ಸೌರಪಾರ್ಕ್ ಟೆಂಡರಲ್ಲಿ ಅಕ್ರಮ ಆಗಿದ್ರೆ ತನಿಖೆ ಮಾಡಿ; ಪ್ರಿಯಾಂಕ್ ಖರ್ಗೆ

By Kannadaprabha News  |  First Published Nov 8, 2022, 7:51 AM IST

ಕಾಂಗ್ರೆಸ್‌ ಸರ್ಕಾರದ ಅವಧಿಯ ಸೋಲಾರ್‌ ಪಾರ್ಕ್ ಟೆಂಡರ್‌ನಲ್ಲಿ ಅವ್ಯವಹಾರವಾಗಿದೆ ಎಂದು ಕೇವಲ ಆರೋಪ ಮಾಡುತ್ತಾ ಕೂರುವ ಬದಲು ಸಿಬಿಐ, ಐಟಿ, ಇಡಿ, ಸಿಸಿಬಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ, ಎಲ್ಲ ಸಂಸ್ಥೆಗಳೂ ಅವರದ್ದೇ ಸರ್ಕಾರಗಳ ಬಳಿ ಇವೆಯಲ್ಲ ಎಂದು ಪಕ್ಷದ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.


ಬೆಂಗಳೂರು )ನ.8) : ಕಾಂಗ್ರೆಸ್‌ ಸರ್ಕಾರದ ಅವಧಿಯ ಸೋಲಾರ್‌ ಪಾರ್ಕ್ ಟೆಂಡರ್‌ನಲ್ಲಿ ಅವ್ಯವಹಾರವಾಗಿದೆ ಎಂದು ಕೇವಲ ಆರೋಪ ಮಾಡುತ್ತಾ ಕೂರುವ ಬದಲು ಸಿಬಿಐ, ಐಟಿ, ಇಡಿ, ಸಿಸಿಬಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ, ಎಲ್ಲ ಸಂಸ್ಥೆಗಳೂ ಅವರದ್ದೇ ಸರ್ಕಾರಗಳ ಬಳಿ ಇವೆಯಲ್ಲ ಎಂದು ಪಕ್ಷದ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಅಪ್ಪ, ಮಗ ಗೆದ್ದಿದ್ದರೂ ಹಿಂದುಳಿದ ಕರ್ನಾಟಕ ಪಟ್ಟ ಏಕೆ?: ಸಿ.ಸಿ.ಪಾಟೀಲ್

Tap to resize

Latest Videos

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬುಟ್ಟಿಯಲ್ಲಿ ಹಾವಿದೆ ಎಂದು ಹೇಳಿ ಯಾರಿಗೆ ಹೆದರಿಸುತ್ತಾರೆ ? ಹಾವನ್ನು ಹೊರಗೆ ಬಿಡಲಿ. ಕಾಂಗ್ರೆಸ್‌ ಅವವಧಿಯ ಯಾವುದೇ ಪ್ರಕರಣದ ಬಗ್ಗೆ ತನಿಖೆ ಮಾಡಲಿ. ಯಾರು ಬೇಡ ಅಂತಾರೆ. ಅದೇ ರೀತಿ ತಮ್ಮ ಸರ್ಕಾರದಲ್ಲಿ ಕೇಳಿಬಂದಿರುವ ಎಲ್ಲ ಪ್ರಕರಣಗಳನ್ನೂ ತನಿಖೆ ಮಾಡಲಿ. ಜನರಿಗೂ ಗೊತ್ತಾಗಲಿ ಯಾರಾರ‍ಯರ ಅವಧಿಯಲ್ಲಿ ಏನೇನಾಗಿದೆ,ಯಾ ರಾರ‍ಯರು ಎಷ್ಟುಹಣ ಪಡೆದಿದ್ದಾರೆ ಅಂತ ಎಂದು ಹೇಳಿದರು.

ಬಿಜೆಪಿಯವರಿಗೆ ತಾವು ಅಧಿಕಾರದಲ್ಲಿದ್ದೇವೆ, ಸರ್ಕಾರ ತಮ್ಮದಿದೆ. ಪ್ರತಿಪಕ್ಷದವರಾಗಲಿ, ಜನರಾಗಲಿ ತಮ್ಮನ್ನು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ. ಅವರಿಗೆ ಸಮರ್ಪಕ ಉತ್ತರ ನೀಡಬೇಕೆಂಬ ಪರಿಜ್ಞಾನವೇ ಇಲ್ಲ. ರಸ್ತೆ ಗುಂಡಿ ಮುಚ್ಚಿ ಅಂದರೆ ಕಾಂಗ್ರೆಸ್‌ ಅವಧಿಯಲ್ಲಿ ಗುಂಡಿ ಇರಲಿಲ್ವಾ ಅಂತಾರೆ. ಸರ್ಕಾರದ ನಿರ್ಲಕ್ಷ್ಯವನ್ನು ನೋಡಿ ರೋಸಿ ಹೋಗಿ ಜನರೇ ಗುಂಡಿ ಮುಚ್ಚುತ್ತಿದ್ದಾರೆ. ಕೋರ್ಚ್‌ ಛೀಮಾರಿ ಹಾಕಿದೆ. ಆದರೂ ಇವರಿಗೆ ಬುದ್ಧಿ ಬಂದಿಲ್ಲ. ಭ್ರಷ್ಟಾಚಾರ ತಡೆಗಟ್ಟಿಅಂದರೆ ನಿಮ್ಮ ಅವಧಿಯಲ್ಲಿ ಇರಲಿಲ್ವಾ ಅಂತಾರೆ. ಅಂದರೆ ಇವರು ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಒಪ್ಪಿಕೊಂಡಂತಾಗಿದೆ. ಜನಸ್ಪಂದನ ಕಾರ್ಯಕ್ರಮದ ಬದಲು ಭ್ರಷ್ಟಾಚಾರ ಸ್ಪಂದನೆ ಕಾರ್ಯ ಕ್ರಮ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಾಸ್: ಪ್ರಿಯಾಂಕ್ ಖರ್ಗೆ ಘೋಷಣೆ

click me!