ಕೊರೋನಾ ಜಯಿಸುವಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬೋಜೇಗೌಡ ಯಶಸ್ವಿಯಾಗಿದ್ದಾರೆ. ಕಳೆದ ವಾರವಷ್ಟೇ ಬೋಜೇಗೌಡರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜು.13): ಕೊರೋನಾ ಸೋಂಕಿಗೆ ತುತ್ತಾಗಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬೋಜೇಗೌಡ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ ವಾರ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬೋಜೇಗೌಡ ದಾಖಲಾಗಿದ್ದರು. ಕಳೆದೊಂದು ವಾರದಿಂದ ಬೋಜೇಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ಬೋಜೇಗೌಡ ವರದಿ ನೆಗೆಟಿವ್ ಬಂದಿದ್ದರಿಂದ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನೆಗೆಟಿವ್ ಬಂದ ಬೆನ್ನಲ್ಲೇ ಬೋಜೇಗೌಡ ಬೆಂಗಳೂರಿನಿಂದ ಚಿಕ್ಕಮಗಳೂರಿನ ತಮ್ಮ ತೋಟದ ಮನೆಗೆ ತೆರಳಲಿದ್ದಾರೆ. ಮುಂದಿನ ಹತ್ತು ದಿನಗಳ ಕಾಲ ತಮ್ಮ ತೋಟದ ಮನೆಯಲ್ಲೇ ಕಾಲ ಕಳೆಯಲು ಪರಿಷತ್ ಸದಸ್ಯ ಬೋಜೇಗೌಡ ನಿರ್ಧಾರಿಸಿದ್ದಾರೆ.
JDS ಶಾಸಕನಿಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ
2018ರಲ್ಲಿ ನೈರುತ್ಯ ಶಿಕ್ಷಕ ಕ್ಷೇತ್ರ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ಬೋಜೇಗೌಡ ಪರಿಷತ್ ಪ್ರವೇಶಿದ್ದರು. ಚಿಕ್ಕಮಗಳೂರಿನವರಾದ ಎಸ್.ಎಲ್. ಬೋಜೇಗೌಡ ಈ ಹಿಂದೆ ಮುನ್ಸಿಪಾಲಿಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.