ಕರ್ನಾಟಕದ ಹಿಂದೂಪರ ಹೋರಾಟಗಾರರಿಗೆ ಜೀವ ಬೆದರಿಕೆ: ಮಹತ್ವದ ಸೂಚನೆ ನೀಡಿದ ಗುಪ್ತಚರ ಇಲಾಖೆ

*   ಕನ್ಹಯ್ಯ ಲಾಲ್ ಹತ್ಯೆ ಹಿನ್ನೆಲೆಯಲ್ಲಿ ಮಾಹಿತಿ ಕೇಳಿದ ಗುಪ್ತಚರ ಇಲಾಖೆ 
*   ಲಾ ಅಂಡ್ ಅರ್ಡರ್ ಸಮಸ್ಯೆ ಉಂಟು ಮಾಡುವ ಗಲಭೆಗಳಾಗುವ ಸಾಧ್ಯತೆ
*   ರಾಜ್ಯದ ಹಲವು ಮಸೀದಿಗಳು ಹಾಗೂ ಪ್ರಾರ್ಥನಾ ಮಂದಿರಗಳನ್ನ ಪರಿಶೀಲಿಸಿದ ಐಎಸ್‌ಡಿ


ಬೆಂಗಳೂರು(ಜು.03):  ರಾಜ್ಯದಲ್ಲಿ ಜೀವ ಬೆದರಿಕೆ ಇರುವ ಹಿಂದೂಪರ ಹೋರಾಟಗಾರರ ಮಾಹಿತಿಯನ್ನ ರಾಜ್ಯ ಸರ್ಕಾರಕ್ಕೆ ಕೇಂದ್ರ ಗುಪ್ತಚರ ಇಲಾಖೆ ಕೇಳಿದೆ. ಕನ್ಹಯ್ಯ ಲಾಲ್ ಹತ್ಯೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಮಾಹಿತಿ ಕೇಳಿದೆ ಅಂತ ತಿಳಿದು ಬಂದಿದೆ. 

ಅಲ್ಲದೆ ಜೀವ ಬೆದರಿಕೆ ಇರುವ ಹೋರಾಟಗಾರ ಬ್ಯಾಗ್ರೌಂಡ್ ಚೆಕ್ ಮಾಡಲು ಸೂಚನೆ ನೀಡಲಾಗಿದೆ. ಜೊತೆಗೆ ಕೇಂದ್ರ ಗುಪ್ತಚರ ಇಲಾಖೆ ಒಂದಷ್ಟು ಸೂಚನೆಗಳನ್ನೂ ಸಹ ನೀಡಿದೆ. ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿ,  ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದೆ. 

Latest Videos

ಬಿಟಿ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ, ಟಾರ್ಗೆಟ್ ಲಿಸ್ಟ್‌ನಲ್ಲಿ ಮಾಜಿ ಸಿಎಂ ಹೆಸರು!

ರಾಜ್ಯ ಅಥವಾ ನಗರಕ್ಕೆ ಹೊಸದಾಗಿ ಬರುವ ವ್ಯಕ್ತಿಗಳ ಮೇಲೆ ಗಮನ ಹರಿಸಿ, ಪ್ರಾರ್ಥನಾ ಮಂದಿರಗಳು,‌ ಮಸೀದಿಗಳಲ್ಲಿ ನಡೆಯುವ ಸಭೆಗಳ ಬಗ್ಗೆ ಗಮನ ಹರಿಸಿ, ಯಾರಾದ್ರು ಪ್ರತಿಭಟನೆಗೆ ಅಥವಾ ರ್‍ಯಾಲಿ ಅನುಮತಿ ಕೇಳಿದ್ರೆ ಅಂತಹ ಸಂಘಟನೆಗಳ ಪೂರ್ವಾಪರ ಪರಿಶೀಲನೆ ಮಾಡಿ, ಹೀಗೆ ಹಲವು ಸೂಚನೆಗಳನ್ನ ಕೇಂದ್ರ ಗುಪ್ತಚರ ಇಲಾಖೆ ನೀಡಿದೆ. 

ಕನ್ಹಯ್ಯ ಲಾಲ್ ಹತ್ಯೆ ಬಳಿಕ ಲಾ ಅಂಡ್ ಅರ್ಡರ್ ಸಮಸ್ಯೆ ಉಂಟು ಮಾಡುವ ಗಲಭೆಗಳಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಪ್ರತಿಯೊಂದು ವಿಚಾರದ ಬಗ್ಗೆಯೂ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಈಗಾಗಲೇ ಐಎಸ್‌ಡಿ ಅಧಿಕಾರಿಗಳು ರಾಜ್ಯದ ಹಲವು ಮಸೀದಿಗಳು ಹಾಗೂ ಪ್ರಾರ್ಥನಾ ಮಂದಿರಗಳನ್ನ ಪರಿಶೀಲಿಸಿದೆ ಅಂತ ತಿಳಿದು ಬಂದಿದೆ.  
 

click me!