ಜೆಡಿಎಸ್‌ 2 ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಬೇಕಾ? ಬಿಜೆಪಿ ಮೈತ್ರಿ ಬಿಟ್ಟುಬಿಡಿ; ಸಿಎಂ ಇಬ್ರಾಹಿಂ ಪುತ್ರ ಫೈಜ್ ಮನವಿ!

By Sathish Kumar KH  |  First Published Mar 19, 2024, 1:23 PM IST

ಜೆಡಿಎಸ್ ಕೇವಲ 2 ಸ್ಥಾನಗಳಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾ? ನಮ್ಮ ಶಕ್ತಿಯನ್ನು ಅರಿತು ಕೂಡಲೇ ಮೈತ್ರಿ ಕಡಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಸಿಎಂ ಇಬ್ರಾಹಿಂ ಪುತ್ರ ಫೈಜ್ ಮನವಿ ಮಾಡಿದ್ದಾರೆ.


ಬೆಂಗಳೂರು (ಮಾ.19): ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ 2 ಸ್ಥಾನಕ್ಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ನನ್ನ ತಂದೆ ಇಬ್ಬರೂ ಅದನ್ನೇ ಹೇಳಿದ್ದು. ಜೆಡಿಎಸ್‌ನ ಶಕ್ತಿಯನ್ನು ಅರಿತುಕೊಳ್ಳದೇ ನಮ್ಮ ಸಿದ್ದಾಂತವನ್ನು ಬಿಟ್ಟು 2 ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ. ಕುಮಾರಸ್ವಾಮಿ ಅವರೇ ಮತ್ತು ದೇವೇಗೌಡರೇ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳಿ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಪುತ್ರ ಸಿ.ಎಂ. ಫೈಜ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಕುಮಾರಸ್ವಾಮಿ 2 ಸ್ಥಾನಕ್ಕೆ ಮೈತ್ರಿ ಆಗಬೇಕು ಅಂತ ಹೇಳಿದ್ದಾರೆ. ಇದನ್ನೆ ನಾವು ಹೇಳಿದ್ದು. ಕುಮಾರಸ್ವಾಮಿ ಅವರಿಗೆ ಅವರದೇ ಆದ ಶಕ್ತಿ ಇದೆ. ದೇವೇಗೌಡರಿಗೆ ಅವರೇ ಆದ ಶಕ್ತಿ ಇದೆ. ಕೇವಲ 2 ಸ್ಥಾನಕ್ಕೆ ದೆಹಲಿಗೆ ಹೋಗಿ ಜೆಡಿಎಸ್ ನಿಲ್ಲಬೇಕಿತ್ತಾ? ನಾವು ಇದಕ್ಕೆ ವಿರೋಧ ಮಾಡಿದ್ದು. ರಾಜ್ಯಕ್ಕೆ ಅನ್ಯಾಯ ಆಗಿದೆ ಅಂತ ಕುಮಾರಸ್ವಾಮಿ ಅವರು ಹೇಳಿದ್ದರು. 10 ವರ್ಷ ಡಬಲ್ ಎಂಜಿನ್ ಸರ್ಕಾರ ಇತ್ತು. ಯಾಕೆ 25 ಸಂಸದರು ಯಾಕೆ ರಾಜ್ಯಕ್ಕೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಜೆಡಿಎಸ್ ಯಾಕೆ 2 ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಬೇಕಿತ್ತು.? ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಹನುಮಾನ್ ಚಾಲೀಸಾ ರ್‍ಯಾಲಿ: ಪೊಲೀಸ್ vs ಬಿಜೆಪಿ, ಶೋಭಾ ಕರಂದ್ಲಾಜೆ ಅರೆಸ್ಟ್, ನಗರ್ತಪೇಟೆ ಉದ್ವಿಗ್ನ!

ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ. ನೀವೇ ಡಾ. ಮಂಜುನಾಥ್ ಅವರನ್ನು ಬಿಜೆಪಿಗೆ ಗಿಫ್ಟ್ ಕೊಟ್ಟಿದ್ದೀರಾ? ಜೆಡಿಎಸ್ ಅವರು ಮೈತ್ರಿ ಮಾಡಿಕೊಳ್ಳಬಾರದು. ಏಕಾಂಗಿಯಾಗಿ ಸ್ಪರ್ಧೆ ಮಾಡೋಕೆ ಕುಮಾರಸ್ವಾಮಿ, ದೇವೇಗೌಡರು ನಿರ್ಧಾರ ಮಾಡಬೇಕು. ದೇಶದಲ್ಲಿ ಎಲ್ಲೆಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರೋ ಅಂತಹ ಪಕ್ಷಗಳನ್ನ ಬಿಜೆಪಿ ನಾಶ ಮಾಡಿದೆ. ಬಿಜೆಪಿ ಅವರಿಗೆ ಅಧಿಕಾರ ಮಾತ್ರ ಬೇಕು ಅಷ್ಟೆ. ಅಧಿಕಾರಕೋಸ್ಕರ ಅವರು ಏನು ಬೇಕಾದ್ರು ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಚುನಾವಣೆಯನ್ನು ಎದುರಿಸುವುದಕ್ಕೆ ಬಿಜೆಪಿ ಬಳಿ 2-3 ವಿಷಯ ಬಿಟ್ಟು ಬೇರೆ ವಿಷಯಗಳಿಲ್ಲ. ಕುಮಾರಸ್ವಾಮಿ ಅವರು ಮೈತ್ರಿ ಮುಂದುವರೆಸಬಾರದು. ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡು ತಮ್ಮ ವರ್ಚಸ್ಸಿಗೆ ಧಕ್ಕೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಅಲೋಚನೆ ಮಾಡಬೇಕು. ಈಗಲೇ ಮೈತ್ರಿ ಕಡಿದುಕೊಳ್ಳಬೇಕು. ಮುಖ್ಯವಾಗಿ ನಮಗೆ ಮೈತ್ರಿ ಬೇಕಿಲ್ಲ. ಬಿಜೆಪಿ ಅವರಿಗೆ ಮೈತ್ರಿ ಬೇಕಿದೆ ಎಂದು ಫೈಜ್ ಹೇಳಿದರು.

ನಗರ್ತಪೇಟೆ ಗಲಾಟೆ ಮೊನ್ನೆ ಘಟನೆ ನಡೆದಿದೆ. ಈಗಾಗಲೇ ಪೊಲೀಸ್ ಎಫ್‌ಐಆರ್ ಮಾಡಿದ್ದಾರೆ. ತನಿಖೆ ಆಗುತ್ತಿದೆ. ಬಿಜೆಪಿ ಅವರು ಯಾಕೆ ರಾಜಕೀಯ ಮಾಡ್ತಿದ್ದಾರೆ. ಇಲ್ಲಿ ಕೂಡಾ ಬುಲ್ಡೋಜರ್ ರಾಜಕೀಯ ತರೋಕೆ ಮಾಡ್ತಿದ್ದೀರಾ.? ಬಿಜೆಪಿ ಅವರು ಏನ್ ಮಾಡೋಕೆ ಹೊರಟಿದ್ದೀರಾ? ಬಿಜೆಪಿ ಇದರಲ್ಲಿ ರಾಜಕೀಯ ಮಾಡ್ತಿದೆ. ಯಾರೋ 4 ಜನ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರೇ ಅರ್ಥ ಮಾಡಿಕೊಳ್ಳಿ. ಪ್ರತಾಪ್ ಸಿಂಹ ಅವರಿಗೆ ಆಗಿರುವ ರೀತಿ ನಿಮಗೆ ಆಗುತ್ತದೆ. ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ ಎಲ್ಲರೂ ಫೇಲ್ ಕ್ಯಾಂಡಿಟೇಟ್. ನೀವು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತಾಡಿ. ಕರ್ನಾಟಕದ ಕೊಡುಗೆ ಬಗ್ಗೆ ಮಾತಾಡಿ. ನಗರ್ತಪೇಟೆ ಗಲಾಟೆ ಬಗ್ಗೆ ಬಿಜೆಪಿ ರಾಜಕೀಯ ಮಾಡ್ತಿದೆ. ಯಾರೇ ಗಲಾಟೆ ಮಾಡಿದ್ರು ಅವರ ವಿರುದ್ದ ಕ್ರಮ ಆಗಬೇಕು. ಪೋಲೀಸರ ಮೇಲೆ ಭರವಸೆ ಇದೆ.  ಅವರಿಗೆ ಅವಕಾಶ ಕೊಡಿ. ಅದರಲ್ಲಿ ರಾಜಕೀಯ ಮಾಡೋದು ಬೇಡ. ರಾಮೇಶ್ವರ ಕೆಫೆ ಕೇಸ್ ಎನ್‌ಐಎಗೆ ಕೊಟ್ಟಿದ್ದಾರೆ.? ಏನಾದ್ರು ಬೆಳೆವಣಿಗೆ ಆಗಿದೆಯಾ? ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಅವರು ಹೀಗೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯ, ಕೋಲಾರ ಜೆಡಿಎಸ್ ಪಾಲಾದ್ರೂ, ಮುನಿಸಿಕೊಳ್ಳದ ಮುನಿಸ್ವಾಮಿ; ಬಿಜೆಪಿ ನಿರ್ಧಾರಕ್ಕೆ ಬದ್ಧವೆಂದ ಸುಮಲತಾ!

ಸಿಎಂ ಇಬ್ರಾಹಿಂ ಜೆಡಿಎಸ್ ಗೆ ವಾಪಸ್ ಬರೋ ವಿಚಾರದ ಬಗ್ಗೆ ಮಾತನಾಡಿ, ನಮ್ಮ ತಂದೆ, ನಾವು ಸಿದ್ದಾಂತದ ಮೇಲೆ ಬಂದವರು. ಸಿದ್ದಾಂತದ ವಿರುದ್ದ ನಾವು ರಾಜಕೀಯ ಮಾಡೊಲ್ಲ. ತಂದೆಯವರು ಅಧಿಕಾರಕ್ಕೆ ಯಾವತ್ತು ಆಸೆ ಬಿದ್ದಿಲ್ಲ. ನಾನು ಕೂಡಾ ತಂದೆಯವರ ಸಿದ್ದಾಂತ ಒಪ್ಪಿಕೊಂಡು ಹೋಗ್ತೀವಿ‌. ತಂದೆ ಸಿದ್ದಾಂತಕ್ಕೆ ನಾವು ಅವರ ಜೊತೆ ಇರ್ತೀವಿ ಎಂದು ಸಿ.ಎಂ.ಫೈಜ್ ತಿಳಿಸಿದರು.

click me!