*ಬಿಜೆಪಿಗರಿಗೆ ಕುಟುಕಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ
*ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ
*ಕೊರೋನಾ ಸಮಯದಲ್ಲಿ ಮೇಕೆದಾಟು ಹೋರಾಟ ಸರಿಯಲ್ಲ
ಕಲಬುರಗಿ (ಜ.6): ಭಾರತೀಯ ಜನತಾ ಪಾರ್ಟಿಯನ್ನು ಬಿಜೆಪಿ (BJP) ಎಂದು ಹೇಳುವ ಬದಲಾಗಿ ಮೋದಿ ಪಕ್ಷ (Modi Party) ಎಂದು ಕರೆಯೋದು ಸೂಕ್ತ. ಯಾಕಂದ್ರೆ, ಪಕ್ಷದ ಹೆಸರಿನಲ್ಲಿ ಚುನಾವಣೆ ಮಾಡುವ ಬದಲು ಮೋದಿ ಹೆಸರಿನಲ್ಲಿ ಆ ಪಕ್ಷದವರು ಚುನಾವಣೆ ಮಾಡ್ತಿದ್ದಾರೆ. ಹಾಗಾಗಿ, ಮೋದಿ ಪಾರ್ಟಿ ಅಂತಾ ನಾನು ಕರೆಯುತ್ತೇನೆ ಎಂದು ಕಲಬುರಗಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve Gowda) ಬಿಜೆಪಿಯನ್ನು ಕುಟುಕಿದ್ದಾರೆ.ಕಲಬುರಗಿಯಲ್ಲಿ (Kalburgi) ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ. ಆದ್ರೆ, ಮುಂದೇನು ಆಗುತ್ತೋ ಅದು ನನಗೆ ಗೋತ್ತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ (Congress) ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಶಕ್ತಿ ಹೀನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಕಾಂಗ್ರೆಸ್ ದೇಶದ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದಕ್ಕೆ ಕಾರಣ ಏನು? ಯಾರು? ಅಂತಾ ಅವರೆ ಹುಡುಕಿಕೊಳ್ಳಬೇಕು. ಮುಂದಿನ ಐದು ರಾಜ್ಯಗಳ ಚುನಾವಣೆಯಲ್ಲಿ (Assembly Elections 2022) ಕಾಂಗ್ರೆಸ್ ಎಷ್ಟುಬೆಳೆಯುತ್ತೆ ಅನ್ನೋದು ಈಗಲೇ ಹೇಳುವುದಕ್ಕೆ ಆಗೋದಿಲ್ಲ. ಎರಡೂ ಪಕ್ಷದವರು 2023ಕ್ಕೆ ಜೆಡಿಎಸ್ (JDS) ಸಂಪೂರ್ಣ ನಾಶ ಮಾಡುವುದಾಗಿ ಹೇಳ್ತಿದ್ದಾರೆ. ಆದ್ರೆ, ಮತದಾರರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ರಾಮನಗರದಲ್ಲಿ ನಡೆದ ಸಚಿವ ಹಾಗೂ ಸಂಸದರ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಎರಡು ಪಕ್ಷದ ನಾಯಕರು ಈ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಆಗಬಾರದು ಎಂದರು.
ಕೊರೋನಾ ಸಮಯದಲ್ಲಿ ಕಾಂಗ್ರೆಸ್ ಮೇಕೆದಾಟು ಹೋರಾಟ:
ಮೇಕೆದಾಟು ಬಗ್ಗೆ ಕಾಂಗ್ರೆಸ್ ಹೋರಾಟ (Congress Mekedatu Padayatre) ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ (Supreme Court) ದಿನಾಂಕ ನಿಗದಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಇಂತಹ ಸಂದರ್ಭದಲ್ಲಿ ಹೋರಾಟ ಸರಿಯಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಗಡ್ಕರಿಯವರು ಸದರಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಅದಾದ ಮೇಲೆ ತಮೀಳುನಾಡಿನವರು ಕ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನಿಲುವು ತೆಗೆದುಕೊಂಡು ಅಂತಿಮ ತೀರ್ಪು ಬರಲಿದೆ.
ಇದನ್ನೂ ಓದಿ: Karnataka Politics: 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರೋದು ಪಕ್ಕಾ: ದೇವೇಗೌಡ
ಅದು ಏನು ಬರುತ್ತೆ ಅನ್ನೋದು ಕಾಯ್ದು ನೋಡಿ ಮುಂದಿನ ಕಾರ್ಯಯೋಜನೆ ರೂಪಿಸಬೇಕು. ಕೊರೊನಾ ಸಂದರ್ಭದಲ್ಲಿ ಹೋರಾಟ ಎಷ್ಟುಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಕಳೆದೋಗಿರುವ ವರ್ಚಸ್ಸು ಮರಳಿ ಪಡೆಯುವುದಕ್ಕೆ ಪ್ರಯತ್ನ ಮಾಡ್ತಿದ್ರೆ, ಕಾಂಗ್ರೆಸ್ಸನ್ನು ಮುಗಿಸಬೇಕು ಅಂತಾ ಬಿಜೆಪಿಯವರು ನಿಂತಿದ್ದಾರೆ ಎಂದರು.
ಸಿದ್ದರಾಮಯ್ಯಗೆ ದೇವೇಗೌಡ ಪ್ರಶ್ನೆ :
ಸಿದ್ದರಾಮಯ್ಯ (Siddaramaiah) ಐದು ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು?, ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ರು. ಪರಿಣಾಮ 130ಕ್ಕಿದ್ದ ಕಾಂಗ್ರೆಸ್ 78ಕ್ಕೆ ಬಂದು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತೆ ಅಂದ್ರೆ ಅದು ಅಷ್ಟುಸುಲಭವಲ್ಲ. ಜೆಡಿಎಸ…ಗೂ ಶೇ.20ರಷ್ಟುಮತಗಳು ಇವೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಇದನ್ನೂ ಓದಿ: Karnataka Politics: ಗೌಡರ ಕೋಟೆ ಹಾಸನದಲ್ಲಿ ಡಿಕೆಶಿ ಹಳೆ ಸೋಲು-ಗೆಲುವು ಲೆಕ್ಕಾಚಾರ