ವಸತಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದ ರಶ್ಮಿಕಾ ತಂದೆ

By Kannadaprabha News  |  First Published Jan 17, 2020, 8:42 AM IST

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ರಶ್ಮಿಕಾ ತಂದೆ ರೆಸಿಡೆನ್ಶಿಯಲ್ ಶಾಲೆ ತೆರೆಯುವ ಯೋಚನೆಯಲ್ಲಿದ್ದರು ಎನ್ನುವ ವಿಚಾರ ಹೊರಬಿದ್ದಿದೆ. 


ಮಡಿಕೇರಿ [ಜ.17]: ನಟಿ ರಶ್ಮಿಕಾ ಅವರ ತಂದೆ ಮದನ್‌ ಮಂದಣ್ಣ ಇತ್ತೀಚೆಗಷ್ಟೇ ವಿರಾಜಪೇಟೆ-ಮೈಸೂರು ಹೆದ್ದಾರಿಯ ಬಿಟ್ಟಂಗಾಲ ಗ್ರಾಮದಲ್ಲಿ 2.5 ಕೋಟಿ ರು. ವೆಚ್ಚದಲ್ಲಿ ಮೂರು ಎಕರೆ ಜಾಗ ಖರೀದಿಸಿದ್ದರು. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೆಸಿಡೆನ್ಶಿಯಲ್‌ ಸ್ಕೂಲ್‌ ಹಾಗೂ ಪೆಟ್ರೋಲ್‌ ಬಂಕ್‌ ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದರು ಅಷ್ಟೇರಲ್ಲೇ ಐಟಿ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಸ್ಕೂಲ್‌ ವಿಚಾರದಲ್ಲಿ ಮದನ್‌ ಮಂದಣ್ಣ ಅವರು ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಈ ಯೋಜನೆ ಕುರಿತು ಭಾರೀ ಮಹತ್ವಾಕಾಂಕ್ಷೆ ಹೊಂದಿದ್ದ ಮಂದಣ್ಣ ಅವರಿಗೆ ಐಟಿ ದಾಳಿಯಿಂದ ಭಾರೀ ಆಘಾತವಾಗಿದೆ ಎನ್ನಲಾಗಿದೆ. 

Tap to resize

Latest Videos

undefined

ವಿಶೇಷವೆಂದರೆ ಮದನ್‌ ಅವರ ಸ್ಕೂಲ್‌ ಆರಂಭಿಸಲುದ್ದೇಶಿಸಿದ್ದ ಜಾಗ ಖರೀದಿಗೆ ರಶ್ಮಿಕಾ ಅವರೇ ಹಣಕಾಸು ನೆರವು ನೀಡಿದ್ದಾರೆ. ಇಷ್ಟೇ ಅಲ್ಲದೆ, ಮಂದಣ್ಣ ಹಲವು ವ್ಯವಹಾರಗಳಲ್ಲಿ ಹೂಡಿಕೆಯನ್ನೂ ಮಾಡಿದ್ದರು ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಇಡಿ ದಾಳಿ!...

ರಾಜಕೀಯ ಸಂಪರ್ಕ: ಮದನ್‌ ಮಂದಣ್ಣ ಅವರು ಕಾಂಗ್ರೆಸ್‌ ಪಕ್ಷದ ಸದಸ್ಯ. ವಿರಾಜಪೇಟೆಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ವಿಜಯ ನಗರ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನ ಪ್ರಬಲ ನಾಯಕರೊಂದಿಗೆ ಒಡನಾಟವನ್ನೂ ಅವರು ಬೆಳೆಸಿಕೊಂಡಿದ್ದರು.

click me!