ ಘೋಷಣೆ

ಪುತ್ತೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಿಯರೊಬ್ಬರ ಸಹಾಯದಿಂದ 15 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಸ್ಥಳೀಯ ಪೊಲೀಸರು. ಸುವರ್ಣ ನ್ಯೂಸ್ ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದು ಅನುಮಾನಿತರ ವಿಚಾರಣೆ ನಡೆಯುತ್ತಿದೆ, ಎಂದಿದ್ದಾರ. ಈವರೆಗೂ ಇನ್ನೂ ಯಾರನ್ನೂ ಅರೆಸ್ಟ್ ಮಾಡಿಲ್ಲ ವಿಚಾರಣೆ ನಂತರ ಬಂಧನದ ಬಗ್ಗೆ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಈ ಮದ್ಯೆ ಪ್ರವೀಣ್ ಪಾರ್ಥಿವ ಶರೀರ ಮೆರವಣಿಗೆಯೊಂದಿಗೆ ಹುಟ್ಟೂರು ಗ್ರಾಮದತ್ತ ತೆರಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬಂದ್ ಕರೆ ನೀಡಿದ್ದು, ಪುತ್ತೂರು, ಸುಳ್ಯ ಮತ್ತು‌ ಕಡಬ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಹಿಂದೂ ಕಾರ್ಯಕರ್ತನ ಕೊಲೆಗೆ ರಾಜ್ಯದ ಹಲವೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ಇದರ ಕ್ಷಣ ಕ್ಷಣದ ಮಾಹಿತಿಗಾಗಿ ಸುವರ್ಣನ್ಯೂಸ್.ಕಾಮ್ ಲೈವ್ ಬ್ಲಾಗ್ ಲಾಗಿನ್ ಆಗಿರಿ. 

5:44 PM

ಆರ್‌ಎಸ್‌ಎಸ್‌, ಬಿಜೆಪಿಯಿಂದ ಪ್ರವೀಣ್‌ ಕುಟುಂಬಕ್ಕೆ 50 ಲಕ್ಷ ರೂ ಘೋಷಣೆ

ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರ ಮತ್ತಿತರ ಹಿಂದೂ ಪರ ಸಂಘಟನೆಗಳಿಂದ ಪ್ರವೀಣ್‌ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ. ಸಂಘ ಪರಿವಾರ ಸಂಘಟನೆಗಳಿಂದ ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಘೋಷಣೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಉಸ್ತುವಾರಿ ನಾ.ಸೀತಾರಾಂ ಘೋಷಣೆ ಮಾಡಿದ್ದಾರೆ. ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಸಂಘ ಪರಿವಾರದಿಂದ ಪರಿಹಾರ ಘೋಷಣೆ. 

3:43 PM

ಪ್ರವೀಣ್ ಹತ್ಯೆಗೈದವರನ್ನು ಗುಂಡಿಟ್ಟು ಕೊಲ್ಲಿ - ಆಂದೋಲ ಸ್ವಾಮೀಜಿ ಆಗ್ರಹ

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನನ್ನು ಹತ್ಯೆ ಮಾಡಿದ ಹಂತಕರನ್ನ ಗುಂಡಿಟ್ಟು ಕೊಲ್ಲಿ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಹಾಗೂ ಆಂದೋಲ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ. ಹಿಂದೂ ಯುವಕ ಪ್ರವೀಣ್ ಹತ್ಯೆಯಿಂದ ಮಾನವ ಸಮಾಜ ತೆಲೆ ತಗ್ಗಿಸುವಂತಾಗಿದೆ.‌ ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ ಎಂದು ಆಂದೋಲ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಿಂದೂಗಳು, ಹಿಂದೂ ಕಾರ್ಯಕರ್ತರು  ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದು ಹಿಂದೂ ಕಾರ್ಯಕರ್ತರ ನಾಲ್ಕನೆ ಕೊಲೆಯಾಗಿದೆ. ಸರ್ಕಾರ ಏನು ಮಾಡುತ್ತಿದೆ ? ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಸ್ವಾಮಿಜಿ ಟೀಕಿಸಿದ್ದಾರೆ. 

ದುಷ್ಟ ಶಕ್ತಿಗಳನ್ನ ಮಟ್ಟ ಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಕೊಲೆಗಾರರನ್ನ ನಿಂತ ಜಾಗದಲ್ಲೆ ಗುಂಡಿಟ್ಟು ಕೊಂದು ಹಾಕಬೇಕು. ಬಾಯಿ ಮಾತನಿಂದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳತ್ತೆನೆ ಅಂತಾ ಹೇಳುವ ಉಡಾಫೆ ಹೇಳಿಕೆ ಬಿಡಬೇಕು.‌ ಯಾರ್ಯಾರಿಗೆ ಬೆದರಿಕೆ ಇದೆ ಅವರಿಗೆ ಸರ್ಕಾರ ಭದ್ರತೆ ಕೊಡಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ. 
 
ಸದ್ಯ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ  ಮಂಗಳೂರಿಗೆ ಎಡಿಜಿಪಿ ಅಲೋಕಕುಮಾರ ಕೂಡಲೇ ಭೇಟಿ ನೀಡಬೇಕು. ರಾಜ್ಯದ ಯಾವ ಭಾಗದಲ್ಲೂ ಹಿಂದೂ ಕಾರ್ಯಕರ್ತರು ಸುರಕ್ಷಿತವಾಗಿಲ್ಲ. ಸರಕಾರದ ಇದಕ್ಕೆ ಕಡಿವಾಣ ಹಾಕಲು ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಂದೋಲಾ ಸ್ವಾಮಿಜಿ ಆಗ್ರಹಿಸಿದ್ದಾರೆ.

2:49 PM

ಪ್ರವೀಣ್‌ ಹತ್ಯೆಯ ಹಿಂದೆ ಬಿಜೆಪಿ ಕೈವಾಡ: ಕಾಂಗ್ರೆಸ್‌ ವಕ್ತಾರ ಲಕ್ಷಣ್‌ ಗಂಭೀರ ಆರೋಪ

ಪ್ರವೀಣ್ ನೆಟ್ಟಾರೂ ಹತ್ಯೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷ್ಮಣ್ ಗಂಭೀರ ಆರೋಪ. ಕರಾವಳಿ ಪ್ರದೇಶದಲ್ಲಿ ಈಗಾಗಲೇ ಶುರುಮಾಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತನ್ನ ಹತ್ಯೆ ಮಾಡಿದ್ದಾರೆ. ಇದರ ಹಿಂದೆ ನೂರಕ್ಕೆ ನೂರರಷ್ಟು ಬಿಜೆಪಿ ಕೈವಾಡ ಇದೆ.
ಸೂಕ್ತ ತನಿಖೆ ನಡೆದೆರೆ ತಪ್ಪಿತಸ್ಥರು ಸಿಕ್ತಾರೆ. ಬಡವರು, ಶೂದ್ರರ ಮುಂದೆ ಬಿಟ್ಟು ಹೊಡೆಯುವ ಕೆಲಸವನ್ನ ಇವರೇ ಮಾಡ್ತಾರೆ. ಇವರೆ ಮಾಡಿ ಕಿಡಿಯಚ್ಚುವ ಕೆಲಸ ಮಾಡ್ತಾರೆ.
ರಾಜ್ಯದ ಜನರು ಬಹಳ ಹುಷಾರಾಗಿರಬೇಕು. ಬಿಜೆಪಿ ಮಾಡಿರುವ ಕಾರ್ಯಕ್ರಮ ಏನು ಇಲ್ಲ. 28ಕ್ಕೆ ಬೊಮ್ಮಯಿ ಒಂದು ವರ್ಷ ಕಂಪ್ಲಿಟ್ ಮಾಡ್ತಾರೆ. ಎನು ಮಾಡಿದ್ದಿರಿ ? ಲಾ ಅಂಡ್ ಆರ್ಡರ್ ರಾಜ್ಯದಲ್ಲಿ ಹಾಳಾಗಿದೆ. ಆರ್.ಎಸ್.ಎಸ್ ನವರು ಅರಗ ಜ್ಞಾನೇಂದ್ರರನ್ನು ಹೋಂ ಮಿನಿಸ್ಟರ್ ಮಾಡಿದ್ದೀರಿ. ಆತನಿಗೆ ಅರೆಬರೆ ಜ್ಞಾನ ಇದೆ ಹುಚ್ಚನ ತರ ಸ್ಟೇಟ್ ಮೆಂಟ್ ಕೊಡುವ ವ್ಯಕ್ತಿ. ಸುನಿಲ್ ಕುಮಾರ್ ಕ್ರಿಮಿನಲ್ ವ್ಯಕ್ತಿ. ಕರಾವಳಿ ಪ್ರದೇಶವನ್ನ ಸಂಪೂರ್ಣ ನಾಶ ಮಾಡಿದ್ರು. ದಿನ ಬೆಳಿಗ್ಗೆ ಎದ್ರೆ ಕೋಮು ಗಲಭೆ. ಬಿಜೆಪಿ ಅವರ ಏಕೈಕ ಗುರಿ ಮುಸ್ಲಿಮರು. ಈ ಪ್ರಕರಣ ಸಂಬಂಧ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಸಬೇಕು. ಆಗ ನೂರಕ್ಕೆ ನೂರರಷ್ಟು ಬಿಜೆಪಿ ಅವರೇ ಈ ಕೇಸ್‌ನಲ್ಲಿ ಇರುತ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್.

2:44 PM

ಪ್ರವೀಣ್‌ ನೆಟ್ಟಾರೆ ಕೊಲೆ, ಬಿಜೆಪಿ ವಿರುದ್ಧ ಹಿಂದೂಪರ ಸಂಘಟನೆಗಳ ಉಗ್ರ ಹೋರಾಟ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಿಡಿ. ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೆ ಸಂಘಟನೆಯಲ್ಲಿ ಕೆಲಸ ಮಾಡಲ್ಲ ಎಂದು ಕಿಡಿ. ಹೊಸದುರ್ಗ ಮಂಡಲ ಉಪಾಧ್ಯಕ್ಷ ಮಂಜು ಸಾಣೇಹಳ್ಳಿ, ಹೊಸದುರ್ಗ ಮಂಡಲ ಕಾರ್ಯದರ್ಶಿ ಎನ್.ಆರ್.ಜಗದೀಶ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ರಮೇಶ್ ಗೂಳಿಹಟ್ಟಿ ಕಿಡಿ. ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿದ ಮುಖಂಡರು. ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಆಕ್ರೋಶ. ಇನ್ನು ಮಂಗಳೂರಿನಲ್ಲೂ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಮೃತ ಪ್ರವೀಣ್‌ ಪಾರ್ಥಿವ ಶರೀರ ದರ್ಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟಿಲ್‌, ಸಚಿವ ಸುನೀಲ್‌ ಕುಮಾರ್‌ ಅವಕಾಶ ನೀಡಲಿಲ್ಲ. 

2:31 PM

ಪ್ರವೀಣ್ ಪಾರ್ಥಿವ ಶರೀರ ಮೆರವಣಿಗೆ ವೇಳೆ ಮಸೀದಿಗೆ ಕಲ್ಲು ತೂರಿದ ಗುಂಪು

ಬೆಳ್ಳಾರೆ ಬಸ್ ನಿಲ್ದಾಣ ಬಳಿ ಆಕ್ರೋಶಿತ ಗುಂಪಿನಿಂದ ಮಸೀದಿಗೆ ಕಲ್ಲು ತೂರಾಟ, ಸಮೀಪದ ಅಂಗಡಿ ಕಲ್ಲುತೂರಾಟ, ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದ ಪೊಲೀಸರು. ಪ್ರವೀಣ್ ಪಾರ್ಥಿವ ಶರೀರ ಮೆರವಣಿಗೆ ವೇಳೆ ನಿಂತಿಕಲ್ ನಲ್ಲಿ ನಿಂತಿದ್ದ ವಾಹನಕ್ಕೆ ಜಖಂಗೊಳಿಸಿದ ಕಿಡಿಗೇಡಿಗಳು.

1:46 PM

ಪ್ರವೀಣ್‌ ಹತ್ಯೆ ಪ್ರಕರಣದ ಗಂಭೀರತೆ ಅರಿಯದ ಮಾಧುಸ್ವಾಮಿ: ಮಾಹಿತಿಯಿಲ್ಲ ಎಂದ ಕಾನೂನು ಸಚಿವ

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಲು ಸಚಿವ ಮಾಧುಸ್ವಾಮಿ ನಿರಾಕರಿಸಿದ್ದಾರೆ. ಹತ್ಯೆ ನಡೆದ 15 ಗಂಟೆ ಕಳೆದರು ಮಾಹಿತಿ ತೆಗೆದುಕೊಳ್ಳದ ಸಚಿವ ಮಾಧುಸ್ವಾಮಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ. ಪ್ರಕರಣದ ಗಂಭೀರತೆ ಅರಿತುಕೊಳ್ಳದ ಸಚಿವ ಮಾಧುಸ್ವಾಮಿ. ಘಟನೆ‌ ಬಗ್ಗೆ ಮಾಹಿತಿ ಇಲ್ಲ ಬೆಂಗಳೂರಿಗೆ ತೆರಳಿ ತಿಳಿದುಕೊಳ್ಳುತ್ತೇನೆಂದ ಸಚಿವ ಮಾಧುಸ್ವಾಮಿ. ಬಿಜೆಪಿ ಕಾರ್ಯಕರ್ತರಿಗೂ ಧೈರ್ಯದ ಮಾತು‌ ಹೇಳುವುದಕ್ಕೂ ಸಚಿವ ಹಿಂದೇಟು.‌ ಕಾನೂನು ಸಚಿವರ ಉಡಾಫೆ ಉತ್ತರ. ತಮ್ಮದೇ ಪಕ್ಷದ ಕಾರ್ಯಕರ್ತನ ಕಗ್ಗೊಲೆಯಾದ್ರೂ ಕಾನೂನು ಸಚಿವರಿಗೆ ಮಾಹಿತಿಯಿಲ್ಲ. ನನಗೆ ಪೂರ್ಣ ಮಾಹಿತಿಯಿಲ್ಲ, ಹಾಗಾಗಿ ಅರ್ಧಂಬರ್ಧ ತಿಳಿದು ಪ್ರತಿಕ್ರಿಯೆ ನೀಡಲ್ಲ. ಕಾಂಟ್ರೋವರ್ಸಿ ಇರೋದ್ರಿಂದ ನಾನು ಮಾತನಾಡಲ್ಲ, ಪೂರ್ಣ ಪ್ರಮಾಣದ ಮಾಹಿತಿ ತರಿಸಿಕೊಂಡು ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. 

1:40 PM

ಯೋಗಿ ಆದಿತ್ಯನಾಥ್‌ ರೀತಿ ಕ್ರಮ ಕೈಗೊಳ್ಳಬೇಕು: ರೇಣುಕಾಚಾರ್ಯ ಆಗ್ರಹ

ವಿಧಾನಸೌಧದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ. ಇಂತಾ ಘಟನೆಗಳು ನಮಗೆ ನೋವು ತರುತ್ತದೆ. ಹರ್ಷ, ಚಂದ್ರು, ಪ್ರವೀಣ್  ಈ ರೀತಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಟಾರ್ಗೆಟ್ ಆಗಿದೆ. ಇದು ಕೊನೆ ಯಾವಾಗ? ಉ. ಪ್ರದೇಶದ ಯೋಗಿ ಆದಿತ್ಯ ನಾಥ್ ರೀತಿ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಇದು ಕೊನೆಯಾಗಲ್ಲ. ಕೇವಲ ಬಾಯಿ ಮಾತಿನಲ್ಲಿ ಕಠಿಣಕ್ರಮ,ಎನ್ ಕೌಂಟರ್ ಅನ್ನೋ ಮಾತುಗಳನ್ನು ಹೇಳಿದರೆ ಪ್ರಯೋಜನ ಇಲ್ಲ. ನನಗೇ ಎರಡು ಭಾರಿ ಬೆದರಿಕೆ ಕರೆ ಬಂದರೂ ಏನೂ ಪತ್ತೆ ಹಚ್ಚಲು ಆಗಲಿಲ್ಲ. ಸಾಮಾನ್ಯ ಕಾರ್ಯಕರ್ತರ ಗತಿ ಏನು? ಮಾದ್ಯಮ ದ ಮುಂದೆ ಮಾತಾಡಲು ನನಗೇ ಮುಜುಗರ ಆಗುತ್ತದೆ. ಯಾರೇ ಆಗಿದ್ದರೂ ಪತ್ತೆ ಹಚ್ಚ ಬೇಕು. ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ ಅವರ ಮನೆಗೆ ಕಳಿಸಿಕೊಡುತ್ತೇನೆ.

1:36 PM

ಭುಗಿಲೆದ್ದ ಪ್ರತಿಭಟನೆ, ಕಟೀಲ್‌, ಸುನೀಲ್‌ ಕುಮಾರ್‌ಗೆ ಪಾರ್ಥಿವ ಶರೀರ ಭೇಟಿಗೆ ಅವಕಾಶ ನಿರಾಕರಣೆ

ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಬೆಳ್ಳಾರೆಯಲ್ಲಿ ನಾಯಕರಿಗೆ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡದ ಬಿಜೆಪಿ ಕಾರ್ಯಕರ್ತರು. ಸ್ಥಳದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್ ಹಾಗೂ ಅಂಗಾರ ಅವರಿಗೆ ದಿಗ್ಬಂಧನ ಹಾಕಿ ಧಿಕ್ಕಾರ ಘೋಷಣೆ ಕೂಗಿದರು. ಮಂಗಳೂರಿನಾದ್ಯಂತ ಬಿಜೆಪಿ ನಾಯಕರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಬಿಜೆಪಿ ನಾಯಕರ ಕೈಯಲ್ಲಿ ಏನೂ ಆಗಲ್ಲ, ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಲೇ ಇರುತ್ತವೆ. ಬಿಜೆಪಿಯವರೇ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಬುದ್ಧಿ ಕಲಿಸುತ್ತೀವಿ ಎಂದು ಕಾರ್ಯಕರ್ತರು ಧಿಕ್ಕಾರ ಕೂಗುತ್ತಿದ್ದಾರೆ. 

1:10 PM

ಪ್ರವೀಣ್ ಹತ್ಯೆ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಖಂಡನೆ

ಪುತ್ತೂರಿನಲ್ಲಿ ಹತ್ಯೆಯಾದ ಯುವಮೋರ್ಚಾ ಮುಖಂಡ ಪ್ರವೀನ್ ನೆಟ್ಟಾರೆ ಹತ್ಯೆ ಖಂಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಯಾವುದೇ ತಪ್ಪಿಲ್ಲದ ಹಿಂದುತ್ವವಾದಿಗಳನ್ನು ಮುಸ್ಲಿಮರು  ಕಗ್ಗೊಲೆ, ಹಲ್ಲೆ ಮಾಡ್ತಾ ಇದ್ದಾರೆ. ಮಂಗಳೂರಿನ ಬಿಜೆಪಿ ಕಾರ್ಯಕರ್ತನ ಕೊಲೆ ಎಲ್ಲಾ ರಾಜಕೀಯ ಪಕ್ಷಗಳು ಖಂಡಿಸಬೇಕು. ಸಿಎಂ, ಗೃಹ ಸಚಿವ ಇಬ್ಬರು ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ. ಹಿಂದೂಗಳ ಸಂಯಮವನ್ನು ಪರೀಕ್ಷಿಸಬಾರದು. ಹಿಂದುತ್ವವಾದಿಗಳು ಎಷ್ಟು ದಿನ ಶಾಂತಿಯಿಂದ ಇರ್ತಿರಾ? ಗೂಂಡಾ ಮುಸ್ಲಿಂಗಳಿಗೆ ಹಿಂದೂಗಳನ್ನು ಶಾಂತಿಯಿಂದ ಇರರ್ತಾರೆ ಎಂದು ಭಾವಿಸಿದ್ದರೇ ಎಚ್ಚರಿಕೆಯಿಂದ ಇರಿ. ಕಾನೂನು ಬದ್ದವಾಗಿ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಿಎಂ ಯೋಚನೆ ಮಾಡಬೇಕು. ಹರ್ಷನ ಪ್ರಕರಣ ಎನ್ಐಎ ತನಿಖೆಗೆ ಒಳಪಡಿಸಿದ್ದಾರೆ. ಹಿಂದೂಗಳು ಎನ್ ಬೇಕಾದರೂ ಮಾಡಿ, ನಾವು ಕೊಲೆ ಮಾಡ್ತಿವಿ ಎಂದು ಮುಸ್ಲಿಂ ಗೂಂಡಾಗಳ ಮನಸ್ಥಿತಿ ಇದೆ. ಇದನ್ನು ಮುಸ್ಲಿಂ ಗೂಂಡಾಗಳು ಬದಲಿಸಿ ಕೊಳ್ಳ ದಿದ್ದರೇ ಖಂಡಿತ  ಎಚ್ಚರಿಕೆ ವಹಿಸಬೇಕ,  ಎಂದಿದ್ದಾರೆ. 

12:34 PM

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: 15 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 15 ಜನ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಿಯರೊಬ್ಬರ ಸಹಾಯದಿಂದ ಹತ್ಯೆ ಬಗ್ಗೆ ಅನುಮಾನ. 15 ಜನರನ್ನು ವಿಚಾರಣೆಗೆ ಒಳಪಡಿಸಿದ ಸ್ಥಳಿಯ ಪೊಲೀಸರು. ಸುವರ್ಣ ನ್ಯೂಸ್ ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ. ಅನುಮಾನಿತರ ವಿಚಾರಣೆ ನಡೆಯುತ್ತಿದೆ. ಈವರೆಗೂ ಇನ್ನೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ವಿಚಾರಣೆ ನಂತರ ಬಂಧನದ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

12:29 PM

ಪ್ರವೀಣ್‌ ಕೊಲೆಗೆ ಸಂತಾಪ ಸೂಚಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ. ಪ್ರವೀಣ್ ನೆಟ್ಟಾರ್ ಒಬ್ಬ  ಮಾನವೀಯ ಕಳಕಳಿ ಇರೋ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ ಅವರಾಗಿದ್ದರು. ನಾನು ಶಬ್ದಗಳಲ್ಲಿ ಸಂತಾಪ ಸೂಚಿಸುವುದಿಲ್ಲ. ಜಿಹಾದಿ ಮಾನಸಿಕತೆಗೆ ಕೊನೆಯೇ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ನಾವು ಮಾಡ್ತಾನೆ ಇರ್ತೀವಿ, ಕಠಿಣ ಕ್ರಮ ತೆಗೆದುಕೊಳ್ಳಿ ನೋಡೋಣ ಅನ್ನೋ ಮನಸ್ಥಿತಿ ಅವರದ್ದು. ಕೇಂದ್ರದಲ್ಲಿ, ರಾಜ್ಯದಲ್ಲಿ ಎರಡೂ ಕಡೆ ನಾವೆ ಇದ್ರೂ ಏನೂ ಮಾಡಲಾಗ್ತಿಲ್ಲ. ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ತಿದ್ದಾರೆ‌. ಸಿಎಂ ಭೇಟಿ ಮಾಡಲು ಹೋಗ್ತಿದ್ದೇನೆ. ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಕಾರ್ಯಕರ್ತರ ಭಾವನೆ ಜೊತೆಗೆ ನಾವೂ ಇದ್ದೇವೆ‌. ಕೇವಲ‌ ಅಧಿಕಾರ ಮಾಡಲು ಬಂದಿಲ್ಲ. ಅವರ ಭಾವನೆ ಜೊತೆಗೆ ನಾವೂ ನಿಲ್ತೇವೆ. ವ್ಯವಸ್ಥೆಯನ್ನ ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕು. ಅಮರಾವತಿಯಲ್ಲಿ, ಉದಯ್ ಪುರದಲ್ಲಿ ನಡೆದ ಒಂದು ಘಟನೆಯ ಭಾಗ ಇದು. ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ ಅನ್ನೋ ಆರೋಪ‌ ಇದೆ. ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು, ಈಗ ಹಿಂದೂ ಪರ ಸರ್ಕಾರ ಇದೆ. ಆದ್ರೂ ಹೀಗಾಗ್ತಿದೆ ಅನ್ನೋ ಆತಂಕ ಕಾರ್ಯಕರ್ತರದ್ದು. ನಾವು ಸಮರ್ಥನೆ ಮಾಡಿಕೊಳ್ಳೋದಿಲ್ಲ. ಜಿಹಾದ್ ಕಿತ್ತುಹಾಕಲು ನಾವು ಬದ್ದರಿದ್ದೇವೆ. ನಾವೀಗ ಆಕ್ಷನ್ ಮಾಡದಿದ್ರೆ ನಾವೇ ಹೊಣೆ ಹೊರಬೇಕಿತ್ತು. ಹಿಂದಿನ ಸರ್ಕಾರ ಓಟ್ ಬ್ಯಾಂಕ್‌ಗಾಗಿ ಓಲೈಕೆ ಮಾಡ್ತಿತ್ತು. ಆದ್ರೆ ನಾವು ಆ ರೀತಿ ಯಾವುದೇ ಓಲೈಕೆ ಇಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ. ಕಠಿಣ ಕ್ರಮ ಕೈಗೊಳ್ಳೋದ್ರ ಜೊತೆ, ಅಪರಾಧಿಗಳನ್ನ ಬಂಧಿಸಲು ಮನವಿ ಮಾಡ್ತೇನೆ ಎಂದು ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

10:51 AM

ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ

ಉಡುಪಿ ಹಿಂದೂ ಸಘಂಟನೆ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಮಾಯಕ ಕೊಲೆಯಾದಾಗ ಸಾರ್ವಜನಿಕ ಆಕ್ರೋಶ ಸಹಜ. ಈಗಾಗಲೇ ಗೃಹ ಸಚಿವರು ಎಸ್‌ಪಿ ಜತೆ ಮಾತನಾಡಿದ್ದಾರೆ. ಕೇರಳ ಗಡಿಭಾಗವಾದ್ದರಿಂದ ಅಲ್ಲಿಗೆ ಓಡಿ ಹೋಗಿರುವ ಸಾಧ್ಯತೆಯಿದೆ. ಕೇರಳದಲ್ಲಿ ಕಾರ್ಯಾಚರಣೆ ಮಾಡಿಯಾದರೂ ಬಂಧಿಸಬೇಕೆಂದು ಆದೇಶಿಸಲಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಪ್ರವೀಣ್ ಅವರ ಹಿಂದೆ ಬಂದು ಮೋಸದಿಂದ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆಯನ್ನು ಕೊಡಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. 

10:38 AM

ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್‌

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಳಾರಿಯಲ್ಲಿ ನಡೆದಿರುವ ಘಟನೆಯನ್ನ ಖಂಡಿಸಿರುವ ಪ್ರಮೋದ್‌ ಮುತಾಲಿಕ್‌ ಮುಸ್ಮಾನ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ವೈಫಲ್ಯದಿಂದ ಈ ರೀತಿ ಘಟನೆಗಳು ನಡೆಯುತ್ತಿವೆ ಎಂದು ಹರಿಹಾಯ್ದಿದ್ದಾರೆ. ಮುಸಲ್ಮಾನರ ಈ ಕ್ರೌರ್ಯವನ್ನ ಸರಕಾರ ಕೂಡಲೆ‌ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಹೀಂದೂಗಳ ಹತ್ಯೆ ಆಗುತ್ತಲೆ ಇರುತ್ತದೆ. ಕೊಲೆಯಾದ ಬಳಿಕ ನಿಮ್ಮ‌ಉಗ್ರವಾದ ಹೇಳಿಕೆಗಳು ಬರುತ್ತಲೆ ಇರುತ್ತವೆ. ಕಾನೂನು ಮತ್ತು ಸರಕಾರದ ವೈಫಲ್ಯಕ್ಕೆ ದಿಂದ ಇಂತಹ ಘಟನೆಗಳು ಆಗುತ್ತವೆ. ಕೇಂದ್ರ, ರಾಜ್ಯ ಸರಕಾರಕ್ಕೆ‌ ದೇಶದ ಹಿತ ಕಾಪಾಡು ಮನಸ್ಸು ಇದ್ರೆ ಎಸ್ ಡಿ ಪಿಐ, ಮತ್ತು ಪಿಎಪ್ ಐ ನ್ನ ಬ್ಯಾನ್ ಮಾಡಬೇಕು. ಮುಸ್ಲಿಂ ಸಮುದಾಯಕ್ಕೆ‌ ಮುತಾಲಿಕ್ ಸವಾಲು ಹಾಕಿದ್ದಾರೆ. ಹಿಂದೂಗಳು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬ ಮುಸ್ಲಿಂ ಇರಬಾರದು ಹಾಗೆ ಮಾಡಬೇಕಾಗುತ್ತೆ. ಕೊಲೆಗೆ ಕೊಲೆಯೇ ಉತ್ತರವಲ್ಲ ಕಾನೂನೂ ಇದೆ ಹೋರಾಟ ಮಾಡಿ. ಮುಲ್ಲಾ ಮೌಲ್ವಿಗಳು ನಿಮ್ಮ‌ ಯುವಕರನ್ನ, ಎಸ್ ಡಿ ಪಿ ಐ, ಪಿ ಎಪ್ ಐ ಸಂಘಟನೆಗಳನ್ನ ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ರೆ ನಾವೂ ತಿರುಗಿಬಿಳಬೇಕಾಗುತ್ತೆ. ಆ ಸಮಯದಲ್ಲಿ ಶಾಂತಿ ಕಾಪಾಡಿ ಅಂದ್ರೆ ಆಗಲ್ಲ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್.

10:04 AM

ಜನರು ಶಾಂತಿ ಕಾಪಾಡುವಂತೆ ಆರಗ ಮನವಿ

ಪುತ್ತೂರಿನಲ್ಲಿ ಹಿಂದೂ ಯುವಮೋರ್ಚಾ ಮುಕಂಡ ಪ್ರವೀಣ್ ನೆಟ್ಟಾರು ಹತ್ಯೆ  ದುರದೃಷ್ಟಕರ. ಈ ವಿಚಾರ ತಿಳಿಯುತ್ತಿದ್ದಂತೆ ಹಿರಿಯ ಪೋಲೀಸ್ ಅಧಿಕಾರ ಗಳ ಜೊತೆ ಮಾತಾಡಿದ್ದೇನೆ. ಜನರಲ್ಲಿ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ತೇನೆ. ಸದ್ಯದಲ್ಲೇ ಆರೋಪಿಗಳ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎದಿದ್ದಾರೆ. ಕಠಿಣ ಕ್ರಮ ಅಂದ್ರೆ ಏನು? ಎಂಬ ಪ್ರಶ್ನೆಗೆ, ಹಿಂದೆ ಹತ್ಯೆಗಳಾದಾಗ ಆರೋಪಿಗಳನ್ನು ಬಂಧಿಸಿದ್ದೇವೆ. ಯಾರನ್ನೂ ನಾವು ಬಿಟ್ಟಿಲ್ಲ. ಯಾರೂ ತಲೆತಪ್ಪಿಸಿಕೊಂಡು ಹೋಗಲು ನಾವು ಬಿಟ್ಟಿಲ್ಲ. ಕರಾವಳಿ ಭಾಗಗಳಲ್ಲಿ ಬಹಳ ವರ್ಷಗಳಿಂದ ಇಂಥ ಘಟನೆಗಳು ಆಗುತ್ತಿದ್ದವು. ಹಿಜಾಬ್ ಪ್ರಕರಣದ ಹಿಂದೆ ಮತೀಯ ಶಕ್ತಿಗಳಿವೆ. ಇವು ರಕ್ತಪಾತವನ್ನು ಬೆಂಬಲಿಸುತ್ತಿವೆ. ಕರಾವಳಿಯಲ್ಲಿ ಈ ಶಕ್ತಿಗಳು ತಲೆ ಎತ್ತುತ್ತಿವೆ. ಸರ್ಕಾರ ಇದರ ಮೇಲೆ ಕಣ್ಣಿಟ್ಟಿವೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡೇ ತೆಗೆದು ಕೊಳ್ತೀವಿ, ಎಂದಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:50 AM

ಬಿಜೆಪಿ ಮುಖಂಡನ ಬರ್ಬರ ಹತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷೆ, ಸಿಎಂ ಬೊಮ್ಮಾಯಿ

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:49 AM

ಪುತ್ತೂರು ವಿಭಾಗದ ಮೂರು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ

ಪುತ್ತೂರು ವಿಭಾಗದ ಮೂರು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪುತ್ತೂರು ಉಪವಿಭಾಗಾಧಿಕಾರಿ  ಗಿರೀಶ್ ನಂದನ್ ಆದೇಶ. ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಸಂಸ್ಕಾರದ ವೇಳೆ ಮೆರವಣಿಗೆ ಬೇಡ ಅಂತ ಸಂಬಂಧಿಕರಿಗೆ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ. ಪ್ರವೀಣ್ ಸಂಬಂಧಿ ಜಯರಾಮ್‌ಗೆ ಫೋನ್‌ನಲ್ಲಿ ಮನವಿ ಮಾಡಿದ ಡಿವೈಎಸ್ಪಿ ಗಾನಾ ಕುಮಾರಿ. ಈ ವೇಳೆ ಗಾನಾ ಕುಮಾರಿಗೆ ತಿಳಿ ಹೇಳಿದ ಸಂಬಂಧಿ ಜಯರಾಮ್. ನಮ್ಮ ಮನೆಯಿಂದ ಹೊರಗೆ ಬಂದವರು ಮನೆಗೆ ಹೋಗುವ ಗ್ಯಾರಂಟಿ ಇಲ್ಲ. ನಮ್ಮ ಮೆರವಣಿಗೆಯಲ್ಲಿ ಯಾವುದೇ ರಿಸ್ಕ್ ಇಲ್ಲ, ನಮ್ಮ ಕಾರ್ಯಕರ್ತರು ಶಾಂತವಾಗಿ ಹೋಗ್ತಾರೆ. ಹೊರಗಡೆ ಯಾರಾದ್ರೂ ಏನಾದ್ರೂ ಮಾಡಿದ್ರೆ, ನಾವು ಏನೂ ಮಾಡಲು ಆಗಲ್ಲ. ಅವನಂತೆಯೇ ನಾವು ಶಾಂತಿಯಿಂದ ಹೋಗ್ತೇವೆ, ಅದು ನಾವು ಮಾಡ್ತೇವೆ. ನಮಗೆ ಮೆರವಣಿಗೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. 

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ

9:42 AM

ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡನ ಹತ್ಯೆ: ‌ಮಸೂದ್ ಹತ್ಯೆಗೆ ಪ್ರತೀಕಾರವೇ?

ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ನನ್ನು ಕೇರಳದ ಕಾಸರಗೋಡಿನಿಂದ ಬಂದ ತಂಡ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಬೆಳಗ್ಗೆಯಿಂದ  ಬೆಳ್ಳಾರೆ ಭಾಗದಲ್ಲಿ ಕೇರಳ ಭಾಗದ ವಾಹನಗಳ ಸುತ್ತಾಟದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಕೊಲೆಯಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್(18) ಮೇಲೆ ಹಲ್ಲೆ ನಡೆಸಲಾಗಿತ್ತು. ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬವರಿಂದ ಹಲ್ಲೆ ನಡೆದಿದ್ದು, ಜು.19ರಂದು ಸುಧೀರ್ ಎಂಬಾತ ಮಸೂದ್ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್ ನನ್ನ ರಾಜಿ ಮಾತುಕತೆ ಕರೆದಿದ್ದಾರೆ. ಹೀಗಾಗಿ ಮಸೂದ್ ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಹಲ್ಲೆ ನಡೆದಿತ್ತು. ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ್ದು,‌ ಚಿಕಿತ್ಸೆ ಫಲಿಸದೇ ಮಸೂದ್ ಸಾವನ್ನಪ್ಪಿದ್ದ. ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. 

5:44 PM IST:

ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರ ಮತ್ತಿತರ ಹಿಂದೂ ಪರ ಸಂಘಟನೆಗಳಿಂದ ಪ್ರವೀಣ್‌ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ. ಸಂಘ ಪರಿವಾರ ಸಂಘಟನೆಗಳಿಂದ ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಘೋಷಣೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಉಸ್ತುವಾರಿ ನಾ.ಸೀತಾರಾಂ ಘೋಷಣೆ ಮಾಡಿದ್ದಾರೆ. ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಸಂಘ ಪರಿವಾರದಿಂದ ಪರಿಹಾರ ಘೋಷಣೆ. 

3:43 PM IST:

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನನ್ನು ಹತ್ಯೆ ಮಾಡಿದ ಹಂತಕರನ್ನ ಗುಂಡಿಟ್ಟು ಕೊಲ್ಲಿ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಹಾಗೂ ಆಂದೋಲ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ. ಹಿಂದೂ ಯುವಕ ಪ್ರವೀಣ್ ಹತ್ಯೆಯಿಂದ ಮಾನವ ಸಮಾಜ ತೆಲೆ ತಗ್ಗಿಸುವಂತಾಗಿದೆ.‌ ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ ಎಂದು ಆಂದೋಲ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಿಂದೂಗಳು, ಹಿಂದೂ ಕಾರ್ಯಕರ್ತರು  ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದು ಹಿಂದೂ ಕಾರ್ಯಕರ್ತರ ನಾಲ್ಕನೆ ಕೊಲೆಯಾಗಿದೆ. ಸರ್ಕಾರ ಏನು ಮಾಡುತ್ತಿದೆ ? ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಸ್ವಾಮಿಜಿ ಟೀಕಿಸಿದ್ದಾರೆ. 

ದುಷ್ಟ ಶಕ್ತಿಗಳನ್ನ ಮಟ್ಟ ಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಕೊಲೆಗಾರರನ್ನ ನಿಂತ ಜಾಗದಲ್ಲೆ ಗುಂಡಿಟ್ಟು ಕೊಂದು ಹಾಕಬೇಕು. ಬಾಯಿ ಮಾತನಿಂದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳತ್ತೆನೆ ಅಂತಾ ಹೇಳುವ ಉಡಾಫೆ ಹೇಳಿಕೆ ಬಿಡಬೇಕು.‌ ಯಾರ್ಯಾರಿಗೆ ಬೆದರಿಕೆ ಇದೆ ಅವರಿಗೆ ಸರ್ಕಾರ ಭದ್ರತೆ ಕೊಡಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ. 
 
ಸದ್ಯ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ  ಮಂಗಳೂರಿಗೆ ಎಡಿಜಿಪಿ ಅಲೋಕಕುಮಾರ ಕೂಡಲೇ ಭೇಟಿ ನೀಡಬೇಕು. ರಾಜ್ಯದ ಯಾವ ಭಾಗದಲ್ಲೂ ಹಿಂದೂ ಕಾರ್ಯಕರ್ತರು ಸುರಕ್ಷಿತವಾಗಿಲ್ಲ. ಸರಕಾರದ ಇದಕ್ಕೆ ಕಡಿವಾಣ ಹಾಕಲು ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಂದೋಲಾ ಸ್ವಾಮಿಜಿ ಆಗ್ರಹಿಸಿದ್ದಾರೆ.

2:49 PM IST:

ಪ್ರವೀಣ್ ನೆಟ್ಟಾರೂ ಹತ್ಯೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷ್ಮಣ್ ಗಂಭೀರ ಆರೋಪ. ಕರಾವಳಿ ಪ್ರದೇಶದಲ್ಲಿ ಈಗಾಗಲೇ ಶುರುಮಾಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತನ್ನ ಹತ್ಯೆ ಮಾಡಿದ್ದಾರೆ. ಇದರ ಹಿಂದೆ ನೂರಕ್ಕೆ ನೂರರಷ್ಟು ಬಿಜೆಪಿ ಕೈವಾಡ ಇದೆ.
ಸೂಕ್ತ ತನಿಖೆ ನಡೆದೆರೆ ತಪ್ಪಿತಸ್ಥರು ಸಿಕ್ತಾರೆ. ಬಡವರು, ಶೂದ್ರರ ಮುಂದೆ ಬಿಟ್ಟು ಹೊಡೆಯುವ ಕೆಲಸವನ್ನ ಇವರೇ ಮಾಡ್ತಾರೆ. ಇವರೆ ಮಾಡಿ ಕಿಡಿಯಚ್ಚುವ ಕೆಲಸ ಮಾಡ್ತಾರೆ.
ರಾಜ್ಯದ ಜನರು ಬಹಳ ಹುಷಾರಾಗಿರಬೇಕು. ಬಿಜೆಪಿ ಮಾಡಿರುವ ಕಾರ್ಯಕ್ರಮ ಏನು ಇಲ್ಲ. 28ಕ್ಕೆ ಬೊಮ್ಮಯಿ ಒಂದು ವರ್ಷ ಕಂಪ್ಲಿಟ್ ಮಾಡ್ತಾರೆ. ಎನು ಮಾಡಿದ್ದಿರಿ ? ಲಾ ಅಂಡ್ ಆರ್ಡರ್ ರಾಜ್ಯದಲ್ಲಿ ಹಾಳಾಗಿದೆ. ಆರ್.ಎಸ್.ಎಸ್ ನವರು ಅರಗ ಜ್ಞಾನೇಂದ್ರರನ್ನು ಹೋಂ ಮಿನಿಸ್ಟರ್ ಮಾಡಿದ್ದೀರಿ. ಆತನಿಗೆ ಅರೆಬರೆ ಜ್ಞಾನ ಇದೆ ಹುಚ್ಚನ ತರ ಸ್ಟೇಟ್ ಮೆಂಟ್ ಕೊಡುವ ವ್ಯಕ್ತಿ. ಸುನಿಲ್ ಕುಮಾರ್ ಕ್ರಿಮಿನಲ್ ವ್ಯಕ್ತಿ. ಕರಾವಳಿ ಪ್ರದೇಶವನ್ನ ಸಂಪೂರ್ಣ ನಾಶ ಮಾಡಿದ್ರು. ದಿನ ಬೆಳಿಗ್ಗೆ ಎದ್ರೆ ಕೋಮು ಗಲಭೆ. ಬಿಜೆಪಿ ಅವರ ಏಕೈಕ ಗುರಿ ಮುಸ್ಲಿಮರು. ಈ ಪ್ರಕರಣ ಸಂಬಂಧ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಸಬೇಕು. ಆಗ ನೂರಕ್ಕೆ ನೂರರಷ್ಟು ಬಿಜೆಪಿ ಅವರೇ ಈ ಕೇಸ್‌ನಲ್ಲಿ ಇರುತ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್.

2:44 PM IST:

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಿಡಿ. ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೆ ಸಂಘಟನೆಯಲ್ಲಿ ಕೆಲಸ ಮಾಡಲ್ಲ ಎಂದು ಕಿಡಿ. ಹೊಸದುರ್ಗ ಮಂಡಲ ಉಪಾಧ್ಯಕ್ಷ ಮಂಜು ಸಾಣೇಹಳ್ಳಿ, ಹೊಸದುರ್ಗ ಮಂಡಲ ಕಾರ್ಯದರ್ಶಿ ಎನ್.ಆರ್.ಜಗದೀಶ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ರಮೇಶ್ ಗೂಳಿಹಟ್ಟಿ ಕಿಡಿ. ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿದ ಮುಖಂಡರು. ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಆಕ್ರೋಶ. ಇನ್ನು ಮಂಗಳೂರಿನಲ್ಲೂ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಮೃತ ಪ್ರವೀಣ್‌ ಪಾರ್ಥಿವ ಶರೀರ ದರ್ಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟಿಲ್‌, ಸಚಿವ ಸುನೀಲ್‌ ಕುಮಾರ್‌ ಅವಕಾಶ ನೀಡಲಿಲ್ಲ. 

2:31 PM IST:

ಬೆಳ್ಳಾರೆ ಬಸ್ ನಿಲ್ದಾಣ ಬಳಿ ಆಕ್ರೋಶಿತ ಗುಂಪಿನಿಂದ ಮಸೀದಿಗೆ ಕಲ್ಲು ತೂರಾಟ, ಸಮೀಪದ ಅಂಗಡಿ ಕಲ್ಲುತೂರಾಟ, ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದ ಪೊಲೀಸರು. ಪ್ರವೀಣ್ ಪಾರ್ಥಿವ ಶರೀರ ಮೆರವಣಿಗೆ ವೇಳೆ ನಿಂತಿಕಲ್ ನಲ್ಲಿ ನಿಂತಿದ್ದ ವಾಹನಕ್ಕೆ ಜಖಂಗೊಳಿಸಿದ ಕಿಡಿಗೇಡಿಗಳು.

1:46 PM IST:

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಲು ಸಚಿವ ಮಾಧುಸ್ವಾಮಿ ನಿರಾಕರಿಸಿದ್ದಾರೆ. ಹತ್ಯೆ ನಡೆದ 15 ಗಂಟೆ ಕಳೆದರು ಮಾಹಿತಿ ತೆಗೆದುಕೊಳ್ಳದ ಸಚಿವ ಮಾಧುಸ್ವಾಮಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ. ಪ್ರಕರಣದ ಗಂಭೀರತೆ ಅರಿತುಕೊಳ್ಳದ ಸಚಿವ ಮಾಧುಸ್ವಾಮಿ. ಘಟನೆ‌ ಬಗ್ಗೆ ಮಾಹಿತಿ ಇಲ್ಲ ಬೆಂಗಳೂರಿಗೆ ತೆರಳಿ ತಿಳಿದುಕೊಳ್ಳುತ್ತೇನೆಂದ ಸಚಿವ ಮಾಧುಸ್ವಾಮಿ. ಬಿಜೆಪಿ ಕಾರ್ಯಕರ್ತರಿಗೂ ಧೈರ್ಯದ ಮಾತು‌ ಹೇಳುವುದಕ್ಕೂ ಸಚಿವ ಹಿಂದೇಟು.‌ ಕಾನೂನು ಸಚಿವರ ಉಡಾಫೆ ಉತ್ತರ. ತಮ್ಮದೇ ಪಕ್ಷದ ಕಾರ್ಯಕರ್ತನ ಕಗ್ಗೊಲೆಯಾದ್ರೂ ಕಾನೂನು ಸಚಿವರಿಗೆ ಮಾಹಿತಿಯಿಲ್ಲ. ನನಗೆ ಪೂರ್ಣ ಮಾಹಿತಿಯಿಲ್ಲ, ಹಾಗಾಗಿ ಅರ್ಧಂಬರ್ಧ ತಿಳಿದು ಪ್ರತಿಕ್ರಿಯೆ ನೀಡಲ್ಲ. ಕಾಂಟ್ರೋವರ್ಸಿ ಇರೋದ್ರಿಂದ ನಾನು ಮಾತನಾಡಲ್ಲ, ಪೂರ್ಣ ಪ್ರಮಾಣದ ಮಾಹಿತಿ ತರಿಸಿಕೊಂಡು ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. 

1:40 PM IST:

ವಿಧಾನಸೌಧದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ. ಇಂತಾ ಘಟನೆಗಳು ನಮಗೆ ನೋವು ತರುತ್ತದೆ. ಹರ್ಷ, ಚಂದ್ರು, ಪ್ರವೀಣ್  ಈ ರೀತಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಟಾರ್ಗೆಟ್ ಆಗಿದೆ. ಇದು ಕೊನೆ ಯಾವಾಗ? ಉ. ಪ್ರದೇಶದ ಯೋಗಿ ಆದಿತ್ಯ ನಾಥ್ ರೀತಿ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಇದು ಕೊನೆಯಾಗಲ್ಲ. ಕೇವಲ ಬಾಯಿ ಮಾತಿನಲ್ಲಿ ಕಠಿಣಕ್ರಮ,ಎನ್ ಕೌಂಟರ್ ಅನ್ನೋ ಮಾತುಗಳನ್ನು ಹೇಳಿದರೆ ಪ್ರಯೋಜನ ಇಲ್ಲ. ನನಗೇ ಎರಡು ಭಾರಿ ಬೆದರಿಕೆ ಕರೆ ಬಂದರೂ ಏನೂ ಪತ್ತೆ ಹಚ್ಚಲು ಆಗಲಿಲ್ಲ. ಸಾಮಾನ್ಯ ಕಾರ್ಯಕರ್ತರ ಗತಿ ಏನು? ಮಾದ್ಯಮ ದ ಮುಂದೆ ಮಾತಾಡಲು ನನಗೇ ಮುಜುಗರ ಆಗುತ್ತದೆ. ಯಾರೇ ಆಗಿದ್ದರೂ ಪತ್ತೆ ಹಚ್ಚ ಬೇಕು. ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ ಅವರ ಮನೆಗೆ ಕಳಿಸಿಕೊಡುತ್ತೇನೆ.

1:36 PM IST:

ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಬೆಳ್ಳಾರೆಯಲ್ಲಿ ನಾಯಕರಿಗೆ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡದ ಬಿಜೆಪಿ ಕಾರ್ಯಕರ್ತರು. ಸ್ಥಳದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್ ಹಾಗೂ ಅಂಗಾರ ಅವರಿಗೆ ದಿಗ್ಬಂಧನ ಹಾಕಿ ಧಿಕ್ಕಾರ ಘೋಷಣೆ ಕೂಗಿದರು. ಮಂಗಳೂರಿನಾದ್ಯಂತ ಬಿಜೆಪಿ ನಾಯಕರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಬಿಜೆಪಿ ನಾಯಕರ ಕೈಯಲ್ಲಿ ಏನೂ ಆಗಲ್ಲ, ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಲೇ ಇರುತ್ತವೆ. ಬಿಜೆಪಿಯವರೇ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಬುದ್ಧಿ ಕಲಿಸುತ್ತೀವಿ ಎಂದು ಕಾರ್ಯಕರ್ತರು ಧಿಕ್ಕಾರ ಕೂಗುತ್ತಿದ್ದಾರೆ. 

1:10 PM IST:

ಪುತ್ತೂರಿನಲ್ಲಿ ಹತ್ಯೆಯಾದ ಯುವಮೋರ್ಚಾ ಮುಖಂಡ ಪ್ರವೀನ್ ನೆಟ್ಟಾರೆ ಹತ್ಯೆ ಖಂಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಯಾವುದೇ ತಪ್ಪಿಲ್ಲದ ಹಿಂದುತ್ವವಾದಿಗಳನ್ನು ಮುಸ್ಲಿಮರು  ಕಗ್ಗೊಲೆ, ಹಲ್ಲೆ ಮಾಡ್ತಾ ಇದ್ದಾರೆ. ಮಂಗಳೂರಿನ ಬಿಜೆಪಿ ಕಾರ್ಯಕರ್ತನ ಕೊಲೆ ಎಲ್ಲಾ ರಾಜಕೀಯ ಪಕ್ಷಗಳು ಖಂಡಿಸಬೇಕು. ಸಿಎಂ, ಗೃಹ ಸಚಿವ ಇಬ್ಬರು ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ. ಹಿಂದೂಗಳ ಸಂಯಮವನ್ನು ಪರೀಕ್ಷಿಸಬಾರದು. ಹಿಂದುತ್ವವಾದಿಗಳು ಎಷ್ಟು ದಿನ ಶಾಂತಿಯಿಂದ ಇರ್ತಿರಾ? ಗೂಂಡಾ ಮುಸ್ಲಿಂಗಳಿಗೆ ಹಿಂದೂಗಳನ್ನು ಶಾಂತಿಯಿಂದ ಇರರ್ತಾರೆ ಎಂದು ಭಾವಿಸಿದ್ದರೇ ಎಚ್ಚರಿಕೆಯಿಂದ ಇರಿ. ಕಾನೂನು ಬದ್ದವಾಗಿ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಿಎಂ ಯೋಚನೆ ಮಾಡಬೇಕು. ಹರ್ಷನ ಪ್ರಕರಣ ಎನ್ಐಎ ತನಿಖೆಗೆ ಒಳಪಡಿಸಿದ್ದಾರೆ. ಹಿಂದೂಗಳು ಎನ್ ಬೇಕಾದರೂ ಮಾಡಿ, ನಾವು ಕೊಲೆ ಮಾಡ್ತಿವಿ ಎಂದು ಮುಸ್ಲಿಂ ಗೂಂಡಾಗಳ ಮನಸ್ಥಿತಿ ಇದೆ. ಇದನ್ನು ಮುಸ್ಲಿಂ ಗೂಂಡಾಗಳು ಬದಲಿಸಿ ಕೊಳ್ಳ ದಿದ್ದರೇ ಖಂಡಿತ  ಎಚ್ಚರಿಕೆ ವಹಿಸಬೇಕ,  ಎಂದಿದ್ದಾರೆ. 

12:34 PM IST:

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 15 ಜನ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಿಯರೊಬ್ಬರ ಸಹಾಯದಿಂದ ಹತ್ಯೆ ಬಗ್ಗೆ ಅನುಮಾನ. 15 ಜನರನ್ನು ವಿಚಾರಣೆಗೆ ಒಳಪಡಿಸಿದ ಸ್ಥಳಿಯ ಪೊಲೀಸರು. ಸುವರ್ಣ ನ್ಯೂಸ್ ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ. ಅನುಮಾನಿತರ ವಿಚಾರಣೆ ನಡೆಯುತ್ತಿದೆ. ಈವರೆಗೂ ಇನ್ನೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ವಿಚಾರಣೆ ನಂತರ ಬಂಧನದ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

12:31 PM IST:

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ. ಪ್ರವೀಣ್ ನೆಟ್ಟಾರ್ ಒಬ್ಬ  ಮಾನವೀಯ ಕಳಕಳಿ ಇರೋ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ ಅವರಾಗಿದ್ದರು. ನಾನು ಶಬ್ದಗಳಲ್ಲಿ ಸಂತಾಪ ಸೂಚಿಸುವುದಿಲ್ಲ. ಜಿಹಾದಿ ಮಾನಸಿಕತೆಗೆ ಕೊನೆಯೇ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ನಾವು ಮಾಡ್ತಾನೆ ಇರ್ತೀವಿ, ಕಠಿಣ ಕ್ರಮ ತೆಗೆದುಕೊಳ್ಳಿ ನೋಡೋಣ ಅನ್ನೋ ಮನಸ್ಥಿತಿ ಅವರದ್ದು. ಕೇಂದ್ರದಲ್ಲಿ, ರಾಜ್ಯದಲ್ಲಿ ಎರಡೂ ಕಡೆ ನಾವೆ ಇದ್ರೂ ಏನೂ ಮಾಡಲಾಗ್ತಿಲ್ಲ. ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ತಿದ್ದಾರೆ‌. ಸಿಎಂ ಭೇಟಿ ಮಾಡಲು ಹೋಗ್ತಿದ್ದೇನೆ. ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಕಾರ್ಯಕರ್ತರ ಭಾವನೆ ಜೊತೆಗೆ ನಾವೂ ಇದ್ದೇವೆ‌. ಕೇವಲ‌ ಅಧಿಕಾರ ಮಾಡಲು ಬಂದಿಲ್ಲ. ಅವರ ಭಾವನೆ ಜೊತೆಗೆ ನಾವೂ ನಿಲ್ತೇವೆ. ವ್ಯವಸ್ಥೆಯನ್ನ ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕು. ಅಮರಾವತಿಯಲ್ಲಿ, ಉದಯ್ ಪುರದಲ್ಲಿ ನಡೆದ ಒಂದು ಘಟನೆಯ ಭಾಗ ಇದು. ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ ಅನ್ನೋ ಆರೋಪ‌ ಇದೆ. ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು, ಈಗ ಹಿಂದೂ ಪರ ಸರ್ಕಾರ ಇದೆ. ಆದ್ರೂ ಹೀಗಾಗ್ತಿದೆ ಅನ್ನೋ ಆತಂಕ ಕಾರ್ಯಕರ್ತರದ್ದು. ನಾವು ಸಮರ್ಥನೆ ಮಾಡಿಕೊಳ್ಳೋದಿಲ್ಲ. ಜಿಹಾದ್ ಕಿತ್ತುಹಾಕಲು ನಾವು ಬದ್ದರಿದ್ದೇವೆ. ನಾವೀಗ ಆಕ್ಷನ್ ಮಾಡದಿದ್ರೆ ನಾವೇ ಹೊಣೆ ಹೊರಬೇಕಿತ್ತು. ಹಿಂದಿನ ಸರ್ಕಾರ ಓಟ್ ಬ್ಯಾಂಕ್‌ಗಾಗಿ ಓಲೈಕೆ ಮಾಡ್ತಿತ್ತು. ಆದ್ರೆ ನಾವು ಆ ರೀತಿ ಯಾವುದೇ ಓಲೈಕೆ ಇಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ. ಕಠಿಣ ಕ್ರಮ ಕೈಗೊಳ್ಳೋದ್ರ ಜೊತೆ, ಅಪರಾಧಿಗಳನ್ನ ಬಂಧಿಸಲು ಮನವಿ ಮಾಡ್ತೇನೆ ಎಂದು ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

10:51 AM IST:

ಉಡುಪಿ ಹಿಂದೂ ಸಘಂಟನೆ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಮಾಯಕ ಕೊಲೆಯಾದಾಗ ಸಾರ್ವಜನಿಕ ಆಕ್ರೋಶ ಸಹಜ. ಈಗಾಗಲೇ ಗೃಹ ಸಚಿವರು ಎಸ್‌ಪಿ ಜತೆ ಮಾತನಾಡಿದ್ದಾರೆ. ಕೇರಳ ಗಡಿಭಾಗವಾದ್ದರಿಂದ ಅಲ್ಲಿಗೆ ಓಡಿ ಹೋಗಿರುವ ಸಾಧ್ಯತೆಯಿದೆ. ಕೇರಳದಲ್ಲಿ ಕಾರ್ಯಾಚರಣೆ ಮಾಡಿಯಾದರೂ ಬಂಧಿಸಬೇಕೆಂದು ಆದೇಶಿಸಲಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಪ್ರವೀಣ್ ಅವರ ಹಿಂದೆ ಬಂದು ಮೋಸದಿಂದ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆಯನ್ನು ಕೊಡಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. 

10:38 AM IST:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಳಾರಿಯಲ್ಲಿ ನಡೆದಿರುವ ಘಟನೆಯನ್ನ ಖಂಡಿಸಿರುವ ಪ್ರಮೋದ್‌ ಮುತಾಲಿಕ್‌ ಮುಸ್ಮಾನ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ವೈಫಲ್ಯದಿಂದ ಈ ರೀತಿ ಘಟನೆಗಳು ನಡೆಯುತ್ತಿವೆ ಎಂದು ಹರಿಹಾಯ್ದಿದ್ದಾರೆ. ಮುಸಲ್ಮಾನರ ಈ ಕ್ರೌರ್ಯವನ್ನ ಸರಕಾರ ಕೂಡಲೆ‌ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಹೀಂದೂಗಳ ಹತ್ಯೆ ಆಗುತ್ತಲೆ ಇರುತ್ತದೆ. ಕೊಲೆಯಾದ ಬಳಿಕ ನಿಮ್ಮ‌ಉಗ್ರವಾದ ಹೇಳಿಕೆಗಳು ಬರುತ್ತಲೆ ಇರುತ್ತವೆ. ಕಾನೂನು ಮತ್ತು ಸರಕಾರದ ವೈಫಲ್ಯಕ್ಕೆ ದಿಂದ ಇಂತಹ ಘಟನೆಗಳು ಆಗುತ್ತವೆ. ಕೇಂದ್ರ, ರಾಜ್ಯ ಸರಕಾರಕ್ಕೆ‌ ದೇಶದ ಹಿತ ಕಾಪಾಡು ಮನಸ್ಸು ಇದ್ರೆ ಎಸ್ ಡಿ ಪಿಐ, ಮತ್ತು ಪಿಎಪ್ ಐ ನ್ನ ಬ್ಯಾನ್ ಮಾಡಬೇಕು. ಮುಸ್ಲಿಂ ಸಮುದಾಯಕ್ಕೆ‌ ಮುತಾಲಿಕ್ ಸವಾಲು ಹಾಕಿದ್ದಾರೆ. ಹಿಂದೂಗಳು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬ ಮುಸ್ಲಿಂ ಇರಬಾರದು ಹಾಗೆ ಮಾಡಬೇಕಾಗುತ್ತೆ. ಕೊಲೆಗೆ ಕೊಲೆಯೇ ಉತ್ತರವಲ್ಲ ಕಾನೂನೂ ಇದೆ ಹೋರಾಟ ಮಾಡಿ. ಮುಲ್ಲಾ ಮೌಲ್ವಿಗಳು ನಿಮ್ಮ‌ ಯುವಕರನ್ನ, ಎಸ್ ಡಿ ಪಿ ಐ, ಪಿ ಎಪ್ ಐ ಸಂಘಟನೆಗಳನ್ನ ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ರೆ ನಾವೂ ತಿರುಗಿಬಿಳಬೇಕಾಗುತ್ತೆ. ಆ ಸಮಯದಲ್ಲಿ ಶಾಂತಿ ಕಾಪಾಡಿ ಅಂದ್ರೆ ಆಗಲ್ಲ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್.

10:04 AM IST:

ಪುತ್ತೂರಿನಲ್ಲಿ ಹಿಂದೂ ಯುವಮೋರ್ಚಾ ಮುಕಂಡ ಪ್ರವೀಣ್ ನೆಟ್ಟಾರು ಹತ್ಯೆ  ದುರದೃಷ್ಟಕರ. ಈ ವಿಚಾರ ತಿಳಿಯುತ್ತಿದ್ದಂತೆ ಹಿರಿಯ ಪೋಲೀಸ್ ಅಧಿಕಾರ ಗಳ ಜೊತೆ ಮಾತಾಡಿದ್ದೇನೆ. ಜನರಲ್ಲಿ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ತೇನೆ. ಸದ್ಯದಲ್ಲೇ ಆರೋಪಿಗಳ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎದಿದ್ದಾರೆ. ಕಠಿಣ ಕ್ರಮ ಅಂದ್ರೆ ಏನು? ಎಂಬ ಪ್ರಶ್ನೆಗೆ, ಹಿಂದೆ ಹತ್ಯೆಗಳಾದಾಗ ಆರೋಪಿಗಳನ್ನು ಬಂಧಿಸಿದ್ದೇವೆ. ಯಾರನ್ನೂ ನಾವು ಬಿಟ್ಟಿಲ್ಲ. ಯಾರೂ ತಲೆತಪ್ಪಿಸಿಕೊಂಡು ಹೋಗಲು ನಾವು ಬಿಟ್ಟಿಲ್ಲ. ಕರಾವಳಿ ಭಾಗಗಳಲ್ಲಿ ಬಹಳ ವರ್ಷಗಳಿಂದ ಇಂಥ ಘಟನೆಗಳು ಆಗುತ್ತಿದ್ದವು. ಹಿಜಾಬ್ ಪ್ರಕರಣದ ಹಿಂದೆ ಮತೀಯ ಶಕ್ತಿಗಳಿವೆ. ಇವು ರಕ್ತಪಾತವನ್ನು ಬೆಂಬಲಿಸುತ್ತಿವೆ. ಕರಾವಳಿಯಲ್ಲಿ ಈ ಶಕ್ತಿಗಳು ತಲೆ ಎತ್ತುತ್ತಿವೆ. ಸರ್ಕಾರ ಇದರ ಮೇಲೆ ಕಣ್ಣಿಟ್ಟಿವೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡೇ ತೆಗೆದು ಕೊಳ್ತೀವಿ, ಎಂದಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:49 AM IST:

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:49 AM IST:

ಪುತ್ತೂರು ವಿಭಾಗದ ಮೂರು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪುತ್ತೂರು ಉಪವಿಭಾಗಾಧಿಕಾರಿ  ಗಿರೀಶ್ ನಂದನ್ ಆದೇಶ. ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಸಂಸ್ಕಾರದ ವೇಳೆ ಮೆರವಣಿಗೆ ಬೇಡ ಅಂತ ಸಂಬಂಧಿಕರಿಗೆ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ. ಪ್ರವೀಣ್ ಸಂಬಂಧಿ ಜಯರಾಮ್‌ಗೆ ಫೋನ್‌ನಲ್ಲಿ ಮನವಿ ಮಾಡಿದ ಡಿವೈಎಸ್ಪಿ ಗಾನಾ ಕುಮಾರಿ. ಈ ವೇಳೆ ಗಾನಾ ಕುಮಾರಿಗೆ ತಿಳಿ ಹೇಳಿದ ಸಂಬಂಧಿ ಜಯರಾಮ್. ನಮ್ಮ ಮನೆಯಿಂದ ಹೊರಗೆ ಬಂದವರು ಮನೆಗೆ ಹೋಗುವ ಗ್ಯಾರಂಟಿ ಇಲ್ಲ. ನಮ್ಮ ಮೆರವಣಿಗೆಯಲ್ಲಿ ಯಾವುದೇ ರಿಸ್ಕ್ ಇಲ್ಲ, ನಮ್ಮ ಕಾರ್ಯಕರ್ತರು ಶಾಂತವಾಗಿ ಹೋಗ್ತಾರೆ. ಹೊರಗಡೆ ಯಾರಾದ್ರೂ ಏನಾದ್ರೂ ಮಾಡಿದ್ರೆ, ನಾವು ಏನೂ ಮಾಡಲು ಆಗಲ್ಲ. ಅವನಂತೆಯೇ ನಾವು ಶಾಂತಿಯಿಂದ ಹೋಗ್ತೇವೆ, ಅದು ನಾವು ಮಾಡ್ತೇವೆ. ನಮಗೆ ಮೆರವಣಿಗೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. 

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ

9:42 AM IST: