ಕನಕದಾಸ ಜಯಂತಿಯ ಸರ್ಕಾರಿ ರಜೆ ರದ್ದಿಲ್ಲ

By Kannadaprabha NewsFirst Published Nov 13, 2019, 9:02 AM IST
Highlights

ನ. 15 ರಂದು ರಾಜ್ಯ ಸರ್ಕಾರ ನಡೆಸುವ ಕನಕದಾಸ ಜಯಂತಿಯನ್ನು ಎಂದಿನಂತೆ ಆಚರಣೆ ಮಾಡಲಾಗುತ್ತಿದೆ. ರಜೆಯನ್ನು ಹಿಂಪಡೆದಿಲ್ಲ.

ಬೆಂಗಳೂರು [ನ.13]: ಪ್ರತಿ ವರ್ಷ ನ. 15 ರಂದು ರಾಜ್ಯ ಸರ್ಕಾರ ನಡೆಸುವ ಕನಕದಾಸ ಜಯಂತಿಯನ್ನು ಎಂದಿನಂತೆ ಆಚರಣೆ ಮಾಡಲಾಗುತ್ತಿದೆ. ರಜೆಯನ್ನು ಹಿಂಪಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. 

ರಾಜ್ಯ ಸರ್ಕಾರ ರಜೆಯನ್ನು ರದ್ದು ಗೊಳಿಸಿದೆ ಎಂಬ ಗೊಂದಲಕಾರಿ ಹೇಳಿಕೆಗಳು ಅಲ್ಲಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ನ. 15ರ ಶುಕ್ರವಾರ ಕನಕ ಜಯಂತಿ ಆಚರಣೆ ಮಾಡಲಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರದ ವಾರ್ಷಿಕ ರಜೆ ಪಟ್ಟಿಯಲ್ಲಿಯೂ ಕನಕದಾಸ ಜಯಂತಿಗೆ ರಜೆ ನೀಡಲಾಗಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಕೆಲ ಜಯಂತಿಗಳ ರಜೆಗಳನ್ನು ರದ್ದು ಮಾಡಲಾಗಿದ್ದು, ಕನಕ ಜಯಂತಿ ರಜೆಯು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

click me!