Karnataka News Updates: ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸೋಮವಾರ ಇಬ್ಬರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ತಿಕ್ಕಾಟ ಮುಂದುವರೆದಿದೆ. ಇನ್ನು ಆರೋಗ್ಯ ಸಚಿವ ಸುಧಾಕಾರ್‌ ಉತ್ತರ ಕನ್ನಡದಲ್ಲಿ ಮಲ್ಟಿಪಲ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ್ದಾರೆ.  ಮಂಡ್ಯದಲ್ಲಿ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರ ಬೈಕ್ ರ‍್ಯಾಲಿ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳ ಕ್ವಿಕ್‌ ರೌಂಡಪ್‌ ಇಲ್ಲಿದೆ. 

5:00 PM

ಸೆರೆಯಾದ ಶಂಕಿತ ಉಗ್ರ ಕೋರ್ಟ್ ಮುಂದೆ ಹಾಜರು

ಸಿಸಿಬಿ ಪೊಲೀಸರಿಂದ ಶಂಕಿತ ಉಗ್ರನ ಬಂಧನ ಪ್ರಕರಣ. ಸಿಸಿಬಿ ಟೆಕ್ನಿಕಲ್ ವಿಂಗ್‌ನಿಂದ ಮುಂದುವರೆದ ತನಿಖೆ. ಶಂಕಿತ ಉಗ್ರ ಅಖ್ತರ್ ಪ್ರತಿ ಮಾಹಿತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರ ಪೊಲೀಸರು. ಅಖ್ತರ್ ಮೊಬೈಲ್ ಅನ್ನ ಸಂಪೂರ್ಣ ಪರಿಶೀಲನೆ ಮಾಡ್ತಿರೋ ಟೆಕ್ನಿಕಲ್ ಟೀಂ. ಶಂಕಿತ ಉಗ್ರನಿಗೆ ಸತತವಾಗಿ ಕಾಂಟ್ಯಾಕ್ಟ್ ಇರೋದ್ರ ಬಗ್ಗೆ ಮಾಹಿತಿ ಕಲೆ. ಶಂಕಿತ ಉಗ್ರನ ಬಳಿ ಸಿಕ್ಕಿರೋ ಕೆಲ ಡಿವೈಸ್ ಅನ್ನೂ ಪರಿಶೀಲನೆ ನಡೆಸ್ತಿರೋ ಸಿಸಿಬಿ ಟೀಂ. ಶಂಕಿತ ಉಗ್ರ ಬಳಸ್ತಿದ್ದ ಇಂಟರ್ನೆಟ್ ಡಿವೈಸ್, ನೆಟವರ್ಕ್,  ಆತ ಸರ್ಚ್ ಮಾಡ್ತಿದ್ದ ಪ್ರಮುಖ ವೆಬ್ಸೈಟ್‌ಗಳು ಎಲ್ಲವನ್ನೂ ಪರಿಶೀಲನೆ ಮಾಡ್ತಿರೋ ಸಿಸಿಬಿ ಟೀಂ. ಎಫ್ ಬಿ, ಟ್ವಿಟ್ಟರ್, ಟೆಲಿಗ್ರಾಂ ಅಕೌಂಟ್‌ಗಳ ಬಗ್ಗೆ ಪರಿಶೀಲನೆ. ಶಂಕಿತನ ಮ್ಯೂಚುಯಲ್‌ ಫ್ರೆಂಡ್ಸ್ ಬಗ್ಗೆ ಪರಿಶೀಲನೆ. ಅನುಮಾಸ್ಪದ ಅಕೌಂಟ್ ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಟೆಕ್ನಿಕಲ್ ವಿಂಗ್. ಮತ್ತೊಂದೆಡೆ ಶಂಕಿತ ಉಗ್ರನ ಜಿತೆಯಿದ್ದ ಮೂವರನ್ನ ತೀವ್ರ ವಿಚಾರಣೆ ನಡೆಸ್ತಿರೋ ಸಿಸಿಬಿ ಪೊಲೀಸರು. ಯಾವಾಗಿಂದ ಶಂಕಿತ ಇವರಿಗೆ ಪರಿಚಯ, ಆತನ ವರ್ತನೆ ಹೇಗಿತ್ತು, ಆತ ಯಾರ ಜೊತೆ ಜಾಸ್ತಿ ಮಾತಾಡ್ತಿದ್ದ? ಏನಾದ್ರು ಕೊಡ್ ವರ್ಡ್ ಬಳಸ್ತಿದ್ನಾ? ಯಾವ್ಯಾವ ಡಿವೈಸ್ ಯೂಸ್ ಮಾಡ್ತಿದ್ದ ಪ್ರತಿಯೊಂದನ್ನೂ ಕೇಳ್ತಿರೋ ಸಿಸಿಬಿ.

4:44 PM

ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ, ಜಾತಿಗೊಂದು ಸಿಎಂ ಸಾಧ್ಯವಿಲ್ಲ: ಅಶೋಕ್ ಗರಂ

ಕಾಂಗ್ರೆಸ್‌ನಲ್ಲಿ  ಸಿಎಂ ಖುರ್ಚಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಪರಮಾಪ್ತ ಶಾಸಕ ಜಮೀರ್ ಅಹಮ್ಮದ್ ಖಾನ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಡುವ ಭರದಲ್ಲಿ ಜಮೀರ್ ಅಹಮ್ಮದ್ ಖಾನ್ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಹೀಗೆ...

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

4:28 PM

ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಾರವಾರ (ಉತ್ತರಕನ್ನಡ):  ಮಗುವಿನ‌ ಜತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಜಲವಳ್ಳಿ ಗ್ರಾಮದಲ್ಲಿ ಘಟನೆ. ವನಿತಾ ಮಂಜುಮಾಥ್ ನಾಯ್ಕ್ (ಅಂದಾಜು 28 ವರ್ಷ) ಹಾಗೂ ಮನಸ್ವಿ (ಅಂದಾಜು 2 ವರ್ಷ ಸಾವು. ಕೌಟುಂಬಿಕ ಕಾರಣದಿಂದ ಮನನೊಂದು ಮಗುವಿನ ಜತೆ ಬಾವಿಗೆ ಹಾರಿದ ತಾಯಿ. ಮೃತರ ಅಣ್ಣನಿಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು.

3:42 PM

ಆಲಮಟ್ಟಿ ಡ್ಯಾಂ ಬಳಿ ಬುರ್ಕಾ ತಂದ ಆತಂಕ..!

ಬೆಂಗಳೂರಿನಲ್ಲಿ ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು, ರಾಜ್ಯ ಉಗ್ರರ ಅಡಗುತಾಣವಾಗ್ತಿದೆಯಾ ಎನ್ನುವ ಅನುಮಾನಗಳು ಮೂಸುತ್ತಿವೆ. ಈ ನಡುವೆ ಬುರ್ಕಾಧಾರಿಯೊಬ್ಬ ಆಲಮಟ್ಟಿ ಡ್ಯಾಂ ಬಳಿ ಸುತ್ತಾಡುವ ಮೂಲಕ ಆತಂಕ ಮೂಡಿಸಿದ್ದಾನೆ. ಹೈ ಸೆಕ್ಯೂರಿಟಿ ಇರುವ ಆಲಮಟ್ಟಿ ಡ್ಯಾಂ ಬಳಿ ಬುರ್ಕಾಧಾರಿ ಸುತ್ತಾಟ ಹಲವು ಅನುಮಾನಗಳಿಗೆ ಕಾರಣವಾಗಿತ್ತಾದ್ರು, ಅಲ್ಲಿನ ಭದ್ರತಾ ಸಿಬ್ಬಂದಿಗಳು ವಿಚಾರಿಸಿದಾಗ ಅಚ್ಚರಿಯ ವಿಚಾರ ತಿಳಿದು ಬಂದಿದೆ. ಬುರ್ಕಾದಲ್ಲಿ ಇದ್ದದ್ದು ಅವನಲ್ಲ.. ಅವಳು ಅನ್ನೋದು ಗೊತ್ತಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

3:40 PM

ಹೇಮಂತ್ ಕೊಲೆ: ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕೆಂಗೇರಿ ಪೊಲೀಸ್ ಠಾಣೆಯ ಹೇಮಂತ್ ಕೊಲೆ ಪ್ರಕರಣ. ಜುಲೈ 16ರಂದು ರಾತ್ರಿ ಹೇಮಂತ್ ಬರ್ತಡೇ ಪಾರ್ಟಿ ಮಾಡಲು ಹೊರ ಹೋಗಿರುತ್ತಾನೆ. ಆದ್ರೆ, ಮನೆಗೆ ಹಿಂದಿರುಗಿರುವುದಿಲ್ಲ. ಮನೆಯವ್ರನ್ನು ಸಂಪರ್ಕಿಸಿರುವುದಿಲ್ಲ. ಬಳಿಕ ಜುಲೈ 17 ರಂದು ಕೋನಸಂದ್ರ ಬಳಿಯ ನೈಸ್ ರೋಡ್ ಅಂಡರ್ ಪಾಸ್ ಬಳಿ ಶವವಾಗಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ವೇಳೆ ಕೆ.ಜಿ. ನಗರ ಪೊಲೀಸರು ವಶಕ್ಕೆ ಪಡೆದ ವೇಳೆ ಹತ್ಯೆ ಬಗ್ಗೆ ವಿಡಿಯೋ ಲಭ್ಯವಾಗಿದೆ. ಆ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ. ಕುಳ್ಳು ರಿಜ್ವಾನ್, ಹರೀಶ್ ಹಾಗೂ ನಾಲ್ವರು ಬಾಲಾಪರಾಧಿಗಳನ್ನ ಬಂಧಿಸಲಾಗಿದೆ. ಈ ಹಿಂದೆ ಕುಳ್ಳು ರಿಜ್ವಾನ್ ಹಾಗೂ ಹರೀಶ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಹೇಮಂತ್ ಕುಮಾರ್. ಆ ಹಿನ್ನೆಲೆ ಹೇಮಂತ್ ಹತ್ಯೆಗೆ ಸ್ಕೆಚ್. ಹೇಮಂತ್ ಬರ್ತಡೇ ದಿನ ಪ್ಲಾನ್ ಮಾಡಿ ಹತ್ಯೆ. ಪಾರ್ಟಿ ಬಳಿಕ ಹೇಮಂತ್ ಸ್ನೇಹಿತರು ಬಿಟ್ಟು ಹೋಗಿದ್ದರು. ಆ ವೇಳೆ ಡ್ರಾಪ್ ಕೊಡುವ ನೆಪದಲ್ಲಿ ಹೇಮಂತ್ ನನ್ನ ಎರಡು ಬೈಕ್ ಗಳಲ್ಲಿ ಪಿಕಪ್ ಮಾಡಿದ್ದ ಹಂತಕರು. ಬಳಿಕ ಮಾರ್ಗಮಧ್ಯೆ ಕಿರಿಕ್ ತೆಗೆದ ಹಂತಕರು. ಆ ವೇಳೆಯೂ ಹೇಮಂತ್ ಕುಳ್ಳ ರಿಜ್ವಾನನ್ನು ನಿಂದಿಸಿದ್ದು. ನಾನು ಡಾನೇ ಅಂತ ಹರೀಶ್ ಬಳಿ ಬಡಾಯಿ ಕೊಚ್ಚಿಕೊಂಡಿದ್ದ ಹೇಮಂತ್. ಆ ಕೋಪದಿಂದ ಹತ್ಯೆಗೆ ಪ್ಲಾನ್ ಮಾಡಿದ್ದ ಹಂತಕರು. ಚಾಮರಾಜಪೇಟೆಯಲ್ಲಿ ಕುಡಿಯೋದಕ್ಕೆ ಬಂದಿದ್ದ ಹೇಮಂತ್. ಹೇಮಂತ್ ಸ್ನೇಹಿತ್ರರು ಹೆಚ್ಚಾಗಿ ಚಾಮರಾಜಪೇಟೆಯಲ್ಲಿದ್ದಾರೆ. ಬಳಿಕ ಪಾರ್ಟಿ ಮುಗಿದ ಮೇಲೆ ಪಿಇಎಸ್ ಕಾಲೇಜ ವರೆಗೆ ಡ್ರಾಪ್ ನೀಡಿದ್ದ ಹೇಮಂತ್ ಸ್ನೇಹಿತರು. ಆ ವೇಳೆ ಹೇಮಂತ್ ನನ್ನ ಹಿಂಬಾಲಿಸಿದ್ದ ಕುಳ್ಳು ರಿಜ್ವಾನ್ ಶಿಷ್ಯರು. ಡ್ರಾಪ್ ನೀಡೋ‌ ನೆಪದಲ್ಲಿ ಬೈಕ್ ಹತ್ತಿಸಿಕೊಂಡು ಕಿರಿಕ್. ಕಿರಿಕ್ ಬಳಿಕ ಪ್ಲಾನ್‌ನಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಕುಳ್ಳು ರಿಜ್ವಾನ್‌ಗೆ ರವಾನೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿರುವ ಕೆಂಗೇರಿ ಪೊಲೀಸರು. 

2:30 PM

ನಾವೆಲ್ಲ ಸಿದ್ದರಾಮಯ್ಯ ಋಣ ತೀರಿಸಬೇಕೋ ಬೇಡ್ವೋ?: ಜಮೀರ್ ಅಹ್ಮದ್

ಬರೀ ಸಿದ್ದರಾಮಯ್ಯ ಅವರು ಹುಟ್ಟಿದಬ್ಬ ಮಾತ್ರವಲ್ಲ, ಕಾಂಗ್ರೆಸ್ ಅಧ್ಯಕ್ಷರ ಬರ್ತಡೆಯನ್ನೂ ಮಾಡುವುದಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹುಟ್ಟುಹಬ್ಬವನ್ನು ನಾವೆಲ್ಲ ಸೇರಿ ಇದೆ ರೀತಿ ಮಾಡ್ತೀವಿ. ಅಭಿಮಾನಿಗಳ ಒತ್ತಡದಿಂದ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚಿಸುತ್ತಿದ್ದೇವೆ.  ಕಾಂಗ್ರೆಸ್ ಪಕ್ಷದಿಂದ ಮಾಡುತ್ತಿರೋದಲ್ಲ. ಅವರ ಅಭಿಮಾನಿಗಳು ಮಾಡ್ತಿರೋದು. ಅದರಲ್ಲಿ ಕಾಂಗ್ರೆಸ್ ಪಕ್ಷದವರು ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ, ಖರ್ಗೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ ಸೇರಿ ಕಾಂಗ್ರೆಸ್‌ನ ಎಲ್ಲ ನಾಯಕರೂ ಬರ್ತಿದ್ದಾರೆ. ಹಾವೇರಿ ಕಾಂಗ್ರೆಸ್‌ನ ಭದ್ರಕೋಟೆ.  ಎಲ್ಲಿ ಹೋದರೂ ಜನರು ಕುಣಿತಿದ್ದಾರೆ. ಸಿದ್ದರಾಮಯ್ಯ ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ.  ನಾವು ದೆಹಲಿಗೆ ಹೋದಾಗ ಸಿದ್ದರಾಮಯ್ಯಗೆ ಸಾಕಷ್ಟು ಫೋನ್ ಬಂದವು. ಜನರ ಒತ್ತಡ ಜಾಸ್ತಿಯಾದಾಗ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕೆಂದು ನಾನು ಓಡಾಡ್ತಿದ್ದೀನಿ. ಸಿದ್ದರಾಮಯ್ಯ ಅವರ ಋಣ ತೀರಿಸಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾಲದಲ್ಲಿ ಸಾಕಷ್ಟು ಹಣ ಕೊಟ್ಟಿದ್ದಾರೆ. ನಾವೆಲ್ಲ ಅವರ ಋಣ ತೀರಿಸಬೇಕೋ ಬೇಡ್ವೋ? ಎಂದು ಪ್ರಶ್ನೆ ಹಾಕಿದ ಜಮೀರ್.

2:22 PM

ಕಾಂಗ್ರೆಸ್ಸಿನಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ

ವಿಜಯಪುರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲ್ಲ ಎಂದು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಟಾಂಗ್ ನೀಡಿದ ಸಚಿವ ಕತ್ತಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸಿಎಂ ಆಗಲ್ಲ. ಸಿಎಂ ಆಗಬೇಕೆಂದು ಇನ್ಯಾರು ಹಂಬಲಪಡುತ್ತಿದ್ದಾರೆ? ಅವರು ಹಂಬಲ‌ ಪಡುತ್ತಿರಲಿ. ಎಲೆಕ್ಷನ್ ಆಗುವವರೆಗೂ ಅವರ ಚಟಗಳನ್ನು ತೀರಿಸಿಕೊಳ್ಳಲಿ. ಆದರೆ ಮರಳಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದ ಸಚಿವ ಕತ್ತಿ. ಬಿಜೆಪಿ ಒಳ್ಳೆಯ ಸರ್ಕಾರ ಕೊಡುತ್ತದೆ. ಈಗ ಒಳ್ಳೆಯ ಸರ್ಕಾರ ಕೊಟ್ಟಾಗಿದೆ. ಮುಂದೆಯೂ ಒಳ್ಳೆಯ ಸರ್ಕಾರ ಕೊಟ್ಟು ರಾಜ್ಯವನ್ನು ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಜಯಪುರ ‌ನಗರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿಕೆ.

2:10 PM

ಮಂಡ್ಯ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರಿಂದ ಬೈಕ್ Rally

ಕೃಷ್ಣರಾಜಸಾಗರ ಅಣೆಕಟ್ಟು (KRS) ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷತೆಗೆ ಅಪಾಯವಿರುವ ಕುರಿತು ಅಧ್ಯಯನ ನಡೆಸಲು ಜು.25 ರಿಂದ 31ರವರೆಗೆ ಪ್ರಾಯೋಗಿಕ ಸ್ಫೋಟ (Trial Blasts) ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

1:14 PM

ಪೊಲೀಸ್ ಆಯುಕ್ತರ ಕಚೇರಿ ಗೇಟಲ್ಲಿ ವಿಷ ಕುಡಿದ ವ್ಯಕ್ತಿ

ಪೊಲೀಸ್ ಆಯುಕ್ತರ ಕಚೇರಿ ಗೇಟಿನಲ್ಲಿ ವಿಷ ಕುಡಿದ ವ್ಯಕ್ತಿ. ವಿಜಯಪುರ ಮೂಲದ ಸಿದ್ದರಾಮಗೌಡ ಎಂಬಾತನಿಂದ ವಿಷ ಸೇವನೆ. ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯ ನೀಡಿಲ್ಲ. ಮಗಳ ವರದಕ್ಷಿಣೆ ಪ್ರಕರಣದಲ್ಲಿ ಅನ್ಯಾಯವಾಗಿದೆ. ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ. ಕಮಿಷನರ್ ಕಚೇರಿ ಹಿಂಬದಿ ಗೇಟ್ ಬಳಿ ವಿಷ ಸೇವಿಸಿದ ವ್ಯಕ್ತಿ. ವಿಷ ಸೇವಿಸಿ ನಿತ್ರಾಣವಾಗಿ ಬಿದ್ದಿದ್ದ ಸಿದ್ದರಾಮಗೌಡ. ಕೂಡಲೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ರವಾನಿಸಿದ ಪೊಲೀಸರು.

12:04 PM

ಶಂಕಿತ ಉಗ್ರನ ಬಂಧನ: ಸಿಸಿಬಿಗೆ ಜ್ಞಾನೇಂದ್ರ ಅಭಿನಂದನೆ

ಉಗ್ರ ಸಂಘಟನೆ ಯೊಂದಕ್ಕೆ ಸೇರಿದವನೆಂದು ಹೇಳಲಾದ ಶಂಕಿತ ಉಗ್ರ ನೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಉಗ್ರನ ಜೊತೆಗೆ ಇದ್ದ ಸ್ಥಳೀಯ ಸಹಚರರನ್ನು ಸಹ ವಿಚಾರಣೆ ನಡೆದಿದ್ದು, ಅವನು ನಡೆಸಿದ  ಚಟುವಟಿಕೆಗಳ  ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ, ಜಮ್ಮು ಕಾಶ್ಮೀರ ದಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹಾಗೂ ಓಕಳಿಪೂರ ಪ್ರದೇಶದಲ್ಲಿ, ನೆಲೆಸಿದ್ದ,  ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ ನಂತರ, ಮತ್ತೊಬ್ಬ ಉಗ್ರನನ್ನು ಪತ್ತೆ ಹಚ್ಚಿ,  ಬಂಧಿಸಿದ್ದಾರೆ.  ಇದಕ್ಕಾಗಿ, ಅವರನ್ನು ಅಭಿನಂದಿಸುತ್ತೇನೆ.

- ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

11:58 AM

ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ಅಗಸ್ಟ್ 11ರಂದು ಚುನಾವಣೆ

ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಅಗಸ್ಟ್ 11ರಂದು ಚುನಾವಣೆ. ಚುನಾವಣಾ ಅಧಿಸೂಚನೆ ಪ್ರಕಟಿಸಿದ ವಿಧಾನಸಭಾ ಕಾರ್ಯದರ್ಶಿ. ಇಂದಿನಿಂದ‌ ನಾಮಪತ್ರ ಸಲ್ಲಿಸಲು ಅವಕಾಶ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ್ 1. ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನ. ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆ. ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ. ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ. ಅವಿರೋಧ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಗಲು ಪೈಪೋಟಿ. ಆಡಳಿತಾರೂಢ ಬಿಜೆಪಿಯಲ್ಲಿ ಆರಂಭಗೊಂಡಿರುವ ಲಾಬಿ ಬುಧವಾರ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ.

11:55 AM

ಉತ್ತರ ಕರ್ನಾಟಕ್ಕೆ ಮಲ್ಟಿಪಲ್ ಸ್ಪೆಷಾಲಿಟಿ ಆಸ್ಪತ್ರೆ ಸಿಗೋ ಸೂಚನೆ

ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗ ಅವರೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮೂಲಸೌಕರ್ಯ ಅಗತ್ಯತೆಗಳ ಕುರಿತಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಆದಷ್ಟು ಬೇಗ ಒಂದು ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ.

1/3

— Dr Sudhakar K (@mla_sudhakar)

11:51 AM

'ತಮ್ಮ ಕ್ಷೇತ್ರದ ಮತದಾರರನ್ನು ಓಲೈಸಿಕೊಳ್ಳಲು ಈ ತಂತ್ರ'

ಕೆಎಸ್ಆರ್ಟಿಸಿಗೆ ಇರೋ ಏಕೈಕ ಆಸ್ಪತ್ರೆ  ಅದು ಜಯನಗರದ ಆಸ್ಪತ್ರೆ. ಈ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದ್ರೆ ಸಂಸದರ ಕಚೇರಿ ಮುಂದೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.  ಸಂಸದರು ತಮ್ಮ ಕ್ಷೇತ್ರದ ಮತದಾರರನ್ನು ಓಲೈಕೆ ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಆದ್ರೆ ಈ ಆಸ್ಪತ್ರೆ ನಂಬಿರುವ ಸಾವಿರಾರು ನೌಕರರಿದ್ದಾರೆ. ಇದನ್ನ ಖಾಸಗಿಗೆ ಕೊಟ್ರೆ ನೌಕರರು ಎಲ್ಲಿಗೆ ಹೋಗ್ಬೇಕು ಇದ್ರ ಹಿಂದೆ ಪ್ರಭಾವಿ ಸಂಸದರ ಸ್ವಹಿತಾಸಕ್ತಿ ಇದೆ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಕಿಡಿಕಾರಿರೋ ನೌಕರರ ಯೂನಿಯನ್ ಮುಖಂಡ ಅನಂತ್ ಸುಬ್ಬರಾವ್.

11:44 AM

ಜಾರಕಿಹೊಳಿ ಸಿಡಿ ಕೇಸ್: ವಾದದ ಲಿಖಿತ ಸಾರಾಂಶ ಸಲ್ಲಿಸಲು ಸೂಚನೆ

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ. ವಾದದ ಲಿಖಿತ ಸಾರಾಂಶವನ್ನು ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿದಾರರು ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚಿಸಿದೆ. ಪ್ರಕರಣದ ಅಂತಿಮ ವಿಚಾರಣೆ ಸೆ 5ಕ್ಕೆ ನಿಗದಿಪಡಿಸಿದ ಹೈಕೋರ್ಟ್. ಕೋರ್ಟ್‌ಗೆ ಸಲಹೆ‌ ನೀಡಲು ಅಮಿಕಸ್ ಕ್ಯೂರಿ ನೇಮಕ. ಹಿರಿಯ ವಕೀಲ ಸಂದೇಶ್ ಚೌಟರನ್ನು ನೇಮಿಸಿದ ಕೋರ್ಟ್. ಪ್ರಕರಣದ ಎಲ್ಲ ದಾಖಲೆಗಳನ್ನು ಒದಗಿಸಲು ರಿಜಿಸ್ಟ್ರಾರ್‌ಗೆ ಸೂಚನೆ.

11:29 AM

ಆಂಜನೇಯ ಸ್ವಾಮಿ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ‌ ಮಾಡಿ ವಿಕೃತಿ ಮೆರೆದ ದುರುಳ

ಹಾವೇರಿ: ಆಂಜನೇಯ ಸ್ವಾಮಿ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ‌ ಮಾಡಿ ವಿಕೃತಿ ಮೆರೆದ ದುರುಳ. ಹಾವೇರಿ ತಾಲೂಕಿನ ಗುತ್ತಲ ಸಮೀಪದ ಕನವಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ದೇವಸ್ಥಾನದ ಗೋಡೆಗೆ  ಮೂತ್ರ ವಿಸಜ೯ನೆ ಮಾಡಿರುವ ವಿಕೃತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಭಾನುವಾರ ಸಂಜೆ ನಡೆದಿದ್ದು, ಮೂತ್ರ ವಿಸರ್ಜನೆ ಮಾಡಿದವನನ್ನು ಕನವಳ್ಳಿ ಗ್ರಾಮದ ಅನ್ಯ ಕೋಮಿನ ಜಾಫರ್ ಹನೀಪಸಾಬ ಕನ್ಯಾನವರ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ ಹಿಂದೂ ಸಮಾಜದ ಮುಖಂಡರು ಹಾಗೂ ಯುವಕರು. ವಿಷಯ ತಿಳಿದು ಪಿಎಸ್ಐ ಜಗದೀಶ ಜಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಯಾವುದೇ ಗೊಂದಲ ಸೃಷ್ಟಿಯಾಗುವದು ಬೇಡ. ಇಂತಹ ಕೃತ್ಯ ಮಾಡಿದವನನ್ನು ಬಂಧಿಸಲಾಗುವದು ಎಂದು ಗ್ರಾಮಸ್ತರನ್ನು ಮನವರಿಕೆ ಮಾಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದವನಿಗೆ ಕಾನೂನ  ಬದ್ದವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ತಡರಾತ್ರಿಯೇ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. 

11:19 AM

ಜಮೀರ್ ಪರ ಬ್ಯಾಟಿಂಗ್, ಜಮೀರ್‌ ಸಿಎಂ ಆಗಲಿ ಎಂದ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ

ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರು ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸವದತ್ತಿ ತಾಲೂಕಿನ ಯಕ್ಕುಂಡಿ ವಿರಕ್ತಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಹಾರೈಸಿದ್ದಾರೆ. ಯಕ್ಕುಂಡಿ ವಿರಕ್ತಮಠಕ್ಕೆ ಜಮೀರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಈ ರೀತಿ ಹೇಳಿದ್ದಾರೆ.

11:17 AM

ASHA ಕಾರ್ಯಕರ್ತೆಯರ ಮೊಬೈಲ್ ಸೈಲೆಂಟ್; 4 ತಿಂಗಳಿಂದ ಆಗಿಲ್ಲ ರೀಚಾರ್ಜ್!

ಅಂಗನವಾಡಿ ಕಾರ್ಯಕರ್ತೆಯರ ಕಳೆದ 6 ತಿಂಗಳಿನಿಂದ ‌ಮೊಬೈಲ್ ನಿಶ್ಯಬ್ದಗೊಂಡಿದೆ. ಮತ್ತೊಂದು ಕಡೆ ತಳಮಟ್ಟದ ಮಾಹಿತಿ ಸಿಗದೇ ಪರದಾಡುತ್ತಿದೆ ಸರ್ಕಾರ. ಹೌದು, ರಾಜ್ಯದ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಬಂದ್ ಆಗಿದ್ದು,  ಕರೆನ್ಸಿ ಇಲ್ಲದೆ ಬಳಕೆಯಾಗುತ್ತಿಲ್ಲ ಸರ್ಕಾರಿ ಮೊಬೈಲ್ ಗಳು. ಅದರಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಡುವ ಗೌರವ ವೇತನದಲ್ಲಿ  (11,500 ರೂ. ) ಇದೀಗ ಮತ್ತೊಂದು ಹೊರೆ ಬೀಳುವಂತಾಗಿದೆ.ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಬೇಕು.ಆದ್ರೆ ಇದಕ್ಕಾಗಿ ಕಳೆದ ವರುಷ ಕೇಂದ್ರ ಸರ್ಕಾರ ಸ್ಮಾರ್ಟ್ ಫೋನ್ ನೀಡಿತ್ತು.ಮಕ್ಕಳ ಪೋಷಣ ಅಭಿಯಾನ ಜಾರಿಗಾಗಿ ಸ್ಮಾರ್ಟ್ ಫೋನ್ ನ್ನ ಅಂಗನವಾಡಿ ಕಾರ್ಯಕರ್ತರೆಯರಿಗೆ ನೀಡಲಾಗಿತ್ತು.ಮೊಬೈಲ್ ‌ಪೋನ್ ಜೊತೆಗೆ ಪ್ರತಿ ದಿನ ಎರಡು ಜಿಬಿ, ಅನ್ ಲಿಮಿಟೆಡ್ ಕಾಲ್ ಸೌಲಭ್ಯ ಹಾಗೂ ರೀಚಾರ್ಜ್ ಗೂ ಕೇಂದ್ರ ಸರಕಾರದ ಅನುದಾನ ಬಳಕೆಯಾಗುತ್ತಿತ್ತು.ಆದರೀಗ ಕಳೆದ 6 ತಿಂಗಳಿನಿಂದ ಅನುದಾನ ಸ್ಥಗಿತಗೊಂಡಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

10:50 AM

ಚಿತ್ತೂರು ಅಪಘಾತ: ಮೃತದೇಹಗಳು ಸ್ವಗ್ರಾಮಕ್ಕೆ

ಚಿತ್ತೂರು ಬಳಿ ಶಿವಾಜಿನಗರ ಪೊಲೀಸರ ಕಾರು ಅಪಘಾತ ಪ್ರಕರಣ. ಮೃತದೇಹಗಳು ಚಿತ್ತೂರಿನಿಂದ ನೇರವಾಗಿ ಸ್ವಗ್ರಾಮಕ್ಕೆ ರವಾನೆ. ನಿನ್ನೆ ತಡರಾತ್ರಿಯೇ ಸ್ವಗ್ರಾಮಕ್ಕೆ ರವಾನಿಸಿದ ಪೊಲೀಸರು. ಕುಟುಂಬಸ್ಥರ ಮನವಿ ಮೇರೆಗೆ ಸ್ವಗ್ರಾಮಕ್ಕೆ ರವಾನೆ. ಪಿಎಸ್ಐ ಅವಿನಾಶ್, ಕಾನ್ಸ್‌ಟೇಬಲ್ ಅನಿಲ್ ಮುಳಿಕ್ ಮತ್ತು ಚಾಲಕ ಮ್ಯಾಕ್ಸ್‌‌ ವೆಲ್ ಮೃತದೇಹಗಳನ್ನು ರವಾನಿಸಲಾಗಿದೆ. ಗಾಯಾಳು ಪಿಎಸ್ಐ ದೀಕ್ಷಿತ್ ಬೆಂಗಳೂರಿನ ಹಾಸ್ ಮ್ಯಾಟ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆ ವೆಲ್ಲೂರಿನ CMC  ಆಸ್ಪತ್ರೆಯಿಂದ ನೇರವಾಗಿ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಇಂದು ಪಿಎಸ್ಐ ದೀಕ್ಷಿತ್‌ಗೆ ಶಸ್ತ್ರ ಚಿಕಿತ್ಸೆ.  ಮತ್ತೊಬ್ಬ ಕಾನ್ಸ್‌ಟೇಬಲ್ ಶರಣಬಸವಗೆ ವೆಲ್ಲೂರಿನ CMC ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಕೆ. ಸದ್ಯ ಪ್ರಾಣಪ್ರಾಯದಿಂದ ಪಾರಾದ ಇಬ್ಬರು ಪೊಲೀಸರು. 10 ಗಂಟೆಯ‌ ಬಳಿಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆಸ್ಪತ್ರೆಗೆ ಭೇಟಿ. ಗಾಯಾಳು ಪಿಎಸ್ಐ ದೀಕ್ಷಿತ್ ಆರೋಗ್ಯ ವಿಚಾರಿಸಲಿರುವ ಕಮೀಷನರ್.

9:55 AM

ಬೆಂಗಳೂರಲ್ಲಿ ವೃದ್ಧೆಯನ್ನು ಕೊಂದವ ಅರೆಸ್ಟ್

ಷೇರು ಟ್ರೇಡಿಂಗ್‌ನಲ್ಲಿ ನಷ್ಟವಾಗಿದ್ದ ಕಾರಣಕ್ಕೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲ ಕೇಳಿದ್ದಕ್ಕೆ ಮನೆ ಮಾಲಕಿ ಅಪಮಾನ ಮಾಡಿದ್ದರು. ಈ ಸಿಟ್ಟಿಗೆ ಮನೆ ಮಾಲಕಿಯನ್ನೇ 91 ಬಾರಿ ಇರಿದು ಕೊಂದಿದ್ದ ಪಾಪಿ. ಬಳಿಕ ಚಿನ್ನಾಭರಣ ಕೊಂಡೊಯ್ದು ಗರವಿ ಇಟ್ಟು ಸಿಕ್ಕಿಬಿದ್ದ. ವೃದ್ಧೆಯ ಕೊಂದು ತಾನೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ. ಅನುಮಾನ ಬಾರದಂತಿರಲು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ.

ಸುದ್ದಿಗಾಗಿ ಇಲ್ಲಿ ಓದಿ

9:29 AM

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ

ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ, ಇದು ರೋಟೀನ್ ನಡೆಯುವ ಸಭೆ .ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಡೆಯಲಿದೆ. ಇವತ್ತು ಕೇಂದ್ರ ಸ್ಕೀಮ್‌ಗಳು, ಬೇರೆ ಬೇರೆ ರಾಜ್ಯಗಳಲ್ಲಿ ಯಾವ್ಯಾವ ಒಳ್ಳೆಯ ಯೋಜನೆಗಳು ಇವೆ ಎನ್ನುವುದು ಚರ್ಚೆ ಆಯ್ತು. ನಮ್ಮ ಐಟಿಐ, ಕಿಸಾನ್ ಸನ್ಮಾನ್ ಯೋಜನೆ, ಹೊಸ ಶಿಕ್ಷಣ ನೀತಿ ಯೋಜನೆ ಇಂಥ ಒಳ್ಳೆಯ ಯೋಜನೆಗಳಿವೆ.  ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಕ್ರೀಡಾಮಂತ್ರಿ ಅನುರಾಗ್ ಸಿಂಗ್ ಠಾಕೂರ್, ವಾಣಿಜ್ಯ ಸಚಿವಪಿಯೂಶ್ ಗೊಯಲ್, ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಭೇಟಿಯಾಗುವೆ. ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಪ್ರತಿ ಬಾರಿಯೂ ಈ ಬಗ್ಗೆ ಚರ್ಚೆ ಆಗುತ್ತೆ. ಪ್ರತಿ ಬಾರಿಯಂತೆ ಈ ಬಾರಿಯೂ ಅದೇ ಉತ್ತರವೆಂದು ಸೂಕ್ತವಾಗಿ ಉತ್ತರಿಸದೇ ನುಣುಚಿಕೊಂಡ ಸಿಎಂ.  ಇದೇ ಸಂದರ್ಭದಲ್ಲಿ ಮಾಜಿ ಸಚಿವ, ಗೋಖಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. 

9:26 AM

ಕೊಲೆ ಮಾಡೋದೇ ಫ್ಯಾಷನ್, ಆರೋಪಿಗಳ ವಿರುದ್ಧ ಕೋಕಾ ದಾಖಲಿಸಲು ಚಿಂತನೆ!

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮುತ್ಯಾಲಾಪೇಟೆಯಲ್ಲಿ ಜೂನ್‌ 7 ರಂದು ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಿಂದ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಗಳು ಪಡೆದುಕೊಳ್ತಿದೆ. ಜಗನ್ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಬಹುಪಾಲು ಜನರು ರೌಡಿಶೀಟರ್ ಗಳೇ ಆಗಿದ್ರು ಅನ್ನೋ ಮಾಹಿತಿ ತಿಳಿದು ಒಂದು ಕ್ಷಣ ಕೋಲಾರ ಪೊಲೀಸರೇ ಶಾಕ್ ಆಗಿದ್ದಾರೆ. ಜಗನ್ ಮೋಹನ್ ಕೊಲೆ ಕೇಸ್ ಅನ್ನು ಪೊಲೀಸರು ಭೇದಿಸಿದ ಬಳಿಕ ಹಲವಾರು ಶಾಕಿಂಗ್ ಮಾಹಿತಿಗಳು ತಿಳಿದು ಬರ್ತಿದೆ.ಸಾಕಷ್ಟು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿರುವವರೇ ಇದರಲ್ಲಿ ತೊಡಗಿಕೊಂಡಿದ್ದು,ಇವರಿಗೆಲ್ಲ ಪೊಲೀಸ್ ಠಾಣೆಗೆ ಹೋಗಿ ಬರೋದು ಕಾಮನ್ ಆಗಿಬಿಟ್ಟಿದೆ. ಹಾಗಾಗಿ ಇವರಿಗೆಲ್ಲ ಕಾನೂನು ಅಡಿಯಲ್ಲಿ ಬಿಗಿಗೊಳಿಸಬೇಕು ಎಂದು ಕೋಲಾರ ಎಸ್ಪಿ ದೇವರಾಜ್ ತೀರ್ಮಾನಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.ಆರೋಪಿಗಳ ಹಿನ್ನೆಲೆಯೂ ಸಹ ಇದೀಗ ಬೆಚ್ಚಿ ಬೀಳಿಸುತ್ತಿದ್ದು,ಅನಿವಾರ್ಯವಾಗಿ ಎಸ್ಪಿ ದೇವರಾಜ್ ಈ ತೀರ್ಮಾನಕ್ಕೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ.

9:18 AM

ರಾತ್ರಿ ಇಡೀ ಶಂಕಿತ ಉಗ್ರನ ವಿಚಾರಣೆ ನಡೆಸಿದ ಪೊಲೀಸರು

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ ಹಿನ್ನಲೆಯಲ್ಲಿ ರಾತ್ರಿ ಇಡೀ ಶಂಕಿತ ಉಗ್ರನ ವಿಚಾರಣೆ ನಡೆಸಿದ ಪೊಲೀಸರು. ಮೂರು ಹಂತದಲ್ಲಿ ವಿಚಾರಣೆ ನಡೆಸಿದ್ದಾರೆ ಪೊಲೀಸರು. ಹಿರಿಯ ಅಧಿಕಾರಿಗಳು, ಎಸಿಪಿ ಮಟ್ಟದ ಅಧಿಕಾರಿಗಳು ,ಇನ್ಸ್ ಪೆಕ್ಟರ್‌ಗಳಿಂದ ವಿಚಾರಣೆ ನಡೆಸಲಾಗಿದೆ. ತೀವ್ರ ವಿಚಾರಣೆ ಬಳಿಕ ಎಫ್‌ಐಆರ್ ದಾಖಲು. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು. ದೇಶ ದ್ರೋಹದಡಿ ಪ್ರಕರಣ ದಾಖಲಿಸಿರುವ ಪೊಲೀಸರು. ಶಂಕಿತ ಉಗ್ರ ಅಖ್ತರ್ ಹುಸೇನ್ ವಿರುದ್ಧ ದೇಶ ದ್ರೋಹ ಅಡಿ ಎಫ್‌ಐಆರ್ ದಾಖಲು. ಶಂಕಿತ ಉಗ್ರನ ವಶಕ್ಕೆ ಪಡೆಯಲು ಗೌಪ್ಯವಾಗಿ ಕಾರ್ಯಾಚರಣೆ ನಡೆಸಿದ್ದರು ಪೊಲೀಸರು. ಶಂಕಿತ ಉಗ್ರರ ಟವರ್ ಲೋಕೇಷನ್ ಆಧರಿಸಿ ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿ ಇರುವ ವೇಳೆ ನೋಡಿ ಶಂಕಿತ ಉಗ್ರನನ್ನು ಹಿಡಿದಿದ್ದಾರೆ ಸಿಸಿಬಿ ಪೊಲೀಸರು.

9:16 AM

ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ಯಾ ಬೆಂಗಳೂರು?

ಉಗ್ರರ ಅಡಗು ತಾಣವಾಗ್ತಿದ್ಯಾ ಬೆಂಗಳೂರು? ಉಗ್ರ ಚಟುವಟಿಕೆಗಳಿಗೆ ಬೆಂಗಳೂರೇ ಸ್ಲೀಪರ್ ಸೆಲ್ ಯಾಕೆ? ಒಂದೇ ತಿಂಗಳಲ್ಲಿ ಮೂವರು ಶಂಕಿತರನ್ನ ವಶಕ್ಕೆ ಪಡೆದಿದ್ದಾರೆ ಪೊಲೀಸರು. ಬೆಂಗಳೂರಿನಲ್ಲಿ ಇನ್ನೆಷ್ಟು ಶಂಕಿತರಿದ್ದಾರೆ? ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಯೋ ಸಂಚು ಶುರುವಾಗಿದ್ಯಾ?  ಜೂನ್ 11 ರಂದು ಶ್ರೀರಾಂಪುರದಲ್ಲಿ ತಾಲೀಬಾನ್ ಉಗ್ರನನ್ನ ಬಂಧಿಸಿದ್ದ ಪೊಲೀಸರು. ಕಾಶ್ಮೀರಿ ಮೂಲದ ತಾಲಿಬ್ ಹುಸೇನ್, ಮೂರ್ನಾಲ್ಕು ವರ್ಷಗಳಿಂದ ವಾಸವಿದ್ದರೂ ಪತ್ತೆಯಾಗಿರಲಿಲ್ಲ.  ಜುಲೈ 8 ಅಲ್ ಖೈದಾಗೆ ಸಂಬಂಧಿಸಿದ ಶಂಕಿತ ಬಾಂಗ್ಲಾ ಮೂಲದ ಫೈಸಲ್ ಅಹ್ಮದ್ ವಶಕ್ಕೆ. 

9:13 AM

ನಾಲ್ವರನ್ನು ವಶಕ್ಕೆ ಪಡೆದ ಸಿಸಿಬಿ

ಬಾಡಿಗೆಯ ಮನೆಯಲ್ಲಿದ್ದ ಒಟ್ಟು ನಾಲ್ವರನ್ನ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ದಾಳಿಯ ವೇಳೆ ಈ ನಾಲ್ವರು ಕೂಡ ರೂಮ್‌ನಲ್ಲಿಯೇ ಇದ್ದರು.  ಇದರಲ್ಲಿ ಅಖ್ತರ್‌ ಹುಸೇನ್ ಪ್ರಮುಖನಾಗಿದ್ದು, ಅವರನೊಂದಿಗೆ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ ಐದುಗಂಟೆಗೆ ಸ್ಥಳದಲ್ಲಿ ಸಿಸಿಬಿ ಟೀಂ ಮೊಕ್ಕಾಂ ಹೂಡಿತ್ತು. ಅಖ್ತರ್‌ ಹುಸೇನ್‌ನನ್ನು ಬಂದ ಮಾಡಲೇಬೇಕು ಎನ್ನುವ ನಿಟ್ಟಿನಲ್ಲಿ ಕಾದು ಕುಳಿತಿತ್ತು. ಸಂಜೆ ಗಂಟೆಯಿಂದ ಕಾಯುತ್ತಿದ್ದ ಸಿಸಿಬಿ ತಂಡಕ್ಕೆ, 7 ಗಂಟೆಯ ವೇಳೆ ಅಕ್ತರ್‌ ಹುಸೇನ್‌ ರೂಮ್‌ಗೆ ಹೊಕ್ಕಿದ್ದ ಮಾಹಿತಿ ಸಿಕ್ಕಿತ್ತು. 8 ಗಂಟೆಯ ವೇಳೆ ಸಿಸಿಬಿ ತನ್ನ ಪೂರ್ಣ ತಂಡದೊಂದಿಗೆ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಯುತ್ತಿದ್ದಂತೆ ಅಕ್ಕಪಕ್ಕದ ಸ್ಥಳೀಯರು ಅಲ್ಲಿ ಸೇರಿದ್ದರು. ಅಕ್ಕ ಪಕ್ಕದ ನಿವಾಸಿಗಳ ಬಳಿ ಮಾಹಿತಿ ಹಾಗೂ ನಂಬರ್‌ಗಳನ್ನೂ ಕೂಡ ಸಿಸಿಬಿ ಪಡೆದುಕೊಂಡಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

5:00 PM IST:

ಸಿಸಿಬಿ ಪೊಲೀಸರಿಂದ ಶಂಕಿತ ಉಗ್ರನ ಬಂಧನ ಪ್ರಕರಣ. ಸಿಸಿಬಿ ಟೆಕ್ನಿಕಲ್ ವಿಂಗ್‌ನಿಂದ ಮುಂದುವರೆದ ತನಿಖೆ. ಶಂಕಿತ ಉಗ್ರ ಅಖ್ತರ್ ಪ್ರತಿ ಮಾಹಿತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರ ಪೊಲೀಸರು. ಅಖ್ತರ್ ಮೊಬೈಲ್ ಅನ್ನ ಸಂಪೂರ್ಣ ಪರಿಶೀಲನೆ ಮಾಡ್ತಿರೋ ಟೆಕ್ನಿಕಲ್ ಟೀಂ. ಶಂಕಿತ ಉಗ್ರನಿಗೆ ಸತತವಾಗಿ ಕಾಂಟ್ಯಾಕ್ಟ್ ಇರೋದ್ರ ಬಗ್ಗೆ ಮಾಹಿತಿ ಕಲೆ. ಶಂಕಿತ ಉಗ್ರನ ಬಳಿ ಸಿಕ್ಕಿರೋ ಕೆಲ ಡಿವೈಸ್ ಅನ್ನೂ ಪರಿಶೀಲನೆ ನಡೆಸ್ತಿರೋ ಸಿಸಿಬಿ ಟೀಂ. ಶಂಕಿತ ಉಗ್ರ ಬಳಸ್ತಿದ್ದ ಇಂಟರ್ನೆಟ್ ಡಿವೈಸ್, ನೆಟವರ್ಕ್,  ಆತ ಸರ್ಚ್ ಮಾಡ್ತಿದ್ದ ಪ್ರಮುಖ ವೆಬ್ಸೈಟ್‌ಗಳು ಎಲ್ಲವನ್ನೂ ಪರಿಶೀಲನೆ ಮಾಡ್ತಿರೋ ಸಿಸಿಬಿ ಟೀಂ. ಎಫ್ ಬಿ, ಟ್ವಿಟ್ಟರ್, ಟೆಲಿಗ್ರಾಂ ಅಕೌಂಟ್‌ಗಳ ಬಗ್ಗೆ ಪರಿಶೀಲನೆ. ಶಂಕಿತನ ಮ್ಯೂಚುಯಲ್‌ ಫ್ರೆಂಡ್ಸ್ ಬಗ್ಗೆ ಪರಿಶೀಲನೆ. ಅನುಮಾಸ್ಪದ ಅಕೌಂಟ್ ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಟೆಕ್ನಿಕಲ್ ವಿಂಗ್. ಮತ್ತೊಂದೆಡೆ ಶಂಕಿತ ಉಗ್ರನ ಜಿತೆಯಿದ್ದ ಮೂವರನ್ನ ತೀವ್ರ ವಿಚಾರಣೆ ನಡೆಸ್ತಿರೋ ಸಿಸಿಬಿ ಪೊಲೀಸರು. ಯಾವಾಗಿಂದ ಶಂಕಿತ ಇವರಿಗೆ ಪರಿಚಯ, ಆತನ ವರ್ತನೆ ಹೇಗಿತ್ತು, ಆತ ಯಾರ ಜೊತೆ ಜಾಸ್ತಿ ಮಾತಾಡ್ತಿದ್ದ? ಏನಾದ್ರು ಕೊಡ್ ವರ್ಡ್ ಬಳಸ್ತಿದ್ನಾ? ಯಾವ್ಯಾವ ಡಿವೈಸ್ ಯೂಸ್ ಮಾಡ್ತಿದ್ದ ಪ್ರತಿಯೊಂದನ್ನೂ ಕೇಳ್ತಿರೋ ಸಿಸಿಬಿ.

4:44 PM IST:

ಕಾಂಗ್ರೆಸ್‌ನಲ್ಲಿ  ಸಿಎಂ ಖುರ್ಚಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಪರಮಾಪ್ತ ಶಾಸಕ ಜಮೀರ್ ಅಹಮ್ಮದ್ ಖಾನ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಡುವ ಭರದಲ್ಲಿ ಜಮೀರ್ ಅಹಮ್ಮದ್ ಖಾನ್ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಹೀಗೆ...

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

4:28 PM IST:

ಕಾರವಾರ (ಉತ್ತರಕನ್ನಡ):  ಮಗುವಿನ‌ ಜತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಜಲವಳ್ಳಿ ಗ್ರಾಮದಲ್ಲಿ ಘಟನೆ. ವನಿತಾ ಮಂಜುಮಾಥ್ ನಾಯ್ಕ್ (ಅಂದಾಜು 28 ವರ್ಷ) ಹಾಗೂ ಮನಸ್ವಿ (ಅಂದಾಜು 2 ವರ್ಷ ಸಾವು. ಕೌಟುಂಬಿಕ ಕಾರಣದಿಂದ ಮನನೊಂದು ಮಗುವಿನ ಜತೆ ಬಾವಿಗೆ ಹಾರಿದ ತಾಯಿ. ಮೃತರ ಅಣ್ಣನಿಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು.

3:42 PM IST:

ಬೆಂಗಳೂರಿನಲ್ಲಿ ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು, ರಾಜ್ಯ ಉಗ್ರರ ಅಡಗುತಾಣವಾಗ್ತಿದೆಯಾ ಎನ್ನುವ ಅನುಮಾನಗಳು ಮೂಸುತ್ತಿವೆ. ಈ ನಡುವೆ ಬುರ್ಕಾಧಾರಿಯೊಬ್ಬ ಆಲಮಟ್ಟಿ ಡ್ಯಾಂ ಬಳಿ ಸುತ್ತಾಡುವ ಮೂಲಕ ಆತಂಕ ಮೂಡಿಸಿದ್ದಾನೆ. ಹೈ ಸೆಕ್ಯೂರಿಟಿ ಇರುವ ಆಲಮಟ್ಟಿ ಡ್ಯಾಂ ಬಳಿ ಬುರ್ಕಾಧಾರಿ ಸುತ್ತಾಟ ಹಲವು ಅನುಮಾನಗಳಿಗೆ ಕಾರಣವಾಗಿತ್ತಾದ್ರು, ಅಲ್ಲಿನ ಭದ್ರತಾ ಸಿಬ್ಬಂದಿಗಳು ವಿಚಾರಿಸಿದಾಗ ಅಚ್ಚರಿಯ ವಿಚಾರ ತಿಳಿದು ಬಂದಿದೆ. ಬುರ್ಕಾದಲ್ಲಿ ಇದ್ದದ್ದು ಅವನಲ್ಲ.. ಅವಳು ಅನ್ನೋದು ಗೊತ್ತಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

3:40 PM IST:

ಕೆಂಗೇರಿ ಪೊಲೀಸ್ ಠಾಣೆಯ ಹೇಮಂತ್ ಕೊಲೆ ಪ್ರಕರಣ. ಜುಲೈ 16ರಂದು ರಾತ್ರಿ ಹೇಮಂತ್ ಬರ್ತಡೇ ಪಾರ್ಟಿ ಮಾಡಲು ಹೊರ ಹೋಗಿರುತ್ತಾನೆ. ಆದ್ರೆ, ಮನೆಗೆ ಹಿಂದಿರುಗಿರುವುದಿಲ್ಲ. ಮನೆಯವ್ರನ್ನು ಸಂಪರ್ಕಿಸಿರುವುದಿಲ್ಲ. ಬಳಿಕ ಜುಲೈ 17 ರಂದು ಕೋನಸಂದ್ರ ಬಳಿಯ ನೈಸ್ ರೋಡ್ ಅಂಡರ್ ಪಾಸ್ ಬಳಿ ಶವವಾಗಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ವೇಳೆ ಕೆ.ಜಿ. ನಗರ ಪೊಲೀಸರು ವಶಕ್ಕೆ ಪಡೆದ ವೇಳೆ ಹತ್ಯೆ ಬಗ್ಗೆ ವಿಡಿಯೋ ಲಭ್ಯವಾಗಿದೆ. ಆ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ. ಕುಳ್ಳು ರಿಜ್ವಾನ್, ಹರೀಶ್ ಹಾಗೂ ನಾಲ್ವರು ಬಾಲಾಪರಾಧಿಗಳನ್ನ ಬಂಧಿಸಲಾಗಿದೆ. ಈ ಹಿಂದೆ ಕುಳ್ಳು ರಿಜ್ವಾನ್ ಹಾಗೂ ಹರೀಶ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಹೇಮಂತ್ ಕುಮಾರ್. ಆ ಹಿನ್ನೆಲೆ ಹೇಮಂತ್ ಹತ್ಯೆಗೆ ಸ್ಕೆಚ್. ಹೇಮಂತ್ ಬರ್ತಡೇ ದಿನ ಪ್ಲಾನ್ ಮಾಡಿ ಹತ್ಯೆ. ಪಾರ್ಟಿ ಬಳಿಕ ಹೇಮಂತ್ ಸ್ನೇಹಿತರು ಬಿಟ್ಟು ಹೋಗಿದ್ದರು. ಆ ವೇಳೆ ಡ್ರಾಪ್ ಕೊಡುವ ನೆಪದಲ್ಲಿ ಹೇಮಂತ್ ನನ್ನ ಎರಡು ಬೈಕ್ ಗಳಲ್ಲಿ ಪಿಕಪ್ ಮಾಡಿದ್ದ ಹಂತಕರು. ಬಳಿಕ ಮಾರ್ಗಮಧ್ಯೆ ಕಿರಿಕ್ ತೆಗೆದ ಹಂತಕರು. ಆ ವೇಳೆಯೂ ಹೇಮಂತ್ ಕುಳ್ಳ ರಿಜ್ವಾನನ್ನು ನಿಂದಿಸಿದ್ದು. ನಾನು ಡಾನೇ ಅಂತ ಹರೀಶ್ ಬಳಿ ಬಡಾಯಿ ಕೊಚ್ಚಿಕೊಂಡಿದ್ದ ಹೇಮಂತ್. ಆ ಕೋಪದಿಂದ ಹತ್ಯೆಗೆ ಪ್ಲಾನ್ ಮಾಡಿದ್ದ ಹಂತಕರು. ಚಾಮರಾಜಪೇಟೆಯಲ್ಲಿ ಕುಡಿಯೋದಕ್ಕೆ ಬಂದಿದ್ದ ಹೇಮಂತ್. ಹೇಮಂತ್ ಸ್ನೇಹಿತ್ರರು ಹೆಚ್ಚಾಗಿ ಚಾಮರಾಜಪೇಟೆಯಲ್ಲಿದ್ದಾರೆ. ಬಳಿಕ ಪಾರ್ಟಿ ಮುಗಿದ ಮೇಲೆ ಪಿಇಎಸ್ ಕಾಲೇಜ ವರೆಗೆ ಡ್ರಾಪ್ ನೀಡಿದ್ದ ಹೇಮಂತ್ ಸ್ನೇಹಿತರು. ಆ ವೇಳೆ ಹೇಮಂತ್ ನನ್ನ ಹಿಂಬಾಲಿಸಿದ್ದ ಕುಳ್ಳು ರಿಜ್ವಾನ್ ಶಿಷ್ಯರು. ಡ್ರಾಪ್ ನೀಡೋ‌ ನೆಪದಲ್ಲಿ ಬೈಕ್ ಹತ್ತಿಸಿಕೊಂಡು ಕಿರಿಕ್. ಕಿರಿಕ್ ಬಳಿಕ ಪ್ಲಾನ್‌ನಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಕುಳ್ಳು ರಿಜ್ವಾನ್‌ಗೆ ರವಾನೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿರುವ ಕೆಂಗೇರಿ ಪೊಲೀಸರು. 

2:30 PM IST:

ಬರೀ ಸಿದ್ದರಾಮಯ್ಯ ಅವರು ಹುಟ್ಟಿದಬ್ಬ ಮಾತ್ರವಲ್ಲ, ಕಾಂಗ್ರೆಸ್ ಅಧ್ಯಕ್ಷರ ಬರ್ತಡೆಯನ್ನೂ ಮಾಡುವುದಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹುಟ್ಟುಹಬ್ಬವನ್ನು ನಾವೆಲ್ಲ ಸೇರಿ ಇದೆ ರೀತಿ ಮಾಡ್ತೀವಿ. ಅಭಿಮಾನಿಗಳ ಒತ್ತಡದಿಂದ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚಿಸುತ್ತಿದ್ದೇವೆ.  ಕಾಂಗ್ರೆಸ್ ಪಕ್ಷದಿಂದ ಮಾಡುತ್ತಿರೋದಲ್ಲ. ಅವರ ಅಭಿಮಾನಿಗಳು ಮಾಡ್ತಿರೋದು. ಅದರಲ್ಲಿ ಕಾಂಗ್ರೆಸ್ ಪಕ್ಷದವರು ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ, ಖರ್ಗೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ ಸೇರಿ ಕಾಂಗ್ರೆಸ್‌ನ ಎಲ್ಲ ನಾಯಕರೂ ಬರ್ತಿದ್ದಾರೆ. ಹಾವೇರಿ ಕಾಂಗ್ರೆಸ್‌ನ ಭದ್ರಕೋಟೆ.  ಎಲ್ಲಿ ಹೋದರೂ ಜನರು ಕುಣಿತಿದ್ದಾರೆ. ಸಿದ್ದರಾಮಯ್ಯ ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ.  ನಾವು ದೆಹಲಿಗೆ ಹೋದಾಗ ಸಿದ್ದರಾಮಯ್ಯಗೆ ಸಾಕಷ್ಟು ಫೋನ್ ಬಂದವು. ಜನರ ಒತ್ತಡ ಜಾಸ್ತಿಯಾದಾಗ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕೆಂದು ನಾನು ಓಡಾಡ್ತಿದ್ದೀನಿ. ಸಿದ್ದರಾಮಯ್ಯ ಅವರ ಋಣ ತೀರಿಸಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾಲದಲ್ಲಿ ಸಾಕಷ್ಟು ಹಣ ಕೊಟ್ಟಿದ್ದಾರೆ. ನಾವೆಲ್ಲ ಅವರ ಋಣ ತೀರಿಸಬೇಕೋ ಬೇಡ್ವೋ? ಎಂದು ಪ್ರಶ್ನೆ ಹಾಕಿದ ಜಮೀರ್.

2:22 PM IST:

ವಿಜಯಪುರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲ್ಲ ಎಂದು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಟಾಂಗ್ ನೀಡಿದ ಸಚಿವ ಕತ್ತಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸಿಎಂ ಆಗಲ್ಲ. ಸಿಎಂ ಆಗಬೇಕೆಂದು ಇನ್ಯಾರು ಹಂಬಲಪಡುತ್ತಿದ್ದಾರೆ? ಅವರು ಹಂಬಲ‌ ಪಡುತ್ತಿರಲಿ. ಎಲೆಕ್ಷನ್ ಆಗುವವರೆಗೂ ಅವರ ಚಟಗಳನ್ನು ತೀರಿಸಿಕೊಳ್ಳಲಿ. ಆದರೆ ಮರಳಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದ ಸಚಿವ ಕತ್ತಿ. ಬಿಜೆಪಿ ಒಳ್ಳೆಯ ಸರ್ಕಾರ ಕೊಡುತ್ತದೆ. ಈಗ ಒಳ್ಳೆಯ ಸರ್ಕಾರ ಕೊಟ್ಟಾಗಿದೆ. ಮುಂದೆಯೂ ಒಳ್ಳೆಯ ಸರ್ಕಾರ ಕೊಟ್ಟು ರಾಜ್ಯವನ್ನು ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಜಯಪುರ ‌ನಗರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿಕೆ.

2:10 PM IST:

ಕೃಷ್ಣರಾಜಸಾಗರ ಅಣೆಕಟ್ಟು (KRS) ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷತೆಗೆ ಅಪಾಯವಿರುವ ಕುರಿತು ಅಧ್ಯಯನ ನಡೆಸಲು ಜು.25 ರಿಂದ 31ರವರೆಗೆ ಪ್ರಾಯೋಗಿಕ ಸ್ಫೋಟ (Trial Blasts) ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

1:14 PM IST:

ಪೊಲೀಸ್ ಆಯುಕ್ತರ ಕಚೇರಿ ಗೇಟಿನಲ್ಲಿ ವಿಷ ಕುಡಿದ ವ್ಯಕ್ತಿ. ವಿಜಯಪುರ ಮೂಲದ ಸಿದ್ದರಾಮಗೌಡ ಎಂಬಾತನಿಂದ ವಿಷ ಸೇವನೆ. ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯ ನೀಡಿಲ್ಲ. ಮಗಳ ವರದಕ್ಷಿಣೆ ಪ್ರಕರಣದಲ್ಲಿ ಅನ್ಯಾಯವಾಗಿದೆ. ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ. ಕಮಿಷನರ್ ಕಚೇರಿ ಹಿಂಬದಿ ಗೇಟ್ ಬಳಿ ವಿಷ ಸೇವಿಸಿದ ವ್ಯಕ್ತಿ. ವಿಷ ಸೇವಿಸಿ ನಿತ್ರಾಣವಾಗಿ ಬಿದ್ದಿದ್ದ ಸಿದ್ದರಾಮಗೌಡ. ಕೂಡಲೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ರವಾನಿಸಿದ ಪೊಲೀಸರು.

12:04 PM IST:

ಉಗ್ರ ಸಂಘಟನೆ ಯೊಂದಕ್ಕೆ ಸೇರಿದವನೆಂದು ಹೇಳಲಾದ ಶಂಕಿತ ಉಗ್ರ ನೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಉಗ್ರನ ಜೊತೆಗೆ ಇದ್ದ ಸ್ಥಳೀಯ ಸಹಚರರನ್ನು ಸಹ ವಿಚಾರಣೆ ನಡೆದಿದ್ದು, ಅವನು ನಡೆಸಿದ  ಚಟುವಟಿಕೆಗಳ  ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ, ಜಮ್ಮು ಕಾಶ್ಮೀರ ದಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹಾಗೂ ಓಕಳಿಪೂರ ಪ್ರದೇಶದಲ್ಲಿ, ನೆಲೆಸಿದ್ದ,  ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ ನಂತರ, ಮತ್ತೊಬ್ಬ ಉಗ್ರನನ್ನು ಪತ್ತೆ ಹಚ್ಚಿ,  ಬಂಧಿಸಿದ್ದಾರೆ.  ಇದಕ್ಕಾಗಿ, ಅವರನ್ನು ಅಭಿನಂದಿಸುತ್ತೇನೆ.

- ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

11:58 AM IST:

ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಅಗಸ್ಟ್ 11ರಂದು ಚುನಾವಣೆ. ಚುನಾವಣಾ ಅಧಿಸೂಚನೆ ಪ್ರಕಟಿಸಿದ ವಿಧಾನಸಭಾ ಕಾರ್ಯದರ್ಶಿ. ಇಂದಿನಿಂದ‌ ನಾಮಪತ್ರ ಸಲ್ಲಿಸಲು ಅವಕಾಶ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ್ 1. ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನ. ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆ. ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ. ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ. ಅವಿರೋಧ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಗಲು ಪೈಪೋಟಿ. ಆಡಳಿತಾರೂಢ ಬಿಜೆಪಿಯಲ್ಲಿ ಆರಂಭಗೊಂಡಿರುವ ಲಾಬಿ ಬುಧವಾರ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ.

11:55 AM IST:

ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗ ಅವರೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮೂಲಸೌಕರ್ಯ ಅಗತ್ಯತೆಗಳ ಕುರಿತಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಆದಷ್ಟು ಬೇಗ ಒಂದು ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ.

1/3

— Dr Sudhakar K (@mla_sudhakar)

11:51 AM IST:

ಕೆಎಸ್ಆರ್ಟಿಸಿಗೆ ಇರೋ ಏಕೈಕ ಆಸ್ಪತ್ರೆ  ಅದು ಜಯನಗರದ ಆಸ್ಪತ್ರೆ. ಈ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದ್ರೆ ಸಂಸದರ ಕಚೇರಿ ಮುಂದೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.  ಸಂಸದರು ತಮ್ಮ ಕ್ಷೇತ್ರದ ಮತದಾರರನ್ನು ಓಲೈಕೆ ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಆದ್ರೆ ಈ ಆಸ್ಪತ್ರೆ ನಂಬಿರುವ ಸಾವಿರಾರು ನೌಕರರಿದ್ದಾರೆ. ಇದನ್ನ ಖಾಸಗಿಗೆ ಕೊಟ್ರೆ ನೌಕರರು ಎಲ್ಲಿಗೆ ಹೋಗ್ಬೇಕು ಇದ್ರ ಹಿಂದೆ ಪ್ರಭಾವಿ ಸಂಸದರ ಸ್ವಹಿತಾಸಕ್ತಿ ಇದೆ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಕಿಡಿಕಾರಿರೋ ನೌಕರರ ಯೂನಿಯನ್ ಮುಖಂಡ ಅನಂತ್ ಸುಬ್ಬರಾವ್.

11:44 AM IST:

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ. ವಾದದ ಲಿಖಿತ ಸಾರಾಂಶವನ್ನು ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿದಾರರು ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚಿಸಿದೆ. ಪ್ರಕರಣದ ಅಂತಿಮ ವಿಚಾರಣೆ ಸೆ 5ಕ್ಕೆ ನಿಗದಿಪಡಿಸಿದ ಹೈಕೋರ್ಟ್. ಕೋರ್ಟ್‌ಗೆ ಸಲಹೆ‌ ನೀಡಲು ಅಮಿಕಸ್ ಕ್ಯೂರಿ ನೇಮಕ. ಹಿರಿಯ ವಕೀಲ ಸಂದೇಶ್ ಚೌಟರನ್ನು ನೇಮಿಸಿದ ಕೋರ್ಟ್. ಪ್ರಕರಣದ ಎಲ್ಲ ದಾಖಲೆಗಳನ್ನು ಒದಗಿಸಲು ರಿಜಿಸ್ಟ್ರಾರ್‌ಗೆ ಸೂಚನೆ.

11:29 AM IST:

ಹಾವೇರಿ: ಆಂಜನೇಯ ಸ್ವಾಮಿ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ‌ ಮಾಡಿ ವಿಕೃತಿ ಮೆರೆದ ದುರುಳ. ಹಾವೇರಿ ತಾಲೂಕಿನ ಗುತ್ತಲ ಸಮೀಪದ ಕನವಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ದೇವಸ್ಥಾನದ ಗೋಡೆಗೆ  ಮೂತ್ರ ವಿಸಜ೯ನೆ ಮಾಡಿರುವ ವಿಕೃತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಭಾನುವಾರ ಸಂಜೆ ನಡೆದಿದ್ದು, ಮೂತ್ರ ವಿಸರ್ಜನೆ ಮಾಡಿದವನನ್ನು ಕನವಳ್ಳಿ ಗ್ರಾಮದ ಅನ್ಯ ಕೋಮಿನ ಜಾಫರ್ ಹನೀಪಸಾಬ ಕನ್ಯಾನವರ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ ಹಿಂದೂ ಸಮಾಜದ ಮುಖಂಡರು ಹಾಗೂ ಯುವಕರು. ವಿಷಯ ತಿಳಿದು ಪಿಎಸ್ಐ ಜಗದೀಶ ಜಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಯಾವುದೇ ಗೊಂದಲ ಸೃಷ್ಟಿಯಾಗುವದು ಬೇಡ. ಇಂತಹ ಕೃತ್ಯ ಮಾಡಿದವನನ್ನು ಬಂಧಿಸಲಾಗುವದು ಎಂದು ಗ್ರಾಮಸ್ತರನ್ನು ಮನವರಿಕೆ ಮಾಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದವನಿಗೆ ಕಾನೂನ  ಬದ್ದವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ತಡರಾತ್ರಿಯೇ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. 

11:19 AM IST:

ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರು ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸವದತ್ತಿ ತಾಲೂಕಿನ ಯಕ್ಕುಂಡಿ ವಿರಕ್ತಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಹಾರೈಸಿದ್ದಾರೆ. ಯಕ್ಕುಂಡಿ ವಿರಕ್ತಮಠಕ್ಕೆ ಜಮೀರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಈ ರೀತಿ ಹೇಳಿದ್ದಾರೆ.

11:17 AM IST:

ಅಂಗನವಾಡಿ ಕಾರ್ಯಕರ್ತೆಯರ ಕಳೆದ 6 ತಿಂಗಳಿನಿಂದ ‌ಮೊಬೈಲ್ ನಿಶ್ಯಬ್ದಗೊಂಡಿದೆ. ಮತ್ತೊಂದು ಕಡೆ ತಳಮಟ್ಟದ ಮಾಹಿತಿ ಸಿಗದೇ ಪರದಾಡುತ್ತಿದೆ ಸರ್ಕಾರ. ಹೌದು, ರಾಜ್ಯದ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಬಂದ್ ಆಗಿದ್ದು,  ಕರೆನ್ಸಿ ಇಲ್ಲದೆ ಬಳಕೆಯಾಗುತ್ತಿಲ್ಲ ಸರ್ಕಾರಿ ಮೊಬೈಲ್ ಗಳು. ಅದರಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಡುವ ಗೌರವ ವೇತನದಲ್ಲಿ  (11,500 ರೂ. ) ಇದೀಗ ಮತ್ತೊಂದು ಹೊರೆ ಬೀಳುವಂತಾಗಿದೆ.ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಬೇಕು.ಆದ್ರೆ ಇದಕ್ಕಾಗಿ ಕಳೆದ ವರುಷ ಕೇಂದ್ರ ಸರ್ಕಾರ ಸ್ಮಾರ್ಟ್ ಫೋನ್ ನೀಡಿತ್ತು.ಮಕ್ಕಳ ಪೋಷಣ ಅಭಿಯಾನ ಜಾರಿಗಾಗಿ ಸ್ಮಾರ್ಟ್ ಫೋನ್ ನ್ನ ಅಂಗನವಾಡಿ ಕಾರ್ಯಕರ್ತರೆಯರಿಗೆ ನೀಡಲಾಗಿತ್ತು.ಮೊಬೈಲ್ ‌ಪೋನ್ ಜೊತೆಗೆ ಪ್ರತಿ ದಿನ ಎರಡು ಜಿಬಿ, ಅನ್ ಲಿಮಿಟೆಡ್ ಕಾಲ್ ಸೌಲಭ್ಯ ಹಾಗೂ ರೀಚಾರ್ಜ್ ಗೂ ಕೇಂದ್ರ ಸರಕಾರದ ಅನುದಾನ ಬಳಕೆಯಾಗುತ್ತಿತ್ತು.ಆದರೀಗ ಕಳೆದ 6 ತಿಂಗಳಿನಿಂದ ಅನುದಾನ ಸ್ಥಗಿತಗೊಂಡಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

10:50 AM IST:

ಚಿತ್ತೂರು ಬಳಿ ಶಿವಾಜಿನಗರ ಪೊಲೀಸರ ಕಾರು ಅಪಘಾತ ಪ್ರಕರಣ. ಮೃತದೇಹಗಳು ಚಿತ್ತೂರಿನಿಂದ ನೇರವಾಗಿ ಸ್ವಗ್ರಾಮಕ್ಕೆ ರವಾನೆ. ನಿನ್ನೆ ತಡರಾತ್ರಿಯೇ ಸ್ವಗ್ರಾಮಕ್ಕೆ ರವಾನಿಸಿದ ಪೊಲೀಸರು. ಕುಟುಂಬಸ್ಥರ ಮನವಿ ಮೇರೆಗೆ ಸ್ವಗ್ರಾಮಕ್ಕೆ ರವಾನೆ. ಪಿಎಸ್ಐ ಅವಿನಾಶ್, ಕಾನ್ಸ್‌ಟೇಬಲ್ ಅನಿಲ್ ಮುಳಿಕ್ ಮತ್ತು ಚಾಲಕ ಮ್ಯಾಕ್ಸ್‌‌ ವೆಲ್ ಮೃತದೇಹಗಳನ್ನು ರವಾನಿಸಲಾಗಿದೆ. ಗಾಯಾಳು ಪಿಎಸ್ಐ ದೀಕ್ಷಿತ್ ಬೆಂಗಳೂರಿನ ಹಾಸ್ ಮ್ಯಾಟ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆ ವೆಲ್ಲೂರಿನ CMC  ಆಸ್ಪತ್ರೆಯಿಂದ ನೇರವಾಗಿ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಇಂದು ಪಿಎಸ್ಐ ದೀಕ್ಷಿತ್‌ಗೆ ಶಸ್ತ್ರ ಚಿಕಿತ್ಸೆ.  ಮತ್ತೊಬ್ಬ ಕಾನ್ಸ್‌ಟೇಬಲ್ ಶರಣಬಸವಗೆ ವೆಲ್ಲೂರಿನ CMC ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಕೆ. ಸದ್ಯ ಪ್ರಾಣಪ್ರಾಯದಿಂದ ಪಾರಾದ ಇಬ್ಬರು ಪೊಲೀಸರು. 10 ಗಂಟೆಯ‌ ಬಳಿಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆಸ್ಪತ್ರೆಗೆ ಭೇಟಿ. ಗಾಯಾಳು ಪಿಎಸ್ಐ ದೀಕ್ಷಿತ್ ಆರೋಗ್ಯ ವಿಚಾರಿಸಲಿರುವ ಕಮೀಷನರ್.

9:55 AM IST:

ಷೇರು ಟ್ರೇಡಿಂಗ್‌ನಲ್ಲಿ ನಷ್ಟವಾಗಿದ್ದ ಕಾರಣಕ್ಕೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲ ಕೇಳಿದ್ದಕ್ಕೆ ಮನೆ ಮಾಲಕಿ ಅಪಮಾನ ಮಾಡಿದ್ದರು. ಈ ಸಿಟ್ಟಿಗೆ ಮನೆ ಮಾಲಕಿಯನ್ನೇ 91 ಬಾರಿ ಇರಿದು ಕೊಂದಿದ್ದ ಪಾಪಿ. ಬಳಿಕ ಚಿನ್ನಾಭರಣ ಕೊಂಡೊಯ್ದು ಗರವಿ ಇಟ್ಟು ಸಿಕ್ಕಿಬಿದ್ದ. ವೃದ್ಧೆಯ ಕೊಂದು ತಾನೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ. ಅನುಮಾನ ಬಾರದಂತಿರಲು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ.

ಸುದ್ದಿಗಾಗಿ ಇಲ್ಲಿ ಓದಿ

9:30 AM IST:

ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ, ಇದು ರೋಟೀನ್ ನಡೆಯುವ ಸಭೆ .ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಡೆಯಲಿದೆ. ಇವತ್ತು ಕೇಂದ್ರ ಸ್ಕೀಮ್‌ಗಳು, ಬೇರೆ ಬೇರೆ ರಾಜ್ಯಗಳಲ್ಲಿ ಯಾವ್ಯಾವ ಒಳ್ಳೆಯ ಯೋಜನೆಗಳು ಇವೆ ಎನ್ನುವುದು ಚರ್ಚೆ ಆಯ್ತು. ನಮ್ಮ ಐಟಿಐ, ಕಿಸಾನ್ ಸನ್ಮಾನ್ ಯೋಜನೆ, ಹೊಸ ಶಿಕ್ಷಣ ನೀತಿ ಯೋಜನೆ ಇಂಥ ಒಳ್ಳೆಯ ಯೋಜನೆಗಳಿವೆ.  ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಕ್ರೀಡಾಮಂತ್ರಿ ಅನುರಾಗ್ ಸಿಂಗ್ ಠಾಕೂರ್, ವಾಣಿಜ್ಯ ಸಚಿವಪಿಯೂಶ್ ಗೊಯಲ್, ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಭೇಟಿಯಾಗುವೆ. ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಪ್ರತಿ ಬಾರಿಯೂ ಈ ಬಗ್ಗೆ ಚರ್ಚೆ ಆಗುತ್ತೆ. ಪ್ರತಿ ಬಾರಿಯಂತೆ ಈ ಬಾರಿಯೂ ಅದೇ ಉತ್ತರವೆಂದು ಸೂಕ್ತವಾಗಿ ಉತ್ತರಿಸದೇ ನುಣುಚಿಕೊಂಡ ಸಿಎಂ.  ಇದೇ ಸಂದರ್ಭದಲ್ಲಿ ಮಾಜಿ ಸಚಿವ, ಗೋಖಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. 

9:26 AM IST:

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮುತ್ಯಾಲಾಪೇಟೆಯಲ್ಲಿ ಜೂನ್‌ 7 ರಂದು ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಿಂದ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಗಳು ಪಡೆದುಕೊಳ್ತಿದೆ. ಜಗನ್ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಬಹುಪಾಲು ಜನರು ರೌಡಿಶೀಟರ್ ಗಳೇ ಆಗಿದ್ರು ಅನ್ನೋ ಮಾಹಿತಿ ತಿಳಿದು ಒಂದು ಕ್ಷಣ ಕೋಲಾರ ಪೊಲೀಸರೇ ಶಾಕ್ ಆಗಿದ್ದಾರೆ. ಜಗನ್ ಮೋಹನ್ ಕೊಲೆ ಕೇಸ್ ಅನ್ನು ಪೊಲೀಸರು ಭೇದಿಸಿದ ಬಳಿಕ ಹಲವಾರು ಶಾಕಿಂಗ್ ಮಾಹಿತಿಗಳು ತಿಳಿದು ಬರ್ತಿದೆ.ಸಾಕಷ್ಟು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿರುವವರೇ ಇದರಲ್ಲಿ ತೊಡಗಿಕೊಂಡಿದ್ದು,ಇವರಿಗೆಲ್ಲ ಪೊಲೀಸ್ ಠಾಣೆಗೆ ಹೋಗಿ ಬರೋದು ಕಾಮನ್ ಆಗಿಬಿಟ್ಟಿದೆ. ಹಾಗಾಗಿ ಇವರಿಗೆಲ್ಲ ಕಾನೂನು ಅಡಿಯಲ್ಲಿ ಬಿಗಿಗೊಳಿಸಬೇಕು ಎಂದು ಕೋಲಾರ ಎಸ್ಪಿ ದೇವರಾಜ್ ತೀರ್ಮಾನಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.ಆರೋಪಿಗಳ ಹಿನ್ನೆಲೆಯೂ ಸಹ ಇದೀಗ ಬೆಚ್ಚಿ ಬೀಳಿಸುತ್ತಿದ್ದು,ಅನಿವಾರ್ಯವಾಗಿ ಎಸ್ಪಿ ದೇವರಾಜ್ ಈ ತೀರ್ಮಾನಕ್ಕೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ.

9:18 AM IST:

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ ಹಿನ್ನಲೆಯಲ್ಲಿ ರಾತ್ರಿ ಇಡೀ ಶಂಕಿತ ಉಗ್ರನ ವಿಚಾರಣೆ ನಡೆಸಿದ ಪೊಲೀಸರು. ಮೂರು ಹಂತದಲ್ಲಿ ವಿಚಾರಣೆ ನಡೆಸಿದ್ದಾರೆ ಪೊಲೀಸರು. ಹಿರಿಯ ಅಧಿಕಾರಿಗಳು, ಎಸಿಪಿ ಮಟ್ಟದ ಅಧಿಕಾರಿಗಳು ,ಇನ್ಸ್ ಪೆಕ್ಟರ್‌ಗಳಿಂದ ವಿಚಾರಣೆ ನಡೆಸಲಾಗಿದೆ. ತೀವ್ರ ವಿಚಾರಣೆ ಬಳಿಕ ಎಫ್‌ಐಆರ್ ದಾಖಲು. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು. ದೇಶ ದ್ರೋಹದಡಿ ಪ್ರಕರಣ ದಾಖಲಿಸಿರುವ ಪೊಲೀಸರು. ಶಂಕಿತ ಉಗ್ರ ಅಖ್ತರ್ ಹುಸೇನ್ ವಿರುದ್ಧ ದೇಶ ದ್ರೋಹ ಅಡಿ ಎಫ್‌ಐಆರ್ ದಾಖಲು. ಶಂಕಿತ ಉಗ್ರನ ವಶಕ್ಕೆ ಪಡೆಯಲು ಗೌಪ್ಯವಾಗಿ ಕಾರ್ಯಾಚರಣೆ ನಡೆಸಿದ್ದರು ಪೊಲೀಸರು. ಶಂಕಿತ ಉಗ್ರರ ಟವರ್ ಲೋಕೇಷನ್ ಆಧರಿಸಿ ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿ ಇರುವ ವೇಳೆ ನೋಡಿ ಶಂಕಿತ ಉಗ್ರನನ್ನು ಹಿಡಿದಿದ್ದಾರೆ ಸಿಸಿಬಿ ಪೊಲೀಸರು.

9:16 AM IST:

ಉಗ್ರರ ಅಡಗು ತಾಣವಾಗ್ತಿದ್ಯಾ ಬೆಂಗಳೂರು? ಉಗ್ರ ಚಟುವಟಿಕೆಗಳಿಗೆ ಬೆಂಗಳೂರೇ ಸ್ಲೀಪರ್ ಸೆಲ್ ಯಾಕೆ? ಒಂದೇ ತಿಂಗಳಲ್ಲಿ ಮೂವರು ಶಂಕಿತರನ್ನ ವಶಕ್ಕೆ ಪಡೆದಿದ್ದಾರೆ ಪೊಲೀಸರು. ಬೆಂಗಳೂರಿನಲ್ಲಿ ಇನ್ನೆಷ್ಟು ಶಂಕಿತರಿದ್ದಾರೆ? ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಯೋ ಸಂಚು ಶುರುವಾಗಿದ್ಯಾ?  ಜೂನ್ 11 ರಂದು ಶ್ರೀರಾಂಪುರದಲ್ಲಿ ತಾಲೀಬಾನ್ ಉಗ್ರನನ್ನ ಬಂಧಿಸಿದ್ದ ಪೊಲೀಸರು. ಕಾಶ್ಮೀರಿ ಮೂಲದ ತಾಲಿಬ್ ಹುಸೇನ್, ಮೂರ್ನಾಲ್ಕು ವರ್ಷಗಳಿಂದ ವಾಸವಿದ್ದರೂ ಪತ್ತೆಯಾಗಿರಲಿಲ್ಲ.  ಜುಲೈ 8 ಅಲ್ ಖೈದಾಗೆ ಸಂಬಂಧಿಸಿದ ಶಂಕಿತ ಬಾಂಗ್ಲಾ ಮೂಲದ ಫೈಸಲ್ ಅಹ್ಮದ್ ವಶಕ್ಕೆ. 

9:13 AM IST: