
ಬೆಂಗಳೂರು (ಜ.25): ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷ ನನಗೆ ಮರುಜೀವ ಕೊಟ್ಟಿದೆ. ನಾನು ವಾಪಸ್ ಬಿಜೆಪಿಗೆ ಹೋಗುವಂಥ ಕೆಟ್ಟ ಕೆಲಸ ಮಾಡೋದಿಲ್ಲ ಅಂತಾ ನಿನ್ನೆ ಅವರೇ ಹೇಳಿದ್ರು. ಅದನ್ನು ನಾನು ಗಮನದಲ್ಲಿಟ್ಟುಕೊಂಡು ಮೈಸೂರಿಗೆ ಹೋಗಿದ್ದೆ. ಆದರೆ ಅವರು ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿದ್ದಾರೆಂಬ ಮಾಹಿತಿ ತಿಳಿಯಿತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಲೋಕಸಭಾ ಚುನಾವಣಾ ಹೊತ್ತಲ್ಲೇ ಮತ್ತೆ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಅವರು ನನ್ನ ಬಳಿ ಬಂದು ಹೇಳಿದರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಬರುವಂತೆ ಕೇಳ್ತಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕಳಿಸಿ ಮಾತನಾಡುತ್ತಿದ್ದಾರೆ ಅಂದ್ರು. ಆದರೆ ನಾನು ಪಕ್ಷ ಬಿಡುವುದಿಲ್ಲ ಅಂತಾ ಹೇಳಿದ್ರು. ನಿನ್ನೆ ಬೆಳಗ್ಗೆ ಕೂಡ ನಾನು ಅವರ ಜೊತೆ ಮಾತನಾಡಿದ್ದೆ. ಅಂತಾ ಕೆಲಸ ಮಾಡಲ್ಲ ಅಂದಿದ್ರು. ನಮಗೆ ತಿಳಿಯದ ಹಾಗೆ ಮತ್ತೆ ಸೇರ್ಪಡೆಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'6 ತಿಂಗಳ ಹಿಂದೆ ಏನಾಗಿತ್ತು?' ಮೋದಿ ಕೈ ಬಲಪಡಿಸೋಕೆ ಮರುಸೇರ್ಪಡೆ ಎಂದ ಶೆಟ್ಟರ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
ಕಾಂಗ್ರೆಸ್ ಪಕ್ಷ ಅವರನ್ನ ಒಬ್ಬ ಸೀನಿಯರ್ ಲೀಡರ್ ಎಂದು ಗೌರವದಿಂದ ನಡೆಸಿಕೊಂಡಿದೆ. ಅವರೇ ಮೊನ್ನೆ ಕೂಡ ಹೇಳಿದರು ಬಿಜೆಪಿ ಪಕ್ಷ ಒಳ್ಳೆಯದಲ್ಲ. ಕೆಲ ವಿಚಾರಗಳನ್ನ ಹೇಗೆ ದುರುಪಯೋಗ ಮಾಡಿಕೊಳ್ಳುತ್ತೇವೆ ಅಂತ ಅವರೇ ಹೇಳಿದ್ದರು. ಅವರೊಬ್ಬ ಸೀನಿಯರ್ ಲೀಡರ್ ಅಂತಾ ವಿಶ್ವಾಸ ಇಟ್ಟಿದ್ವಿ. ಈಗ ಕಾಂಗ್ರೆಸ್‌ನಲ್ಲಿ ವಿಶ್ವಾಸಕ್ಕೆ ಧಕ್ಕೆ ಆಗುತ್ತಿದೆ ಅಂತಾ ಅವರೇ ಹೇಳ್ತಿದ್ದಾರೆ ಇದಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದರು.
ಬಿಜೆಪಿಗೆ ಮರುಸೇರ್ಪಡೆಯಾದ ಬಳಿಕ ಅವರು ಪಕ್ಷದ ಸದಸ್ಯತ್ವಕ್ಕೆ ಫ್ಯಾಕ್ಸ್‌ನಲ್ಲಿ ರಾಜೀನಾಮೆ ಕಳಿಸಿ ಕೊಡ್ತೀನಿ ಅಂತಾ ಹೇಳಿದ್ದಾರೆ. ನಮ್ಮ ಆಫೀಸ್‌ನವರು ಮಾಹಿತಿ ಕೊಟ್ಟಿದ್ದಾರೆ. ಅವರಿಗೆ ಏನು ಅನಿಸಿದೆಯೋ? ಯಾವ ಒತ್ತಡ ಇದೆಯೋ? ಅವರು ಯಾವ ಒತ್ತಡದ ಮೂಲಕ ಹೋಗಿದ್ದಾರೋ ಬಲವಂತ ಮಾಡಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿಕೆ ಕೊಡುತ್ತಾರೋ ಕೊಡಲಿ ಆಮೇಲೆ ನಾನು ಮಾತನಾಡುತ್ತನೆ ಎಂದರು.
ದೇಶದ ರಕ್ಷಣೆಗಾಗಿ ಮೋದಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಬಿಜೆಪಿ ಸೇರಿದ್ದೇನೆಂದ ಜಗದೀಶ್ ಶೆಟ್ಟರ್!
ದೇಶದ ಹಿತಕ್ಕೆ ಬಿಜೆಪಿ ಸೇರಿದೆ ಅಂತಾ ಹೇಳಿದ್ದಾರೆ. ಅವರಿಗೆ ಸೀಟು ತಪ್ಪಿಸುವಾಗ ದೇಶದ ಹಿತ ಗೊತ್ತಿರಲಿಲ್ಲವಾ? ಚುನಾವಣೆಗೆ ಟಿಕೆಟ್ ಕೊಟ್ಟಿದ್ದೇವೆ. ಸೋತರೂ ಕಾಂಗ್ರೆಸ್ ಪಾರ್ಟಿ ಐದು ವರ್ಷದ ಎಂಎಲ್ಸಿನ ಗೌರವದಿಂದ ಅವರಿಗೆ ನಾಮಿನೇಷನ್ ಮಾಡಿದ್ದೇವೆ. ಅವರಿಗೆ ಆಮಿಷ ಕೊಟ್ಟಿದ್ದರೆ ಏನು ಅನ್ನೋದನ್ನ ಅವರೇ ಹೇಳಬೇಕು. ನಾವು ಅವರಿಗೆ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ ಇಷ್ಟು ಮಾತ್ರ ನಾನು ಹೇಳುತ್ತೇನೆ. ಎಲ್ಲರಿಗೂ ಆತ್ಮಸಾಕ್ಷಿ ಇರುತ್ತದೆ ಅವರಿಗೂ ಒಂದು ಆತ್ಮಸಾಕ್ಷಿ ಇದೆ. ಇವತ್ತಿನ ತನಕ ನನಗೆ ರೆಸಿಗ್ನೇಷನ್ ತಲುಪಿಲ್ಲ. ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ಬಿ ಫಾರಂ ಬರೆದು ಕೊಟ್ಟಿದ್ದೆ. ನಾನು ಕಾಂಗ್ರೆಸ್ ಕಚೇರಿಯಲ್ಲಿ ಹೇಳುತ್ತಿದ್ದೇನೆ ನನಗೆ ಇನ್ನೂ ರಾಜೀನಾಮೆ ಪತ್ರ ತಲುಪಿಲ್ಲ. ಸಂಘದವರು ಅವರ ಡ್ಯೂಟಿ ಅವರು ಮಾಡುತ್ತಾರೆ. ನಾವು ರಾಜಕಾರಣಿಗಳು, ರಾಜಕಾರಣಿ ಕೆಲಸ ಮಾಡುತ್ತೇವೆ. ಸಂಘ ಪರಿವಾರದವರಾಗಿದ್ದರೆ ಸಂಘ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದರಾ? ಅವರು ರಾಜಕಾರಣಿ ನಾನ್ಯಾಕೆ ಸಂಘ ಅಂತ ಮಾತನಾಡಲಿ. ಜನರು ಅವರನ್ನು ತಿರಸ್ಕರಿಸಿದರೂ ನಾವು ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಇದು ಆತ್ಮಸಾಕ್ಷಿ ವಿಚಾರ ಜನರೇ ತೀರ್ಮಾನ ಮಾಡ್ತಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ